ವಿಷಯಕ್ಕೆ ಹೋಗಿ

**ಜ್ಞಾನ ಕಾರಂಜಿ**::: ಗೆಲುವಿನ ನ’ಗೇ’,

ನವದೆಹಲಿ: ಸಲಿಂಗಕಾಮವನ್ನು ಅಪರಾಧ ಎಂದು ಪರಿಗಣಿಸುವ ಐಪಿಸಿ ಸೆಕ್ಷನ್ 377 ಅನ್ನು ರದ್ದುಪಡಿಸುವ ಮೂಲಕ ಸುಪ್ರೀಂಕೋರ್ಟ್ ಗುರುವಾರ ಮಹತ್ವದ ಆದೇಶ ನೀಡಿದೆ. ಲೈಂಗಿಕ ದೃಷ್ಟಿಕೋನ ಎಂಬುದು ವೈಯಕ್ತಿಕ ನೈಸರ್ಗಿಕ ಹಕ್ಕಾಗಿದ್ದು, ಅದರ ನಿರ್ಬಂಧ ಅಥವಾ ನಿಯಂತ್ರಣ ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಸಂವಿಧಾನಪೀಠ ಅಭಿಪ್ರಾಯಪಟ್ಟಿದೆ.
ಏನಿತ್ತು ಐಪಿಸಿ 377?
ನೈಸರ್ಗಿಕ ನಿಯಮಕ್ಕೆ ವಿರುದ್ಧವಾಗಿ ಪುರುಷ, ಮಹಿಳೆ ಅಥವಾ ಪಶು ಜತೆ ಲೈಂಗಿರ್ಕ ಸಂಪರ್ಕ ಹೊಂದುವುದು ಅಪರಾಧ. ಇದಕ್ಕೆ 10 ವರ್ಷದವರೆಗೆ ಶಿಕ್ಷೆ ನೀಡಬಹುದು.
ಕೋರ್ಟ್ ಹೇಳಿದ್ದೇನು?
ಲೈಂಗಿಕ ನಿಲುವು ಸ್ವಾಭಾವಿಕ ಮತ್ತು ನೈಸರ್ಗಿಕವಾದುದು. ಯಾರ ಮೇಲೆ ಆಕರ್ಷಣೆ ಆಗುತ್ತದೆ ಎಂಬುದು ಆತ/ಆಕೆ ನಿಯಂತ್ರಣದಲ್ಲಿರುವುದಿಲ್ಲ. ಯಾವುದೇ ನಿರ್ಬಂಧ ಅಥವಾ ನಿಯಂತ್ರಣ ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆ ಆಗುತ್ತದೆ.
ಕಾಲು ಶತಮಾನದ ಹೋರಾಟಕ್ಕೆ ಜಯ
ಸಲಿಂಗ ಕಾಮವನ್ನು ಅಪರಾಧ ಎಂದು ಪರಿಗಣಿಸಿದ ಬ್ರಿಟಿಷ್ ಸರ್ಕಾರ ಐಪಿಸಿ ಸೆಕ್ಷನ್ 377ರ ವ್ಯಾಪ್ತಿಗೆ ಸೇರಿಸಿತ್ತು. ಇದನ್ನು ರದ್ದುಪಡಿಸುವಂತೆ ಕೋರಿ ಸರ್ಕಾರೇತರ ಸಂಸ್ಥೆಯೊಂದು 1994ರಲ್ಲಿ ಆರಂಭಿಸಿದ ಕಾನೂನು ಹೋರಾಟಕ್ಕೆ 24 ವರ್ಷದ ಬಳಿಕ ಗುರುವಾರ(ಸೆ.6) ರ್ತಾಕ ಗೆಲುವು ಸಿಕ್ಕಂತಾಗಿದೆ.
ವಯಸ್ಕರ ಸಲಿಂಗಕಾಮ ಹಾಗೂ ಕಾಮನೆ ಅಪರಾಧವಲ್ಲ ಎಂದು ಸುಪ್ರೀಂ ಕೋರ್ಟ್ ಸಂವಿಧಾನ ಪೀಠ ಐತಿಹಾಸಿಕ ಆದೇಶ ನೀಡಿದೆ. ತೀರ್ಪು ಬಂದ ಕ್ಷಣದಿಂದಲೇ ಖಾಸಗಿ ಪ್ರದೇಶದಲ್ಲಿ ಇಬ್ಬರು ವಯಸ್ಕರ ನಡುವಿನ ಸಲಿಂಗಕಾಮವು ಐಪಿಸಿ ಸೆಕ್ಷನ್ 377ರ ಅಪರಾಧ ವ್ಯಾಪ್ತಿಯಿಂದ ಹೊರಗಿರಲಿದೆ. ಈ ಮೂಲಕ ಎಲ್​ಜಿಬಿಟಿ ಸಮುದಾಯದ ಎರಡೂವರೆ ದಶಕಗಳ ಕಾನೂನು ಹೋರಾಟಕ್ಕೆ ಜಯ ಸಿಕ್ಕಂತಾಗಿದೆ. ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಸಂವಿಧಾನ ಪೀಠವು ಸರ್ವಾನುಮತದಲ್ಲಿ ಈ ಮಹತ್ವದ ಆದೇಶ ನೀಡಿದೆ.
ಖಾಸಗಿತನವೂ ಮೂಲಭೂತ ಹಕ್ಕು ಎಂದು ಸಂವಿಧಾನ ಪೀಠದ ಆದೇಶ ಬಂದ ನಂತರ ಸಲಿಂಗಕಾಮದ ಪ್ರಕರಣ ಮುನ್ನೆಲೆಗೆ ಬಂದಿತ್ತು. ಜು.17ರಂದು ತೀರ್ಪು ಕಾಯ್ದಿರಿಸಿದ್ದ ನ್ಯಾಯಪೀಠವು ಗುರುವಾರ ಈ ಆದೇಶ ನೀಡಿದೆ.

ಲೈಂಗಿಕ ಆಸಕ್ತಿಯನ್ನಾಧರಿಸಿ ಭೇದಭಾವ ಮಾಡುವುದು ಸರಿಯಲ್ಲ. ಸಂವಿಧಾನದ ಹಕ್ಕುಗಳು ಎಲ್​ಜಿಬಿಟಿ ಸಮುದಾಯಕ್ಕೂ ಇದೆ. ಸಹಜ ಜೈವಿಕ ಪ್ರಕ್ರಿಯೆಯಲ್ಲಿ ಪ್ರತ್ಯೇಕ ಲೈಂಗಿಕ ಆಸಕ್ತಿ ಹೊಂದಿರುವುದಕ್ಕೆ ಅಪರಾಧ ಎಂದು ಜೈಲಿಗಟ್ಟುವುದು ಅಮಾನವೀಯ. ಐಪಿಸಿ ಸೆಕ್ಷನ್ 377ರಲ್ಲಿನ ಈ ಅಂಶಗಳು ಸಂವಿಧಾನದ 14 ಹಾಗೂ 19ನೇ ವಿಧಿಗೆ ವಿರುದ್ಧವಾಗಿವೆ. ಎಲ್​ಜಿಬಿಟಿ ಸಮುದಾಯದ ಜನ ಕೂಡ ಘನತೆಯಿಂದ ಜೀವಿಸುವ ಹಕ್ಕು ಹೊಂದಿದ್ದಾರೆ ಎಂದು ಸಂವಿಧಾನ ಪೀಠ ಸ್ಪಷ್ಟಪಡಿಸಿದೆ. ಈ ಕಾರಣದಿಂದ ಐಪಿಸಿ ಸೆಕ್ಷನ್​ನಲ್ಲಿನ ಸಲಿಂಗ ಕಾಮ ಅಂಶವನ್ನು ಅಪರಾಧವಲ್ಲ ಎಂದು ಪರಿಗಣಿಸಲಾಗಿದೆ. ವಯಸ್ಕ ಪುರುಷ-ಪುರುಷ, ಮಹಿಳೆ-ಮಹಿಳೆ, ಪುರುಷ ಹಾಗೂ ಮಹಿಳೆಯರಿಬ್ಬರ ಜತೆ ಅಥವಾ ತೃತೀಯ ಲಿಂಗಿಗಳ ಲೈಂಗಿಕ ಆಸಕ್ತಿಯನ್ನು ಅಪರಾಧ ಪಟ್ಟಿಯಿಂದ ಹೊರಗಿಡಲಾಗಿದೆ. ಇದರ ಜತೆಗೆ ಇಂದ್ರಿಯ ಸುಖಕ್ಕೆ ಅನ್ವಯವಾಗುವ ಓರಲ್ ಸೆಕ್ಸ್ ಹಾಗೂ ಆನಲ್ ಸೆಕ್ಸ್ ಕೂಡ ಐಪಿಸಿ ಸೆಕ್ಷನ್ 377ರಿಂದ ಹೊರಗಿಡಲಾಗಿದೆ. ಪ್ರಾಣಿಗಳ ಜತೆ ಲೈಂಗಿಕ ಸಂಪರ್ಕ ಸಾಧಿಸುವುದು ಮಾತ್ರ ಐಪಿಸಿ ಸೆಕ್ಷನ್ 377ರ ವ್ಯಾಪ್ತಿಯಲ್ಲಿರಲಿದೆ ಎಂದು 493 ಪುಟಗಳ ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಸಮ್ಮತಿಯಲ್ಲಿ ಭಿನ್ನತೆ ಏಕೆ?
ಐಪಿಸಿ ಸೆಕ್ಷನ್ 375ರಲ್ಲಿ ಅತ್ಯಾಚಾರದ ಬಗ್ಗೆ ವಿವರಿಸಲಾಗಿದೆ. ಆದರೆ ಅಲ್ಲಿ ಸಮ್ಮತಿಯಿಂದ ವಯಸ್ಕರಲ್ಲಿನ ಲೈಂಗಿಕ ಆಸಕ್ತಿಯನ್ನು ಅತ್ಯಾಚಾರ ಎಂದು ಪರಿಗಣಿಸಿಲ್ಲ. ಅಲ್ಲಿ ಪುರುಷ ಹಾಗೂ ಮಹಿಳೆಯ ನಡುವಿನ ಲೈಂಗಿಕ ಕ್ರಿಯೆ ಬಗ್ಗೆ ಮಾತ್ರ ರ್ಚಚಿಸಲಾಗಿದೆ. ಸಂವಿಧಾನದಲ್ಲಿ ಎಲ್ಲರೂ ಸಮಾನರಾಗಿರುವಾಗ ಎಲ್​ಜಿಬಿಟಿ ಸಮಯದಾಯಕ್ಕೆ ಸಮ್ಮತಿ ಲೈಂಗಿಕ ಆಸಕ್ತಿ ಹಾಗೂ ಕ್ರಿಯೆಗೆ ಅವಕಾಶ ನೀಡುವುದರಲ್ಲಿ ತಪ್ಪೇನಿಲ್ಲ. ಲೈಂಗಿಕ ಆಸಕ್ತಿಗೆ ಅನುಗುಣವಾಗಿ ಸಂವಿಧಾನದ ಹಕ್ಕುಗಳ ಲಾಭ ಸಿಗುವಂತಾಗುವುದು ಅಸಮರ್ಪಕ ಎಂದು ಕೋರ್ಟ್ ಹೇಳಿದೆ.
ಲೈಂಗಿಕತೆಗೆ ಸೀಮಿತವಲ್ಲ
ಲೈಂಗಿಕ ಆಸಕ್ತಿ ಎನ್ನುವುದು ಸಹಜ ಜೈವಿಕ ಅಂಶ. ಮಾನವನಿಗೆ ಇದರ ಮೇಲೆ ನಿಯಂತ್ರಣ ಇರುವುದಿಲ್ಲ. ಅಷ್ಟಕ್ಕೂ ಸಲಿಂಗಿಗಳಿಗೆ ಕಾಮವೇ ಪ್ರಮುಖವಲ್ಲ. ಇಬ್ಬರು ಸಲಿಂಗಿಗಳ ಮಧ್ಯೆ ಭಾವನೆ, ಪ್ರೀತಿ ಹಾಗೂ ಗೌರವ ಹಂಚಿಕೆಯಾಗುತ್ತದೆ. ಸಂವಿಧಾನದ 19(1)ನೇ ವಿಧಿಯಲ್ಲಿ ಎಲ್ಲ ನಾಗರಿಕರಿಗೂ ಈ ಅವಕಾಶ ನೀಡಲಾಗಿದೆ. ಹೀಗಾಗಿ ಸಮಾಜವು ಎಲ್​ಜಿಬಿಟಿ ಸಮುದಾಯದ ಭಾವನೆಗಳಿಗೂ ಸ್ಪಂದಿಸುವ ಅಗತ್ಯವಿದೆ. ಸಾಮಾಜಿಕ ಕಳಂಕ ಎಂದು ಭೇದಭಾವ ಮಾಡುವ ಬದಲು ಸಮಾಜದ ಅಂಗವೆಂದು ಪರಿಗಣಿಸಬೇಕಿದೆ ಎಂದು ಕೋರ್ಟ್ ಹೇಳಿದೆ.
ಸಲಿಂಗಿ ಹೋರಾಟ ಹಾದಿ
1861: ಐಪಿಸಿ ಸೆಕ್ಷನ್ 377ರಲ್ಲಿ ಸಲಿಂಗಕಾಮ ಅಪರಾಧ ಎಂದು ಸೇರಿಸಿದ ಬ್ರಿಟಿಷ್ ಸರ್ಕಾರ
1974: ಅಮೆರಿಕ, ಐರೋಪ್ಯ ದೇಶಗಳಲ್ಲಿ ಸಲಿಂಗಕಾಮದ ಪರ ಹೋರಾಟ ಆರಂಭ
1994: ಐಪಿಸಿ ಸೆಕ್ಷನ್ 377 ರದ್ದುಪಡಿ ಸಲು ದೆಹಲಿ ಹೈಕೋರ್ಟ್​ಗೆ ಎನ್​ಜಿಒ ಅರ್ಜಿ
2001: ದೆಹಲಿ ಹೈಕೋರ್ಟ್​ಗೆ ನಾಝ್ ಪ್ರತಿಷ್ಠಾನದಿಂದ ಇನ್ನೊಂದು ಅರ್ಜಿ ಸಲ್ಲಿಕೆ
2004-2008: ಹೈಕೋರ್ಟ್​ನಿಂದ ಅರ್ಜಿ ತಿರಸ್ಕಾರ, ಅರ್ಜಿ ಮರುಪರಿಶೀಲನೆಗೆ ಸುಪ್ರೀಂ ಕೋರ್ಟ್ ಆದೇಶ, ಹಿಂದಿನ ಯುಪಿಎ ಸರ್ಕಾರದಿಂದ ಸಲಿಂಗಕಾಮಕ್ಕೆ ವಿರೋಧ
2009: ಐಪಿಸಿ ಸೆಕ್ಷನ್ 377ರಲ್ಲಿನ ಸಲಿಂಗ ಕಾಮವನ್ನು ನಿರಪರಾಧ ಎಂದ ದೆಹಲಿ ಹೈಕೋರ್ಟ್
2009-2012: ಹೈಕೋರ್ಟ್ ಆದೇಶ ಪ್ರಶ್ನಿಸಿ ಧಾರ್ವಿುಕ ಸಂಸ್ಥೆಗಳು ಹಾಗೂ ಕೆಲ ವ್ಯಕ್ತಿಗಳಿಂದ ಸುಪ್ರೀಂ ಕೋರ್ಟ್​ನಲ್ಲಿ ಮೇಲ್ಮನವಿ
2013: ದೆಹಲಿ ಹೈಕೋರ್ಟ್ ಆದೇಶ ರದ್ದುಗೊಳಿಸಿ ಕಾನೂನು ರೂಪಿಸುವ ಅಧಿಕಾರ ವನ್ನು ಸಂಸತ್​ಗೆ ಬಿಟ್ಟ ಸುಪ್ರೀಂ ಕೋರ್ಟ್
2015: ಸಲಿಂಗಕಾಮವನ್ನು ಅಪರಾಧವಲ್ಲ ಎಂದು ಪರಿಗಣಿಸುವಂತೆ ಶಶಿ ತರೂರ್ ಮಂಡಿಸಿದ್ದ ಖಾಸಗಿ ವಿಧೇಯಕಕ್ಕೆ ಲೋಕಸಭೆಯಲ್ಲಿ ವಿರೋಧ
2016: ಅರ್ಜಿ ಮರು ಪರಿಶೀಲನೆಗೆ ಒಪ್ಪಿಗೆ ಸೂಚಿಸಿ ಸಂವಿಧಾನ ಪೀಠ ರಚಿಸಿದ ಸುಪ್ರೀಂ ಕೋರ್ಟ್
2017: ಖಾಸಗಿತನದ ಹಕ್ಕಿನ ತೀರ್ಪು ನೀಡಿ ಎಲ್​ಜಿಬಿಟಿ ಸಮುದಾಯದಲ್ಲಿ ನಿರೀಕ್ಷೆ ಹುಟ್ಟಿಸಿದ ಸುಪ್ರೀಂ ಕೋರ್ಟ್
2018ರ ಜುಲೈ : ಸಂವಿಧಾನ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಸಿ ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್
ಕನ್ನಡಿಗರೊಬ್ಬರ ಹೋರಾಟದ ಫಲ!
ಖಾಸಗಿತನ ಹಕ್ಕಿಗೆ ಸಂಬಂಧಿಸಿ ಕರ್ನಾಟಕ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಪುಟ್ಟಸ್ವಾಮಿ ಸುಪ್ರೀಂ ಕೋರ್ಟ್ ಸಂವಿಧಾನ ಪೀಠಕ್ಕೆ ಅರ್ಜಿ ಸಲ್ಲಿಸಿದ್ದರು. ಖಾಸಗಿತನವೂ ಮೂಲಭೂತ ಹಕ್ಕು ಎಂದು ನ್ಯಾಯಪೀಠ ಆದೇಶಿಸಿತ್ತು. ಈ ಆದೇಶದ ನಂತರ ಎಲ್​ಜಿಬಿಟಿ ಸಮುದಾಯವು ನ್ಯಾಯದ ನಿರೀಕ್ಷೆಯಲ್ಲಿ ಮರು ಹೋರಾಟ ಆರಂಭಿಸಿತ್ತು. ಹೀಗಾಗಿ ಎಲ್​ಜಿಬಿಟಿ ಸಮುದಾಯದ ಈ ಗೆಲುವಿನಲ್ಲಿ ಕನ್ನಡಿಗರೊಬ್ಬರ ಪಾತ್ರವೂ ಇದೆ.
ಮುಂದೇನಾಗಬಹುದು?
ಕೆಲ ದೇಶಗಳಲ್ಲಿರುವಂತೆ ಸಲಿಂಗಿಗಳ ವಿವಾಹಕ್ಕೆ ಕಾನೂನು ಮಾನ್ಯತೆಗೆ ಹೋರಾಟ
ದೇಶದಲ್ಲಿನ ಎಲ್ಲ ವಿವಾಹ ಕಾಯ್ದೆಗಳಿಗೆ ತಿದ್ದುಪಡಿಗೆ ಹೋರಾಟ
ಕಾನೂನು ದಾರಿಯೇನು?
ಸುಪ್ರೀಂ ಕೋರ್ಟ್ ಆದೇಶವನ್ನು ಎಲ್ಲ ರಾಜ್ಯ ಸರ್ಕಾರ, ಪೊಲೀಸ್ ಮುಖ್ಯಸ್ಥರು, ಹೈಕೋರ್ಟ್​ಗಳಿಗೆ ನೀಡಿ ಈ ಕ್ಷಣದಿಂದಲೇ ಆದೇಶ ಜಾರಿಗೆ ಸೂಚಿಸಲಾಗಿದೆ. ಈಗಾಗಲೇ ವಿಚಾರಣೆ ಮುಗಿಸಿ ಜೈಲು ಶಿಕ್ಷೆ ಅನುಭವಿಸುತ್ತಿರುವವರಿಗೆ ಈ ಆದೇಶ ಅನ್ವಯವಾಗುವುದಿಲ್ಲ. ಆದರೆ ವಿಚಾರಣೆ ನಡೆಯುತ್ತಿರುವ ಪ್ರಕರಣಗಳಿಗೆ ವಿನಾಯಿತಿ ಸಿಗಲಿದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ತಾಂತ್ರಿಕ ಸಮಸ್ಯೆಗಳೇನು?
ಸಲಿಂಗ ಜೋಡಿಗಳು ಲಿವ್-ಇನ್ ಸಂಬಂಧ ಹೊಂದಬಹುದಾಗಿದೆ. ಆದರೆ ಯಾವುದೇ ಕಾನೂನು ಮಾನ್ಯತೆಯಿಲ್ಲ.
ಒಂದು ಸಂಗಾತಿ ಆಧರಿಸಿ ಬೇರೆ ದೇಶದ ವೀಸಾ ಪಡೆಯಲಾಗದು.
ವಿಚ್ಛೇದನ ಅಥವಾ ನಂತರದ ಪರಿಹಾರಕ್ಕೆ ಅವಕಾಶವಿಲ್ಲ.
ಈ ಸಂಬಂಧದಲ್ಲಿ ಸಮಸ್ಯೆಗಳಾದರೆ ಐಪಿಸಿ 420ರಲ್ಲಿ ಮೋಸ ಎಂಬ ಆಪಾದನೆ ಮಾತ್ರ ಮಾಡಬಹುದಾಗಿದೆ. ಸದ್ಯಕ್ಕೆ ಉಳಿದ ಕಾನೂನು ಸವಲತ್ತು ಸಿಗುವುದಿಲ್ಲ.
ಕಾನೂನು ಗೆದ್ದ ಸಲಿಂಗಿಗಳು!
ನವ್​ತೇಜ್ ಸಿಂಗ್ ಜೋಹರ್, ಸುನಿಲ್ ಮೆಹ್ರಾ, ರಿತು ದಾಲ್ಮಿಯಾ, ಅಮನ್ ನಾಥ್, ಆಯೇಷಾ ಕಪೂರ್

ಆರೆಸ್ಸೆಸ್ ಹೇಳುವುದೇನು?
ಸುಪ್ರೀಂ ಕೋರ್ಟ್ ಹೇಳಿರುವಂತೆಯೇ ಸಲಿಂಗಕಾಮವನ್ನು ಅಪರಾಧ ಎಂದು ನಾವು ಪರಿಗಣಿಸುವುದಿಲ್ಲ. ಆದರೆ ಸಲಿಂಗ ಕಾಮಿಗಳ ಮದುವೆಯನ್ನು ಆರ್​ಎಸ್​ಎಸ್ ಒಪ್ಪುವುದಿಲ್ಲ ಎಂದು ಪ್ರಚಾರ ಪ್ರಮುಖ ಅರುಣ್​ಕುಮಾರ್ ತಿಳಿಸಿದ್ದಾರೆ. ಇಂಥ ಮದುವೆಗೆ ಸಮ್ಮತಿಸಿದರೆ ಭಾರತೀಯ ಸಂಸ್ಕೃತಿ ಹಾಗೂ ಸಮಾಜದ ಪರಿಕಲ್ಪನೆಗೆ ಪೆಟ್ಟು ಬೀಳಲಿದೆ ಎನ್ನುವುದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಾದವಾಗಿದೆ.
ಕೇಂದ್ರ ಸರ್ಕಾರದ ವಾದವೇನು?
ಸಲಿಂಗ ಕಾಮವನ್ನು ಅಪರಾಧವಲ್ಲ ಎನ್ನುವುದಕ್ಕೆ ಕೋರ್ಟ್ ತೀರ್ಪಿಗೆ ಬದ್ಧ
ಆದರೆ ಸಲಿಂಗಿಗಳಿಗೆ ಮದುವೆಗೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಸಂವಿಧಾನ ಪೀಠಕ್ಕೆ ಅಭಿಪ್ರಾಯ ತಿಳಿಸಿದ್ದ ಅಟಾರ್ನಿ ಜನರಲ್.
ಯಾವ್ಯಾವ ದೇಶಗಳಲ್ಲಿ ಕಾನೂನುಬದ್ಧ
ಅಮೆರಿಕ, ದಕ್ಷಿಣ ಆಫ್ರಿಕಾ, ಕೆನಡಾ, ಮೆಕ್ಸಿಕೋ, ಬ್ರೆಜಿಲ್, ರಷ್ಯಾ, ಇಸ್ರೇಲ್, ಚೀನಾ, ಜಪಾನ್, ದಕ್ಷಿಣ ಕೊರಿಯಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಬ್ರಿಟನ್, ಫ್ರಾನ್ಸ್, ಜರ್ಮನಿ ಸೇರಿ ಎಲ್ಲ ಐರೋಪ್ಯ ದೇಶಗಳು. ಬಹುತೇಕ ಮುಸ್ಲಿಂ ಹಾಗೂ ಸೌದಿ ದೇಶಗಳಲ್ಲಿ ಕಾನೂನು ಬಾಹಿರ.
ಭಾರತದ ಸುಪ್ರೀಂ ಕೋರ್ಟ್​ನಿಂದ ಐತಿಹಾಸಿಕ ಆದೇಶ ಬಂದಿದೆ.ಲೈಂಗಿಕ ಆಸಕ್ತಿಯು ಪ್ರತಿಯೊಬ್ಬ ವ್ಯಕ್ತಿಯ ವೈಯಕ್ತಿಕ ವಿಚಾರ. ಇದನ್ನು ಆಧರಿಸಿ ಹಿಂಸೆ, ಅವಮಾನ ಮಾಡಿ ಮಾನವ ಹಕ್ಕುಗಳನ್ನು ಉಲ್ಲಂಘಿಸುವುದು ಸರಿಯಲ್ಲ.
| ವಿಶ್ವಸಂಸ್ಥೆ
ಸುದೀರ್ಘ ಕಾನೂನು ಹೋರಾಟಕ್ಕೆ ಜಯ ಸಿಕ್ಕಿದೆ. ಸಮಾಜವು ಇನ್ನಾದರೂ ಎಲ್​ಜಿಬಿಟಿ ಸಮುದಾಯವನ್ನು ಗೌರವದಿಂದ ಕಾಣಲಿ.
| ಅಯೇಷಾ ಕಪೂರ್, ಅರ್ಜಿದಾರೆ
ಎಲ್ಲರಿಗೂ ಸಮಾನ ಹಕ್ಕು ನೀಡುವಲ್ಲಿ ಇದು ಮಹತ್ವದ ಆದೇಶವಾಗಿದೆ. ಭಾರತದಂಥ ವೈವಿಧ್ಯಪೂರ್ಣ ದೇಶದಲ್ಲಿ ಸಲಿಂಗಕಾಮನೆ ಅಪರಾಧವಲ್ಲ ಎನ್ನುವುದು ಅಗತ್ಯವಿತ್ತು.
| ಶ್ವೇತಾ ರಜ್ಪಾಲ್ ಕೊಹ್ಲಿ, ಪಬ್ಲಿಕ್ ಪಾಲಿಸಿ ಆಂಡ್ ಗವರ್ನ್ಮೆಂಟ್ ಅಫೇರ್ಸ್ ನಿರ್ದೇಶಕಿ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

**ಜ್ಞಾನ ಕಾರಂಜಿ**::: ಬೇನಾಮಿ ಆಸ್ತಿ ಪ್ರಕರಣ ವಿಲೇವಾರಿಗೆ ನ್ಯಾಯಾಧಿಕರಣ,

ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್​ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್​ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್​ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...

**ಜ್ಞಾನ ಕಾರಂಜಿ**::: ★ ವೈಜ್ಞಾನಿಕ ಉಪಕರಣಗಳು ಹಾಗೂ ಅವುಗಳ ಉಪಯೋಗಗಳು

1) ಅಲ್ಟಿಮೀಟರ್ —————> ಎತ್ತರ ಮತ್ತು ವಾಯುವಿನ ಒತ್ತಡವನ್ನು ಸೂಚಿಸುವ ಸಾಧನ. 2) ಲ್ಯಾಕ್ಟೊಮೀಟರ್ —————> ಹಾಲಿನಲ್ಲಿರುವ ನೀರಿನ ಪ್ರಮಾಣವನ್ನು ಅಳೆಯುವ ಸಾಧನ. 3) ಬ್ಯಾರೋಮೀಟರ್ —————> ಭೂಮಿಯ ಮೇಲಿನ ಹವೆಯ ಒತ್ತಡವನ್ನು ಅಳೆಯುವ ಸಾಧನ. 4) ಮೈಕ್ರೋಮೀಟರ್ —————> ಸಣ್ಣ ವಸ್ತುಗಳ ದಪ್ಪವನ್ನು ಅಳೆಯುವ ಸಾಧನ. 5) ಹೈಡ್ರೋಮೀಟರ್ —————> ದ್ರವಗಳ ಸಾಪೇಕ್ಷ ಸಾಂದ್ರತೆಯನ್ನು ಅಳೆಯುವ ಸಾಧನ. 6) ಪೈರೋಮೀಟರ್ —————> ಹೆಚ್ಚು ಉಷ್ಣತೆಯನ್ನು ಅಳೆಯುವ ಸಾಧನ. 7) ಪ್ಯಾಥೋಮೀಟರ್ —————> ಸಮುದ್ರದ ಆಳವನ್ನು ಅಳೆಯುವ ಸಾಧನ. 8) ವೋಲ್ಟಾಮೀಟರ್ —————> ವಿದ್ಯುತ್ ಕೋಶದ ವಿದ್ಯುತ್ ಚಾಲಕ ಬಲವನ್ನು ಅಳೆಯುವ ಸಾಧನ. 9) ಗ್ಯಾಲ್ವನೋಮೀಟರ್ —————> ಕಡಿಮೆ ವಿದ್ಯುತ್ ಅಳೆಯುವ ಸಾಧನ. 10) ಅನಿಮಾಮೀಟರ್ —————> ಗಾಳಿಯ ವೇಗವನ್ನು ಅಳೆಯುವ ಸಾಧನ. 11) ಓಡೋಮೀಟರ್ —————> ಚಕ್ರವಾಹನಗಳು ಚಲಿಸುವ ದೂರವನ್ನು ಅಳೆಯುವ ಸಾಧನ. 12) ಸ್ಪೀಡೋಮೀಟರ್ —————> ವಾಹನಗಳ ವೇಗವನ್ನು ಅಳೆಯುವ ಸಾಧನ. 13) ಗ್ರಾಫಿಮೀಟರ್ —————> ನೀರಿನ ಸೆಲೆಯನ್ನು ಪತ್ತೆ ಹಚ್ಚುವ ಸಾಧನ. 14) ಮೋನೋಮೀಟರ್ —————> ಅನಿಲಗಳ ಒತ್ತಡಗಳನ್ನು ಅಳೆಯುವ ಸಾಧನ. 15) ಕ್ರೋನೋಮೀಟರ್ —————> ಹಡಗಿನ ನಿಖರವಾದ ಕಾಲವನ್ನು ಅಳತೆ ಮಾಡುವ ಸಾಧನ. 16) ರೆಡಿಯೋಮೀಟರ್ —————> ವಿಕಿರಣಗಳಿಂದ ಹೊರಬರುವ ಶಕ್ತಿಯನ್ನು ಅಳೆಯುವ ಸಾಧನ. 1...

.. ಭಾರತೀಯ ಕಾವ್ಯ ಮೀಮಾಂಸೆ

ಭಾರತೀಯ ಕಾವ್ಯ ಮೀಮಾಂಸೆ ಭಾರತೀಯ ಕಾವ್ಯಮೀಮಾಂಸೆಗೆ ಸುಮಾರು ಎರಡು ಸಾವಿರ ವರ್ಷಗಳ ದೀರ್ಘ ಇತಿಹಾಸವಿದೆ. ಕವಿ ಮತ್ತು ಕಾವ್ಯದ ಲಕ್ಷಣಗಳು, ಕಾವ್ಯ ಪ್ರಭೇದಗಳು. ಕಾವ್ಯಾಲಂಕಾರಗಳು, ಕಾವ್ಯದ ವಸ್ತು ಇತ್ಯಾದಿ ಕಾವ್ಯನಿರ್ಮಿತಿಗೆ ಸಂಬಂಧಿಸಿದ ಮಹತ್ತ್ವದ ಅಂಶಗಳ ಶಾಸ್ತ್ರೀಯ ನಿರೂಪಣೆಯೇ ಕಾವ್ಯನಿಮೀಮಾಂಸೆ. ಇದನ್ನು ಅಲಂಕಾರ ಶಾಸ್ತ್ರವೆಂದೂ ಕರೆಯಲಾಗುತ್ತದೆ. ಪ್ರಾಚೀನ ಯುಗದಲ್ಲಿ ಅಲಂಕಾರಶಾಸ್ತ್ರವೆಂದರೆ ಪ್ರಧಾನವಾಗಿ ನಾಟ್ಯ ನೃತ್ಯ ಇತ್ಯಾದಿ ರಂಗ ಸಂಸ್ಕರಣ ಅಥವಾ ನಾಟ್ಯಕಲೆಯನ್ನು ಸರ್ವಾಂಗ ಸುಂದರವಾಗಿ ಮಾಡುವ ಒಂದು ಪರಿಷ್ಕಾರ ಶಾಸ್ತ್ರವಾಗಿದ್ದಿತು. ಕಾಲಕ್ರಮೇಣ ಇದು ಕಾವ್ಯಕಲೆಯನ್ನು ಪರಿಷ್ಕರಿಸುವ ಶಾಸ್ತ್ರವಾಗಿ ಪರಿಣಮಿಸಿತು. ಇದರ ಆರಂಭ ಯಾವಾಗಿ ಯಾರಿಂದ ಆಯಿತೆಂದು ಇತ್ಯರ್ಥಪಡಿಸುವುದು ಕಷ್ಟದ ಕೆಲಸ. ಸಾಹಿತ್ಯದಲ್ಲಿ ಸೌಂದರ್ಯೋಪಾಸನೆ ಪ್ರಾರಂಭವಾದಂದಿನಿಂದಲೂ ಪಂಡಿತರು ಮತ್ತು ವಿಮರ್ಶಕರು ಸಾಹಿತ್ಯದಲ್ಲಿ ಸೌಂದರ್ಯ ಅರಸಿ ಈ ಚಿತ್ತ ಸಂಸ್ಕರಣ ಶಾಸ್ತ್ರವನ್ನು ಬೆಳೆಸಿಕೊಂಡು ಬಂದಿದ್ದಾರೆ. ಕ್ರಿ. ಪೂ. 6ನೆಯ ಶತಮಾನದಲ್ಲಿದ ಯಾಸ್ಕಾಚಾರ್ಯ ಉಪಮೆ ರೂಪಕಗಳ ಬಗ್ಗೆ ಉಲ್ಲೇಖಸಿದ್ದಾನೆ. ಕ್ರಿ. ಪೂ. 5ನೆಯ ಶತಕದ ವೇಳೆಗೆ ಪಾಣಿನಿ ನಟರ ವಿಷಯ ಪ್ರಸ್ತಾಪಿಸಿದ್ದಾನೆ. ವೇದಗಳ ಕಾಲದಲ್ಲೂ ಉಪಮಾ ರೂಪಕಾದಿಗಳ ಪ್ರಯೋಗವಿದೆ. ಋಗ್ವೇದದಲ್ಲಿ ಕಂಡುಬರುವ ಯಮಯಮಿಯರ ಸಂವಾದ, ಊರ್ವಶೀ ಪುರೂರವರ ಸಂವಾದ_ಇವುಗಳಿಂದ ವೇದಕಾಲದಲ್ಲಿ ನಾಟಕದ ಅಂಕುರಾರ್ಪಣವಿದ್ದಂತಿದೆ....