ವಿಷಯಕ್ಕೆ ಹೋಗಿ

**ಜ್ಞಾನ ಕಾರಂಜಿ**::: ಅಕ್ರಮಕ್ಕೆ ಲಂಚ ರಕ್ಷೆ!,

ಕಾಪೋರೇಟರ್​ಗಳ ಲಂಚಾವತಾರ ಬಯಲು >>
| ಬಿ.ಎಂ. ನರೇಶ್​ಗೌಡ/ ವಿ. ಮುರಳೀಧರ
 ಬೆಂಗಳೂರು: ಅಕ್ರಮ ಕಟ್ಟಡಗಳ ತೆರವಿನ ಹೊಣೆ ಹೊತ್ತಿರುವ ಬಿಬಿಎಂಪಿ ನಗರ ಯೋಜನೆ ಸ್ಥಾಯಿ ಸಮಿತಿ ಸದಸ್ಯರ ಲಂಚಾವತಾರ ಬಯಲಾಗಿದೆ. ನಕ್ಷೆ ಉಲ್ಲಂಘಿಸಿ ಮನೆ ನಿರ್ವಿುಸಿದ್ದ ವ್ಯಕ್ತಿಯೊಬ್ಬರ ಜತೆ ಸೇರಿ ದಿಗ್ವಿಜಯ ನ್ಯೂಸ್ ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ಅಕ್ರಮ ಸಕ್ರಮಕ್ಕೆ 10 ಲಕ್ಷ ರೂ.ಲಂಚ ಕೇಳಿದ್ದ ಮೂವರು ಕಾಪೋರೇಟರ್​ಗಳ ಸಹಿತ ಐವರು ಸಿಕ್ಕಿಬಿದ್ದಿದ್ದಾರೆ.
ಜನಸೇವೆ ಮಾಡುವುದಾಗಿ ಭರವಸೆಗಳನ್ನು ಕೊಟ್ಟು ಅಧಿಕಾರದ ಚುಕ್ಕಾಣಿ ಹಿಡಿಯುವ ರಾಜಕಾರಣಿಗಳು, ಅಧಿಕಾರಕ್ಕೆ ಬಂದ ನಂತರ ಜನರನ್ನೇ ಸುಲಿಗೆ ಮಾಡುವ ಲಂಚಾವತಾರವನ್ನು ದಿಗ್ವಿಜಯ 247 ನ್ಯೂಸ್ ತಂಡ ಬಯಲಿಗೆಳೆದಿದೆ.
ಬಿಬಿಎಂಪಿ ನಗರ ಯೋಜನೆ ಸ್ಥಾಯಿ ಸಮಿತಿಯ ಅಧ್ಯಕ್ಷ ಹಾಗೂ ಭಾರತಿನಗರ ವಾರ್ಡ್ ಸದಸ್ಯ ಶಕೀಲ್ ಅಹಮದ್, ಯಶವಂತಪುರ ವಾರ್ಡ್ ಸದಸ್ಯ ಜಿ.ಕೆ. ವೆಂಕಟೇಶ್, ಬೈರಸಂದ್ರ ವಾರ್ಡ್ ಸದಸ್ಯ ಎನ್. ನಾಗರಾಜ್, ಅಧ್ಯಕ್ಷರ ಆಪ್ತ ಸಹಾಯಕ ಚಕ್ರವರ್ತಿ ಹಾಗೂ ಬಿಬಿಎಂಪಿ ನೌಕರ ಗುರುರಾಜ್ ತನಿಖಾ ತಂಡದ ಮುಂದೆ 5 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟು ಸಿಕ್ಕಿಬಿದ್ದಿದ್ದಾರೆ.
ನಕ್ಷೆ ಉಲ್ಲಂಘಿಸಿ ನಿರ್ವಿುಸಿದ ಕಟ್ಟಡಗಳನ್ನು ಪತ್ತೆ ಮಾಡಿ ಮಾಲೀಕರಿಗೆ ನೋಟಿಸ್ ಜಾರಿ ಮಾಡಿ ಕಟ್ಟಡ ತೆರವುಗೊಳಿಸುವುದು ಬಿಬಿಎಂಪಿ ನಗರ ಯೋಜನೆ ಸ್ಥಾಯಿ ಸಮಿತಿ ಕೆಲಸ. ಸಮಿತಿಯಲ್ಲಿ ಅಧ್ಯಕ್ಷರು ಸೇರಿ 11 ಮಂದಿ ಸದಸ್ಯರಿದ್ದಾರೆ. ಸಮಿತಿ ಅಧ್ಯಕ್ಷ ಶಕೀಲ್ ಆಪ್ತ ಸಹಾಯಕ ಚಕ್ರವರ್ತಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯುತ್ತಿದೆ. ಚಕ್ರವರ್ತಿ ನೇತೃತ್ವದ ತಂಡ ನಿಯಮ ಮೀರಿ ನಿರ್ವಿುಸಿದ ಕಟ್ಟಡಗಳನ್ನು ಪತ್ತೆ ಮಾಡಿ ಮಾಲೀಕರಿಗೆ ಸಮಿತಿ ಅಧ್ಯಕ್ಷರ ವಿಸಿಟಿಂಗ್ ಕಾರ್ಡ್ ನೀಡಿ ಮಾತನಾಡುವಂತೆ ಸೂಚಿಸುತ್ತದೆ. ಈ ಹಂತದಲ್ಲೇ ಕೆಲವು ಬಾರಿ ಹಣ ವಸೂಲಿ ಮಾಡಲಾಗಿದೆ. ಮನೆ ಮಾಲೀಕರನ್ನು ಬೆದರಿಸಲೆಂದೇ 10 ಸಿಮ್ಾರ್ಡ್ ಬಳಸುತ್ತಿದ್ದುದು ಕಂಡುಬಂದಿದೆ.
ತನಿಖೆ ನಡೆದಿದ್ದು ಹೀಗೆ..
ತನಿಖಾ ತಂಡಕ್ಕೆ ಪರಿಚಯವಿದ್ದ ವ್ಯಕ್ತಿಯೊಬ್ಬರು ನಕ್ಷೆ ಉಲ್ಲಂಘಿಸಿ ಮನೆ ನಿರ್ವಿುಸಿದ್ದರು. ಇವರ ಜೊತೆ ದಿಗ್ವಿಜಯ ತನಿಖಾ ತಂಡ ಸೇರಿಕೊಂಡಿತ್ತು. ಇವರಿಗೆ ಹಣ ನೀಡುವಂತೆ ಚಕ್ರವರ್ತಿ ತಂಡ ಸೂಚಿಸಿತ್ತು. ಹಣ ನೀಡದ ಹಿನ್ನೆಲೆಯಲ್ಲಿ ಚಕ್ರವರ್ತಿ ಮನೆ ಮಾಲೀಕ ಎಂದು ಹೇಳಿಕೊಂಡಿದ್ದ ತನಿಖಾ ತಂಡದ ಸದಸ್ಯನನ್ನು ಅಧ್ಯಕ್ಷರ ಬಳಿಗೆ ಕರೆದೊಯ್ದರು. ಈ ವೇಳೆ ಅಧ್ಯಕ್ಷ ಶಕೀಲ್ ಅಹಮದ್ ಇತರರ ಜತೆ ಮಾತುಕತೆ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಸಮಿತಿಯ ಸದಸ್ಯ ರೊಂದಿಗೆ ಮಾತನಾಡು ವಂತೆ ಸೂಚಿಸಿದರು. ಅಧ್ಯಕ್ಷರ ಕೊಠಡಿಗೆ ಬೈರಸಂದ್ರ ವಾರ್ಡ್ ಸದಸ್ಯ ಎನ್. ನಾಗರಾಜ್ ಹಾಗೂ ಯಶವಂತಪುರ ವಾರ್ಡ್ ಸದಸ್ಯ ಜಿ.ಕೆ. ವೆಂಕಟೇಶ್ ಆಗಮಿಸಿದರು. ಈ ವೇಳೆ ಚಕ್ರವರ್ತಿ, ‘ಅಧ್ಯಕ್ಷರು 10 ಲಕ್ಷ ರೂ. ವಸೂಲಿ ಮಾಡಲು ಸೂಚಿಸಿದ್ದಾರೆ’ ಎಂದು ಸದಸ್ಯರಿಗೆ ಹೇಳಿದರು.
17 ನಿಮಿಷ ಮಾತುಕತೆ ನಡೆದು ಕೊನೆಗೆ 3 ದಿನದಲ್ಲಿ 5 ಲಕ್ಷ ರೂ. ನೀಡುವಂತೆ ಇಬ್ಬರು ಸದಸ್ಯರು ಹೇಳಿದರು. ಮನೆ ಮಾಲೀಕ ಎಂದು ಹೇಳಿಕೊಂಡಿದ್ದ ತನಿಖಾ ತಂಡದ ವರದಿಗಾರನ ಮೊಬೈಲ್ ಸಂಖ್ಯೆಯನ್ನು ನೌಕರ ಗುರುರಾಜ್ ಪಡೆದರು. ತಂಡ ಕೋಟಿಗಟ್ಟಲೆ ಹಣ ವಸೂಲಿ ಮಾಡಿರುವ ಶಂಕೆಯಿದ್ದು, ಸಂಪೂರ್ಣ ತನಿಖೆಯಾಗಬೇಕಿದೆ.
ಸಿಎಂ ಮಾತನ್ನೂ ಕೇಳಲ್ಲ…
ನಗರ ಸ್ಥಾಯಿ ಸಮಿತಿ ಸದಸ್ಯರು ಲಂಚಕ್ಕೆ ಬೇಡಿಕೆ ಸಲ್ಲಿಸುವ ವೇಳೆ, ‘ಸಿಎಂ ಕುಮಾರಸ್ವಾಮಿ ಹೇಳಿದರೂ ನಾವು ಕೇಳುವುದಿಲ್ಲ. ನಮಗೆ ಹಣ ನೀಡಲೇಬೇಕು. ಚುನಾವಣೆಯಲ್ಲಿ ಕೋಟಿಗಟ್ಟಲೆ ಹಣ ಖರ್ಚು ಮಾಡಿ ಗೆದ್ದಿದ್ದೇವೆ. 3 ದಿನದಲ್ಲಿ ಹಣ ಪಾವತಿ ಮಾಡದಿದ್ದರೆ ಮನೆಯ ವಿದ್ಯುತ್ ಹಾಗೂ ಕಾವೇರಿ ನೀರು ಸಂಪರ್ಕ ಕಡಿತ ಮಾಡಲು ಬೆಸ್ಕಾಂ ಹಾಗೂ ಜಲಮಂಡಳಿಗೆ ಸೂಚನೆ ನಿಡುತ್ತೇವೆ’ ಎಂದು ಬೆದರಿಸಿದರು. ಇಬ್ಬರು ಸದಸ್ಯರು ಲಂಚಕ್ಕೆ ಬೇಡಿಕೆ ಇಟ್ಟ ದೃಶ್ಯ ಸಂಪೂರ್ಣ ಚಿತ್ರೀಕರಣವಾಗಿದೆ.
ಲಂಚಾವತಾರದಲ್ಲಿ ಸಿಕ್ಕಿಬಿದ್ದ ಕಾಪೋರೇಟರ್​ಗಳ ಕೃತ್ಯ ಎಲ್ಲ ಸದಸ್ಯರು ತಲೆತಗ್ಗಿಸುವಂತೆ ಮಾಡಿದೆ. ಹೈಕಮಾಂಡ್ ಇವರ ವಿರುದ್ಧ ವರದಿ ಕೇಳಿದೆ. ಆರೋಪ ಸಾಬೀತಾದರೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು.
| ಸಂಪತ್​ರಾಜ್, ಮೇಯರ್
ದಿಗ್ವಿಜಯ ತನಿಖಾ ತಂಡ ಬಿಬಿಎಂಪಿಯ ನಗರ ಯೋಜನೆ ಸ್ಥಾಯಿ ಸಮಿತಿಯ ಭ್ರಷ್ಟಾಚಾರ ಬಯಲಿಗೆ ಎಳೆದಿರುವುದು ಶ್ಲಾಘನೀಯ. ಭ್ರಷ್ಟರು ಅಧಿಕಾರದಲ್ಲಿ ಮುಂದುವರಿಯಲು ಯೋಗ್ಯರಲ್ಲ. ಮೂವರು ಸದಸ್ಯರೂ ರಾಜೀನಾಮೆ ನೀಡಬೇಕು.
| ಬಿ.ಎಸ್. ಯಡಿಯೂರಪ್ಪ, ವಿಧಾನಸಭೆ ವಿಪಕ್ಷ ನಾಯಕ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

**ಜ್ಞಾನ ಕಾರಂಜಿ**::: ಬೇನಾಮಿ ಆಸ್ತಿ ಪ್ರಕರಣ ವಿಲೇವಾರಿಗೆ ನ್ಯಾಯಾಧಿಕರಣ,

ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್​ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್​ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್​ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...

.. ಭಾರತೀಯ ಕಾವ್ಯ ಮೀಮಾಂಸೆ

ಭಾರತೀಯ ಕಾವ್ಯ ಮೀಮಾಂಸೆ ಭಾರತೀಯ ಕಾವ್ಯಮೀಮಾಂಸೆಗೆ ಸುಮಾರು ಎರಡು ಸಾವಿರ ವರ್ಷಗಳ ದೀರ್ಘ ಇತಿಹಾಸವಿದೆ. ಕವಿ ಮತ್ತು ಕಾವ್ಯದ ಲಕ್ಷಣಗಳು, ಕಾವ್ಯ ಪ್ರಭೇದಗಳು. ಕಾವ್ಯಾಲಂಕಾರಗಳು, ಕಾವ್ಯದ ವಸ್ತು ಇತ್ಯಾದಿ ಕಾವ್ಯನಿರ್ಮಿತಿಗೆ ಸಂಬಂಧಿಸಿದ ಮಹತ್ತ್ವದ ಅಂಶಗಳ ಶಾಸ್ತ್ರೀಯ ನಿರೂಪಣೆಯೇ ಕಾವ್ಯನಿಮೀಮಾಂಸೆ. ಇದನ್ನು ಅಲಂಕಾರ ಶಾಸ್ತ್ರವೆಂದೂ ಕರೆಯಲಾಗುತ್ತದೆ. ಪ್ರಾಚೀನ ಯುಗದಲ್ಲಿ ಅಲಂಕಾರಶಾಸ್ತ್ರವೆಂದರೆ ಪ್ರಧಾನವಾಗಿ ನಾಟ್ಯ ನೃತ್ಯ ಇತ್ಯಾದಿ ರಂಗ ಸಂಸ್ಕರಣ ಅಥವಾ ನಾಟ್ಯಕಲೆಯನ್ನು ಸರ್ವಾಂಗ ಸುಂದರವಾಗಿ ಮಾಡುವ ಒಂದು ಪರಿಷ್ಕಾರ ಶಾಸ್ತ್ರವಾಗಿದ್ದಿತು. ಕಾಲಕ್ರಮೇಣ ಇದು ಕಾವ್ಯಕಲೆಯನ್ನು ಪರಿಷ್ಕರಿಸುವ ಶಾಸ್ತ್ರವಾಗಿ ಪರಿಣಮಿಸಿತು. ಇದರ ಆರಂಭ ಯಾವಾಗಿ ಯಾರಿಂದ ಆಯಿತೆಂದು ಇತ್ಯರ್ಥಪಡಿಸುವುದು ಕಷ್ಟದ ಕೆಲಸ. ಸಾಹಿತ್ಯದಲ್ಲಿ ಸೌಂದರ್ಯೋಪಾಸನೆ ಪ್ರಾರಂಭವಾದಂದಿನಿಂದಲೂ ಪಂಡಿತರು ಮತ್ತು ವಿಮರ್ಶಕರು ಸಾಹಿತ್ಯದಲ್ಲಿ ಸೌಂದರ್ಯ ಅರಸಿ ಈ ಚಿತ್ತ ಸಂಸ್ಕರಣ ಶಾಸ್ತ್ರವನ್ನು ಬೆಳೆಸಿಕೊಂಡು ಬಂದಿದ್ದಾರೆ. ಕ್ರಿ. ಪೂ. 6ನೆಯ ಶತಮಾನದಲ್ಲಿದ ಯಾಸ್ಕಾಚಾರ್ಯ ಉಪಮೆ ರೂಪಕಗಳ ಬಗ್ಗೆ ಉಲ್ಲೇಖಸಿದ್ದಾನೆ. ಕ್ರಿ. ಪೂ. 5ನೆಯ ಶತಕದ ವೇಳೆಗೆ ಪಾಣಿನಿ ನಟರ ವಿಷಯ ಪ್ರಸ್ತಾಪಿಸಿದ್ದಾನೆ. ವೇದಗಳ ಕಾಲದಲ್ಲೂ ಉಪಮಾ ರೂಪಕಾದಿಗಳ ಪ್ರಯೋಗವಿದೆ. ಋಗ್ವೇದದಲ್ಲಿ ಕಂಡುಬರುವ ಯಮಯಮಿಯರ ಸಂವಾದ, ಊರ್ವಶೀ ಪುರೂರವರ ಸಂವಾದ_ಇವುಗಳಿಂದ ವೇದಕಾಲದಲ್ಲಿ ನಾಟಕದ ಅಂಕುರಾರ್ಪಣವಿದ್ದಂತಿದೆ....

**ಜ್ಞಾನ ಕಾರಂಜಿ**::: ನೀತಿ ಆಯೋಗ ಸ್ಥಾಪನೆ

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ಅಧಿಕಾರಕ್ಕೆ ಬಂದು ಮೇ 26ಕ್ಕೆ ನಾಲ್ಕು ವರ್ಷ. ಸರ್ಕಾರದ ಈ ಅವಧಿಯ ಪಯಣದಲ್ಲಿನ ಪ್ರಮುಖ ರಂಗಗಳ ಚಿತ್ರಣವನ್ನು ವಿಜಯವಾಣಿ ಸರಣಿಯಾಗಿ ಕಟ್ಟಿಕೊಡಲಿದ್ದು, ಅದರ ಎರಡನೇ ಭಾಗ ಇಲ್ಲಿದೆ. ನೆಹರು ಅವಧಿಯಲ್ಲಿ ರಚನೆಯಾಗಿದ್ದ ಯೋಜನಾ ಆಯೋಗವನ್ನು ರದ್ದುಗೊಳಿಸಿ 2015ರ ಜ.1ರಂದು ನೀತಿ ಆಯೋಗ ರಚಿಸಲಾಯಿತು. ಅಮೃತ್, ಡಿಜಿಟಲ್ ಇಂಡಿಯಾ, ಅಟಲ್ ಇನೋವೇಷನ್, ಸಂಚಾರ ದಟ್ಟಣೆ ನಿಯಂತ್ರಣ ಸೇರಿ ಕೆಲ ಯೋಜನೆಗಳ ನೇರ ಉಸ್ತುವಾರಿಯನ್ನು ನೀತಿ ಆಯೋಗ ವಹಿಸಿಕೊಂಡಿದೆ. ಪ್ರಧಾನಿ ಅಧ್ಯಕ್ಷತೆಯ ಈ ಆಯೋಗದಲ್ಲಿ ರಾಜ್ಯಗಳ ಹಣಕಾಸು ಸಚಿವರು ಸದಸ್ಯರಾಗಿರುತ್ತಾರೆ. 15 ವರ್ಷ ಹಾಗೂ 7 ವರ್ಷಗಳ ಪ್ರತ್ಯೇಕ ಗುರಿಯ ಯೋಜನೆಯ ಜತೆಗೆ, ವಾರ್ಷಿಕ ಕಾರ್ಯಕ್ರಮಗಳ ಬಗ್ಗೆ ಈ ಸಂಸ್ಥೆ ನಿಗಾ ಇಡಲಿದೆ. ಆಡಳಿತಕ್ಕೆ ಹೊಸ ಸ್ಪರ್ಶ ‘ಮಿನಿಮಮ್ ಗವರ್ನಮೆಂಟ್, ಮ್ಯಾಕ್ಸಿಮಮ್ ಗವರ್ನನ್ಸ್’ (ಕನಿಷ್ಠ ಸರ್ಕಾರ ಗರಿಷ್ಠ ಆಡಳಿತ) ಧ್ಯೇಯ ವಾಕ್ಯದೊಂದಿಗೆ ಪ್ರಧಾನಿ ಕಚೇರಿಗೆ ನರೇಂದ್ರ ಮೋದಿ ಕಾಲಿಟ್ಟಿದ್ದರು. ತೆರಿಗೆ ವ್ಯವಸ್ಥೆಯಿಂದ ಹಿಡಿದು ಆಡಳಿತದ ಪ್ರತಿ ಹಂತದಲ್ಲಿಯೂ ಸುಧಾರಣೆ ತರುವ ಭರವಸೆ ನೀಡಿದ್ದರು. ಈ ನಿಟ್ಟಿನಲ್ಲಿ ಸರ್ಕಾರ ಕೆಲ ಹೆಜ್ಜೆಗಳನ್ನು ಇರಿಸಿದೆ. ಓಬೀರಾಯನ ಕಾಲದ ಕಾನೂನು ರದ್ದು ದೇಶದಲ್ಲಿ ಹಳೆಯ ಅನವಶ್ಯಕ ಕಾಯ್ದೆಗಳಿಂದ ಕೋರ್ಟ್ ಖಟ್ಲೆಗಳಲ್ಲಿ ವಿಳಂಬವಾಗುತ್ತದೆ. ಈ ಕಾರಣದಿಂದ ಸುಮಾರು 3 ಸಾವಿರ ...