ಜೋಡಿ ಪ್ಯಾಕೆಟ್ನಲ್ಲಿ ಕಣ್ಕಟ್, ನಿತ್ಯ 100 ಕೋಟಿ ರೂ. ವಹಿವಾಟು >>
ತಮಿಳುನಾಡಿನಲ್ಲಿ ಬೆಳಕಿಗೆ ಬಂದಿರುವ ಬಹುಕೋಟಿ ಗುಟ್ಖಾ ಹಗರಣ ತಲ್ಲಣಗೊಳಿಸಿದೆ. ತಮಿಳುನಾಡು ಸರ್ಕಾರ ರಾಜ್ಯದಲ್ಲಿ ತಂಬಾಕು, ಗುಟ್ಖಾ ಪದಾರ್ಥಗಳ ಮೇಲೆ ನಿಷೇಧ ಹೇರಿದ ಹೊರತಾಗಿಯೂ ಅವುಗಳ ಮಾರಾಟ ಎಗ್ಗಿಲ್ಲದೆ ಮುಂದುವರಿದಿತ್ತು. ಅಲ್ಲಿನ ಆರೋಗ್ಯ ಸಚಿವರು, ಪೊಲೀಸ್ ಅಧಿಕಾರಿಗಳೇ ವ್ಯಾಪಾರಿಗಳಿಂದ ಕಿಕ್ಬ್ಯಾಕ್ ಪಡೆದು ವ್ಯಾಪಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ಸಿಬಿಐ ಅಧಿಕಾರಿಗಳು ಇತ್ತೀಚೆಗೆ ಚೆನ್ನೈ, ಮುಂಬೈ, ಬೆಂಗಳೂರು ಸೇರಿ 37 ಕಡೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಇತ್ತ ಕರ್ನಾಟಕದಲ್ಲೂ ಗುಟ್ಖಾ ಘಾಟಿಗೆ ತಡೆ ಬಿದ್ದಿಲ್ಲ. ರಾಜ್ಯದ ಸ್ಥಿತಿಗತಿ ಕುರಿತು ಈ ವಿಶೇಷ ವರದಿ ಸಿದ್ಧಪಡಿಸಲಾಗಿದೆ.
| ಗೋವಿಂದರಾಜು ಚಿನ್ನಕುರ್ಚಿ
ಬೆಂಗಳೂರು: ಕ್ಯಾನ್ಸರ್ ಸೇರಿ 80ಕ್ಕೂ ಹೆಚ್ಚು ರೋಗಗಳನ್ನು ಬಳುವಳಿಯಾಗಿ ನೀಡುವ ತಂಬಾಕುಸಹಿತ ಗುಟ್ಖಾಗೆ ಕೇಂದ್ರ ಸರ್ಕಾರ ನಿಷೇಧ ಹೇರಿದ್ದರೂ ತೆರೆಮರೆಯಲ್ಲಿನ ಅದರ ಘಾಟು ಮಾತ್ರ ನಿಂತಿಲ್ಲ. ನೇರವಾಗಿ ಗುಟ್ಖಾ ಮಾರಾಟ ನಿಷೇಧಗೊಂಡ ಬಳಿಕ ಹೊಸ ದಾರಿ ಕಂಡುಕೊಂಡಿರುವ ವ್ಯಾಪಾರಸ್ಥರು ತಂಬಾಕು ಹಾಗೂ ಪಾನ್ ಮಸಾಲಾವನ್ನು ಪ್ರತ್ಯೇಕ ಪ್ಯಾಕೆಟ್ಗಳಲ್ಲಿ ಮಾರಾಟಮಾಡುವ ಮೂಲಕ ಕಾನೂನಿಗೇ ಸೆಡ್ಡು ಹೊಡೆದಿದ್ದಾರೆ. ಈ ವಿಚಾರ ಅಧಿಕಾರಿಗಳಿಗೆ ಗೊತ್ತಿದ್ದರೂ ಕಾನೂನು ನಿಯಮದ ನೆಪ ಹೇಳಿ ಸುಮ್ಮನಿದ್ದಾರೆ.
ಮನುಷ್ಯನ ಆರೋಗ್ಯಕ್ಕೆ ಹಾನಿಕಾರಕ ಎಂಬ ಕಾರಣಕ್ಕಾಗಿ ದೇಶಾದ್ಯಂತ ಗುಟ್ಖಾ ತಯಾರಿಕೆ ಮತ್ತು ಮಾರಾಟ ಬಂದ್ ಮಾಡಲಾಗಿದೆ. ಆದರೆ ತಂಬಾಕು ಉತ್ಪನ್ನಗಳ ತಯಾರಿಕೆಗೆ ನಿಷೇಧವಿಲ್ಲ. ತಂಬಾಕು ಮಾರಾಟದ ಮೇಲೆ ಕೆಲ ಮಾರ್ಗಸೂಚಿ ರೂಪಿಸಿ ಅವಕಾಶ ಕಲ್ಪಿಸಿರುವುದು ಗುಟ್ಖಾ ತಯಾರಿಕಾ ಕಂಪನಿಗಳಿಗೆ ವರದಾನವಾಗಿದೆ. ಕಾನೂನಿನ ಕಣ್ಣಿಗೆ ಮಣ್ಣೆರಚಿ ತಂಬಾಕು ಮಾರಾಟದ ಸೋಗಿನಲ್ಲಿ ಗುಟ್ಖಾ ಮಾರಾಟ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ.
ಶಿಕ್ಷೆ ಏನು?
ಅಕ್ರಮವಾಗಿ ಗುಟ್ಖಾ ತಯಾರಿಸುವ ವರಿಗೆ 10 ಲಕ್ಷ ರೂ. ದಂಡ ಮತ್ತು 2 ವರ್ಷ ಸಜೆ ವಿಧಿಸಬಹುದು. ಅದೇ ರೀತಿ ಅಂಗಡಿಗಳಲ್ಲಿ ಚಿಲ್ಲರೆ ರೂಪದಲ್ಲಿ ಮಾರಾಟ ಮಾಡಿದಲ್ಲಿ 2 ಸಾವಿರ ರೂ. ದಂಡ ಹಾಗೂ 6 ತಿಂಗಳ ಸಜೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ.
ಪ್ಯಾಕ್ ಮಿಕ್ಸ್ ಮಸಾಲ
ಅಡಕೆ, ಸುಣ್ಣ, ಮಸಾಲ, ತಂಬಾಕು ಪದಾರ್ಥ ಸೇರಿದರೆ ಗುಟ್ಖಾ ಆಗುತ್ತದೆ. ಆದರೆ ತಂಬಾಕು ಮಾರಾಟಕ್ಕೆ ನಿರ್ಬಂಧವಿಲ್ಲವಾದ್ದರಿಂದ ಗುಟ್ಖಾ ಕಂಪನಿಗಳು ಒಂದು ಪ್ಯಾಕ್ನಲ್ಲಿ ಮಸಾಲ, ಅಡಿಕೆ, ಸುಣ್ಣ ಮತ್ತೊಂದು ಪ್ಯಾಕ್ನಲ್ಲಿ ತಂಬಾಕು ತುಂಬಿ ಮಾರುಕಟ್ಟೆಗೆ ಬಿಡುತ್ತಿವೆ. ಗ್ರಾಹಕರು ಈ ಎರಡೂ ಪ್ಯಾಕ್ಗಳನ್ನು ಪ್ರತ್ಯೇಕವಾಗಿ ಖರೀದಿಸಿ ಸೇರಿಸಿ ಗುಟ್ಖಾ ಮಾಡಿಕೊಂಡು ಸೇವಿಸುತ್ತಾರೆ.
ಐದು ತಿಂಗಳಲ್ಲಿ 415 ಪ್ರಕರಣ!
ರಾಜಧಾನಿ ಬೆಂಗಳೂರಿನಲ್ಲೇ ಕಳೆದ 5 ತಿಂಗಳಲ್ಲಿ 415 ಪ್ರಕರಣಗಳು ದಾಖಲಾಗಿದ್ದು, 12 ಸಾವಿರ ರೂ. ದಂಡ ವಿಧಿಸಲಾಗಿದೆ. ಅಕ್ರಮ ಗುಟ್ಖಾ ಮಾರಾಟದ ಬಗ್ಗೆ ಜನರು ದೂರು ನೀಡಿದರೆ ಕೂಡಲೇ ಅಂತಹ ಅಂಗಡಿಗಳ ಮೇಲೆ ದಾಳಿ ನಡೆಸಿ ಮಾಲೀಕರಿಗೆ ದಂಡ ವಿಧಿಸುವುದಾಗಿ ಆಹಾರ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ತಂಬಾಕು, ಗುಟ್ಖಾದಿಂದ ಶೇ.80 ಕ್ಯಾನ್ಸರ್ ರೋಗಗಳು ಬರುತ್ತವೆ. ಈ ಚಟ ಯುವಪೀಳಿಗೆಯಲ್ಲಿ ಹೆಚ್ಚಾಗಿದ್ದು, ಇವುಗಳಿಂದ ದೂರವಿದ್ದರೆ ಕ್ಯಾನ್ಸರ್ ತಡೆಗಟ್ಟಲು ಸಾಧ್ಯವಾಗುತ್ತದೆ.
| ಡಾ.ಸಿ.ರಾಮಚಂದ್ರ, ನಿರ್ದೇಶಕ, ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ
ಮಾರಕ ಕ್ಯಾನ್ಸರ್ಗೆ ರಹದಾರಿ
ತಂಬಾಕು, ಗುಟ್ಖಾ ಸೇವನೆಯಿಂದ ಗಂಟಲು, ಬಾಯಿ, ಅನ್ನನಾಳ, ಶ್ವಾಸಕೋಶ, ದವಡೆ ಕ್ಯಾನ್ಸರ್ ಬರುತ್ತದೆ. ತಂಬಾಕು, ಗುಟ್ಖಾ ಜಗಿಯುವುದರಿಂದ ನಿಕೋಟಿನ್ ಇನ್ನಿತರ 4 ಸಾವಿರ ವಿಷಕಾರಿ ಪದಾರ್ಥಗಳು ಶ್ವಾಸನಾಳದ ಒಳಸೇರುತ್ತವೆ. ಇದರಿಂದ ರಕ್ತದೊತ್ತಡ ಹೆಚ್ಚುತ್ತದೆ, ಹೃದಯದ ಬಡಿತ ತೀವ್ರಗೊಳ್ಳುತ್ತದೆ. ಹೆಣ್ಣು ಮಕ್ಕಳಲ್ಲಿ ಗರ್ಭಾಶಯಕ್ಕೆ ಹಾನಿ ಉಂಟಾಗುತ್ತದೆ. ಮಿದುಳು, ಮೂಗು ಮತ್ತು ಕಣ್ಣಿನ ಮೇಲೂ ಪರಿಣಾಮ ಬೀರುತ್ತದೆ ಎಂದು ವೈದ್ಯರು ಹೇಳುತ್ತಾರೆ.
ಪ್ರತ್ಯೇಕ ಕ್ಯಾನ್ಸರ್ ಘಟಕ ಸ್ಥಾಪನೆ
ತಂಬಾಕು, ಗುಟ್ಖಾ ಸೇವನೆಯಿಂದ ಕ್ಯಾನ್ಸರ್ ರೋಗಿಗಳ ಸಂಖ್ಯೆ ದಿನೇದಿನೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕ್ಯಾನ್ಸರ್ ಆಸ್ಪತ್ರೆಗಳ ಸ್ಥಾಪನೆ ಜತೆಯಲ್ಲೇ ರಾಜ್ಯಾದ್ಯಂತ ಇರುವ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲೂ ಕ್ಯಾನ್ಸರ್ ಚಿಕಿತ್ಸೆಗಾಗಿಯೇ ಪ್ರತ್ಯೇಕ ವಿಭಾಗ ತೆರೆಯಲಾಗುತ್ತಿದೆ.
ಗುಡಿ ಕೈಗಾರಿಕೆ
ರಾಜ್ಯದಲ್ಲಿ ದಿನಕ್ಕೆ ಅಂದಾಜು 100 ಕೋಟಿ ರೂ. ಗುಟ್ಖಾ ವಹಿವಾಟು ನಡೆಯುತ್ತಿದೆ. ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಬೆಂಗಳೂರು, ಮಂಗಳೂರು, ತುಮಕೂರು, ಹಾಸನ ಜಿಲ್ಲೆಗಳಲ್ಲಿ ಹೆಚ್ಚಾಗಿ ಗುಟ್ಖಾ ತಯಾರಿಕೆ, ಮಾರಾಟ ಹಾಗೂ ಸೇವನೆ ನಡೆಯುತ್ತದೆ. ಗುಟ್ಖಾ ತಯಾರಿಕೆ ಬಹುತೇಕ ಗುಡಿ ಕೈಗಾರಿಕೆಯಲ್ಲಿ ನಡೆಯುವುದರಿಂದ ಪತ್ತೆಹಚ್ಚಲು ಕಷ್ಟವಾಗುತ್ತಿದೆ. ದೊಡ್ಡ ಕಂಪನಿಗಳ ಉದ್ಯಮಿಗಳು ಕಾನೂನಿನ ಸಣ್ಣ ಲೋಪ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ.
ತಂಬಾಕು ನಿಷೇಧ ಏಕಿಲ್ಲ?
ತಂಬಾಕು ಉತ್ಪನ್ನಗಳ ಕಂಪನಿಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಲಾಬಿ ನಡೆಸುತ್ತಿವೆ. ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ತಂಬಾಕು ನಿಷೇಧಿಸುವ ಬಗ್ಗೆ ಚರ್ಚೆ ಬಂದಾಗ ಅಮೆರಿಕ ಹೊರತುಪಡಿಸಿ ಭಾರತ ಸೇರಿ ಉಳಿದೆಲ್ಲ ದೇಶಗಳು ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಒಪ್ಪಿ ಸಹಿ ಮಾಡಿವೆ. ಇದೀಗ ಏಕಾಏಕಿ ನಿರ್ಬಂಧಿಸಲು ಸಾಧ್ಯವಿಲ್ಲ. ಅಲ್ಲದೆ, ಎಲ್ಐಸಿ ಸೇರಿ ಸಾರ್ವಜನಿಕ ಉದ್ಯಮಗಳ ಶೇ.25 ಬಂಡವಾಳ ತಂಬಾಕು ಉತ್ಪನ್ನಗಳ ಮೇಲೆ ಹೂಡಿಕೆಯಾಗಿದೆ. ಹಾಗಾಗಿ ತಂಬಾಕು ಉತ್ಪನ್ನ ನಿಷೇಧಿಸಿದರೆ ದೇಶದ ಆರ್ಥಿಕ ಪರಿಸ್ಥಿತಿ ಮೇಲೆ ದುಷ್ಪರಿಣಾಮವಾಗುತ್ತದೆ ಎಂದು ಆಹಾರ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.
ನಾಮ್ಕೇ ವಾಸ್ತೆಗೆ ಸಮಿತಿ
ಗುಟ್ಖಾ ಉತ್ಪಾದನೆ ಮತ್ತು ಮಾರಾಟಕ್ಕೆ ನಿಯಂತ್ರಣ ಹಾಕಲು ಆಯಾ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಅನುಷ್ಠಾನ, ಸಮಿತಿ ರಚಿಸಲಾಗಿದೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಅಧಿಕಾರಿಗಳು, ಜಿಲ್ಲಾ ಪಂಚಾಯಿತಿ ಸಿಇಒ, ಎಸ್ಪಿ, ಪಾಲಿಕೆ-ನಗರಸಭೆ ಆಯುಕ್ತರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ಆರ್ಟಿಒ, ಆದಾಯ ತೆರಿಗೆ ಆಯುಕ್ತರು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ವಾರ್ತಾ ಇಲಾಖೆ, ಕೃಷಿ ಮಾರಾಟ ಇಲಾಖೆಗಳ ಉಪ ನಿರ್ದೇಶಕರು ಸಮಿತಿಯಲ್ಲಿರುತ್ತಾರೆ. ಆದರೆ, ಅಕ್ರಮ ಗುಟ್ಕಾ ದಂಧೆಯನ್ನು ಮಟ್ಟ ಹಾಕಲು ಸಾಧ್ಯವಾಗಿಲ್ಲ.
ಬಿಗಿ ಇಲ್ಲದ ನಿಯಮ
ಉತ್ಪನ್ನಗಳ ಜಾಹೀರಾತು ನೀಡಬಾರದು, ಪ್ಯಾಕ್ ಮೇಲೆ ಆರೋಗ್ಯಕ್ಕೆ ಹಾನಿಕಾರಕ ಎಂದು (ಶೇ.85) ಮುದ್ರಿಸಬೇಕು, 18 ವರ್ಷ ಒಳಗಿನವರಿಗೆ ಮಾರಾಟ ಹಾಗೂ ಶಾಲಾ ಕಾಲೇಜು, ಸಾರ್ವಜನಿಕ ಸ್ಥಳಗಳಲ್ಲಿ ಮಾರಾಟ, ಸೇವನೆಯನ್ನು ನಿರ್ಬಂಧಿಸಿದೆ. ಈ ಕಾನೂನು ಅನುಷ್ಠಾನಕ್ಕೆ ಪೊಲೀಸರು ಮತ್ತು ವಿಚಕ್ಷಣ ದಳ ಅಧಿಕಾರಿಗಳು ಗಮನ ಹರಿಸಿದ್ದಾರೆ.
ತಂಬಾಕು ಆದಾಯ ತರಬಹುದು. ಆದರೆ, ಅದು ಜೀವ ತೆಗೆಯುತ್ತದೆ. ತಂಬಾಕು ಬೆಳೆಯುವ ರೈತರನ್ನು ಅನ್ನದಾತರು ಎಂಬ ಪಟ್ಟಿಯಿಂದ ಬೇರ್ಪಡಿಸಬೇಕು.
|ಎಸ್.ಎ.ಚಂದರ್, ಸಂಚಾಲಕ, ತಂಬಾಕು ರೈತರ ಕರ್ನಾಟಕ ಒಕ್ಕೂಟ
ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ಸಂಪೂರ್ಣ ಗುಟ್ಖಾ ನಿಷೇಧಿಸುವ ಕೆಲಸ ನಡೆಯುತ್ತಿದೆ. ಕೆಲ ಅಂಗಡಿಗಳಲ್ಲಿ ಅಕ್ರಮವಾಗಿ ಮಾರಾಟ ನಡೆಯುತ್ತಿದ್ದು, ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತಿದೆ.
|ಡಾ.ಚಂದ್ರ ಕಿರಣ್, ಜಿಲ್ಲಾ ಸಲಹೆಗಾರ, ಬೆಂಗಳೂರು ನಗರ ಜಿಲ್ಲಾ ತಂಬಾಕು ನಿಯಂತ್ರಣ ಕೋಶ
ಗುಟ್ಖಾ ಸೇವಿಸುವ ಶೇ. 60 ಜನರಿಗೆ ಬಾಯಿ ಕ್ಯಾನ್ಸರ್ ಬರುವುದು ಖಚಿತ. ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಅರಿವಿದ್ದರೂ ಇದನ್ನು ಸೇವಿಸುವವರ ಸಂಖ್ಯೆ ಹೆಚ್ಚುತ್ತಿದೆ. ಈ ಕುರಿತು ಇನ್ನಷ್ಟು ಜಾಗೃತಿ ಮೂಡಿಸುವ ಕೆಲಸವಾಗಬೇಕು.
| ಡಾ. ಪ್ರಸಾದ ಗುಣಾರಿ, ತಜ್ಞವೈದ್ಯರು, ಎಚ್ಸಿಜಿ ಕ್ಯಾನ್ಸರ್ ಸೆಂಟರ್, ಹುಬ್ಬಳ್ಳಿ
ಉ. ಕರ್ನಾಟಕದಲ್ಲೇ ಹೆಚ್ಚು
ರಾಜ್ಯದ ಮುಕ್ಕಾಲು ಭಾಗ ಗುಟ್ಖಾ ಮಾರಾಟವಾಗುವುದು ಉತ್ತರ ಕರ್ನಾಟಕದಲ್ಲಿಯೇ! ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲೇ ನಿತ್ಯ 22 ರಿಂದ 25 ಲಕ್ಷ ರೂ.ಗಳವರೆಗೆ ಗುಟ್ಕಾ ವ್ಯವಹಾರ ನಡೆಯುತ್ತಿದೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ