ಗಾಂಗ್ಟಕ್: ಪ್ರಧಾನಿ ನರೇಂದ್ರ ಮೋದಿ ಸೋಮವಾರ ಸಿಕ್ಕಿಂ ರಾಜಧಾನಿ ಗಾಂಗ್ಟಕ್ ಬಳಿಯ ಪಾಕ್ಯೊಂಗ್ ಗ್ರಾಮದಲ್ಲಿ ‘ಗ್ರೀನ್ಫೀಲ್ಡ್ ವಿಮಾನನಿಲ್ದಾಣ’ವನ್ನು ಉದ್ಘಾಟಿಸಿದರು. ಈ ಮೂಲಕ ದೇಶದ 100ನೇ ಏರ್ಪೋರ್ಟ್ ಕಾರ್ಯನಿರ್ವಹಿಸಲು ಸಿದ್ಧಗೊಂಡಿದೆ. ಸಿಕ್ಕಿಂಗೆ ಇದು ಮೊದಲನೇ ಏರ್ಪೋರ್ಟ್ ಆಗಿದೆ. ಬಳಿಕ ಮಾತನಾಡಿದ ಪ್ರಧಾನಿ, ‘ಸಿಕ್ಕಿಂಗೆ ಇಂದು ಐತಿಹಾಸಿಕ ದಿನ. ಸ್ವಾತಂತ್ರ್ಯ ಸಿಕ್ಕಾಗಿನಿಂದ 2014ರವರೆಗೆ ದೇಶದಲ್ಲಿ ಕೇವಲ 65 ಏರ್ಪೋರ್ಟ್ಗಳಿದ್ದವು. ಆದರೆ ನಮ್ಮ ಸರ್ಕಾರ ಆಡಳಿತಕ್ಕೆ ಬಂದ ಕಳೆದ 4 ವರ್ಷಗಳಲ್ಲಿ ದೇಶಾದ್ಯಂತ 35 ಹೆಚ್ಚುವರಿ ಏರ್ಪೋರ್ಟ್ ಗಳನ್ನು ನಿರ್ವಿುಸಿದೆ. ಇದು ನಮ್ಮ ಅಬಿವೃದ್ಧಿಯ ಉತ್ಸಾಹಕ್ಕೆ ಸಾಕ್ಷಿ’ ಎಂದು ಪರೋಕ್ಷವಾಗಿ ವಿಪಕ್ಷಗಳಿಗೆ ಕುಟುಕಿದರು. ಇಂಡೋ- ಚೀನಾ ಗಡಿಯಿಂದ ಕೇವಲ 60 ಕಿ.ಮೀ ದೂರದಲ್ಲಿ ಗ್ರೀನ್ಫೀಲ್ಡ್ ಏರ್ಪೋರ್ಟ್ ಇದೆ. ಹಾಗಾಗಿ ಭಾರತೀಯ ವಾಯುಪಡೆಯ ಯುದ್ಧವಿಮಾನಗಳನ್ನು ಲ್ಯಾಂಡ್ ಮಾಡಲು ಕೂಡ ಏರ್ ಪೋರ್ಟ್ ಪ್ರಮುಖ ಕೇಂದ್ರವಾಗಲಿದೆ.
ಕಠಿಣ ಸವಾಲೊಡ್ಡಿದ ಸಿಕ್ಕಿಂ ಏರ್ಪೋರ್ಟ್
ಬೆಂಗಳೂರು: ಗಾಂಗ್ಟಕ್ ವಿಮಾನ ನಿಲ್ದಾಣ ನಿರ್ಮಾಣ ನಮಗೆ ಸವಾಲಿನ ಕೆಲಸವಾಗಿತ್ತು. ಅಲ್ಲಿನ ಭೌಗೋಳಿಕ ಸನ್ನಿವೇಶಗಳಿಂದ ನಿರ್ಮಾಣ ಕಾರ್ಯ ಹೆಚ್ಚಿನ ಅವಧಿ ತೆಗೆದುಕೊಂಡಿತ್ತು. ಮುಂದೆ ಶಿವಮೊಗ್ಗ ಮತ್ತು ಮೈಸೂರಿನಲ್ಲಿ ಏರ್ಪೋರ್ಟ್ಗೆ ಸರ್ಕಾರ ಚಾಲನೆ ನೀಡಿದರೆ ಉತ್ತಮ ಎಂದು ಏರ್ಪೋರ್ಟ್ ನಿರ್ದೇಶಕ ಆರ್. ಮಂಜುನಾಥ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮಂಜುನಾಥ್ ಮೂಲತಃ ಶಿವಮೊಗ್ಗದವರಾಗಿದ್ದು, ಮೈಸೂರಿ ನಲ್ಲಿ ನೆಲೆಸಿದ್ದಾರೆ. ಗಾಂಗ್ಟಕ್ ವಿಮಾನ ನಿಲ್ದಾಣ ನಿರ್ವಣದ ಉಸ್ತುವಾರಿ ಹೊಂದಿದ್ದರು. ಈ ಸವಾಲಿನ ಕಾರ್ಯದ ಬಗ್ಗೆ ವಿಜಯವಾಣಿ ಜತೆ ಮಾತನಾಡಿದ ಅವರು, ಗುಡ್ಡಗಾಡಿನ ಪ್ರದೇಶದಲ್ಲಿ ವಿಮಾನ ನಿಲ್ದಾಣ ಮಾಡುವುದು ಸವಾಲಿನ ಕೆಲಸವಾಗಿತ್ತು.ಅಲ್ಲಿನ ವಾತಾವರಣ ಪದೇಪದೆ ಬದಲಾಗುತ್ತಿತ್ತು. ಇದರಿಂದ ನಿರ್ಮಾಣ ಕಾಮಗಾರಿಗೆ ಹೆಚ್ಚು ತೊಂದರೆ ಉಂಟಾಗುತ್ತಿತ್ತು. ಹೀಗಾಗಿಯೇ 2009ರಲ್ಲಿ ಶಂಕುಸ್ಥಾಪನೆ ಆದರೂ ಉದ್ಘಾಟನೆಗೆ ಇಷ್ಟು ವರ್ಷ ಬೇಕಾಯಿತು. ಈ ಏರ್ಪೋರ್ಟ್ನಿಂದಾಗಿ ಆ ಪ್ರದೇಶ ತ್ವರಿತ ಬೆಳವಣಿಗೆ ಹೊಂದಲಿದೆ. ಇನ್ನು, ವಿಮಾನ ಹಾರಾಟಕ್ಕೆ ಪರವಾನಗಿ ಪಡೆಯುವುದು ಕೂಡ ಸುಲಭವಾಗಿರಲಿಲ್ಲ. ಮಾರ್ಚ್ 5ರಂದು ಮೊದಲು ಡಾರ್ನಿಯರ್ ಫ್ಲೈಟ್ ಪ್ರಾಯೋಗಿಕ ಹಾರಾಟ ನಡೆಸಿತ್ತು. ಮಾರ್ಚ್ 10ರಂದು ಏರ್ಫೋರ್ಸ್ ಹಾಗೂ ಕ್ಯೂ-400(ಬೊಂಬಾರ್ಡಿಯರ್) ಮತ್ತೊಮ್ಮೆ ಪ್ರಾಯೋಗಿಕ ಹಾರಾಟ ನಡೆಸಿ ಯಶಸ್ವಿಯಾಯಿತು. ಅಕ್ಟೋಬರ್ನಿಂದ ವಿಮಾನ ಹಾರಾಟ ಆರಂಭವಾಗಲಿದೆ. ಸ್ಪೈಸ್ ಜೆಟ್ ಕಂಪನಿ ಮುಂದೆ ಬಂದಿದೆ. ಗಾಂಗ್ಟಕ್ನಿಂದ ಕೋಲ್ಕತ ನಡುವೆ ವಿಮಾನ ಯಾನ ಶುರುವಾಗಲಿದೆ. ಆನಂತರದಲ್ಲಿ ಗುವಾಹಟಿಗೆ ವಿಸ್ತರಿಸಲ್ಪಡಲಿದೆ ಎಂದರು.
ಶಿವಮೊಗ್ಗ, ಮೈಸೂರಿಗೂ ಬೇಕು
ಶಿವಮೊಗ್ಗ ಮತ್ತು ಮೈಸೂರಿನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯ ಅಗತ್ಯವಿದೆ. ಇದಕ್ಕೆ ವಿಮಾನ ಸಂಪರ್ಕ ಕಲ್ಪಿಸಬೇಕು. ಈ ಎರಡು ಜಿಲ್ಲೆಗಳಲ್ಲಿ ವಿಮಾನ ನಿಲ್ದಾಣ ಮಾಡುವ ಪ್ರಸ್ತಾಪ ಸರ್ಕಾರದ ಮುಂದಿದೆ. ನಾನು ನಮ್ಮ ಟೀಂ ಎಎಐ ಜತೆಗೆ 2012ರಲ್ಲೇ ಭೇಟಿ ನೀಡಿ ಪರಿಶೀಲಿಸಲಾಗಿತ್ತು. ಆನಂತರ ಯೋಜನೆ ಕೈ ಬಿಟ್ಟಿದ್ದು, ನನಗೆ ತಿಳಿದಿಲ್ಲ. ವಿಮಾನ ನಿಲ್ದಾಣ ಮಾಡಿದರೆ ಪ್ರವಾಸೋದ್ಯಮ ಮತ್ತಷ್ಟು ಅಭಿವೃದ್ಧಿಯಾಗಲಿದೆ ಎಂದು ಮಂಜುನಾಥ್ ಹೇಳಿದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ