ನನಗೆ ತುಟಿ ಮತ್ತು ಬಾಯಿಯ ಸುತ್ತಲೂ ಚರ್ಮದ ತೊಂದರೆ (ಮೊಡವೆ ರೀತಿ) ಕಾಡುತ್ತಿದೆ. ಯಾವ ಆಸನ ಮತ್ತು ಮುದ್ರೆಯನ್ನು ಅಭ್ಯಾಸ ಮಾಡಿದರೆ ಒಳಿತು?
| ವಿಟ್ಠಲ್ ಹಾಸನ
ದೇಹದ ಆರೋಗ್ಯದಲ್ಲಿ ಚರ್ಮದ ಬಣ್ಣ ಗುಣ ಕಾಂತಿ ಇತ್ಯಾದಿಗಳ ಪಾತ್ರ ಪ್ರಮುಖವಾದದು. ಚರ್ಮದ ಸಂರಕ್ಷಣೆ ನಿರ್ವಹಣೆಯಲ್ಲಿ ಅಗತ್ಯ ಕಾಳಜಿ ವಹಿಸಬೇಕು. ಇದಕ್ಕಾಗಿ ಉತ್ತಮ ಆಹಾರ, ದೇಹದ ಶುಚಿತ್ವ ಹಾಗೂ ಯೋಗಮುದ್ರೆಗಳನ್ನು ಅಳವಡಿಸಿಕೊಳ್ಳಬೇಕು. ಚರ್ಮದ ಹೊಳಪಿಗೆ ಯೋಗಮುದ್ರೆಗಳು ಸಹಕಾರಿಯಾಗುತ್ತದೆ.
ಸೂಚಿತ ಆಸನಗಳು: ಅರ್ಧಚಕ್ರಾಸನ, ಪಾದಹಸ್ತಾಸನ, ಶಶಾಂಕಾಸನ, ಅರ್ಧ ಉಷ್ಟ್ರಾಸನ, ಸರ್ವಾಂಗಾಸನ, ಅಧೋಮುಖ ಶ್ವಾನಾಸಾನ, ಶವಾಸನ.
ಪ್ರಾಣಾಯಾಮ: ನಾಡೀಶುದ್ಧಿ ಪ್ರಾಣಾಯಾಮ, ಶೀತಲೀ ಪ್ರಾಣಾಯಾಮ.
ಮುದ್ರೆಗಳು: ಪ್ರಾಣಮುದ್ರೆ, ಚಿನ್ಮುದ್ರೆ, ವರುಣಮುದ್ರೆ, ಪೃಥ್ವಿಮುದ್ರೆ, ಭ್ರಮರಮುದ್ರೆ. ಈ ಮುದ್ರೆಗಳಿಂದ ಮೂಳೆ, ಚರ್ಮ, ಕೂದಲು, ಉಗುರು, ಮಾಂಸಖಂಡಗಳು ಹಾಗೂ ದೈಹಿಕ ಕ್ಷಮತೆ ಹೆಚ್ಚುತ್ತದೆ. ಅಲರ್ಜಿಯ ನಿಯಂತ್ರಣವಾಗುತ್ತದೆ. ಪೌಷ್ಟಿಕಾಂಶಯುಕ್ತ ಆಹಾರಸೇವನೆ, ದಿನಚರಿಗಳು ದೇಹ-ಮನಸ್ಸುಗಳನ್ನು ಪ್ರಫುಲ್ಲವಾಗಿಡುತ್ತವೆ. ಇದು ಸಹ ಆರೋಗ್ಯಪಾಲನೆಗೆ ಆಧಾರ.
ಸಾಫ್ಟ್ವೇರ್ ಉದ್ಯೋಗಿಯಾದ ನನಗೆ ಬಹಳ ಸಮಯ ಕಂಪ್ಯೂಟರ್ ಮುಂದೆ ಕುಳಿತೇ ಕೆಲಸ ಮಾಡಬೇಕಾಗುತ್ತದೆ. ಆಗಾಗ ಬೆನ್ನುನೋವು ಬರುತ್ತದೆ. ಸಿಗುವ ಅಲ್ಪಾವಧಿಯಲ್ಲಿ ಯಾವ ಆಸನ ಮಾಡಿದರೆ ಉತ್ತಮ?
| ಅವಿನಾಶ್ ಬೆಂಗಳೂರು
ಸರಳಯೋಗ: ಬೆಳಗ್ಗೆಯಿಂದ ಸಂಜೆಯವರೆಗೆ ಕಂಪ್ಯೂಟರ್ನಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಕೆಲವು ಆರೋಗ್ಯ ಸಮಸ್ಯೆಗಳು ಕಂಡುಬರುವುದು ಸಹಜ. ಈ ಸಂದರ್ಭದಲ್ಲಿ ಸಹಜವಾಗಿ ಕಣ್ಣಿಗೆ ಆಯಾಸ, ಕುತ್ತಿಗೆ-ಭುಜಗಳ ಸೆಳೆತ, ಬೆನ್ನು ಹಾಗೂ ಸೊಂಟನೋವು, ತಲೆನೋವು ಇತ್ಯಾದಿ ಸಮಸ್ಯೆಗಳು ಕಂಡುಬರುತ್ತವೆ. ಕಂಪ್ಯೂಟರ್ ಎದುರು ಸತತವಾಗಿ ಕುಳಿತು ಕೆಲಸ ಮಾಡುವವರು ಕುಳಿತಲ್ಲೇ ಯೋಗದ ಕೆಲವು ಸರಳ ವಿಧಾನಗಳನ್ನು ಅನುಸರಿಸಿದರೆ ವಿಶಾಂತ್ರಿಯೂ ದೊರೆಯುತ್ತದೆ, ಆರೋಗ್ಯಕ್ಕೂ ಒಳ್ಳೆಯದು. ಯೋಗವನ್ನು ಗುರು ಮುಖೇನ ಕಲಿತು ಶಿಸ್ತುಬದ್ಧವಾಗಿ ಕ್ರಮತ್ತಾಗಿ ನಿತ್ಯ ಅಭ್ಯಾಸ ನಡೆಸಿದರೆ ದೈಹಿಕ ಆರೋಗ್ಯ ಹೆಚ್ಚಿ ತಾಳ್ಮೆ, ಶಾಂತಿ ಒದಗುತ್ತದೆ.
ಸರಳ ಕ್ರಿಯೆಗಳು: ಕುರ್ಚಿಯಲ್ಲಿ ಕುಳಿತಲ್ಲೆ ತೋಳುಗಳನ್ನು ತಲೆಯ ಮೇಲ್ಭಾಗಕ್ಕೆ ನೇರವಾಗಿ ಎತ್ತಿ ಕೈ ಬೆರಳುಗಳನ್ನು ಪರಸ್ಪರ ಹೆಣೆದುಕೊಂಡು ನಿಟ್ಟುಸಿರು ಬಿಡುವುದು. ಎರಡು ಸಲ ಹೀಗೆ ಮಾಡಿ. ಕುತ್ತಿಗೆ ಮತ್ತು ಭುಜಗಳನ್ನು ತಿರುಗಿಸಿ. ನೋವು ಶಮನ ಸಾಧ್ಯ. ಕುಳಿತಲ್ಲೇ ಬೆನ್ನು, ಕುತ್ತಿಗೆ, ಶಿರಸ್ಸನ್ನು ನೇರ ಮಾಡಿ, ದೇಹ ಸಡಿಲ ಮಾಡಿಕೊಂಡು, ಕಣ್ಣುಗಳನ್ನು ಮೃದುವಾಗಿ ಮುಚ್ಚಿಕೊಂಡು ಮೂರರಿಂದ ಆರು ಬಾರಿ ಸುಖ ಪ್ರಾಣಾಯಾಮ ಮಾಡಿ. ನೋವು ಮಾಯವಾಗುತ್ತದೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ