ಐಪಿಸಿ ಸೆಕ್ಷನ್ 497, ಸಿಆರ್ಪಿಸಿ ಸೆಕ್ಷನ್ 198(2) ರದ್ದುಗೊಳಿಸಿದ ಸುಪ್ರೀಂ >>
ನವದೆಹಲಿ: ವಿವಾಹೇತರ ಸಂಬಂಧ ಹೊಂದುವುದು ಅಪರಾಧ ಎಂಬ 158 ವರ್ಷಗಳ ಹಳೆಯ ಐಪಿಸಿ ಸೆಕ್ಷನ್ 497ನ್ನು (ಅಡಲ್ಟರಿ ಕಾಯ್ದೆ) ಸುಪ್ರೀಂಕೋರ್ಟ್ ಗುರುವಾರ ರದ್ದುಪಡಿಸಿದೆ. ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾ. ಖಾನ್ವಿಲ್ಕರ್, ನ್ಯಾ. ಆರ್.ಎಫ್. ನಾರಿಮನ್, ನ್ಯಾ. ಚಂದ್ರಚೂಡ್ ಹಾಗೂ ನ್ಯಾ. ಇಂದೂ ಮಲ್ಹೊತ್ರಾ ಅವರಿದ್ದ ಪಂಚಸದಸ್ಯ ಪೀಠ ಮಹತ್ವದ ತೀರ್ಪು ನೀಡಿದೆ. ‘ವಿವಾಹೇತರ ಸಂಬಂಧ ಹೊಂದಲು ಪತ್ನಿಗೆ ಪತಿಯ ಒಪ್ಪಿಗೆ ಅಗತ್ಯ. ಪತ್ನಿ ಪತಿಯ ಸ್ವತ್ತು ಎಂಬ ಐಪಿಸಿ 497 ಮತ್ತು ಸಿಆರ್ಪಿಸಿಯ ಸೆಕ್ಷನ್ 198 ಎರಡೂ ಕೂಡ ಅಸಾಂವಿಧಾನಿಕ’ ಎಂದಿದೆ.
ಸುಪ್ರೀಂ ಹೇಳಿದ್ದೇನು?
ವಿವಾಹೇತರ ಸಂಬಂಧ ಕಾಯ್ದೆ ಪ್ರಕಾರ, ಪತಿಯೇ ಒಡೆಯ ಹಾಗೂ ಪತ್ನಿ ಆತನ ಸ್ವತ್ತು ಎನ್ನುತ್ತದೆ. ಇದು ಮಹಿಳೆಯ ಘನತೆಗೆ ಧಕ್ಕೆ ತರುತ್ತದೆ.
ವಿವಾಹೇತರ ಸಂಬಂಧ ಅಪರಾಧವಲ್ಲ. ಆದರೆ ಈ ಕಾರಣಕ್ಕಾಗಿ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವುದು ಖಚಿತವಾದಲ್ಲಿ ಪತಿ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣ ದಾಖಲಿಸಬಹುದು.
ವಿವಾಹೇತರ ಸಂಬಂಧವನ್ನು ವಿಚ್ಛೇದನ ಪಡೆಯಲು ಪ್ರಮುಖ ಕಾರಣ ಎಂದು ಪರಿಗಣಿಸಲಾಗುವುದು
ಸಂತಸರಹಿತ ವೈವಾಹಿಕ ಜೀವನದ ಫಲವಾಗಿ ವಿವಾಹೇತರ ಸಂಬಂಧ ಏರ್ಪಡಬಹುದು.
ಚೀನಾ, ಜಪಾನ್, ಆಸ್ಟ್ರೇಲಿಯಾದಲ್ಲಿ ವಿವಾಹೇತರ ಸಂಬಂಧ ಅಪರಾಧವಲ್ಲ.
ತಂದೆ ನೀಡಿದ್ದ ತೀರ್ಪು ತಳ್ಳಿಹಾಕಿದ ಮಗ!
1985ರಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಸೌಮಿತ್ರಿ ವಿಷ್ಣು ಎಂಬುವವರು ದಾವೆ ಹೂಡಿದ್ದರು. ಈ ಪ್ರಕರಣದಲ್ಲಿ ನ್ಯಾ. ಯಶವಂತ್ ವಿಷ್ಣು ಚಂದ್ರಚೂಡ್ ಸೆಕ್ಷನ್ 497 ಸಾಂವಿಧಾನಿಕ ಮಾನ್ಯತೆ ಎತ್ತಿಹಿಡಿದಿದ್ದರು. ಒಂದು ನಿರ್ದಿಷ್ಟ ವರ್ಗದಲ್ಲಿ ವಿವಾಹೇತರ ಸಂಬಂಧವನ್ನು ಅಪರಾಧವಾಗಿ ಪರಿಗಣಿಸುವುದು ಸಮಾಜದ ಸ್ವಾಸ್ಥ್ಯದ ದೃಷ್ಟಿಯಿಂದ ಅವಶ್ಯಕ ಎಂದು ಅವರು ಅಭಿಪ್ರಾಯಪಟ್ಟಿದ್ದರು. ಅವರ ಪುತ್ರ, ಪಂಚಸದಸ್ಯ ಪೀಠದಲ್ಲಿದ್ದ ನ್ಯಾ. ಡಿ.ವೈ. ಚಂದ್ರಚೂಡ್ ಈಗ ಸೆಕ್ಷನ್ 497 ವಿರುದ್ಧವಾಗಿ ತೀರ್ಪು ಪ್ರಕಟಿಸಿದ್ದಾರೆ.
ಕೇಂದ್ರದ ನಿಲುವೇನಿತ್ತು?
ಕಾಯ್ದೆಯನ್ನು ಉಳಿಸಿಕೊಳ್ಳುವ ಬಗ್ಗೆ ಸರ್ಕಾರ ಒಲವು ತೋರಿತ್ತು. ಲಿಂಗ ಸಮಾನತೆಗಾಗಿ ಕಾಯ್ದೆಯಲ್ಲಿ ಸೂಕ್ತ ತಿದ್ದುಪಡಿ ತರಲು ಸಾಧ್ಯವಿದೆ. ಅನೈತಿಕ ಸಂಬಂಧದಿಂದ ಪತ್ನಿಯು ಮಾನಸಿಕ, ದೈಹಿಕ ಘಾಸಿಗೆ ಒಳಗಾಗುತ್ತಾಳೆ. ಕಾಯ್ದೆ ರದ್ದತಿ ಮಕ್ಕಳು ಮತ್ತು ಕುಟುಂಬದ ಮೇಲೂ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಸರ್ಕಾರ ಕೋರ್ಟ್ನಲ್ಲಿ ವಾದಿಸಿತ್ತು. ಅರಿವಿದ್ದು ಕೂಡ ಬೇಕೆಂದಲೋ, ಅನಿವಾರ್ಯತೆಯಿಂದಲೋ ಅನೈತಿಕ ಸಂಬಂಧಗಳು ಏರ್ಪಡುತ್ತವೆ. ವೈವಾಹಿಕ ಜೀವನ ಭಾರತದ ಸಾಮಾಜಿಕ ವ್ಯವಸ್ಥೆಯ ಬೆನ್ನುಲುಬು ಎಂದು ಸರ್ಕಾರ ಹೇಳಿತ್ತು.
ಐಪಿಸಿ ಸೆಕ್ಷನ್ 497
158 ವರ್ಷಗಳ ಹಿಂದಿನ ಕಾಯ್ದೆ ಇದು. ‘ಬೇರೊಬ್ಬನ ಪತ್ನಿ ಜತೆ ಒಬ್ಬ ಪುರುಷ ಆಕೆಯ ಪತಿಯ ಸಹಮತವಿಲ್ಲದೆ ದೈಹಿಕ ಸಂಪರ್ಕ ಸಾಧಿಸಿದಲ್ಲಿ ಅಂಥ ಕೃತ್ಯ ಅಪರಾಧ ಎನಿಸುತ್ತದೆ. ಕಾಯ್ದೆ ಪ್ರಕಾರ ವಿವಾಹಿತೆಯೊಂದಿಗೆ ದೈಹಿಕ ಸಂಪರ್ಕ ಸಾಧಿಸಿದಾತ ಅಪರಾಧಿ ಎನಿಸುತ್ತಾನೆ. ಅಪರಾಧಿಗೆ 5 ವರ್ಷ ಜೈಲು ಶಿಕ್ಷೆ ವಿಧಿಸಬಹುದಾಗಿದೆ. ಆದರೆ ಸಂಬಂಧ ಬೆಳೆಸಿದ ಮಹಿಳೆಗೆ ಶಿಕ್ಷೆ ಅನ್ವಯವಾಗುವುದಿಲ್ಲ. ಅತ್ಯಾಚಾರಕ್ಕೆ ಹೊರತಾದ ಕೃತ್ಯಕ್ಕೆ ಮಾತ್ರ ಅನ್ವಯ.
ಸಿಆರ್ಪಿಸಿ 198(2)
ವಿವಾಹೇತರ ಸಂಬಂಧ ಹೊಂದಿದ ಪುರುಷನ ವಿರುದ್ಧ ಆತನ ಪತ್ನಿ ಅಥವಾ ಸಂಬಂಧ ಹೊಂದಿದ ಮಹಿಳೆಯ ಪತಿ ಆರೋಪ ಹೊರಿಸಿ ಪ್ರಕರಣ ದಾಖಲಿಸಲು ಅನುವು ಮಾಡಿಕೊಡುತ್ತದೆ.
ಅಡಲ್ಟರಿ ಎಂದರೆ ತನ್ನ ಪತ್ನಿಯಲ್ಲದ ಮಹಿಳೆಯೊಂದಿಗೆ ಮತ್ತೊಬ್ಬ ವಿವಾಹಿತ ಪುರುಷನಿಂದ ದೈಹಿಕ ಸಂಪರ್ಕ. ಇಬ್ಬರ ಸಮ್ಮತಿಯಿಂದ ನಡೆದರೆ ಅದು ಅಡಲ್ಟರಿ.
ಅನೈತಿಕ ಸಂಬಂಧ ಇಟ್ಟುಕೊಂಡರೆ ಇನ್ನು ಮುಂದೆ ಪತ್ನಿಗೂ ಕಠಿಣ ಶಿಕ್ಷೆ?
ವಿವಾಹ ಪಾವಿತ್ರ್ಯ ಕಾಪಾಡಲು ಅಕ್ರಮ ಸಂಬಂಧದ ವಿರುದ್ಧದ ಶಿಕ್ಷೆ ಬೇಕು
ದಾಂಪತ್ಯವನ್ನು ಮುರಿಯುತ್ತಿದೆ ಅಕ್ರಮ ಸಂಬಂಧ,
ಹದ ತಪ್ಪುತ್ತಿದೆ ದಾಂಪತ್ಯ,
ವಿವಾಹೇತರ ಸಂಬಂಧದ ಬಗ್ಗೆ ಎಚ್ಚರಿಕೆ ಇರಲಿ

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ