ವಿಷಯಕ್ಕೆ ಹೋಗಿ

**ಜ್ಞಾನ ಕಾರಂಜಿ**::: 🌺◾ ರಾಜ್ಯಶಾಸ್ತ್ರ ಮತ್ತು ಸಂವಿಧಾನ ಕುರಿತ ಕೆಲವು ಮುಖ್ಯ ಪ್ರಶ್ನೆಗಳು ◾🌺

# ಭಾರತದ ಪ್ರಥಮ ಪ್ರಜೆ ಯಾರು?
ಉತ್ತರ : ರಾಷ್ಟ್ರಪತಿ.
# ದೇಶದ ಅತೀ ಉನ್ನತ ನ್ಯಾಯಾಲಯ ಯಾವುದು?
ಉತ್ತರ : ಸರ್ವೋಚ್ಚ ನ್ಯಾಯಾಲಯ (ಸುಪ್ರೀಂಕೊರ್ಟ್).
# ಸಂವಿಧಾನದ ಹೃದಯ ಯಾವುದು?
ಉತ್ತರ : ಪ್ರಸ್ತಾವನೆ/ಪೀಠಿಕೆ.
# ಉಪರಾಷ್ಟ್ರಪತಿಯ ಅಧಿಕಾರವಧಿ ಎಷ್ಟು ವರ್ಷ?
ಉತ್ತರ : 5 ವರ್ಷಗಳು.
# ರಾಜ್ಯಸಭೆಯ ಸಭಾಧ್ಯಕ್ಷರು ಯಾರು?
ಉತ್ತರ : ಉಪ ರಾಷ್ಟ್ರಪತಿ.
# ರಾಷ್ಟ್ರೀಯ ರಕ್ಷಣಾ ಕಾಲೇಜು ಇರುವ ಸ್ಥಳ
ಯಾವುದು?
ಉತ್ತರ : ನವದೆಹಲಿ
# ಭೂಸೇನೆಯ ಪ್ರಧಾನ ಕಛೇರಿ ಎಲ್ಲಿದೆ?
ಉತ್ತರ : ದೆಹಲಿ
# ವಾಯುಪಡೆಯ ಮುಖ್ಯಸ್ಥನನ್ನು ಏನೆಂದು
ಕರೆಯುವರು?
ಉತ್ತರ : ಏರ್ ಚೀಫ್ ಮಾರ್ಷಲ್.
# ಭಾರತದ ರಾಷ್ಟ್ರಪತಿಯ ಅಧಿಕೃತ ನಿವಾಸದ ಹೆಸರೇನು?
ಉತ್ತರ : ರಾಷ್ಟ್ರಪತಿ ಭವನ.
# ರಾಜ್ಯಸಭೆಯ ಸದಸ್ಯರನ್ನು ಯಾರು ಆಯ್ಕೆ
ಮಾಡುತ್ತಾರೆ?
ಉತ್ತರ : ವಿಧಾನಸಭೆಯ ಸದಸ್ಯರು (238).
# ನೆಹರುರವರ ಪ್ರೀತಿಯ ಹೂ ಯಾವುದು?
ಉತ್ತರ : ಕೆಂಪು ಗುಲಾಬಿ.
# ಕರ್ನಾಟಕದಲ್ಲಿ ಉಚ್ಚ ನ್ಯಾಯಾಲಯ ಎಲ್ಲಿದೆ?
ಉತ್ತರ : ಬೆಂಗಳೂರು.
# ಸಿಬರ್ಡ್ ನೌಕಾನೆಲೆ ಎಲ್ಲಿದೆ?
ಉತ್ತರ : ಕಾರವಾರ.
# ವಿಶ್ವದಲ್ಲಿಯೇ 2 ನೇಯ ಅತಿ ದೊಡ್ಡ ಭೂಸೇನೆ ಇರುವ ದೇಶ ಯಾವುದು?
ಉತ್ತರ : ಭಾರತ
# ಎನ್.ಸಿ.ಸಿ ವಿಸ್ತರಿಸಿರಿ?
ಉತ್ತರ : ನ್ಯಾಷನಲ್ ಕ್ಯಾಡೇಟ್ ಕೋರ್.
# ಸಂಸತ್ತಿನ ಕೆಳಮನೆ ಯಾವುದು?
ಉತ್ತರ : ಲೋಕಸಭೆ.
# ಲೋಕಸಭೆಯ ಸದಸ್ಯನಾಗಲು ಇರಬೇಕಾದ ಕನಿಷ್ಟ
ವರ್ಷವೆಷ್ಟು?
ಉತ್ತರ : 25
# ರಾಷ್ಟ್ರಪತಿ ಆಗಲು ಇರಬೇಕಾದ ಕನಿಷ್ಟ ವಯಸ್ಸು ಎಷ್ಟು?
ಉತ್ತರ : 35.
# ವಿಧಾನ ಪರಿಷತ್ತಿನ ಸದಸ್ಯರ ಅಧಿಕಾರವಧಿ ಎಷ್ಟು
ವರ್ಷಗಳು?
ಉತ್ತರ : 6.
# ಭಾರತದಲ್ಲಿ ತನ್ನದೇ ಯಾದ ಆಂತರಿಕ ಸಂವಿಧಾನ
ಹೊಂದಿರುವ ರಾಜ್ಯ ಯಾವುದು?
ಉತ್ತರ : ಜಮ್ಮು&ಕಾಶ್ಮೀರ
# ಭಾರತದ ಸರ್ವೋಚ್ಚ ನ್ಯಾಯಾಲಯ ಎಲ್ಲಿದೆ?
ಉತ್ತರ : ದೆಹಲಿ.
# ನಮ್ಮ ರಾಷ್ಟ್ರಧ್ವಜದ ಉದ್ಧ- ಅಗಲಗಳ
ಅನುಪಾತವೇನು?
ಉತ್ತರ : 3:2.
# ಭಾರತೀಯ ಸಂಸ್ಕೃತಿಯ ನಿಲುವೇನು?
ಉತ್ತರ : ಬಾಳು,ಬಾಳುಗೊಡು.
# ಭಾರತ ದೇಶದಲ್ಲಿ ಒಟ್ಟು ಎಷ್ಟು ಉಚ್ಚ ನ್ಯಾಯಾಲಯಗಳಿವೆ?
24.
# ರಾಷ್ಟ್ರಪತಿ ಭವನದಲ್ಲಿರುವ ಕೊಠಡಿಗಳು
ಎಷ್ಟು?
ಉತ್ತರ : 340.
# ರಾಷ್ಟ್ರಪತಿ ಭವನ ಪೂರ್ಣಗೊಂಡ ವರ್ಷ?
ಉತ್ತರ : 1929.
# ಎಮ್.ಎಲ್.ಸಿ ವಿಸ್ತರಿಸಿರಿ?
ಉತ್ತರ : ಮೆಂಬರ್ ಆಫ್ ಲೆಜೆಸ್ಲೆಟಿವ್ ಕೌನ್ಸಿಲ್.
# ಜಗತ್ತಿನಲ್ಲಿಯೇ ಅತಿದೊಡ್ಡ ಪ್ರಜಾಪ್ರಭುತ್ವ
ದೇಶ ಯಾವುದು?
ಉತ್ತರ : ಭಾರತ.
# ಭಾರತದ ಸಂವಿಧಾನದಲ್ಲಿನ ಪರಿಚ್ಛೇದಗಳು ಎಷ್ಟು?
ಉತ್ತರ : 12.
# ವ್ಯಕ್ತಿ ತನ್ನ ದೇಶಕ್ಕಾಗಿ ಮಾಡಬೇಕಾದ ಕೆಲಸವೇ —–?
ಉತ್ತರ : ಮೂಲಭೂತ ಕರ್ತವ್ಯ.
# ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರು ಯಾರು?
ಉತ್ತರ : ಡಾ.ಬಿ.ಆರ್.ಅಂಬೇಡ್ಕರ್.
# ಕರ್ನಾಟಕದಲ್ಲಿ ಪಶುಹತ್ಯೆ ನಿಷೇಧ ಕಾಯ್ದೆ ಜಾರಿಗೆ
ಬಂದದ್ದು ಯಾವಾಗ?
ಉತ್ತರ : 1964.
# ವಿಧಾನ ಸಭೆಯ ಸದಸ್ಯರ ಅಧಿಕಾರವಧಿ ಎಷ್ಟು
ವರ್ಷಗಳು?
ಉತ್ತರ : 5.
# ರಾಷ್ಟ್ರೀಯ ಪಂಚಾಂಗವನ್ನು ಸಿದ್ದಗೊಳಿಸಿದ ವಿಜ್ಞಾನಿ ಯಾರು?
ಉತ್ತರ : ಮೇಘನಾದ ಸಹಾ.
# ನಮ್ಮ ದೇಶದ ಹಾಡು ಯಾವುದು?
ಉತ್ತರ : ವಂದೇ ಮಾತರಂ.
# “ವಂದೇ ಮಾತರಂ” ಗೀತೆ ರಚಿಸಿದವರು ಯಾರು?
ಉತ್ತರ : ಬಂಕಿಮ ಚಂದ್ರ ಚಟರ್ಜಿ.
# ಭಾರತದ ಸಂವಿಧಾನವನ್ನು ಸಿದ್ದಪಡಿಸಿದ ವಿಶೇಷ ಸಭೆ ಯಾವುದು?
ಉತ್ತರ : ಸಂವಿಧಾನ ಸಭೆ.
# ನೇರವಾಗಿ ಸಂವಿಧಾನದಿಂದ ನಾಗರಿಕರಿಗೆ
ಕೊಡಲ್ಪಟ್ಟ ಹಕ್ಕುಗಳೇ ——?
ಉತ್ತರ : ಮೂಲಭೂತ ಹಕ್ಕುಗಳು.
# ಭಾರತದ ಸಂವಿಧಾನವು 1950 ರಿಂದ 2006 ರ
ವರೆಗೆ ಎಷ್ಟು ಬಾರಿ ತಿದ್ದುಪಡಿ ಮಾಡಲಾಗಿದೆ?
ಉತ್ತರ : 97 ಬಾರಿ.
# ಭಾರತದಲ್ಲಿ ಎರಡು ಸದನಗಳನ್ನು ಒಳಗೊಂಡಿರುವ ರಾಜ್ಯಗಳು ಎಷ್ಟು?
ಉತ್ತರ : 7 (ದ್ವಿಸದನ ಪದ್ದತಿ).
# ರಾಜ್ಯ ಸಭೆಯ ಸದಸ್ಯರಾಗಲು ಇರಬೇಕಾದ ಕನಿಷ್ಟ
ವಯಸ್ಸು ಎಷ್ಟು?
ಉತ್ತರ : 30 ವರ್ಷಗಳು.
# ಎಮ್.ಎಲ್.ಎ ವಿಸ್ತರಿಸಿರಿ?
ಉತ್ತರ : ಮೆಂಬರ್ ಆಫ್ ಲೆಜೆಸ್ಲೆಟಿವ್ ಆಸೆಂಬ್ಲಿ.
# ನೌಕಾದಳದ ಮುಖ್ಯಸ್ಥರನ್ನು ಏನೆಂದು ಕರೆಯುವರು?
ಉತ್ತರ : ಆಡ್ಮಿರಲ್
# ಪ್ರಧಾನಮಂತ್ರಿಯನ್ನು ನೇಮಕ ಮಾಡುವವರು ಯಾರು?
ಉತ್ತರ : ರಾಷ್ಟ್ರಪತಿ.
# ಸಂವಿಧಾನವನ್ನು ಅಂಗೀಕರಿಸಿದ ವರ್ಷ ಯಾವುದು?
ಉತ್ತರ : 26 ನವೆಂಬರ್ 1949.
# ಸಂವಿಧಾನ ಸಭೆ ಪ್ರಥಮ ಅಧಿವೇಶನ ನಡೆಸಿದ ವರ್ಷ?
ಉತ್ತರ : 1946

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

**ಜ್ಞಾನ ಕಾರಂಜಿ**::: ಬೇನಾಮಿ ಆಸ್ತಿ ಪ್ರಕರಣ ವಿಲೇವಾರಿಗೆ ನ್ಯಾಯಾಧಿಕರಣ,

ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್​ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್​ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್​ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...

.. ಭಾರತೀಯ ಕಾವ್ಯ ಮೀಮಾಂಸೆ

ಭಾರತೀಯ ಕಾವ್ಯ ಮೀಮಾಂಸೆ ಭಾರತೀಯ ಕಾವ್ಯಮೀಮಾಂಸೆಗೆ ಸುಮಾರು ಎರಡು ಸಾವಿರ ವರ್ಷಗಳ ದೀರ್ಘ ಇತಿಹಾಸವಿದೆ. ಕವಿ ಮತ್ತು ಕಾವ್ಯದ ಲಕ್ಷಣಗಳು, ಕಾವ್ಯ ಪ್ರಭೇದಗಳು. ಕಾವ್ಯಾಲಂಕಾರಗಳು, ಕಾವ್ಯದ ವಸ್ತು ಇತ್ಯಾದಿ ಕಾವ್ಯನಿರ್ಮಿತಿಗೆ ಸಂಬಂಧಿಸಿದ ಮಹತ್ತ್ವದ ಅಂಶಗಳ ಶಾಸ್ತ್ರೀಯ ನಿರೂಪಣೆಯೇ ಕಾವ್ಯನಿಮೀಮಾಂಸೆ. ಇದನ್ನು ಅಲಂಕಾರ ಶಾಸ್ತ್ರವೆಂದೂ ಕರೆಯಲಾಗುತ್ತದೆ. ಪ್ರಾಚೀನ ಯುಗದಲ್ಲಿ ಅಲಂಕಾರಶಾಸ್ತ್ರವೆಂದರೆ ಪ್ರಧಾನವಾಗಿ ನಾಟ್ಯ ನೃತ್ಯ ಇತ್ಯಾದಿ ರಂಗ ಸಂಸ್ಕರಣ ಅಥವಾ ನಾಟ್ಯಕಲೆಯನ್ನು ಸರ್ವಾಂಗ ಸುಂದರವಾಗಿ ಮಾಡುವ ಒಂದು ಪರಿಷ್ಕಾರ ಶಾಸ್ತ್ರವಾಗಿದ್ದಿತು. ಕಾಲಕ್ರಮೇಣ ಇದು ಕಾವ್ಯಕಲೆಯನ್ನು ಪರಿಷ್ಕರಿಸುವ ಶಾಸ್ತ್ರವಾಗಿ ಪರಿಣಮಿಸಿತು. ಇದರ ಆರಂಭ ಯಾವಾಗಿ ಯಾರಿಂದ ಆಯಿತೆಂದು ಇತ್ಯರ್ಥಪಡಿಸುವುದು ಕಷ್ಟದ ಕೆಲಸ. ಸಾಹಿತ್ಯದಲ್ಲಿ ಸೌಂದರ್ಯೋಪಾಸನೆ ಪ್ರಾರಂಭವಾದಂದಿನಿಂದಲೂ ಪಂಡಿತರು ಮತ್ತು ವಿಮರ್ಶಕರು ಸಾಹಿತ್ಯದಲ್ಲಿ ಸೌಂದರ್ಯ ಅರಸಿ ಈ ಚಿತ್ತ ಸಂಸ್ಕರಣ ಶಾಸ್ತ್ರವನ್ನು ಬೆಳೆಸಿಕೊಂಡು ಬಂದಿದ್ದಾರೆ. ಕ್ರಿ. ಪೂ. 6ನೆಯ ಶತಮಾನದಲ್ಲಿದ ಯಾಸ್ಕಾಚಾರ್ಯ ಉಪಮೆ ರೂಪಕಗಳ ಬಗ್ಗೆ ಉಲ್ಲೇಖಸಿದ್ದಾನೆ. ಕ್ರಿ. ಪೂ. 5ನೆಯ ಶತಕದ ವೇಳೆಗೆ ಪಾಣಿನಿ ನಟರ ವಿಷಯ ಪ್ರಸ್ತಾಪಿಸಿದ್ದಾನೆ. ವೇದಗಳ ಕಾಲದಲ್ಲೂ ಉಪಮಾ ರೂಪಕಾದಿಗಳ ಪ್ರಯೋಗವಿದೆ. ಋಗ್ವೇದದಲ್ಲಿ ಕಂಡುಬರುವ ಯಮಯಮಿಯರ ಸಂವಾದ, ಊರ್ವಶೀ ಪುರೂರವರ ಸಂವಾದ_ಇವುಗಳಿಂದ ವೇದಕಾಲದಲ್ಲಿ ನಾಟಕದ ಅಂಕುರಾರ್ಪಣವಿದ್ದಂತಿದೆ....

**ಜ್ಞಾನ ಕಾರಂಜಿ**::: ನೀತಿ ಆಯೋಗ ಸ್ಥಾಪನೆ

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ಅಧಿಕಾರಕ್ಕೆ ಬಂದು ಮೇ 26ಕ್ಕೆ ನಾಲ್ಕು ವರ್ಷ. ಸರ್ಕಾರದ ಈ ಅವಧಿಯ ಪಯಣದಲ್ಲಿನ ಪ್ರಮುಖ ರಂಗಗಳ ಚಿತ್ರಣವನ್ನು ವಿಜಯವಾಣಿ ಸರಣಿಯಾಗಿ ಕಟ್ಟಿಕೊಡಲಿದ್ದು, ಅದರ ಎರಡನೇ ಭಾಗ ಇಲ್ಲಿದೆ. ನೆಹರು ಅವಧಿಯಲ್ಲಿ ರಚನೆಯಾಗಿದ್ದ ಯೋಜನಾ ಆಯೋಗವನ್ನು ರದ್ದುಗೊಳಿಸಿ 2015ರ ಜ.1ರಂದು ನೀತಿ ಆಯೋಗ ರಚಿಸಲಾಯಿತು. ಅಮೃತ್, ಡಿಜಿಟಲ್ ಇಂಡಿಯಾ, ಅಟಲ್ ಇನೋವೇಷನ್, ಸಂಚಾರ ದಟ್ಟಣೆ ನಿಯಂತ್ರಣ ಸೇರಿ ಕೆಲ ಯೋಜನೆಗಳ ನೇರ ಉಸ್ತುವಾರಿಯನ್ನು ನೀತಿ ಆಯೋಗ ವಹಿಸಿಕೊಂಡಿದೆ. ಪ್ರಧಾನಿ ಅಧ್ಯಕ್ಷತೆಯ ಈ ಆಯೋಗದಲ್ಲಿ ರಾಜ್ಯಗಳ ಹಣಕಾಸು ಸಚಿವರು ಸದಸ್ಯರಾಗಿರುತ್ತಾರೆ. 15 ವರ್ಷ ಹಾಗೂ 7 ವರ್ಷಗಳ ಪ್ರತ್ಯೇಕ ಗುರಿಯ ಯೋಜನೆಯ ಜತೆಗೆ, ವಾರ್ಷಿಕ ಕಾರ್ಯಕ್ರಮಗಳ ಬಗ್ಗೆ ಈ ಸಂಸ್ಥೆ ನಿಗಾ ಇಡಲಿದೆ. ಆಡಳಿತಕ್ಕೆ ಹೊಸ ಸ್ಪರ್ಶ ‘ಮಿನಿಮಮ್ ಗವರ್ನಮೆಂಟ್, ಮ್ಯಾಕ್ಸಿಮಮ್ ಗವರ್ನನ್ಸ್’ (ಕನಿಷ್ಠ ಸರ್ಕಾರ ಗರಿಷ್ಠ ಆಡಳಿತ) ಧ್ಯೇಯ ವಾಕ್ಯದೊಂದಿಗೆ ಪ್ರಧಾನಿ ಕಚೇರಿಗೆ ನರೇಂದ್ರ ಮೋದಿ ಕಾಲಿಟ್ಟಿದ್ದರು. ತೆರಿಗೆ ವ್ಯವಸ್ಥೆಯಿಂದ ಹಿಡಿದು ಆಡಳಿತದ ಪ್ರತಿ ಹಂತದಲ್ಲಿಯೂ ಸುಧಾರಣೆ ತರುವ ಭರವಸೆ ನೀಡಿದ್ದರು. ಈ ನಿಟ್ಟಿನಲ್ಲಿ ಸರ್ಕಾರ ಕೆಲ ಹೆಜ್ಜೆಗಳನ್ನು ಇರಿಸಿದೆ. ಓಬೀರಾಯನ ಕಾಲದ ಕಾನೂನು ರದ್ದು ದೇಶದಲ್ಲಿ ಹಳೆಯ ಅನವಶ್ಯಕ ಕಾಯ್ದೆಗಳಿಂದ ಕೋರ್ಟ್ ಖಟ್ಲೆಗಳಲ್ಲಿ ವಿಳಂಬವಾಗುತ್ತದೆ. ಈ ಕಾರಣದಿಂದ ಸುಮಾರು 3 ಸಾವಿರ ...