ವಿಶ್ವಸಂಸ್ಥೆ: ಅಂತಾರಾಷ್ಟ್ರೀಯ ಸೌರ ಒಕ್ಕೂಟದ ನಾಯಕತ್ವ ಮತ್ತು 2022ರ ಹೊತ್ತಿಗೆ ಪ್ಲಾಸ್ಟಿಕ್ ಬಳಕೆ ನಿಷೇಧ ಕುರಿತಂತೆ ಪ್ರತಿಜ್ಞೆ ಕೈಗೊಂಡಿರುವ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿಶ್ವಸಂಸ್ಥೆಯ ಅತ್ಯುನ್ನತ ಪರಿಸರ ಗೌರವಕ್ಕೆ ಭಾಜನರಾಗಿದ್ದಾರೆ.
ಪರಿಸರ ಸ್ವಚ್ಛತೆಗೆ ಗಣನೀಯ ಸೇವೆ ಸಲ್ಲಿಸುವ ಮಹಾನ್ ವ್ಯಕ್ತಿಗಳಿಗೆ ಕೊಡಲಾಗುವ ‘ಅರ್ಥ್ ಅವಾರ್ಡ್ ಚಾಂಪಿಯನ್’ ಪ್ರಶಸ್ತಿಗೆ ವಿಶ್ವದ ಅತ್ಯುತ್ತಮ ಪರಿಸರ ಬದಲಾವಣೆದಾರರ ಪೈಕಿ ಆರು ಜನ ಸಾಧಕರನ್ನು ಗುರುತಿಸಲಾಗಿದೆ.
ಪರಿಸರದ ಸಮಸ್ಯೆಗಳನ್ನು ನಿಭಾಯಿಸಲು ಅಗತ್ಯವಿರುವ ದಿಟ್ಟ, ನಾವೀನ್ಯ ಮತ್ತು ದಣಿವರಿಯದ ಪ್ರಯತ್ನಗಳೊಂದಿಗೆ ಸಮಸ್ಯೆಗಳನ್ನು ಬಗೆಹರಿಸಲು ಶ್ರಮಿಸುತ್ತಿರುವವರನ್ನು ಈ ಪ್ರಶಸ್ತಿಗಳನ್ನು ನೀಡಲು ಈ ವರ್ಷ ಗುರುತಿಸಲಾಗಿದೆ ಎಂದು ವಿಶ್ವಸಂಸ್ಥೆ ತಿಳಿಸಿದೆ.
ಉದ್ಯಮ ಶೀಲತೆ ದೃಷ್ಟಿ ಮತ್ತು ಸಮರ್ಥನೀಯ ಶಕ್ತಿಯ ಬಳಕೆಯಲ್ಲಿ ನಾಯಕತ್ವ ವಹಿಸಿರುವುದಕ್ಕಾಗಿ ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಕೂಡ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಐಎಸ್ಎ ಎಂದರೇನು?
ಸೌರಶಕ್ತಿ ಬಳಕೆ ಉತ್ತೇಜಿಸುವುದಕ್ಕಾಗಿ ಸ್ಥಾಪಿತವಾಗಿರುವ ಸೌರ ಸಂಪತ್ತು ಹೇರಳವಾಗಿರುವ ರಾಷ್ಟ್ರಗಳ ಒಕ್ಕೂಟವೇ ಇಂಟರ್ನ್ಯಾಷನಲ್ ಸೋಲಾರ್ ಅಲಯನ್ಸ್ ( International Solar Alliance). ಭಾರತ ಮತ್ತು ಫ್ರಾನ್ಸ್ ಇದರ ಸಂಸ್ಥಾಪಕ ಸದಸ್ಯ ರಾಷ್ಟ್ರಗಳು. 2015ರ ನವೆಂಬರ್ 30ರಂದು ಪ್ಯಾರಿಸ್ನಲ್ಲಿ ಏರ್ಪಟ್ಟ ವಿಶ್ವಸಂಸ್ಥೆಯ ಹವಾಮಾನ ವೈಪರೀತ್ಯ ಶೃಂಗದಲ್ಲಿ ಐಎಸ್ಎ ಚಿಗುರೊಡೆದಿದೆ. ಇದರ ಕೇಂದ್ರ ಕಚೇರಿ ಹರಿಯಾಣದ ಗುರುಗ್ರಾಮದಲ್ಲಿದೆ.
ಇದಲ್ಲದೆ 2022ರ ವೇಳೆಗೆ ಭಾರತದಲ್ಲಿ ಸಂಪೂರ್ಣ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸುವ ಕುರಿತು ಮೋದಿ ಪ್ರತಿಜ್ಞೆ ಕೈಗೊಂಡಿದ್ದರು. (ಏಜೆನ್ಸೀಸ್)

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ