ಬೆಂಗಳೂರು: ಬೆಂಡೆಕಾಯಿ ಬೀಜಗಳನ್ನು ಬಳಸಿಕೊಂಡು ಕಲುಷಿತ ನೀರನ್ನು ಶುದ್ಧ ನೀರಾಗಿ ಪರಿವರ್ತಿಸುವಲ್ಲಿ ಸಿಎಂಆರ್ಐಟಿ ಕಾಲೇಜಿನ ವಿದ್ಯಾರ್ಥಿಗಳ ತಂಡ ಯಶಸ್ವಿಯಾಗಿದೆ.
ಮಿತಬೆಲೆಯ, ಪರಿಸರಸ್ನೇಹಿ ಹಾಗೂ ಸಮರ್ಥ ನೈಸರ್ಗಿಕ ಪ್ರಕ್ರಿಯೆ ಮೂಲಕ ನೀರಿನಲ್ಲಿರುವ ಉಷ್ಣತೆಯ ಪ್ರಮಾಣ ತಗ್ಗಿಸಲು ನೈಸರ್ಗಿಕ ಹೆಪ್ಪುಗಟ್ಟುವಿಕೆ ವಿಧಾನಕ್ಕೆ ಬೆಂಡೆಕಾಯಿ ಬೀಜಗಳ ಬಳಕೆ ಮಾಡಲಾಗುತ್ತಿದೆ.
ಕಲುಷಿತ ನೀರನ್ನು ಸಂಸ್ಕರಿಸಿ ಗೃಹ ಬಳಕೆಗೆ ಹಾಗೂ ಕುಡಿಯುವ ನೀರಿಗಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಹಲವು ವಿಧಾನಗಳು ಬಳಕೆಯಲ್ಲಿವೆ. ಈ ಯತ್ನದಲ್ಲಿ ಸಾಕಷ್ಟು ದುಬಾರಿ ಹಾಗೂ ಸೂಕ್ತವಲ್ಲದ ಹಲವು ಪ್ರಯೋಗಗಳು ಕೂಡ ನಡೆಯುತ್ತಿವೆ. ಇದಕ್ಕೆ ಮೂಲಸೌಕರ್ಯ ಕೊರತೆ ಹಾಗೂ ಅಗತ್ಯ ಬಿಡಿಭಾಗಗಳ ಲಭ್ಯವಿಲ್ಲದಿರುವುದು ಕೂಡ ಕಾರಣ. ಹೆಚ್ಚಿನದಾಗಿ ಈ ನಿಷ್ಪ್ರಯೋಜಕ ಮಾದರಿಗಳಿಂದ ಅನಾರೋಗ್ಯದ ಅಪಾಯಗಳು ಎದುರಾಗುತ್ತಿವೆ. ಈ ಹಿನ್ನೆಲೆಯಲ್ಲಿ ಸಿಎಂಆರ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ವಿದ್ಯಾರ್ಥಿಗಳು ಹೊಸದೊಂದು ವಿಧಾನ ಆವಿಷ್ಕಾರ ಮಾಡಿದ್ದಾರೆ. ಅತ್ಯಂತ ಕಡಿಮೆ ಬೆಲೆಯಲ್ಲಿ ನೈಸರ್ಗಿಕ ಪರಿಹಾರವನ್ನು ಕಂಡುಹಿಡಿದಿದ್ದಾರೆ. ಬೆಂಡೆಕಾಯಿ ಬೀಜ ಬಳಸಿ ಅಶುದ್ಧ ನೀರನ್ನು ಶುದ್ಧೀಕರಿಸುವ ವಿಧಾನ ಪರಿಚಯಿಸಿದ್ದಾರೆ. ಸಿವಿಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳಾದ ಶ್ರೀಶೇಶ್, ಶಿವ ಶಾಂಡಿಲ್ಯ ಹಾಗೂ ರೋಹಿತ್ ಸಿವಿಲ್ ವಿಭಾಗದ ಪೊ›.ಕೆ. ಭವ್ಯಾ ಮಾರ್ಗದರ್ಶನದಲ್ಲಿ ಈ ಸಾಧನೆ ಮಾಡಿದ್ದಾರೆ.
ಕಾರ್ಯ ವಿಧಾನ
ನೀರಿನ ಹೆಪ್ಪುಗಟ್ಟುವಿಕೆಗೆ ಈ ವಿಧಾನವನ್ನು ಬಳಸಲಾಗಿದ್ದು, ಇವು ಹೀರಿಕೊಳ್ಳುವ ಕಾರ್ಯ ವನ್ನು ಮಾಡುತ್ತವೆ. 1.5 ಲೀಟರ್ ಪ್ರಮಾಣದ ಬೆಂಡೆಕಾಯಿ ಬೀಜಗಳು ಮೇಲ್ಪದರದ ನೀರಿನ ಮಾಲಿನ್ಯವನ್ನು ಹೀರಿಕೊಳ್ಳುವ ಕಾರ್ಯ ಮಾಡುತ್ತವೆ. ಮೊದಲು ಬೆಂಡೆಕಾಯಿ ಬೀಜ ಗಳನ್ನು ತೊಳೆದು ಸಾಮಾನ್ಯ ತಾಪಮಾನದಲ್ಲಿ 24 ಗಂಟೆ ಒಣಗಿಸಿ ಪುಡಿ ಮಾಡಲಾಗುತ್ತದೆ. ಈ ಪುಡಿಯನ್ನು ಬಳಸಿ ಘನೀಭವಿಸಿದ ತ್ಯಾಜ್ಯ ನೀರನ್ನು ಶುದ್ಧೀಕರಿಸಲಾಗುತ್ತದೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ