ಭಾರತದ ಅಂಧ ಚೆಸ್ ಆಟಗಾರ್ತಿ ವೈಶಾಲಿ ನರೇಂದ್ರ ಸಲಾವ್ಕರ್, ವಿಶ್ವ ಚೆಸ್ ಒಲಿಂಪಿಯಾಡ್ನಲ್ಲಿ ಸ್ಪರ್ಧಿಸಲಿರುವ ಭಾರತದ ಮೊದಲ ದೃಷ್ಟಿಹೀನ ಸ್ಪರ್ಧಿ ಎನಿಸಲಿದ್ದಾರೆ. ಜಾರ್ಜಿಯಾದ ಬಟುಮಿಯಲ್ಲಿ ಭಾನುವಾರ ಆರಂಭವಾಗಲಿರುವ 43ನೇ ಆವೃತ್ತಿಯ ಒಲಿಂಪಿಯಾಡ್ನಲ್ಲಿ, ಇಂಟರ್ನ್ಯಾಷನಲ್ ಬ್ರೖೆಲಿ ಚೆಸ್ ಸಂಸ್ಥೆ (ಐಬಿಸಿಎ) ತಂಡದ ಭಾಗವಾಗಿ ವೈಶಾಲಿ ಸ್ಪರ್ಧೆ ಮಾಡಲಿದ್ದಾರೆ. ಫಿಡೆ ಮಾನ್ಯತೆ ಹೊಂದಿರುವ ಐಬಿಸಿಎ, ಒಲಿಂಪಿಯಾಡ್ನ ಮುಕ್ತ ಹಾಗೂ ಮಹಿಳಾ ವಿಭಾಗಕ್ಕೆ ತಂಡವನ್ನು ಕಳುಹಿಸಿಕೊಟ್ಟಿದೆ. ‘ಮಹಾರಾಷ್ಟ್ರದ 45 ವರ್ಷದ ವೈಶಾಲಿ, ಕಳೆದ 20-25 ವರ್ಷಗಳಿಂದ ಚೆಸ್ ಆಡುತ್ತಿದ್ದು, ಎಂಟು ಬಾರಿ ರಾಷ್ಟ್ರೀಯ ಚಾಂಪಿಯನ್ ಕೂಡ ಆಗಿದ್ದಾರೆ. ಈ ಸಾಧನೆಗೆ ಅವರು ಅರ್ಹರಾಗಿದ್ದಾರೆ’ ಎಂದು ಐಬಿಸಿಎ ಜತೆ, ಅಖಿಲ ಭಾರತ ಅಂಧರ ಚೆಸ್ ಸಂಸ್ಥೆ (ಎಐಸಿಎಫ್ಬಿ) ಅಧ್ಯಕ್ಷರೂ ಆಗಿರುವ ಜಾಧವ್ ಚಾರುದತ್ತ ಸಂಭ್ರಮ ವ್ಯಕ್ತಪಡಿಸಿದ್ದಾರೆ. ಸ್ಪೇನ್ನ ಇಬ್ಬರು ಚೆಸ್ ಆಟಗಾರ್ತಿಯರಿಗೆ ಟೂರ್ನಿಯಲ್ಲಿ ಭಾಗವಹಿಸಲು ಸಾಧ್ಯವಾಗದ ಕಾರಣ ವೈಶಾಲಿಗೆ ಈ ಅದೃಷ್ಟ ಒಲಿದಿದೆ. ಒಲಿಂಪಿಯಾಡ್ ಅಧಿಕೃತ ವೆಬ್ಸೈಟ್ ಪ್ರಕಾರ, ಅಂತಾರಾಷ್ಟ್ರೀಯ ಕಿವುಡರ ಚೆಸ್ ಸಮಿತಿ ತಂಡದ ಭಾಗವಾಹಿ ಭಾರತದ ಮಲಿಕಾ ಹಂಡಾ ಸ್ಪರ್ಧೆ ಮಾಡಲಿದ್ದಾರೆ.
ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ