ಪ್ರತಿಷ್ಠೆ ಬದಿಗಿಟ್ಟ ಸಿಎಂ | ಕೇಂದ್ರ, ರಾಜ್ಯ ಯೋಜನೆ
ವಿಲೀನಕ್ಕೆ ಸಮ್ಮತಿ >>
| ವರುಣ ಹೆಗಡೆ
ಬೆಂಗಳೂರು: ಕಡು ಬಡವರಿಗೆ ಆರೋಗ್ಯ ಭಾಗ್ಯ ಕಲ್ಪಿಸುವ ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ್
ಹಾಗೂ ರಾಜ್ಯ ಸರ್ಕಾರದ ಆರೋಗ್ಯ ಕರ್ನಾಟಕ ಯೋಜನೆ ಜಾರಿ ವಿಚಾರದಲ್ಲಿನ ಗೊಂದಲ ಬಹುತೇಕ
ಬಗೆಹರಿದಿದೆ. ಆಯುಷ್ಮಾನ್ ಜತೆ ಆರೋಗ್ಯ ಕರ್ನಾಟಕ ವಿಲೀನಗೊಳಿಸಿದಲ್ಲಿ ಅದರ ಸಂಪೂರ್ಣ
ಶ್ರೇಯಸ್ಸು ಕೇಂದ್ರಕ್ಕೆ ಹೋಗಬಹುದೆಂಬ ಕಾರಣಕ್ಕೆ ಹಿಂದಡಿ ಇಟ್ಟಿದ್ದ ರಾಜ್ಯ ಸರ್ಕಾರ
ವೈದ್ಯರ ಸಲಹೆ ಹಿನ್ನೆಲೆಯಲ್ಲಿ ಮನಸ್ಸು ಬದಲಾಯಿಸಿದೆ. ಗುರುವಾರ ನಡೆಯಲಿರುವ ರಾಜ್ಯ ಸಚಿವ
ಸಂಪುಟ ಸಭೆಯಲ್ಲಿ ಈ ಕುರಿತು ನಿರ್ಧಾರ ಹೊರಬೀಳಲಿದೆ.
ಆಯುಷ್ಮಾನ್ ಭಾರತ್ ಯೋಜನೆ ಜತೆ ಒಡಂಬಡಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ
ಕುಮಾರಸ್ವಾಮಿ ಬುಧವಾರ ವೈದ್ಯರ ಸಭೆ ನಡೆಸಿ ಸಲಹೆ ಪಡೆದಿದ್ದಾರೆ. ಈ ಯೋಜನೆ ಜಾರಿಯಿಂದ
ರಾಜ್ಯದ ರೋಗಿಗಳಿಗೆ ಗುಣಮಟ್ಟದ ವೈದ್ಯಕೀಯ ಸೇವೆ ಸಿಗಲಿದೆ ಎಂಬ ವೈದ್ಯರ ಅಭಿಪ್ರಾಯದ
ಹಿನ್ನೆಲೆಯಲ್ಲಿ ಯೋಜನೆ ವಿಲೀನಗೊಳಿಸಿ ಆಯುಷ್ಮಾನ್ ಭಾರತ್ ಹಾಗೂ ಆರೋಗ್ಯ ಕರ್ನಾಟಕ ಎರಡೂ
ಹೆಸರಿನಲ್ಲಿ ಆರೋಗ್ಯ ಸೇವೆ ನೀಡುವ ನಿರ್ಧಾರಕ್ಕೆ ಬರಲಾಗಿದೆ. ಈ ಕುರಿತು ಕೇಂದ್ರ ಸರ್ಕಾರದ
ಜತೆಗೆ ಮಾತುಕತೆ ನಡೆಸಲು ಸಿಎಂ ನಿರ್ಧರಿಸಿದ್ದಾರೆ. ಏಕೀಕೃತ ಯೋಜನೆ ಜಾರಿಯಾದಲ್ಲಿ ರಾಜ್ಯ
ಸರ್ಕಾರ 800 ಕೋಟಿ ರೂ. ಹಾಗೂ ಕೇಂದ್ರ ಸರ್ಕಾರ 300 ಕೋಟಿ ರೂ. ವಿನಿಯೋಗ ಮಾಡಲಿವೆ.
11 ರಾಜ್ಯದಲ್ಲಿ ಪ್ರಾಯೋಗಿಕ ಜಾರಿ
36 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಪೈಕಿ ಈವರೆಗೆ 29 ರಾಜ್ಯ ಹಾಗೂ ಕೇಂದ್ರಾಡಳಿತ
ಪ್ರದೇಶಗಳು ಆಯುಷ್ಮಾನ್ ಭಾರತ ಯೋಜನೆಗೆ ಕೈ ಜೋಡಿಸಲು ಸಮ್ಮತಿ ಸೂಚಿಸಿವೆ. ಒಡಿಶಾ ಈ
ಯೋಜನೆಯಿಂದ ಹೊರತಾಗಿದ್ದು, ಕರ್ನಾಟಕ ಸೇರಿ 6 ರಾಜ್ಯಗಳು ಯೋಜನೆಗೆ ಒಳಪಡುವ ಬಗ್ಗೆ
ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲ. ಮೊದಲ ಹಂತದಲ್ಲಿ ಛತ್ತೀಸ್ಗಢ, ತ್ರಿಪುರ, ಅರುಣಾಚಲ
ಪ್ರದೇಶ, ಆಂಧ್ರಪ್ರದೇಶ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ಚಂಡೀಗಢ, ಗುಜರಾತ್ ಮತ್ತು ಹಿಮಾಚಲ
ಪ್ರದೇಶ ಆಯ್ಕೆಯಾಗಿವೆ. ಕರ್ನಾಟಕ, ಕೇರಳ, ಮಹಾರಾಷ್ಟ್ರ, ಪಂಜಾಬ್ ಹಾಗೂ ದೆಹಲಿ
ಹೊರಗುಳಿದಿವೆ.
ಯಾವಾಗ ಜಾರಿ?
ಸ್ವಾತಂತ್ರ್ಯ ದಿನದಂದು ಪ್ರಧಾನಿ ಮೋದಿ ಘೋಷಿಸಿರುವ ಆಯುಷ್ಮಾನ್ ಭಾರತ್ ಯೋಜನೆ
ಸೆ.25ಕ್ಕೆ ದೀನ್ ದಯಾಳ್ ಉಪಾಧ್ಯಾಯ ಜಯಂತಿಯಂದು ಹನ್ನೊಂದು ರಾಜ್ಯದಲ್ಲಿ ಆರಂಭವಾಗಲಿದೆ.
ಫಲಾನುಭವಿಗಳು
ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ಎಪಿಎಲ್ ಕಾರ್ಡ್ದಾರರಿಗೆ ಶೇ.30 ವೆಚ್ಚವನ್ನು ಸರ್ಕಾರ
ಪಾವತಿಸುತ್ತದೆ. ಆದರೆ, ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ಬಿಪಿಎಲ್ ಕಾರ್ಡ್ದಾರರಿಗಷ್ಟೇ
ವೈದ್ಯಕೀಯ ಸೇವೆ ಸಿಗುತ್ತದೆ.
ಪ್ಯಾಕೇಜ್ ವ್ಯವಸ್ಥೆ
ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ಚಿಕಿತ್ಸಾ ವೆಚ್ಚವನ್ನು ಪ್ಯಾಕೇಜ್ ರೂಪದಲ್ಲಿಯೇ
ಭರಿಸಲಾಗುತ್ತದೆ. ಆಸ್ಪತ್ರೆ ಚಿಕಿತ್ಸಾ ವೆಚ್ಚವನ್ನು ರಾಜ್ಯ ಸರ್ಕಾರವೇ ನಿಗದಿ
ಮಾಡಬಹುದಾಗಿದೆ. ರಾಜ್ಯ ಸರ್ಕಾರ ವೆಚ್ಚ ಭರಿಸುವುದರಿಂದ ದರ ನಿಗದಿ ಮಾಡುವ ಅಧಿಕಾರ
ನೀಡಲಾಗಿದೆ. ಆರೋಗ್ಯ ಕರ್ನಾಟಕ ಯೋಜನೆಯಡಿ ಸಹ ಪ್ಯಾಕೇಜ್ ವ್ಯವಸ್ಥೆ ರೂಪಿಸಲಾಗಿದ್ದು,
ಹೃದ್ರೋಗ ಚಿಕಿತ್ಸೆಗೆ (65 ಸಾವಿರ ರೂ), ಮಂಡಿಚಿಪ್ಪು ಬದಲಾವಣೆ (ನೀ ರಿಪ್ಲೇಸ್ವೆುಂಟ್)
ಚಿಕಿತ್ಸೆಗೆ (65 ಸಾವಿರ ರೂ), ಕಣ್ಣಿನ ನರ ಚಿಕಿತ್ಸೆ (8 ಸಾವಿರ ರೂ.) ಸೇರಿದಂತೆ ವಿವಿಧ
ಚಿಕಿತ್ಸೆಗೆ ದರ ನಿಗದಿ ಮಾಡಲಾಗಿದೆ.
ಪ್ರತ್ಯೇಕ ಕಾರ್ಡ್ ಬೇಕಿಲ್ಲ
ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ಫಲಾನುಭವಿಗಳು ಸೇವೆ ಪಡೆಯಲು 10 ರೂ. ಪಾವತಿಸಿ ಹೆಲ್ತ್
ಕಾರ್ಡ್ ಪಡೆದುಕೊಳ್ಳಬೇಕು. ಸದ್ಯ ಪಡಿತರ ಚೀಟಿ ತೋರಿಸಿದರೂ ಚಿಕಿತ್ಸೆ ನೀಡಲಾಗುತ್ತಿದೆ.
ಆಯುಷ್ಮಾನ್ ಭಾರತ್ ಯೋಜನೆ ಅಡಿಯಲ್ಲಿ ಆರೋಗ್ಯ ಸೇವೆ ಪಡೆದುಕೊಳ್ಳಲು ಆಧಾರ್ ಕಾರ್ಡ್
ವಿನಾಯಿತಿ ಸಹ ನೀಡಲಾಗಿದೆ. ಪಡಿತರ ಚೀಟಿ, ಚಾಲನಾ ಪರವಾನಿಗೆ, ಚುನಾವಣಾ ಗುರುತಿನ ಚೀಟಿ
ತೋರಿಸಿ ಸೇವೆ ಪಡೆದುಕೊಳ್ಳಬಹುದಾಗಿದೆ. ಪ್ರತ್ಯೇಕ ಕಾರ್ಡ್ ಪಡೆಯಬೇಕಿಲ್ಲ.
ಸಿಎಂ ಜತೆ ಸಭೆ ಮಾಡಿದ್ದೇವೆ. ಆರೋಗ್ಯ ಶ್ರೀ ಹಾಗೂ ಆರೋಗ್ಯ ಕರ್ನಾಟಕ ಯೋಜನೆಯಲ್ಲಿ
ಲಕ್ಷಾಂತರ ರೋಗಿಗಳಿಗೆ ಚಿಕಿತ್ಸೆ ದೊರೆತಿದೆ. ಬಡತನ ರೇಖೆಗಿಂತ ಕೆಳಗಿರುವ ರೋಗಿಗಳಿಗೆ
ರಾಜ್ಯ ಸರ್ಕಾರದ ಯೋಜನೆಯಿಂದ ಅನುಕೂಲವಾಗಿದೆ. ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ಅನುದಾನ
ಸಿಗುವುದರಿಂದ ವೈದ್ಯರ ಸಲಹೆ ಮೇರೆಗೆ ಸಿಎಂ ಸಮ್ಮತಿ ಸೂಚಿಸಿದ್ದಾರೆ.
| ಡಾ.ಸಿ.ಎನ್. ಮಂಜುನಾಥ್, ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೇಶಕ
ಕಾರ್ಡ್ಗಳ ಕಥೆಯೇನು?
ಆರೋಗ್ಯ ಕರ್ನಾಟಕ ಯೋಜನೆ ಜಾರಿ ಬಳಿಕ ಈವರೆಗೆ 3ಲಕ್ಷಕ್ಕೂ ಅಧಿಕ ಮಂದಿ ಆರೋಗ್ಯ ಕಾರ್ಡ್
ಪಡೆದುಕೊಂಡಿದ್ದಾರೆ. ಆದರೆ, ಇದೀಗ ಆರೋಗ್ಯ ಕರ್ನಾಟಕ ಆಯುಷ್ಮಾನ್ ಭಾರತ್ನಲ್ಲಿ
ವಿಲೀನವಾದರೆ ಈ ಕಾರ್ಡ್ಗಳ ಕತೆಯೇನೆಂಬ ಪ್ರಶ್ನೆ ಏಳಲಿದೆ. ಚಿಕಿತ್ಸೆ ಪಡೆಯಲು ಹೊಸ
ಕಾರ್ಡ್ ಪಡೆಯಬೇಕೆ? ಅದಕ್ಕೆ ಹಣ ಪಾವತಿಸಬೇಕೆಂಬ ಎಂಬ ಗೊಂದಲಗಳು ಸೃಷ್ಟಿಯಾಗಲಿವೆ.
ಆದ್ದರಿಂದ ರಾಜ್ಯ ಸರ್ಕಾರ ಈ ವಿಚಾರವಾಗಿ ಕೇಂದ್ರ ಸರ್ಕಾರದ ಜತೆಗೆ ಮಾತುಕತೆ ನಡೆಸಿ ಎಲ್ಲ
ಗೊಂದಲ ಬಗೆಹರಿಸಬೇಕಿದೆ.
ಆಯುಷ್ಮಾನ್ ಭಾರತ್ ವಿಶೇಷತೆ
ವರ್ಷಕ್ಕೆ ಪ್ರತಿ ಕುಟುಂಬಕ್ಕೆ 5 ಲಕ್ಷ ರೂ. ವೈದ್ಯಕೀಯ ಸೇವಾ ವೆಚ್ಚ ಲಭ್ಯ
ದೇಶದ 50 ಕೋಟಿ ಜನರಿಗೆ ಆರೋಗ್ಯ ಸೇವೆ ಒದಗಿಸುವ ಗುರಿ
ದೇಶದಲ್ಲಿ ನೋಂದಾಯಿತ ಯಾವುದೇ ಸರ್ಕಾರಿ/ಖಾಸಗಿ ಆಸ್ಪತ್ರೆಯಲ್ಲಿ ಹಣ ನೀಡದೆ ಚಿಕಿತ್ಸೆ
ಸಿಗುತ್ತೆ
ಫಲಾನುಭವಿಗಳು ಸಾರ್ವಜನಿಕ ಹಾಗೂ ಖಾಸಗಿ ಆಸ್ಪತ್ರೆ ಎರಡೂ ಕಡೆ ಸೇವೆ ಪಡೆಯಬಹುದು
ಮುಂಚಿತವಾಗಿಯೇ ಚಿಕಿತ್ಸಾ ವೆಚ್ಚದ ಪ್ಯಾಕೇಜ್ ನಿಗದಿ ಮಾಡಿದ್ದರಿಂದ ಹೆಚ್ಚುವರಿ ಹಣ
ಸುಲಿಗೆಗೆ ಬ್ರೇಕ್
ನೋಂದಾಯಿತ ಆಸ್ಪತ್ರೆಯ ಖಾತೆಗೆ ನೇರವಾಗಿ ಹಣ ಜಮೆ ಆಗಲಿದೆ
ವಿಮಾ ಕಂಪನಿಗಳ ಪ್ರೀಮಿಯಂ ಪಾವತಿ ವೆಚ್ಚ ಕೇಂದ್ರ ಮತ್ತು ರಾಜ್ಯಕ್ಕೆ ನಿಗದಿಯಂತೆ ಹಂಚಿಕೆ
ಯೋಜನೆಯ ವ್ಯವಸ್ಥಿತ ಜಾರಿಗೆ ರಾಷ್ಟ್ರೀಯ ಆರೋಗ್ಯ ಸುರಕ್ಷಾ ಯೋಜನಾ ಮಂಡಳಿ ರಚನೆ
ಅನನುಕೂಲ
ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ನಿಗದಿಪಡಿಸಿರುವ ಪ್ಯಾಕೇಜ್ ದರ ಕಡಿಮೆ
ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಅವಕಾಶದಿಂದ ಸರ್ಕಾರಿ ಆಸ್ಪತ್ರೆಯತ್ತ ರೋಗಿಗಳು
ಬರದಿರಬಹುದು
ಆರ್ಥಿಕ ನೆರವಿನಲ್ಲಿ ಕೇಂದ್ರದ ಪಾಲು ಕಡಿಮೆಯಿದ್ದರೂ ಪೂರ್ಣ ಕ್ರೆಡಿಟ್ ಹೋಗುತ್ತದೆ. ನಕಲಿ
ಗುರುತಿನ ಚೀಟಿ ಸೃಷ್ಟಿಸಿ ವೈದ್ಯ ಸೇವೆ ಪಡೆಯುವ ಸಾಧ್ಯತೆ.
ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ಕೆಲವು ದೋಷಗಳಿದ್ದವು. ಕೆಲವು ಬದಲಾವಣೆಗಳೊಂದಿಗೆ
ಆರೋಗ್ಯ ಕರ್ನಾಟಕ ಯೋಜನೆ ಜತೆ ವಿಲೀನ ಮಾಡುವ ಬಗ್ಗೆ ಕೇಂದ್ರ ಲಿಖಿತ ಒಪ್ಪಿಗೆ ನೀಡಿದೆ.
ಗುರುವಾರ ಸಂಪುಟದಲ್ಲಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ.
| ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ
ಆರೋಗ್ಯ ಕರ್ನಾಟಕ ಸೇವೆ
ಸರ್ಕಾರಿ ಆಸ್ಪತ್ರೆಗಳಿಗೆ ಮೊದಲ ಆದ್ಯತೆ. ವೈದ್ಯರ ಶಿಫಾರಸಿನ ನಂತರ ಖಾಸಗಿ ಆಸ್ಪತ್ರೆಯಲ್ಲಿ
ಚಿಕಿತ್ಸೆ
1.34 ಕೋಟಿ ಕುಟುಂಬಗಳಿಗೆ ಪ್ರಾಥಮಿಕ, ದ್ವಿತೀಯ ಹಾಗೂ ತೃತೀಯ ಹಂತದ ಆರೋಗ್ಯ ರಕ್ಷಣೆ
ವೈದ್ಯಕೀಯ ಪ್ಯಾಕೇಜ್ ದರದಲ್ಲಿ ಹೆಚ್ಚಳ, ಖಾಸಗಿ ಆಸ್ಪತ್ರೆಗಳ ಸುಲಿಗೆಗೆ ಕಡಿವಾಣ
ಬಿಪಿಎಲ್ ಕಾರ್ಡ್ ಮಾನದಂಡ ಹಿನ್ನೆಲೆ ಯಲ್ಲಿ ಬಡವರಿಗೆ ಸಿಗಲಿದೆ ಯೋಜನೆ ಫಲ
ಎಪಿಎಲ್ ಕಾರ್ಡ್ದಾರರಿಗೂ ಯೋಜನೆಯ ಪ್ಯಾಕೇಜ್ ದರದ ಶೇ.30 ಪಾವತಿಸಬಹುದು.
ಯೋಜನೆ ಅಡಿ 1516 ನಿರ್ದಿಷ್ಟ ವೈದ್ಯಕೀಯ ಚಿಕಿತ್ಸೆ.
ಪಡಿತರ ಚೀಟಿ ತೋರಿಸಿಯೂ ಆರೋಗ್ಯ ಸೇವೆ ಪಡೆದುಕೊಳ್ಳುವ ವ್ಯವಸ್ಥೆ.
ಅನನುಕೂಲ
ಚಿಕಿತ್ಸಾ ವೆಚ್ಚ 2 ಲಕ್ಷ ರೂ. ಮೀರಿದರೆ ರೋಗಿಯೇ ಹೆಚ್ಚುವರಿ ವೆಚ್ಚ ಭರಿಸಬೇಕು.
ರೋಗಿ ಇಚ್ಛಿಸಿದ ಆಸ್ಪತ್ರೆಯಲ್ಲಿ ಚಿಕಿತ್ಸೆ ಇಲ್ಲ. ಸರ್ಕಾರಿ ಆಸ್ಪತ್ರೆಯಲ್ಲೇ ಚಿಕಿತ್ಸೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ