ದೇಶದ ಭದ್ರತೆ ಕಾಪಾಡುವ ದೃಷ್ಟಿಯಿಂದ ಮೂರು ಹೊಸ ವಿಭಾಗಗಳನ್ನು ಸೃಷ್ಟಿಸಲು ರಕ್ಷಣಾ ಸಚಿವಾಲಯ ಒಪ್ಪಿಗೆ ಸೂಚಿಸಿದೆ. ಭೂ ಸೇನೆ, ವಾಯುಪಡೆ, ನೌಕಾಪಡೆ ಸಿಬ್ಬಂದಿ ಇದರಲ್ಲಿ ಇರಲಿದ್ದಾರೆ. ವಿಶೇಷ ಕಾರ್ಯಾಚರಣೆಗಾಗಿ ಈ ತಂಡಗಳನ್ನು ಸಜ್ಜುಗೊಳಿಸಲು ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ದಿ ಆಮ್್ಡರ್ ಫೋರ್ಸ್ ಸ್ಪೆಷಲ್ ಆಪರೇಷನ್ ಡಿವಿಷನ್, ದಿ ಡಿಫೆನ್ಸ್ ಸೈಬರ್ ಏಜೆನ್ಸಿ ಹಾಗೂ ದಿ ಡಿಫೆನ್ಸ್ ಸ್ಪೇಸ್ ಏಜೆನ್ಸಿ ಎಂಬ ಮೂರು ಹೊಸ ವಿಭಾಗ ಮುಂದಿನ ದಿನಗಳಲ್ಲಿ ಕಾರ್ಯಾಚರಣೆ ಆರಂಭಿಸಲಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭದ್ರತಾ ಸಂಪುಟ ಸಮಿತಿ ಎದುರು ಈ ಪ್ರಸ್ತಾವನೆ ಮಂಡಿಸಲಾಗುವುದು. ಈಗಾಗಲೇ ಸಂಪುಟ ಪ್ರಸ್ತಾವನೆ ಸಿದ್ಧಗೊಂಡಿದೆ. ಮುಂದಿನ ಸಭೆಯಲ್ಲೇ ಇದನ್ನು ಚರ್ಚೆಗೆ ಎತ್ತಿಕೊಳ್ಳಲಾಗುವುದು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ರಕ್ಷಣೆ, ಹಣಕಾಸು, ವಿದೇಶಾಂಗ ಹಾಗೂ ಗೃಹ ಸಚಿವರು ಈ ಸಮಿತಿ ಸದಸ್ಯರಾಗಿದ್ದಾರೆ. 2010ರಲ್ಲಿ ಯುಪಿಎ ಸರ್ಕಾರ ಅಸ್ತಿತ್ವದಲ್ಲಿದ್ದಾಗ ಮೊದಲ ಬಾರಿಗೆ ಈ ಪ್ರಸ್ತಾವನೆ ಮಂಡಿಸಲಾಗಿತ್ತು. ಆದರೆ ತಾಂತ್ರಿಕ ಕಾರಣಗಳಿಂದಾಗಿ ಇದಕ್ಕೆ ಒಪ್ಪಿಗೆ ಸಿಕ್ಕಿರಲಿಲ್ಲ.
ಆಧುನಿಕ ಹೆಜ್ಜೆ: ಸೇನೆಯ ಆಧುನೀಕರಣಕ್ಕೆ ಮುಂದಾಗಿರುವ ಸರ್ಕಾರ ಈಗ ಮಹತ್ವದ ಹೆಜ್ಜೆ ಇಟ್ಟಿದೆ. ಸೇನೆಗೆ ಹೊಸ ಸವಾಲಾಗಿರುವ ಸೈಬರ್ ಮತ್ತು ಸ್ಪೇಸ್ ಸಂಬಂಧಿತ ದಾಳಿಯನ್ನು ಎದುರಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ. ಸೈಬರ್, ಸ್ಪೇಸ್ ದಾಳಿಗಳು ಸೇನೆಗೆ ಸೀಮಿತವಾಗಿ ರದೇ ಜನಸಾಮಾನ್ಯರ ಮೇಲೂ ಪ್ರಭಾವ ಬೀರುತ್ತಿವೆ. ರೈಲ್ವೆ, ಏರ್ಲೈನ್ಸ್ಗಳ ಜಾಲದ ಮೇಲೆ ಈಗಾಗಲೇ ಹಲವು ಬಾರಿ ಸೈಬರ್ ದಾಳಿ ನಡೆದಿವೆ. ಇದು ಸಾರ್ವಜನಿಕರ ಜೀವನದ ಮೇಲೂ ಪರಿಣಾಮ ಬೀರಲಿವೆ. ಟೆಲಿಕಾಂ ಸಂವಹನ, ಇಂಧನ ಹಾಗೂ ವಿದ್ಯುತ್ ಕ್ಷೇತ್ರ, ಪರಮಾಣು ವಿದ್ಯುತ್ ಸ್ಥಾವರಗಳ ಮೇಲೆ ಸೈಬರ್ ಅಥವಾ ವೈಮಾನಿಕ ದಾಳಿಗಳು ನಡೆದರೆ ಕೋಟ್ಯಂತರ ಜನರು ತೊಂದರೆ ಅನುಭವಿಸಬೇಕಾಗುತ್ತದೆ. ಗಡಿಯಲ್ಲಿ ಶತ್ರು ರಾಷ್ಟ್ರಗಳ ದಾಳಿಗಿಂತ ಸೈಬರ್ ಹಾಗೂ ಸ್ಪೇಸ್ ದಾಳಿ ಮತ್ತಷ್ಟು ಭೀಕರವಾಗಿರಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಪರಿಕ್ಕರ್ ಪರಿಕಲ್ಪನೆ
ಗೋವಾ ಸಿಎಂ ಮನೋಹರ ಪರಿಕ್ಕರ್ ಭದ್ರತಾ ಸಚಿವರಾಗಿದ್ದಾಗ ಕೆಲವು ಪ್ರಸ್ತಾವನೆಗಳನ್ನು ಮುಂದಿಟ್ಟಿದ್ದರು. ಸೇನೆಯಲ್ಲಿ ಉದ್ಯೋಗ ಕಡಿತಮಾಡಲು ಚಿಂತನೆ ನಡೆಸಿದ್ದರು. ಮುಂದೆ ಎದುರಾಗಬಹುದಾದ ಸವಾಲುಗಳನ್ನು ಎದುರಿಸಲು ವಿವಿಧ ಕ್ಷೇತ್ರಗಳ ತಜ್ಞರನ್ನು ಗುತ್ತಿಗೆ ಆಧಾರದಲ್ಲಿ ನಿಯೋಜಿಸಿಕೊಳ್ಳಲು ನಿರ್ಧರಿಸಿದ್ದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ