ಯಾವ ತಲೆ ಹೇಗೆ ವರ್ತಿಸುತ್ತಿದೆ ಗೊತ್ತೇ?, ವಾಷಿಂಗ್ಟನ್: ಹಲವು ತಲೆಗಳ ಹಾವುಗಳನ್ನು ಭಾರತೀಯ ಪುರಾಣಗಳಲ್ಲಿ ಕೇಳಿದ್ದೇವೆಯೇ ಹೊರತು ನೋಡಿದ್ದು ವಿರಳ. ಆದರೆ, ಆಂಥ ಹಾವುಗಳು ವಾಸ್ತವದಲ್ಲಿಯೂ ಇವೆ ಎಂಬುದು ಈಗ ಗೊತ್ತಾಗಿದೆ. ವರ್ಜೀನಿಯಾದಲ್ಲಿ ಸಿಕ್ಕ ಎರಡು ತಲೆಯ ಹಾವು ಈಗ ಜಗತ್ತಿನ ಅಚ್ಚರಿಗೆ ಕಾರಣವಾಗಿದೆ.
ಕಾಪರ್ಹೆಡ್ ಎಂಬ ಅತ್ಯಂತ ವಿಷಕಾರಿ ಪ್ರಬೇಧಕ್ಕೆ ಸೇರಿದ ಹಾವಿನಲ್ಲಿ ಇಂಥ ವಿಸ್ಮಯ ಕಂಡು ಬಂದಿದ್ದು, ಎರಡು ವಾರಗಳ ಹಿಂದೆ ವರ್ಜೀನಿಯಾದಲ್ಲಿ ಪತ್ತೆಯಾಗಿದೆ. ಪರಿಸರ ತಜ್ಞ ಜೆಡಿ ಕ್ಲಿಯೋಫರ್ ಅವರು ಅದರ ಚಿತ್ರಗಳನ್ನು, ವಿಡಿಯೋಗಳನ್ನು ಫೇಸ್ಬುಕ್ನಲ್ಲಿ ಪ್ರಕಟಿಸಿದ್ದಾರೆ.
ವಿರಳಾತಿ ವಿರಳ ಎನ್ನಬಹುದಾದ ಈ ವಿಚಿತ್ರ ಹಾವನ್ನು ಸದ್ಯ ಜೀವ ತಳಿ ತಜ್ಞರು ಅಧ್ಯಯನಕ್ಕಾಗಿ ಕೊಂಡೊಯ್ದಿದ್ದಾರೆ.
ಇದಕ್ಕೂ ಮೊದಲು ದೇಹರಚನಾ ತಜ್ಞರು ಈ ಹಾವನ್ನು ಅಧ್ಯಯನ ಮಾಡಿದ್ದರು. ಅದರಂತೆ, ಈ ಹಾವಿನ ಎಡ ತಲೆಯಲ್ಲಿ ಅನ್ನನಾಳದ ವ್ಯವಸ್ಥೆ ಹೆಚ್ಚು ಅಭಿವೃದ್ಧಿ ಹೊಂದಿದೆ. ಆದರೆ, ಬಲ ತಲೆಯಲ್ಲಿ ಗಂಟಲಿನ ರಚನೆ ಅತ್ಯುತ್ತಮವಾಗಿದ್ದು, ಆಹಾರ ಸೇವಿಸಲು ಶಕ್ತವಾಗಿದೆ. ಹೀಗಾಗಿ ಒಂದು ತಲೆ ಆಹಾರ ಸೇವಿಸುವ ಕಾರ್ಯವನ್ನು ಮಾಡಿದರೆ, ಇನ್ನೊಂದು ತಲೆ ಆಹಾರವನ್ನು ದೇಹಕ್ಕೆ ರವಾನಿಸುವ ಕೆಲಸ ಮಾಡುತ್ತಿದೆ. ಆಹಾರ ಸೇವಿಸಲು ಬಲ ತಲೆ ಯೋಗ್ಯವಾಗಿದ್ದರೂ, ದೇಹದ ಮೇಲೆ ಎಡ ತಲೆ ಪ್ರಾಬಲ್ಯ ಪಡೆದುಕೊಂಡಿದೆ. ಈ ಸಂಗತಿ ತಜ್ಞರ ಅಚ್ಚರಿಗೂ ಕಾರಣವಾಗಿದೆ.
(function(d, s, id) { var js, fjs = d.getElementsByTagName(s)[0]; if (d.getElementById(id)) return; js = d.createElement(s); js.id = id; js.src = 'https://connect.facebook.net/kn_IN/sdk.js#xfbml=1&version=v3.1'; fjs.parentNode.insertBefore(js, fjs);}(document, 'script', 'facebook-jssdk'));
JD Kleopfer, ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಗುರುವಾರ, ಸೆಪ್ಟೆಂಬರ್ 20, 2018
ಎಡ ತಲೆಯು ಬಲ ತಲೆಗಿಂತಲೂ ಹೆಚ್ಚು ಕ್ರಿಯಾಶೀಲವಾಗಿದ್ದು, ಪ್ರಚೋಧನೆಗಳಿಗೆ ಹೆಚ್ಚು ಸ್ಪಂದಿಸುತ್ತದೆ. ಈ ಹಾವಿನಲ್ಲಿ ಕಂಡು ಬಂದಿರುವುದು ಒಂದೇ ಹೃದಯ ಮತ್ತು ಒಂದೇ ಶ್ವಾಸ ರಚನೆ ಮಾತ್ರ.
ಅಧ್ಯಯನದ ನಂತರ ಈ ಹಾವನ್ನು ತಜ್ಞರು ಮತ್ತು ಅಧಿಕಾರಿಗಳು ಮೃಗಾಲಯಕ್ಕೆ ರವಾನಿಸಿ, ಸಾರ್ವಜನಿಕರ ಪ್ರದರ್ಶನಕ್ಕೆ ನೀಡುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ವರ್ಜೀನಿಯಾದ ವೂಡ್ಬ್ರಿಡ್ಜ್ ಎಂಬಲ್ಲಿ ಮಹಿಳೆಯೊಬ್ಬರಿಗೆ ಈ ಹಾವು ಮೊದಲಬಾರಿಗೆ ಪೊದೆಯೊಂದರಲ್ಲಿ ಕಾಣಿಸಿಕೊಂಡಿತ್ತು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ