ವಿಷಯಕ್ಕೆ ಹೋಗಿ

**ಜ್ಞಾನ ಕಾರಂಜಿ**::: ಮುಂದಿದೆ ಇನ್ನೆರಡು ವಿಲೀನ,

ಮುಂದಿನ ಹಂತದಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್​ಬಿ), ಇಂಡಿಯನ್ ಬ್ಯಾಂಕ್ ಮತ್ತು ಇಂಡಿಯನ್ ಓವರ್​ಸೀಸ್ ಬ್ಯಾಂಕ್​ಗಳ ಒಗ್ಗೂಡಿಸುವುದು ಮತ್ತು ಕೆನರಾ, ಸಿಂಡಿಕೇಟ್ ಮತ್ತು ಯುಕೋ ಬ್ಯಾಂಕ್​ಗಳನ್ನು ವಿಲೀನ ಮಾಡುವ ಪ್ರಸ್ತಾವನೆ ಕೇಂದ್ರ ಸರ್ಕಾರದ ಮುಂದಿದೆ.
ಈ ಮಧ್ಯೆ, ಬ್ಯಾಂಕ್ ಆಫ್ ಬರೋಡಾ ವಿಜಯಾ, ದೇನಾ ಬ್ಯಾಂಕ್​ಗಳ ವಿಲೀನ ನಿರ್ಧಾರದ ಬೆನ್ನಿಗೆ ಷೇರುಪೇಟೆಯಲ್ಲಿ ಬ್ಯಾಂಕಿಂಗ್ ಷೇರು ಕುಸಿತ ಕಂಡಿದೆ. ಬ್ಯಾಂಕ್ ಆಫ್ ಬರೋಡಾದ ಷೇರು ಮೌಲ್ಯ ಶೇ. 17 ಕುಸಿದಿದ್ದು, ನಿಫ್ಟಿ ವಹಿವಾಟು ಆರಂಭವಾದ 50 ನಿಮಿಷಗಳಲ್ಲೆ ಸುಮಾರು -ಠಿ; 500 ಕೋಟಿ ನಷ್ಟವಾಯಿತು. ವಿಜಯಾ ಬ್ಯಾಂಕ್ ಷೇರು ಶೇ. 7ರಷ್ಟು ಇಳಿಕೆಯಾಗಿದೆ. ಆದರೆ, ದೇನಾ ಬ್ಯಾಂಕ್ ಷೇರು ಮೌಲ್ಯ ಶೇ. 19 ವೃದ್ಧಿ ಕಂಡಿದೆ.
ಬ್ಯಾಂಕ್ ಆಫ್ ಬರೋಡಾ, ವಿಜಯಾ ಮತ್ತು ದೇನಾ ಬ್ಯಾಂಕ್​ಗಳ ವಿಲೀನದ ಪ್ರಕ್ರಿಯೆ ಪೂರ್ಣವಾಗಲು 3ರಿಂದ 6 ತಿಂಗಳು ಹಿಡಿಯುವುದರಿಂದ ಈ ವರ್ಷದಲ್ಲಿ ಮತ್ತೆ ಬ್ಯಾಂಕ್​ಗಳ ವಿಲೀನದ ಘೋಷಣೆ ಹೊರಬೀಳುವುದು ಅನುಮಾನ. ಮುಂದಿನ ವರ್ಷ ಲೋಕಸಭಾ ಚುನಾವಣೆಗೂ ಮುಂಚೆ ಅಥವಾ ನಂತರ ಮತ್ತೆ ಚುರುಕುಗೊಳ್ಳಬಹುದು ಎಂದು ಮೂಲಗಳು ತಿಳಿಸಿವೆ.
ಇನ್ನೆರಡು ಪ್ರಸ್ತಾವನೆ: ಮುಂದಿನ ಹಂತದಲ್ಲಿ ವಿಲೀನವಾಗಲಿದೆ ಎನ್ನಲಾಗಿರುವ ಪಿಎನ್​ಬಿ ಹಾಲಿ ವಹಿವಾಟು -ಠಿ; 10,45,650 ಕೋಟಿ ಇದ್ದರೆ, ಇಂಡಿಯನ್ ಬ್ಯಾಂಕ್​ನ ವಹಿವಾಟು -ಠಿ;3,74,550 ಕೋಟಿ ಮತ್ತು ಇಂಡಿಯನ್ ಓವರ್​ಸೀಸ್ ಬ್ಯಾಂಕ್​ನ ವಹಿವಾಟು -ಠಿ;3,61,928 ಕೋಟಿಯಷ್ಟಿದೆ. ಪಿಎನ್​ಬಿ -ಠಿ;6,30,311 ಕೋಟಿ, ಇಂಡಿಯನ್ ಬ್ಯಾಂಕ್ -ಠಿ; 2,10,170 ಕೋಟಿ ಹಾಗೂ ಇಂಡಿಯನ್ ಓವರ್​ಸೀಸ್ ಬ್ಯಾಂಕ್ -ಠಿ; 2,13,168 ಕೋಟಿ ಠೇವಣಿ ಸಂಗ್ರಹ ಇದೆ.
ವಿಲೀನದ ಪರಿಶೀಲನೆಯಲ್ಲಿರುವ ಕೆನರಾ, ಸಿಂಡಿಕೇಟ್ ಮತ್ತು ಯುಕೋ ಬ್ಯಾಂಕ್​ಗಳ ವಾರ್ಷಿಕ ವಹಿವಾಟು ಕ್ರಮವಾಗಿ -ಠಿ; 8,63,359 ಕೋಟಿ, -ಠಿ; 4,74,976 ಕೋಟಿ ಮತ್ತು -ಠಿ; 2,76,784 ಇದೆ. ಕೆನರಾ ಬ್ಯಾಂಕ್​ನಲ್ಲಿ -ಠಿ; 5,00,866, ಸಿಂಡಿಕೇಟ್ ಬ್ಯಾಂಕ್​ನಲ್ಲಿ -ಠಿ; 4,05,939 ಮತ್ತು ಯುಕೋ ಬ್ಯಾಂಕ್​ನಲ್ಲಿ -ಠಿ; 1,78,211 ಕೋಟಿ ಠೇವಣಿ ಸಂಗ್ರಹ ಇದೆ.
ಏ. 1ರಿಂದ ಕಾರ್ಯಾರಂಭ
ಬ್ಯಾಂಕ್ ಆಫ್ ಬರೋಡಾ, ವಿಜಯಾ ಮತ್ತು ದೇನಾ ಬ್ಯಾಂಕ್​ಗಳ ವಿಲೀನದಿಂದ ರಚನೆಯಾಗುವ ಹೊಸ ಬ್ಯಾಂಕ್ ಮುಂದಿನ ಆರ್ಥಿಕ ವರ್ಷದಿಂದ (ಏಪ್ರಿಲ್ 1) ಕಾರ್ಯಾರಂಭ ಮಾಡಲಿದೆ.
‘ಮೂಡಿ’ಸ್ ಶ್ಲಾಘನೆ
ಭಾರತದಲ್ಲಿ ಬ್ಯಾಂಕ್​ಗಳ ವಿಲೀನ ಪ್ರಕ್ರಿಯೆ ಆರಂಭವಾಗಿ ರುವುದು ಸ್ವಾಗತಾರ್ಹ ಬೆಳವಣಿಗೆ. ಇದರಿಂದ ಬ್ಯಾಂಕ್​ಗಳ ಕಾರ್ಯ ಕ್ಷಮತೆ ಹೆಚ್ಚುವ ಜತೆಗೆ ದೇಶದ ಆರ್ಥಿಕ ಪ್ರಗತಿಯೂ ಆಗಲಿದೆ ಎಂದು ಜಾಗತಿಕ ಕ್ರೆಡಿಟ್ ರ‍್ಯಾಂಕಿಂಗ್ ಸಂಸ್ಥೆ ಮೂಡಿ’ಸ್ ಇನ್ವೆಸ್ಟರ್ಸ್ ಸರ್ವೀಸ್ ಹೇಳಿದೆ.
ಜೇಟ್ಲಿ ಜತೆ ಬ್ಯಾಂಕ್ ಮುಖ್ಯಸ್ಥರ ಸಭೆ
ಸಾರ್ವಜನಿಕ ವಲಯದ ಬ್ಯಾಂಕ್​ಗಳ ಮುಖ್ಯಸ್ಥರನ್ನು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಸೆ. 25ರಂದು ಭೇಟಿ ಮಾಡಲಿದ್ದಾರೆ. ಬ್ಯಾಂಕ್​ಗಳ ಹಣಕಾಸು ನಿರ್ವಹಣೆ ಕುರಿತ ಅವರು ಪರಿಶೀಲನಾ ಸಭೆ ನಡೆಸಲಿದ್ದಾರೆ. ಅನುತ್ಪಾದಕ ಆಸ್ತಿ ತಗ್ಗಿಸಲು ಕೈಗೊಂಡ ಕ್ರಮಗಳ ಬಗ್ಗೆಯೂ ಚರ್ಚೆ ನಡೆಸಲಿದ್ದಾರೆ.
ಆರ್​ಬಿಐ ಶಿಫಾರಸು
ಖಾಸಗಿ ಬ್ಯಾಂಕ್​ಗಳ ಜತೆಗೆ ಸ್ಪರ್ಧಾತ್ಮಕ ಪೈಪೋಟಿ ನೀಡಬೇಕಿದ್ದರೆ ಸಾರ್ವಜನಿಕ ವಲಯದ 21 ಬ್ಯಾಂಕ್​ಗಳನ್ನು ವಿಲೀನ ಮಾಡಿ ನಾಲ್ಕೈದು ದೊಡ್ಡ ಬ್ಯಾಂಕ್​ಗಳನ್ನಾಗಿ ರಚಿಸುವುದು ಒಳಿತು ಎಂದು ಆರ್​ಬಿಐ ಈ ಹಿಂದೆಯೇ ಶಿಫಾರಸು ಮಾಡಿದೆ. ಇದರ ಅನ್ವಯ ಈಗಾಗಲೇ ಎಸ್​ಬಿಐನ ಐದು ಸಹವರ್ತಿ ಬ್ಯಾಂಕ್ ಮತ್ತು ಭಾರತೀಯ ಮಹಿಳಾ ಬ್ಯಾಂಕನ್ನು ಎಸ್​ಬಿಐ ಜತೆಗೆ ಕಳೆದ ವರ್ಷ ಒಗ್ಗೂಡಿಸಲಾಗಿದೆ. ವಸೂಲಾಗದ ಸಾಲ ಮತ್ತು ಅನುತ್ಪಾದಕ ಆಸ್ತಿ ಹೆಚ್ಚಳದಿಂದ ತತ್ತರಿಸುತ್ತಿರುವ ಬ್ಯಾಂಕ್​ಗಳನ್ನು ಉಳಿಸಬೇಕಾದರೆ ವಿಲೀನ ಅನಿವಾರ್ಯ ಎಂಬ ನಿರ್ಧಾರವನ್ನು ಕೇಂದ್ರ ಸರ್ಕಾರ ತೆಗೆದುಕೊಂಡಿದೆ. ಇದನ್ನು ಬಜೆಟ್​ನಲ್ಲೂ ಉಲ್ಲೇಖಿಸಿದೆ.
ಎರಡು ದಿನಗಳಲ್ಲಿ -ಠಿ; 2.72 ಲಕ್ಷ ಕೋಟಿ ನಷ್ಟ
ಮೂರು ಬ್ಯಾಂಕ್​ಗಳ ವಿಲೀನದ ನಿರ್ಧಾರ ಮತ್ತು ಚೀನಾ ಸರಕುಗಳ ಮೇಲೆ ಅಮೆರಿಕ ಹೆಚ್ಚುವರಿ ಸುಂಕ ವಿಧಿಸಿದ ಪರಿಣಾಮ ಬಾಂಬೆ ಷೇರುಪೇಟೆ (ಬಿಎಸ್​ಇ) ಮತ್ತು ರಾಷ್ಟ್ರೀಯ ಷೇರುಪೇಟೆ (ನಿಫ್ಟಿ)ಯಲ್ಲಿ ಉಂಟಾಯಿತು.ಬೇರೆ ಬೇರೆ ಕಾರಣಗಳಿಗೆ ಕಳೆದೆರಡು ದಿನಗಳಲ್ಲಿ ಹೂಡಿಕೆದಾರರು 2.72 ಲಕ್ಷ ಕೋಟಿ ನಷ್ಟ ಅನುಭವಿಸಿದ್ದಾರೆ. ಬಿಎಸ್​ಇಯಲ್ಲಿ ಮಂಗಳವಾರ 295 ಪಾಯಿಂಟ್​ಗಳು ಇಳಿಕೆಯಾಗಿ ಒಂದು ತಿಂಗಳ ಹಿಂದಿನ ಸೂಚ್ಯಂಕ 37,291ಕ್ಕೆ ತಲುಪಿತು.140 ಕಂಪನಿಗಳ ಷೇರು ಮೌಲ್ಯ ಕುಸಿತವಾಗಿದ್ದು, 52 ವಾರಗಳ ಹಿಂದಿದ್ದ ಮೌಲ್ಯಕ್ಕೆ ಹಿನ್ನಡೆ ಕಂಡಿತು. ನಿಫ್ಟಿಯಲ್ಲಿ 98 ಅಂಶ ಕುಸಿದು, ಸಂವೇದಿ ಸೂಚ್ಯಂಕ 11,300ಕ್ಕಿಂತಲೂ ಕಡಿಮೆ ಆಯಿತು. ಇದರಿಂದ ಸೋಮವಾರ -ಠಿ; 1.72 ಲಕ್ಷ ಕೋಟಿ ಹೂಡಿಕೆ ನಷ್ಟವಾಯಿತು. ಈ ನಡುವೆ, ಡಾಲರ್ ಎದುರು ದಿನೇ ದಿನೆ ಸೊರಗುತ್ತಿರುವ ರೂಪಾಯಿ ಮಂಗಳವಾರ 47 ಪೈಸೆ ಕುಸಿದು, 72.99ಕ್ಕೆ ಸ್ಥಿರಗೊಂಡಿತು. ಇದು ರೂಪಾಯಿ ಮೌಲ್ಯದ ಸಾರ್ವಕಾಲಿಕ ಅಧಃಪತನವಾಗಿದೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

**ಜ್ಞಾನ ಕಾರಂಜಿ**::: ಬೇನಾಮಿ ಆಸ್ತಿ ಪ್ರಕರಣ ವಿಲೇವಾರಿಗೆ ನ್ಯಾಯಾಧಿಕರಣ,

ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್​ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್​ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್​ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...

.. ಭಾರತೀಯ ಕಾವ್ಯ ಮೀಮಾಂಸೆ

ಭಾರತೀಯ ಕಾವ್ಯ ಮೀಮಾಂಸೆ ಭಾರತೀಯ ಕಾವ್ಯಮೀಮಾಂಸೆಗೆ ಸುಮಾರು ಎರಡು ಸಾವಿರ ವರ್ಷಗಳ ದೀರ್ಘ ಇತಿಹಾಸವಿದೆ. ಕವಿ ಮತ್ತು ಕಾವ್ಯದ ಲಕ್ಷಣಗಳು, ಕಾವ್ಯ ಪ್ರಭೇದಗಳು. ಕಾವ್ಯಾಲಂಕಾರಗಳು, ಕಾವ್ಯದ ವಸ್ತು ಇತ್ಯಾದಿ ಕಾವ್ಯನಿರ್ಮಿತಿಗೆ ಸಂಬಂಧಿಸಿದ ಮಹತ್ತ್ವದ ಅಂಶಗಳ ಶಾಸ್ತ್ರೀಯ ನಿರೂಪಣೆಯೇ ಕಾವ್ಯನಿಮೀಮಾಂಸೆ. ಇದನ್ನು ಅಲಂಕಾರ ಶಾಸ್ತ್ರವೆಂದೂ ಕರೆಯಲಾಗುತ್ತದೆ. ಪ್ರಾಚೀನ ಯುಗದಲ್ಲಿ ಅಲಂಕಾರಶಾಸ್ತ್ರವೆಂದರೆ ಪ್ರಧಾನವಾಗಿ ನಾಟ್ಯ ನೃತ್ಯ ಇತ್ಯಾದಿ ರಂಗ ಸಂಸ್ಕರಣ ಅಥವಾ ನಾಟ್ಯಕಲೆಯನ್ನು ಸರ್ವಾಂಗ ಸುಂದರವಾಗಿ ಮಾಡುವ ಒಂದು ಪರಿಷ್ಕಾರ ಶಾಸ್ತ್ರವಾಗಿದ್ದಿತು. ಕಾಲಕ್ರಮೇಣ ಇದು ಕಾವ್ಯಕಲೆಯನ್ನು ಪರಿಷ್ಕರಿಸುವ ಶಾಸ್ತ್ರವಾಗಿ ಪರಿಣಮಿಸಿತು. ಇದರ ಆರಂಭ ಯಾವಾಗಿ ಯಾರಿಂದ ಆಯಿತೆಂದು ಇತ್ಯರ್ಥಪಡಿಸುವುದು ಕಷ್ಟದ ಕೆಲಸ. ಸಾಹಿತ್ಯದಲ್ಲಿ ಸೌಂದರ್ಯೋಪಾಸನೆ ಪ್ರಾರಂಭವಾದಂದಿನಿಂದಲೂ ಪಂಡಿತರು ಮತ್ತು ವಿಮರ್ಶಕರು ಸಾಹಿತ್ಯದಲ್ಲಿ ಸೌಂದರ್ಯ ಅರಸಿ ಈ ಚಿತ್ತ ಸಂಸ್ಕರಣ ಶಾಸ್ತ್ರವನ್ನು ಬೆಳೆಸಿಕೊಂಡು ಬಂದಿದ್ದಾರೆ. ಕ್ರಿ. ಪೂ. 6ನೆಯ ಶತಮಾನದಲ್ಲಿದ ಯಾಸ್ಕಾಚಾರ್ಯ ಉಪಮೆ ರೂಪಕಗಳ ಬಗ್ಗೆ ಉಲ್ಲೇಖಸಿದ್ದಾನೆ. ಕ್ರಿ. ಪೂ. 5ನೆಯ ಶತಕದ ವೇಳೆಗೆ ಪಾಣಿನಿ ನಟರ ವಿಷಯ ಪ್ರಸ್ತಾಪಿಸಿದ್ದಾನೆ. ವೇದಗಳ ಕಾಲದಲ್ಲೂ ಉಪಮಾ ರೂಪಕಾದಿಗಳ ಪ್ರಯೋಗವಿದೆ. ಋಗ್ವೇದದಲ್ಲಿ ಕಂಡುಬರುವ ಯಮಯಮಿಯರ ಸಂವಾದ, ಊರ್ವಶೀ ಪುರೂರವರ ಸಂವಾದ_ಇವುಗಳಿಂದ ವೇದಕಾಲದಲ್ಲಿ ನಾಟಕದ ಅಂಕುರಾರ್ಪಣವಿದ್ದಂತಿದೆ....

**ಜ್ಞಾನ ಕಾರಂಜಿ**::: ನೀತಿ ಆಯೋಗ ಸ್ಥಾಪನೆ

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ಅಧಿಕಾರಕ್ಕೆ ಬಂದು ಮೇ 26ಕ್ಕೆ ನಾಲ್ಕು ವರ್ಷ. ಸರ್ಕಾರದ ಈ ಅವಧಿಯ ಪಯಣದಲ್ಲಿನ ಪ್ರಮುಖ ರಂಗಗಳ ಚಿತ್ರಣವನ್ನು ವಿಜಯವಾಣಿ ಸರಣಿಯಾಗಿ ಕಟ್ಟಿಕೊಡಲಿದ್ದು, ಅದರ ಎರಡನೇ ಭಾಗ ಇಲ್ಲಿದೆ. ನೆಹರು ಅವಧಿಯಲ್ಲಿ ರಚನೆಯಾಗಿದ್ದ ಯೋಜನಾ ಆಯೋಗವನ್ನು ರದ್ದುಗೊಳಿಸಿ 2015ರ ಜ.1ರಂದು ನೀತಿ ಆಯೋಗ ರಚಿಸಲಾಯಿತು. ಅಮೃತ್, ಡಿಜಿಟಲ್ ಇಂಡಿಯಾ, ಅಟಲ್ ಇನೋವೇಷನ್, ಸಂಚಾರ ದಟ್ಟಣೆ ನಿಯಂತ್ರಣ ಸೇರಿ ಕೆಲ ಯೋಜನೆಗಳ ನೇರ ಉಸ್ತುವಾರಿಯನ್ನು ನೀತಿ ಆಯೋಗ ವಹಿಸಿಕೊಂಡಿದೆ. ಪ್ರಧಾನಿ ಅಧ್ಯಕ್ಷತೆಯ ಈ ಆಯೋಗದಲ್ಲಿ ರಾಜ್ಯಗಳ ಹಣಕಾಸು ಸಚಿವರು ಸದಸ್ಯರಾಗಿರುತ್ತಾರೆ. 15 ವರ್ಷ ಹಾಗೂ 7 ವರ್ಷಗಳ ಪ್ರತ್ಯೇಕ ಗುರಿಯ ಯೋಜನೆಯ ಜತೆಗೆ, ವಾರ್ಷಿಕ ಕಾರ್ಯಕ್ರಮಗಳ ಬಗ್ಗೆ ಈ ಸಂಸ್ಥೆ ನಿಗಾ ಇಡಲಿದೆ. ಆಡಳಿತಕ್ಕೆ ಹೊಸ ಸ್ಪರ್ಶ ‘ಮಿನಿಮಮ್ ಗವರ್ನಮೆಂಟ್, ಮ್ಯಾಕ್ಸಿಮಮ್ ಗವರ್ನನ್ಸ್’ (ಕನಿಷ್ಠ ಸರ್ಕಾರ ಗರಿಷ್ಠ ಆಡಳಿತ) ಧ್ಯೇಯ ವಾಕ್ಯದೊಂದಿಗೆ ಪ್ರಧಾನಿ ಕಚೇರಿಗೆ ನರೇಂದ್ರ ಮೋದಿ ಕಾಲಿಟ್ಟಿದ್ದರು. ತೆರಿಗೆ ವ್ಯವಸ್ಥೆಯಿಂದ ಹಿಡಿದು ಆಡಳಿತದ ಪ್ರತಿ ಹಂತದಲ್ಲಿಯೂ ಸುಧಾರಣೆ ತರುವ ಭರವಸೆ ನೀಡಿದ್ದರು. ಈ ನಿಟ್ಟಿನಲ್ಲಿ ಸರ್ಕಾರ ಕೆಲ ಹೆಜ್ಜೆಗಳನ್ನು ಇರಿಸಿದೆ. ಓಬೀರಾಯನ ಕಾಲದ ಕಾನೂನು ರದ್ದು ದೇಶದಲ್ಲಿ ಹಳೆಯ ಅನವಶ್ಯಕ ಕಾಯ್ದೆಗಳಿಂದ ಕೋರ್ಟ್ ಖಟ್ಲೆಗಳಲ್ಲಿ ವಿಳಂಬವಾಗುತ್ತದೆ. ಈ ಕಾರಣದಿಂದ ಸುಮಾರು 3 ಸಾವಿರ ...