(ರಾಜಸ್ಥಾನ): ಕೇಂದ್ರ ಸರ್ಕಾರದ ಡಿಜಿಟಲ್ ಇಂಡಿಯಾಗೆ ಹೆಚ್ಚಿನ ಪ್ರೋತ್ಸಾಹ ನೀಡಲು ಉದ್ದೇಶಿಸಿರುವ ರಾಜಸ್ಥಾನ ಸರ್ಕಾರ ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ಮಹಿಳೆಯರಿಗೆ ಮೊಬೈಲ್ ಫೋನ್ ವಿತರಿಸಲು ಮುಂದಾಗಿದೆ.
‘ಈ ಯೋಜನೆಗೆ ರಾಜಸ್ಥಾನ ಸರ್ಕಾರ “ಬಾಮಾಶಾ ಯೋಜನಾ” ಎಂಬ ಹೆಸರಟ್ಟಿದೆ. ಹಣಕಾಸಿನ ನೆರವುಳ್ಳ ಕಾರ್ಯಕ್ರಮಗಳನ್ನು ನೇರವಾಗಿ ಫಲಾನುಭವಿಗಳಿಗೆ ತಲುಪಿಸುವ ಮತ್ತು ಈ ಕಾರ್ಯಕ್ರಮಗಳಲ್ಲಿ ಪಾರದರ್ಶಕತೆ ಸಾಧಿಸುವುದೇ ಮೊಬೈಲ್ ಫೋನ್ ವಿತರಣಾ ಕಾರ್ಯಕ್ರಮದ ಮೂಲ ಉದ್ದೇಶ ಎಂದು ಹೇಳಲಾಗಿದೆ.
ಇನ್ನೊಂದೆಡೆ ವಸುಂಧರಾ ರಾಜೆ ನೇತೃತ್ವದ ಬಿಜೆಪಿ ಸರ್ಕಾರ ಮೊಬೈಲ್ ಅಪ್ಲಿಕೋಷನ್ವೊಂದನ್ನು ಸಿದ್ಧಪಡಿಸುತ್ತಿದ್ದು, ಅದರ ಮೂಲಕ ಬಡವರು ಒಂದು ಗುಂಡಿಯನ್ನು ಒತ್ತುವ ಮೂಲಕ ಸರ್ಕಾರದ ಕಾರ್ಯಕ್ರಮಗಳ ಫಲಾನುಭವ ಪಡೆಯಬಹುದಾಗಿದೆ.
ಜನರು ತಂತ್ರಜ್ಞಾನಕ್ಕೆ ತೆರೆದುಕೊಳ್ಳುವಂತೆ ಮಾಡುವ ಹಲವು ಕಾರ್ಯಕ್ರಮಗಳನ್ನು ರಾಜಸ್ಥಾನದ ಬಿಜೆಪಿ ಸರ್ಕಾರ ಈ ಹಿಂದೆಯೂ ಮಾಡಿತ್ತು. ಡಿಜಿಟಲ್ ಪಾವತಿ ವ್ಯವಸ್ಥೆ ಪ್ರೋತ್ಸಾಹಿಸಲು ಆಗಸ್ಟ್ 29ರಂದು ರಾಜೆ ಅವರ ಸರ್ಕಾರ ಬಾಮಾಶಾ ವಾಲೆಟ್ ಎಂಬ ಹೆಸರಿನ ಮೊಬೈಲ್ ಅಪ್ಲಿಕೇಷನ್ಅನ್ನು ಬಿಡುಗಡೆ ಮಾಡಿತ್ತು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ