ವಿಷಯಕ್ಕೆ ಹೋಗಿ

**ಜ್ಞಾನ ಕಾರಂಜಿ**::: ಇನ್ಶೂರೆನ್ಸ್ ಪ್ರೀಮಿಯಂ ಯಾವಾಗ ದುಬಾರಿಯಾಗುತ್ತೆ ಗೊತ್ತಾ?,

ಸಿ.ಎಸ್. ಸುಧೀರ್
# ನನಗೆ 37 ವರ್ಷ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಸದ್ಯದಲ್ಲೇ ಒಂದು ಲೈಫ್ ಇನ್ಶೂರೆನ್ಸ್ ಪಾಲಿಸಿ ಖರೀದಿಸಲು ನಿರ್ಧರಿಸಿದ್ದೇನೆ. ಪಾಲಿಸಿಗಳ ಬಗ್ಗೆ ವಿಚಾರಿಸಿದಾಗ ಪ್ರೀಮಿಯಂ ಸ್ವಲ್ಪ ಹೆಚ್ಚಿಗೆ ಇದೆ ಅನಿಸಿತು. ನನ್ನ ವಯಸ್ಸಿನ ವ್ಯಕ್ತಿಗೆ ಸಾಮಾನ್ಯವಾಗಿ ಪ್ರೀಮಿಯಂ ಎಷ್ಟಿರಬಹುದು? ನಾನು ವಾರ್ಷಿಕವಾಗಿ 18 ಲಕ್ಷ ರೂ. ಸಂಬಳ ಪಡೆಯುತ್ತಿದ್ದು, ಇಬ್ಬರು ಅವಲಂಬಿತರಿದ್ದಾರೆ. ದಯವಿಟ್ಟು ಸೂಕ್ತ ಮಾಹಿತಿ ನೀಡಿ.
– ಪ್ರಶಾಂತ್, ಬೆಂಗಳೂರು
ಇನ್ಶೂರೆನ್ಸ್ ಪಡೆದುಕೊಳ್ಳುವ ವ್ಯಕ್ತಿಯ ವಯಸ್ಸು ಮತ್ತು ಎಷ್ಟು ಅವಧಿಗೆ ಇನ್ಶೂರೆನ್ಸ್ ಪಡೆಯಲಾಗುತ್ತಿದೆ ಎನ್ನುವುದರ ಮೇಲೆ ಪ್ರೀಮಿಯಂ ನಿಗದಿಯಾಗುತ್ತದೆ. ಸಾಮಾನ್ಯವಾಗಿ ಇನ್ಶೂರೆನ್ಸ್ ಪಡೆದುಕೊಳ್ಳುವ ವ್ಯಕ್ತಿಗೆ ವಯಸ್ಸಾಗಿದ್ದು, ಹೆಚ್ಚು ಅವಧಿಗೆ ಇನ್ಶೂರೆನ್ಸ್ ಪಡೆಯುತ್ತಿದ್ದರೆ ಪ್ರೀಮಿಯಂ ದುಬಾರಿಯಾಗುತ್ತದೆ. ಇದರ ಜತೆಗೆ, ಇನ್ಶೂರೆನ್ಸ್ ಪಡೆದುಕೊಳ್ಳುವ ವ್ಯಕ್ತಿ ಧೂಮಪಾನ ಮಾಡುತ್ತಿದ್ದರೂ ಪ್ರೀಮಿಯಂ ಜಾಸ್ತಿಯಾಗುತ್ತದೆ.
ಇನ್ಶೂರೆನ್ಸ್ ಪ್ರೀಮಿಯಂ ದುಬಾರಿ ಅನಿಸುತ್ತಿದೆ ಎಂದು ಹೇಳುವುದನ್ನು ನೋಡಿದಾಗ ಹೂಡಿಕೆ ಆಧಾರಿತ ಲೈಫ್ ಇನ್ಶೂರೆನ್ಸ್ ಖರೀದಿಗೆ ನೀವು ಚಿಂತನೆ ಮಾಡುತ್ತಿದ್ದೀರಿ ಎನಿಸುತ್ತದೆ. ಸಾಮಾನ್ಯವಾಗಿ ಹೂಡಿಕೆ ಆಧಾರಿತ ಮನಿ ಬ್ಯಾಕ್ ಪಾಲಿಸಿಗಳಲ್ಲಿ ಇನ್ಶೂರೆನ್ಸ್ ಮೊತ್ತದ ಜತೆಗೆ ಹೂಡಿಕೆಯ ಮೊತ್ತವೂ ಸೇರಿರುವುದರಿಂದ ಪ್ರೀಮಿಯಂ ಹೆಚ್ಚಿಗೆ ಇದ್ದೇ ಇರುತ್ತದೆ. ಆದರೆ ಟಮ್ರ್ ಲೈಫ್ ಇನ್ಶೂರೆನ್ಸ್​ನಲ್ಲಿ ಹಾಗಾಗುವುದಿಲ್ಲ. ಇಲ್ಲಿ ಇನ್ಶೂರೆನ್ಸ್ ಕಂಪನಿಗಳು ಇನ್ಶೂರೆನ್ಸ್ ಮೊತ್ತಕ್ಕೆ ತಕ್ಕಂತೆ ಪ್ರೀಮಿಯಂ ಅನ್ನು ಮಾತ್ರ ಪಡೆದುಕೊಳ್ಳುತ್ತವೆ. ಉದಾಹರಣೆಗೆ ಹೇಳುವುದಾದರೆ, ನಿಮ್ಮ ವಯಸ್ಸಿಗೆ ಅನುಗುಣವಾಗಿ ಲೆಕ್ಕ ಹಾಕಿ ನೋಡಿದಾಗ, ನಿಮಗೆ 1 ಕೋಟಿ ಮೊತ್ತದ ಟಮ್ರ್ ಲೈಫ್ ಇನ್ಶೂರೆನ್ಸ್​ಗೆ
11 ರಿಂದ 12 ಸಾವಿರ ರೂ. ವಾರ್ಷಿಕ ಪ್ರೀಮಿಯಂ ಬರುತ್ತದೆ. ಟಮ್ರ್ ಲೈಫ್ ಇನ್ಶೂರೆನ್ಸ್​ನಲ್ಲಿ ಮೆಚ್ಯೂರಿಟಿ ಅನ್ನೋ ಅಂಶ ಇಲ್ಲ. ವ್ಯಕ್ತಿಯ ಮರಣದ ನಂತರದಲ್ಲೂ ಕುಟುಂಬಕ್ಕೆ ಆರ್ಥಿಕ ಭದ್ರತೆ ನೀಡುವ ವಿಮೆಯೇ ಟಮ್ರ್ ಲೈಫ್ ಇನ್ಶೂರೆನ್ಸ್ ಪಾಲಿಸಿ. ಇದು ಪ್ರತಿ ಕುಟುಂಬದ ಪಾಲಿನ ಆಪತ್ಬಾಂಧವ. ಪಾಲಿಸಿದಾರರು ಆಕಸ್ಮಿಕ ಸಾವಿನ ವಿರುದ್ಧ ಪಡೆಯುವ ವಿಮೆ ರಕ್ಷಣೆ ಸೌಲಭ್ಯವನ್ನು ಟಮ್ರ್ ಇನ್ಶೂರೆನ್ಸ್ ಯೋಜನೆಯು ಒಳಗೊಂಡಿರುತ್ತದೆ. ಒಂದು ವೇಳೆ, ಪಾಲಿಸಿ ಅವಧಿಯಲ್ಲಿ ಪಾಲಿಸಿದಾರನು ಮೃತಪಟ್ಟರೆ, ಗರಿಷ್ಠ ಮೊತ್ತದ ವಿಮಾ ಸುರಕ್ಷತೆಯನ್ನು ಇದು ಖಾತರಿಪಡಿಸುತ್ತದೆ. ಟಮ್ರ್ ಇನ್ಶೂರೆನ್ಸ್ ಅತ್ಯಂತ ಅಗ್ಗ ಮತ್ತು ಉತ್ತಮ ಜೀವ ವಿಮೆ. ನಿಮ್ಮ ವಾರ್ಷಿಕ ಆದಾಯವನ್ನು ಪರಿಗಣಿಸಿ ನೋಡಿದಾಗ ನೀವು ಕನಿಷ್ಠ 2 ಕೋಟಿ ರೂ. ಮೊತ್ತದ ಟಮ್ರ್ ಲೈಫ್ ಪಾಲಿಸಿ ಪಡೆದುಕೊಂಡು ಉಳಿದ ಹಣವನ್ನು ಹೆಚ್ಚು ಲಾಭ ತಂದುಕೊಡುವ ಕಡೆ ಹೂಡಿಕೆ ಮಾಡುವುದು ಉತ್ತಮವೆನಿಸುತ್ತದೆ.
# ಮಂಗಳೂರಿನಲ್ಲಿ 57 ಲಕ್ಷ ರೂ. ನೀಡಿ ಒಂದು ಫ್ಲ್ಯಾಟ್ ಖರೀದಿಸಲು ಮುಂದಾಗಿದ್ದೇನೆ. ಫ್ಲ್ಯಾಟ್ ಮೌಲ್ಯ 50 ಲಕ್ಷ ರೂ.ಗಿಂತ ಜಾಸ್ತಿ ಇದ್ದರೆ ಶೇ. 1ರಷ್ಟು ಟಿಡಿಎಸ್ (ಮೂಲದಲ್ಲೇ ತೆರಿಗೆ ಕಡಿತ) ಪಾವತಿಸಬೇಕು ಎಂಬ ನಿಯಮವಿದೆಯೇ? ಟಿಡಿಎಸ್ ಒಟ್ಟು ಖರೀದಿ ಮೌಲ್ಯದ (57 ಲಕ್ಷ ರೂ.) ಭಾಗವೇ ಆಗಿರುವುದೇ ಅಥವಾ ಪ್ರತ್ಯೇಕವೇ? ಸೂಕ್ತ ಮಾಹಿತಿ ನೀಡಿ.
–  ರವಿರಾಜ್ ಶೆಟ್ಟಿ, ಮಂಗಳೂರು
ಯಾವುದೇ ಫ್ಲ್ಯಾಟ್ ಖರೀದಿಸುವಾಗ ಅದರ ಮೌಲ್ಯ 50 ಲಕ್ಷ ರೂ.ಗಿಂತ ಹೆಚ್ಚಿದ್ದರೆ ಶೇ. 1ರಷ್ಟು ಟಿಡಿಎಸ್ ಪಾವತಿಸಬೇಕಾಗುತ್ತದೆ. ಟಿಡಿಎಸ್ ಅಂದ್ರೆ ಮೂಲದಲ್ಲೇ ತೆರಿಗೆ ಕಡಿತ ಮಾಡುವುದು ಎಂದರ್ಥ. ನೀವು ತಿಳಿಸಿರುವಂತೆ 57 ಲಕ್ಷ ರೂ. ಮೌಲ್ಯದ ಫ್ಲ್ಯಾಟ್ ಖರೀದಿಸಲು ಮುಂದಾದರೆ 57 ಸಾವಿರ ರೂ.ಗಳನ್ನು ಟಿಡಿಎಸ್ ಆಗಿ ಪಾವತಿಸಬೇಕಾಗುತ್ತದೆ. ನೀವು ಫ್ಲ್ಯಾಟ್ ಮಾಲೀಕರಿಗೆ ನೀಡುವ 57 ಲಕ್ಷ ರೂ.ನಲ್ಲೇ ಟಿಡಿಎಸ್ ನ ಭಾಗವೂ ಒಳಗೊಂಡಿರುತ್ತದೆ. 57 ಲಕ್ಷದಲ್ಲಿ ಟಿಡಿಎಸ್ ಮೊತ್ತವಾದ 57 ಸಾವಿರವನ್ನು ಆದಾಯ ತೆರಿಗೆ ಇಲಾಖೆಗೆ ಪಾವತಿಸಿ ಅದರ ಚಲನ್ ಅನ್ನು ಫ್ಲ್ಯಾಟ್ ಮಾಲೀಕರಿಗೆ ನೀಡಬೇಕಾಗುತ್ತದೆ. ನೀವು ಟಿಡಿಎಸ್ ಪಾವತಿಸಿದ್ದರೆ ಮಾತ್ರ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಆಸ್ತಿ ರಿಜಿಸ್ಟ್ರೇಷನ್ ಮಾಡಲು ಅವಕಾಶ ನೀಡಲಾಗುತ್ತದೆ. ಫ್ಲ್ಯಾಟ್​ನ ಖರೀದಿದಾರ, ಮಾರಾಟಗಾರ ವಿಳಾಸ ಹಾಗೂ ಫ್ಲ್ಯಾಟ್​ನ ಮೌಲ್ಯವನ್ನು ಫಾರಂ 26ಕ್ಯೂಬಿಯಲ್ಲಿ ನಮೂದಿಸಿ ಟಿಡಿಎಸ್ ಪಾವತಿ ಮಾಡಬಹುದು. ಡಿಡಿಡಿ.ಠಿಜ್ಞಿಠಛ್ಝ.ಟಞ
# ಮನೆ ನವೀಕರಣ (ರೆನೋವೇಷನ್) ಮಾಡಲು ಹಣವಿಲ್ಲ. ಪರ್ಸನಲ್ ಲೋನ್ ಪಡೆದು ಮನೆ ಕಟ್ಟುವ ಆಲೋಚನೆ ಮಾಡಿದ್ದೇನೆ. ಇದು ಸರಿಯಾದ ನಿರ್ಧಾರವೇ?
– ರವಿಕುಮಾರ್, ಕೋಲಾರ
ಮನೆ ನವೀಕರಣಕ್ಕೆ ಅಂತಲೇ ಹೋಮ್ ರೆನೋವೇಷನ್ ಲೋನ್ ಅಂತ ಕೊಡ್ತಾರೆ. ಇದು ಪರ್ಸನಲ್ ಲೋನ್​ನ ಒಂದು ಭಾಗವೇ ಆಗಿದೆ. ಈ ಹೊಮ್ ರೆನೋವೇಷನ್ ಅಡಿಯಲ್ಲಿ ಅರ್ಜಿ ಸಲ್ಲಿಸಿ ಸಾಲ ಪಡೆದರೆ ಬಡ್ಡಿದರ ಕಡಿಮೆ ಇರುತ್ತದೆ. ಆದರೆ, ಬರೀ ಪರ್ಸನಲ್ ಲೋನ್ ಅಂತ ಅರ್ಜಿ ಸಲ್ಲಿಸಿ ಸಾಲ ಪಡೆದರೆ ಬಡ್ಡಿದರ ಹೆಚ್ಚಿರುತ್ತದೆ. ಮನೆಯ ಪೇಂಟಿಂಗ್​ನಿಂದ ಹಿಡಿದು ಕಟ್ಟಡ ವಿಸ್ತರಣೆ ಮಾಡುವುದಕ್ಕೂ ಈ ಲೋನ್ ಅವಕಾಶ ಕಲ್ಪಿಸುತ್ತದೆ. ಕೆಲ ಬ್ಯಾಂಕ್​ಗಳು 20 ಲಕ್ಷದಿಂದ 30 ಲಕ್ಷದವರೆಗೂ ರೆನೋವೇಷನ್ ಲೋನ್ ನೀಡುತ್ತವೆ. ಬಡ್ಡಿದರ ಒಂದೊಂದು ಬ್ಯಾಂಕ್​ನಲ್ಲಿ ಒಂದೊಂದು ರೀತಿ ಇದ್ದು, ಶೇ.8.5ರಿಂದ ಶೇ.14ವರೆಗೂ ಇದೆ. ನಿಮ್ಮ ಅಗತ್ಯಗಳು ಮತ್ತು ಬಡ್ಡಿದರವನ್ನು ಆಧರಿಸಿ ಸೂಕ್ತ ಬ್ಯಾಂಕ್ ಆಯ್ಕೆ ಮಾಡಿ ಹೋಮ್ ರೆನೋವೇಷನ್ ಲೋನ್ ಪಡೆಯುವುದು ಉತ್ತಮ ನಿರ್ಧಾರ.
# ಎರಡು ವರ್ಷಗಳ ಹಿಂದೆ ಕಾರ್ ಲೋನ್ ತೆಗೆದುಕೊಂಡಿದ್ದೆ. ಮೂರು ತಿಂಗಳ ಹಿಂದಷ್ಟೇ ಆ ಲೋನ್ ಕ್ಲೋಸ್ ಮಾಡಿದೆ. ನನ್ನ ಕಾರಿಗೆ ಕಾಂಪ್ರಹೆನ್ಸಿವ್ (ಕಂಪ್ಲೀಟ್ ಕವರೇಜ್) ಇನ್ಶೂರೆನ್ಸ್ ಮಾಡಿಸಿದ್ದೆ. ಇತ್ತೀಚೆಗಷ್ಟೇ ಅಗ್ನಿ ಅವಘಡ ದಲ್ಲಿ ನನ್ನ ಕಾರು ಸಂಪೂರ್ಣವಾಗಿ ಸುಟ್ಟು  ಭಸ್ಮವಾಯಿತು. ನನಗೆ ಈಗ ವಿಮೆ ಪರಿಹಾರ ಸಿಗುತ್ತದೋ ಇಲ್ಲವೋ ಎಂಬ ಚಿಂತೆಯಾಗಿದೆ. ಸೂಕ್ತ ಸಲಹೆ ನೀಡಿ.
– ಹರೀಶ್, ಕನಕಪುರ
ನೀವು ಕಾಂಪ್ರಹೆನ್ಸಿವ್ ಇನ್ಶೂರೆನ್ಸ್ ಮಾಡಿಸಿದ್ದು, ನಿಮ್ಮ ಕಾರು ನಿಜವಾಗಿಯೂ ಅಗ್ನಿ ಅವಘಡದಲ್ಲಿ ಸುಟ್ಟು ಭಸ್ಮವಾಗಿದ್ದ ಪಕ್ಷದಲ್ಲಿ ಖಂಡಿತವಾಗಿಯೂ ನಿಮಗೆ ಇನ್ಶೂರೆನ್ಸ್ ಕವರೇಜ್ ಸಿಗುತ್ತದೆ. ಕಾರ್ ಇನ್ಶೂರೆನ್ಸ್​ನಲ್ಲಿ ಥರ್ಢ್ ಪಾರ್ಟಿ ಇನ್ಶೂರೆನ್ಸ್ ಮತ್ತು ಕಾಂಪ್ರಹೆನ್ಸಿವ್ ಇನ್ಶೂರೆನ್ಸ್ ಎಂಬ ಎರಡು ಮಾದರಿಗಳಿವೆ. ಥರ್ಡ್ ಪಾರ್ಟಿ ಇನ್ಶೂರೆನ್ಸ್​ನಲ್ಲಿ ನೀವು ಅಪಘಾತ ಮಾಡಿದ ವಾಹನಕ್ಕಷ್ಟೇ ಇನ್ಶೂರೆನ್ಸ್ ಕವರೇಜ್ ಸಿಗುತ್ತದೆ. ಆದರೆ ಕಾಂಪ್ರಹೆನ್ಸಿವ್ ಇನ್ಶೂರೆನ್ಸ್​ನಲ್ಲಿ ನಿಮ್ಮ ವಾಹನಕ್ಕೆ ಮತ್ತು ನೀವು ಅಪಘಾತ ಮಾಡಿದ ವಾಹನಕ್ಕೆ ಇನ್ಶೂರೆನ್ಸ್ ಕವರೇಜ್ ಇರುತ್ತದೆ. ಈ ಕೆಳಗಿನ ಸಂದರ್ಭಗಳಲ್ಲಿ ನಿಮಗೆ ಕಾಂಪ್ರಹೆನ್ಸಿವ್ ಇನ್ಶೂರೆನ್ಸ್ ಕವರೇಜ್ ಸಿಗುತ್ತದೆ.
ಪ್ರಕೃತಿ ವಿಕೋಪಗಳಿಂದ ವಾಹನಕ್ಕೆ ಹಾನಿ
ಕಳ್ಳತನ
ಅಗ್ನಿ ಅವಘಡ
ದಾಂಧಲೆಯಾದಾಗ
ಪ್ರಾಣಿಗಳಿಂದಾದ ಹಾನಿ
ಮರಗಳು ಬಿದ್ದು ಹಾನಿಯಾದಾಗ
ಕಾನೂನು ಸುವ್ಯವಸ್ಥೆ ಸರಿಯಿರದೆ ವಾಹನಕ್ಕೆ ಹಾನಿಯಾದಾಗ
ನೀವೂ ಪ್ರಶ್ನೆ ಕೇಳಬಹುದು
ಮನಿ ಮಾತು ಅಂಕಣದಲ್ಲಿ ಆರ್ಥಿಕ ವಿಚಾರಗಳ ಬಗ್ಗೆ ಮಾಹಿತಿ ವಿಶ್ಲೇಷಣೆಗಳನ್ನು ನೀಡುವುದು ಮಾತ್ರವಲ್ಲ, ಓದುಗರ ಪ್ರಶ್ನೆಗಳಿಗೆ ಉತ್ತರವನ್ನೂ ನೀಡಲಾಗುತ್ತದೆ. ಹೂಡಿಕೆ, ಉಳಿತಾಯ, ತೆರಿಗೆ, ವಿಮೆ, ಷೇರು ಮಾರುಕಟ್ಟೆ – ಹೀಗೆ ವಿತ್ತರಂಗಕ್ಕೆ ಸಂಬಂಧಪಟ್ಟ ಪ್ರಶ್ನೆಗಳನ್ನು ಕಳುಹಿಸಬಹುದು. ನಮ್ಮ ತಜ್ಞರ ತಂಡದವರು ಉತ್ತರ ನೀಡುತ್ತಾರೆ. ಪ್ರಶ್ನೆ ಕಳಿಸುವವರು ಕಡ್ಡಾಯವಾಗಿ ಮೊಬೈಲ್ ಸಂಖ್ಯೆ ನಮೂದಿಸಿ.
ಪ್ರಶ್ನೆ ಕಳಿಸಬೇಕಾದ ಇಮೇಲ್: vittasuggi@gmail.com

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

**ಜ್ಞಾನ ಕಾರಂಜಿ**::: ಬೇನಾಮಿ ಆಸ್ತಿ ಪ್ರಕರಣ ವಿಲೇವಾರಿಗೆ ನ್ಯಾಯಾಧಿಕರಣ,

ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್​ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್​ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್​ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...

.. ಭಾರತೀಯ ಕಾವ್ಯ ಮೀಮಾಂಸೆ

ಭಾರತೀಯ ಕಾವ್ಯ ಮೀಮಾಂಸೆ ಭಾರತೀಯ ಕಾವ್ಯಮೀಮಾಂಸೆಗೆ ಸುಮಾರು ಎರಡು ಸಾವಿರ ವರ್ಷಗಳ ದೀರ್ಘ ಇತಿಹಾಸವಿದೆ. ಕವಿ ಮತ್ತು ಕಾವ್ಯದ ಲಕ್ಷಣಗಳು, ಕಾವ್ಯ ಪ್ರಭೇದಗಳು. ಕಾವ್ಯಾಲಂಕಾರಗಳು, ಕಾವ್ಯದ ವಸ್ತು ಇತ್ಯಾದಿ ಕಾವ್ಯನಿರ್ಮಿತಿಗೆ ಸಂಬಂಧಿಸಿದ ಮಹತ್ತ್ವದ ಅಂಶಗಳ ಶಾಸ್ತ್ರೀಯ ನಿರೂಪಣೆಯೇ ಕಾವ್ಯನಿಮೀಮಾಂಸೆ. ಇದನ್ನು ಅಲಂಕಾರ ಶಾಸ್ತ್ರವೆಂದೂ ಕರೆಯಲಾಗುತ್ತದೆ. ಪ್ರಾಚೀನ ಯುಗದಲ್ಲಿ ಅಲಂಕಾರಶಾಸ್ತ್ರವೆಂದರೆ ಪ್ರಧಾನವಾಗಿ ನಾಟ್ಯ ನೃತ್ಯ ಇತ್ಯಾದಿ ರಂಗ ಸಂಸ್ಕರಣ ಅಥವಾ ನಾಟ್ಯಕಲೆಯನ್ನು ಸರ್ವಾಂಗ ಸುಂದರವಾಗಿ ಮಾಡುವ ಒಂದು ಪರಿಷ್ಕಾರ ಶಾಸ್ತ್ರವಾಗಿದ್ದಿತು. ಕಾಲಕ್ರಮೇಣ ಇದು ಕಾವ್ಯಕಲೆಯನ್ನು ಪರಿಷ್ಕರಿಸುವ ಶಾಸ್ತ್ರವಾಗಿ ಪರಿಣಮಿಸಿತು. ಇದರ ಆರಂಭ ಯಾವಾಗಿ ಯಾರಿಂದ ಆಯಿತೆಂದು ಇತ್ಯರ್ಥಪಡಿಸುವುದು ಕಷ್ಟದ ಕೆಲಸ. ಸಾಹಿತ್ಯದಲ್ಲಿ ಸೌಂದರ್ಯೋಪಾಸನೆ ಪ್ರಾರಂಭವಾದಂದಿನಿಂದಲೂ ಪಂಡಿತರು ಮತ್ತು ವಿಮರ್ಶಕರು ಸಾಹಿತ್ಯದಲ್ಲಿ ಸೌಂದರ್ಯ ಅರಸಿ ಈ ಚಿತ್ತ ಸಂಸ್ಕರಣ ಶಾಸ್ತ್ರವನ್ನು ಬೆಳೆಸಿಕೊಂಡು ಬಂದಿದ್ದಾರೆ. ಕ್ರಿ. ಪೂ. 6ನೆಯ ಶತಮಾನದಲ್ಲಿದ ಯಾಸ್ಕಾಚಾರ್ಯ ಉಪಮೆ ರೂಪಕಗಳ ಬಗ್ಗೆ ಉಲ್ಲೇಖಸಿದ್ದಾನೆ. ಕ್ರಿ. ಪೂ. 5ನೆಯ ಶತಕದ ವೇಳೆಗೆ ಪಾಣಿನಿ ನಟರ ವಿಷಯ ಪ್ರಸ್ತಾಪಿಸಿದ್ದಾನೆ. ವೇದಗಳ ಕಾಲದಲ್ಲೂ ಉಪಮಾ ರೂಪಕಾದಿಗಳ ಪ್ರಯೋಗವಿದೆ. ಋಗ್ವೇದದಲ್ಲಿ ಕಂಡುಬರುವ ಯಮಯಮಿಯರ ಸಂವಾದ, ಊರ್ವಶೀ ಪುರೂರವರ ಸಂವಾದ_ಇವುಗಳಿಂದ ವೇದಕಾಲದಲ್ಲಿ ನಾಟಕದ ಅಂಕುರಾರ್ಪಣವಿದ್ದಂತಿದೆ....

**ಜ್ಞಾನ ಕಾರಂಜಿ**::: ನೀತಿ ಆಯೋಗ ಸ್ಥಾಪನೆ

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ಅಧಿಕಾರಕ್ಕೆ ಬಂದು ಮೇ 26ಕ್ಕೆ ನಾಲ್ಕು ವರ್ಷ. ಸರ್ಕಾರದ ಈ ಅವಧಿಯ ಪಯಣದಲ್ಲಿನ ಪ್ರಮುಖ ರಂಗಗಳ ಚಿತ್ರಣವನ್ನು ವಿಜಯವಾಣಿ ಸರಣಿಯಾಗಿ ಕಟ್ಟಿಕೊಡಲಿದ್ದು, ಅದರ ಎರಡನೇ ಭಾಗ ಇಲ್ಲಿದೆ. ನೆಹರು ಅವಧಿಯಲ್ಲಿ ರಚನೆಯಾಗಿದ್ದ ಯೋಜನಾ ಆಯೋಗವನ್ನು ರದ್ದುಗೊಳಿಸಿ 2015ರ ಜ.1ರಂದು ನೀತಿ ಆಯೋಗ ರಚಿಸಲಾಯಿತು. ಅಮೃತ್, ಡಿಜಿಟಲ್ ಇಂಡಿಯಾ, ಅಟಲ್ ಇನೋವೇಷನ್, ಸಂಚಾರ ದಟ್ಟಣೆ ನಿಯಂತ್ರಣ ಸೇರಿ ಕೆಲ ಯೋಜನೆಗಳ ನೇರ ಉಸ್ತುವಾರಿಯನ್ನು ನೀತಿ ಆಯೋಗ ವಹಿಸಿಕೊಂಡಿದೆ. ಪ್ರಧಾನಿ ಅಧ್ಯಕ್ಷತೆಯ ಈ ಆಯೋಗದಲ್ಲಿ ರಾಜ್ಯಗಳ ಹಣಕಾಸು ಸಚಿವರು ಸದಸ್ಯರಾಗಿರುತ್ತಾರೆ. 15 ವರ್ಷ ಹಾಗೂ 7 ವರ್ಷಗಳ ಪ್ರತ್ಯೇಕ ಗುರಿಯ ಯೋಜನೆಯ ಜತೆಗೆ, ವಾರ್ಷಿಕ ಕಾರ್ಯಕ್ರಮಗಳ ಬಗ್ಗೆ ಈ ಸಂಸ್ಥೆ ನಿಗಾ ಇಡಲಿದೆ. ಆಡಳಿತಕ್ಕೆ ಹೊಸ ಸ್ಪರ್ಶ ‘ಮಿನಿಮಮ್ ಗವರ್ನಮೆಂಟ್, ಮ್ಯಾಕ್ಸಿಮಮ್ ಗವರ್ನನ್ಸ್’ (ಕನಿಷ್ಠ ಸರ್ಕಾರ ಗರಿಷ್ಠ ಆಡಳಿತ) ಧ್ಯೇಯ ವಾಕ್ಯದೊಂದಿಗೆ ಪ್ರಧಾನಿ ಕಚೇರಿಗೆ ನರೇಂದ್ರ ಮೋದಿ ಕಾಲಿಟ್ಟಿದ್ದರು. ತೆರಿಗೆ ವ್ಯವಸ್ಥೆಯಿಂದ ಹಿಡಿದು ಆಡಳಿತದ ಪ್ರತಿ ಹಂತದಲ್ಲಿಯೂ ಸುಧಾರಣೆ ತರುವ ಭರವಸೆ ನೀಡಿದ್ದರು. ಈ ನಿಟ್ಟಿನಲ್ಲಿ ಸರ್ಕಾರ ಕೆಲ ಹೆಜ್ಜೆಗಳನ್ನು ಇರಿಸಿದೆ. ಓಬೀರಾಯನ ಕಾಲದ ಕಾನೂನು ರದ್ದು ದೇಶದಲ್ಲಿ ಹಳೆಯ ಅನವಶ್ಯಕ ಕಾಯ್ದೆಗಳಿಂದ ಕೋರ್ಟ್ ಖಟ್ಲೆಗಳಲ್ಲಿ ವಿಳಂಬವಾಗುತ್ತದೆ. ಈ ಕಾರಣದಿಂದ ಸುಮಾರು 3 ಸಾವಿರ ...