ಮೈಸೂರು: ದಸರಾ ಮಹೋತ್ಸವದಲ್ಲಿ ಆರು ಬಾರಿ ಅಂಬಾರಿ ಹೊತ್ತಿರುವ ‘ಕ್ಯಾಪ್ಟನ್’ ಅರ್ಜುನ ಈ ಸಲ ಮೈಸೂರಿಗೆ ಬರುವ ಮುನ್ನವೇ ತೂಕ ಹೆಚ್ಚಿಸಿಕೊಳ್ಳುವ ಮೂಲಕ ಬಲಭೀಮನಾಗಿದ್ದಾನೆ.
ಅರಮನೆ ಅಂಗಳದಲ್ಲಿ ಬುಧವಾರ ಸಾಂಪ್ರದಾಯಿಕ ವಾಗಿ ಸ್ವಾಗತಿಸಲ್ಪಟ್ಟಿದ್ದ ಗಜಪಡೆಯ ಮೊದಲ ತಂಡದ ಆರು ಆನೆಗಳಿಗೆ ಗುರುವಾರ ತೂಕ ಪರೀಕ್ಷೆ ನಡೆಸಿ ಅವುಗಳ ದೈಹಿಕ ಸದೃಢತೆ ಪರಿಶೀಲಿಸಲಾಯಿತು.
750 ಕೆ.ಜಿ. ತೂಕದ ಅಂಬಾರಿ ಹೊತ್ತು 4.5 ಕಿ.ಮೀ. ಅಂತರದ ಬನ್ನಿಮಂಟಪದವರೆಗೆ ಹೆಜ್ಜೆ ಹಾಕಬೇಕಾದ ಅರ್ಜುನ ಆನೆ 5,650 ಕೆ.ಜಿ. ತೂಕ ಹೊಂದಿದ್ದಾನೆ. ಕಳೆದ ಬಾರಿ 5,250 ಕೆ.ಜಿ. ಹೊಂದಿದ್ದ.
ಅರ್ಜುನ 2015ರಲ್ಲಿ ಕಾಡಿನಿಂದ ಬಂದಾಗ 5,445 ಕೆ.ಜಿ. ತೂಕವಿದ್ದ, ಹೋಗá-ವಾಗ ಭಾರ 5,925 ಕೆ.ಜಿ.ಗೆ ಹೆಚ್ಚಿಸಿಕೊಂಡಿದ್ದ. 2016ರಲ್ಲಿ ಬಂದಾಗ 5,615 ಕೆ.ಜಿ. ಇದ್ದ ತೂಕವನ್ನು ಹೋಗá-ವಾಗ 5,870 ಕೆ.ಜಿ.ಗೆ ಹೆಚ್ಚಿಸಿಕೊಂಡು ಆಗಲೂ ಅತಿ ಹೆಚ್ಚು ಭಾರದ ಆನೆ ಎನಿಸಿಕೊಂಡಿದ್ದ. 2017ರಲ್ಲಿ ಆನೆಗಳ ತಂಡದಲ್ಲಿ ಅರ್ಜುನ ಅತಿ ಹೆಚ್ಚು ಅಂದರೆ 5,250 ಕೆ.ಜಿ. ತೂಕ ಹೊಂದಿದ್ದ. ಕಳೆದ ವರ್ಷಕ್ಕಿಂತ ಈ ಸಲ 400 ಕೆ.ಜಿ. ಹೆಚ್ಚಿಸಿಕೊಂಡಿದ್ದಾನೆ.
ಈ ಅಂಕಿ-ಅಂಶ ಗಮನಿಸಿದರೆ, ವರ್ಷದಿಂದ ವರ್ಷಕ್ಕೆ ಅರ್ಜುನ ತನ್ನ ದೇಹತೂಕ ಹೆಚ್ಚಿಸಿಕೊಂಡು ಹೋಗುತ್ತಿದ್ದಾನೆ. ಈ ಆನೆಯನ್ನು 1968ರಲ್ಲಿ ಖೆಡ್ಡಾ ವಿಧಾನದಲ್ಲಿ ಕಾಕನಕೋಟೆ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಗಿತ್ತು. 18-19 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಅರ್ಜುನ ಪಾಲ್ಗೊಳ್ಳುತ್ತಿದ್ದಾನೆ.
ಉಳಿದವು ಬಹಳ ಹಿಂದೆ…
ಉಳಿದ ಮೂರು ಗಂಡಾನೆಗಳು ಅರ್ಜುನನ ದೇಹತೂಕದ ಆಸುಪಾಸಿನಲ್ಲೂ ಇಲ್ಲ. ಅರ್ಜುನನ ನಂತರ ಕೊಡಗಿನ ದುಬಾರೆಯಿಂದ ಬಂದಿರುವ ಗೋಪಿ 2ನೇ ಸ್ಥಾನ, ಮೊದಲ ಬಾರಿಗೆ ದಸರೆಗೆ ಬಂದಿರುವ ಧನಂಜಯ 3ನೇ ಸ್ಥಾನದಲ್ಲಿದ್ದಾನೆ. ಪ್ರಮುಖ ಆನೆಗಳಾದ ಬಲರಾಮ, ಗಜೇಂದ್ರ, ಅಭಿಮನ್ಯು ಎರಡನೇ ಹಂತದಲ್ಲಿ ಬರಲಿವೆ. ಕಳೆದ ವರ್ಷ ಎರಡನೇ ತಂಡದಲ್ಲಿದ್ದ ಚೈತ್ರಾ, ವಿಕ್ರಮ, ಗೋಪಿ ಈಗ ಬಂದಿವೆ. ಅರ್ಜುನ ಮತ್ತು ವರಲಕ್ಷ್ಮೀ ಆನೆಗಳು ಮಾತ್ರ ಕಳೆದ ವರ್ಷ ಮತ್ತು ಈ ವರ್ಷ ಮೊದಲನೇ ತಂಡದಲ್ಲಿ ಬಂದಿವೆ. ಎಲ್ಲ ಆನೆಗಳು ಆರೋಗ್ಯವಾಗಿವೆ. ಜತೆಗೆ, ದೈಹಿಕವಾಗಿ ಸದೃಢವಾಗಿವೆ ಎಂದು ಆನೆಗಳ ಉಸ್ತುವಾರಿ ನೋಡಿಕೊಳ್ಳುತ್ತಿರುವ ಪಶು ವೈದ್ಯಾಧಿಕಾರಿ ಡಾ. ನಾಗರಾಜು ತಿಳಿಸಿದ್ದಾರೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ