ವಿಷಯಕ್ಕೆ ಹೋಗಿ

**ಜ್ಞಾನ ಕಾರಂಜಿ**::: ಹೊಯ್ಸಳರು

ಇವರ ರಾಜಧಾನಿ - ಸೊಸೆವೂರು
ರಾಜದಾನಿಯನ್ನು ಸೋಸೆಯೂರಿನಿಂದ ಹಳೇಬಿಡಿಗೆ ವರ್ಗಾಯಿಸಿದವರು - ವಿನಯಾಧಿತ್ಯ
ಹಳೇಬಿಡಿಗೆ ದ್ವಾರ ಸಮುದ್ರವೆಂದು ನಾಮಕರಣ ಮಾಡಿದವರು - ವಿನಯಾದತ್ಯ
🌓1 ನೇ ಬಲ್ಲಾಳವಿಷ್ಣುವರ್ಧನ
ರಾಜಧಾನಿಯನ್ನು ಬೇಲೂರಿಗೆ ಬದಲಾಯಿಸಿದವರು - 1 ನೇ ಬಲ್ಲಾಳವಿಷ್ಣುವರ್ಧನ
ಹೊಯ್ಸಳ ವಂಶದ ಅತ್ಯಂತ ಶ್ರೇಷ್ಠ ದೊರೆ
ಇವನ ಮೂಲ ಹೆಸರು - ಬಿಟ್ಟಿದೇವ
ಇವನು ಶ್ರೀರಾಮಾನುಜಚಾರ್ಯರಿಗೆ ಆಶ್ರಯ ನೀಡಿದನು
ರಾಜಧಾನಿಯನ್ನು ಬೇಲೂರಿನಿಂದ ದ್ವಾರ ಸಮುದ್ರಕ್ಕೆ ಬದಲಾಯಿಸಿದನು
ಅಧಿಕಾರಕ್ಕೆ ಬರುವ ಮುನ್ನ - ನಂಜನಗೂಡಿನ ಪ್ರಾಂತ್ಯಾಧಿಕಾರಿಯಾಗಿದ್ದನು
ಪ್ರಥಮ ದಂಡಯಾತ್ರೆಯನ್ನು ಚೋಳರ ಅಧಿವಶದಲ್ಲಿದ್ದ ಗಂಗವಾಡಿಗೆ ಹಾಕುವ ಮೂಲಕ ಆರಂಭಿಸಿದನು
ಈತನ ದಂಡನಾಯಕ - ಗಂಗರಾಜ
ಈತನ ಬಿರುದುಗಳು - ತಲಕಾಡುಗೊಂಡ , ವೀರಗಂಗ ಹಾಗೂ ಕಾಂಚಿಗೊಂಡ , ಉಚ್ಚಂಗಿಗೊಂಡ
ಈತನ ಪತ್ನಿ - ಚಂದ್ರಲಾದೇವಿ , ಶಾಂತಲಾದೇವಿ ಹಾಗೂ ಲಕ್ಷ್ಮೀದೇವಿ
ಈತನ ಉಪರಾಜಧಾನಿ - ಹಾನಗಲ್ ಹಾಗೂ ಬಂಕಾಪುರ
ಕ್ರಿ,ಶ.1137 ರಲ್ಲಿ “ ತುಲಾಪುರುಷ ” ಎಂಬ ಸಮಾರಂಭ ಏರ್ಪಡಿಸಿದನು
ಈತನ ಆಸ್ಥಾನ ಕವಿ - ಜೈನ ವಿದ್ವಾಂಸ ರಾಜಾಧಿತ್ಯ
ಧರ್ಮಾಮೃತ ಕೃತಿಯ ಕರ್ತೃ - ನಯನ ಸೇನ
🌓ಕಂತಿಎರಡನೇ ಬಲ್ಲಾಳ
“ ಅಭಿನವ ವಾಗ್ದೇವಿ ” ಎಂದು ಹೆಸರಾಗಿದ್ದವರು - ಕಂತಿಎರಡನೇ ಬಲ್ಲಾಳ
ಹೊಯ್ಸಳ ವಂಶದ - ಎರಡನೇ ಶ್ರೇಷ್ಠ ದೊರೆ59. ದಕ್ಷಿಣ ಚಕ್ರವರ್ತಿ - ಈತನ ಬಿರುದು
ಈತನನ್ನು ಹೊಯ್ಸಳ ವಂಶದ ಮೊದಲ ಸ್ವತಂತ್ರ ದೊರೆ ಎಂದು ಕರೆಯಲಾಗಿದೆ
ಈತನ ಬಿರುದುಗಳು - ಶನಿವಾರ ಸಿದ್ದಿ , ಗಿರಿದುರ್ಗಮಲ್ಲ , ಪಾಂಡ್ಯರಾಜ ನಿರ್ಮೂಲನ ಈ ಬಿರುದನ್ನು ಪಾಂಡ್ಯ ರನ್ನ ಸೋಲಿಸುವ ಮೂಲಕ ಪಡೆದುಕೊಂಡ
ಚೋಳರನ್ನ ಸದೆಬಡಿದು - “ ಚೋಳ ರಾಜ್ಯ ಪ್ರತಿಷ್ಠಾಪನಾಚಾರ್ಯ ” ಎಂಬ ಬಿರುದನ್ನ ಪಡೆದನು
ಈತನ ರಾಜಧಾನಿಗಳು - ದ್ವಾರಸಮುದ್ರ ಹಾಗೂ ಅರಸಿಕೆರೆ
ಹೊಯ್ಸಳರ ಕಾಲದಲ್ಲಿ ಅರಸಿಕೆರೆಗೆ ಇದ್ದ ಬಿರುದು - “ಭಂಡಾರ ವಾಡ ”
ಜನ್ನನಿಗೆ ಉಭಯ ಕವಿ ಚಕ್ರವರ್ತಿ ಎಂಬ ಬಿರುದನ್ನು ನೀಡಿದವರು - 2 ನೇ ಬಲ್ಲಾಳ
ಈತನ ದಂಡನಾಯಕ - ಎರೆಯಣ್ಣ
ಪಾಂಡ್ಯಕುಲ ಸಂರಕ್ಷಾಣ ದಕ್ಷಿಮ ಭುಜ ಎಂಬ ಬಿರುದನ್ನು ಧರಿಸಿದ್ದ ದೊರೆ - ಸೋಮೇಶ್ವರ
🌓ಮೂರನೇ ಬಲ್ಲಾಳ
ಹೊಯ್ಸಳರ ಕೊನೆಯ ದೊರೆ - ಮೂರನೇ ಬಲ್ಲಾಳ
ಹಂಪೆಯ ಹತ್ತಿಯ ವಿಜಯ ವಿರೂಪಾಕ್ಷ ಪುರ ಎಂಬ ಹೊಸ ರಾಜಧಾನಿಯನ್ನು ಸ್ಥಾಪಿಸಿದ ದೊರೆ - ಮೂರನೇ ಬಲ್ಲಾಳಹೊಯ್ಸಳರ ಆಡಳಿತ
ಗರುಡ - ರಾಜನ ವಿಶೇಷ ಅಂಗರಕ್ಷಕರು
ಪಂಚ ಪ್ರಧಾನ ಸಭೆ - ಹೊಯ್ಸಳರ ಮಂತ್ರಿ ಪರಿಷತ್ತು
ನಾಡ ಹೆಗ್ಗಡೆ - ಜಿಲ್ಲೆಯ ಮುಖ್ಯ ಅಧಿಕಾರಿ
ರಾಮಚರಿತ ಪುರಾಣದ ಇನ್ನೊಂದು ಹೆಸರು - ಪಂಪ ರಾಮಯಣ
ಕವಿತಾ ಮನೋಹರ ಎಂಬ ಬಿರುದು ಹೊಂದಿದ್ದ ಕವಿ - ನಾಗಚಂದ್

ಕಂತಿಯು ಬರೆದ ಕೃತಿ - ಪಂಪನ ಸಮಸ್ಯೆಗಳು
ವಿಷ್ಣುವರ್ಧನನ ಆಸ್ಥಾನದ ಕವಿ - ರಾಜಾಧಿತ್ಯ
ರಗಳೆಯ ಕವಿ ಎಂದು ಪ್ರಸಿದ್ದರಾದವರು - ಹರಿಹರ
ಕಬ್ಬಿಗರ ಕಾವ್ಯ ಕೃತಿಯ ಕರ್ತೃ - ಆಂಡಯ್ಯ
ಕನ್ನಡದಲ್ಲಿ ಬ್ರಾಹ್ಮಮ ವರ್ಗದ ಮೊಟ್ಟ ಮೊದಲನೆಯ ಪ್ರಸಿದ್ದ ಕವಿ - ರುದ್ರಭಟ್ಟ
ರುದ್ರಭಟ್ಟನ ಕೃತಿ - ಜಗನ್ನಾಥ ವಿಜಯ
ಬೇಲೂರಿನ ಚೆನ್ನಕೇಶವ ದೇವಾಲಯದ ನಿರ್ಮಾತೃ - ವಿಷ್ಣುವರ್ಧನ
ಬೇಲೂರಿನ ಚೆನ್ನಕೇಶವ ದೇವಾಲಯದ ಅತಿ ಸುಂದರ ಕಂಬಗಳು - ನರಸಿಂಹ ಕಂಬ ಹಾಗೂ ಮೋಹಿನಿ ಕಂಬ
ಬೇಲೂರಿನ ಚೆನ್ನಕೇಶವ ದೇವಾಲಯದ ನವರಂಗ ಮೇಲ್ಛಾವಣಿಯನ್ನು - ಭುವನೇಶ್ವರಿ ಎಂದು ಕರೆಯಲಾಗಿದ
ವಾಸ್ತುಶಿಲ್ಪದ ಚಾಲುಕ್ಯ ಹೊಯ್ಸಳ ಪಂಥದ ಅತ್ಯುನ್ನತ ಸಾಧನೆ ಎಂದು ಬಣ್ಣಿಸಿರುವ ದೇವಾಲಯ - ಹಳೇಬಿಡಿನ ಹೊಯ್ಸಳೇಶ್ವರ ದೇವಾಲಯ
ಹಳೇಬಿಡಿನ ಹೊಯ್ಸಳೇಶ್ವರ ದೇವಾಲಯದ ನಿರ್ಮಾತೃ ವಿಷ್ಣುವರ್ಧನನ ದಂಡನಾಯಕ ಕೇತಮಲ್ಲ ( 1121 )
ಹಳೇಬಿಡಿನ ಹೊಯ್ಸಳೇಶ್ವರ ದೇವಾಲಯದ ಶಿಲ್ಪಿ - ಕೇದಾರೋಜ
ಫರ್ಗ್ಯೂಸನ್ ರವರು ಭಾರತೀಯ ವಾಸ್ತುಶಿಲ್ಪದ ಒಂದು ರತ್ನ ಎಂದು ಬಣ್ಣಿಸಿರುವ ದೇವಾಲಯ - ಹಳೇಬಿಡಿನ ಕೇದಾರೇಶ್ವರ ದೇವಾಲಯ .
ಸೋಮನಾಥ ಪುರದಲ್ಲಿರುವ ಕೇಶವ ದೇವಾಲಯದ ನಿರ್ಮಾತೃ - ಮೂರನೇ ನರಸಿಂಹನ ದಂಡ ನಾಯಕ ಸೋಮನಾಥ ( ಕ್ರಿ.ಶ. 1268 ) .
ಬ್ರಿಟಿಷ್ ಪುರಾತತ್ವ ಇಲಾಖೆಯವರು Wedding Cake ಎಂದು ಕರೆದಿರುವ ದೇವಾಲಯ - ಸೋಮನಾಥಪುರದ ಕೇಶವ ದೇವಾಲಯ .
ಸೋಮನಾಥಪುರದ ಕೇಶವ ದೇವಾಲಯ - ಬಳಪದ ಕಲ್ಲಿನಲ್ಲಿ ನಿರ್ಮಾಣವಾಗಿದೆ
ಮೆಕ್ಕೆ ಜೋಳವನ್ನ ಕಂಡು ಹಿಡಿದವರು - ಅಮೆರಿಕಾದವರು
ವಿಷ್ಣುವರ್ಧನನ ರಾಣಿ - ಶಾಂತಲೆ ( ಬಿರುದು - ನೃತ್ಯವಿಶಾರದೆ )
ಕವಿರಾಜ ಮಲ್ಲ ಎಂದೇ ಹೆಸರಾದವರು - ನೇಮಿಚಂದ್ರ
ಕನ್ನಡದ ಮೊದಲ ವ್ಯಾಕರಮ ಗ್ರಂಥ - ಕೇಶಿರಾಜನ , ಶಬ್ದಮಣಿದರ್ಪಣ
ಆರನೇ ವಿಕ್ರಮಾಧಿತ್ಯನ ಗುರು - ವಿಜ್ಞಾನೇಶ್ವರ
ಬೇಲೂರಿನ ಕಪ್ಪೆ ಚೆನ್ನಿಗ ದೇವಸ್ಥಾವನ್ನ ಕಟ್ಟಿಸಿದವರು - ಶಾಂತಲೆ
ವಿಷ್ಣುವರ್ಧನನು ವೈಷ್ಣವ ಮತ ಸ್ವೀಕರಿಸಲು ಕಾರಣ ಕರ್ತರು - ಶ್ರೀರಾಮಾನುಜಚಾರ್ಯರು98.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

**ಜ್ಞಾನ ಕಾರಂಜಿ**::: ಬೇನಾಮಿ ಆಸ್ತಿ ಪ್ರಕರಣ ವಿಲೇವಾರಿಗೆ ನ್ಯಾಯಾಧಿಕರಣ,

ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್​ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್​ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್​ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...

.. ಭಾರತೀಯ ಕಾವ್ಯ ಮೀಮಾಂಸೆ

ಭಾರತೀಯ ಕಾವ್ಯ ಮೀಮಾಂಸೆ ಭಾರತೀಯ ಕಾವ್ಯಮೀಮಾಂಸೆಗೆ ಸುಮಾರು ಎರಡು ಸಾವಿರ ವರ್ಷಗಳ ದೀರ್ಘ ಇತಿಹಾಸವಿದೆ. ಕವಿ ಮತ್ತು ಕಾವ್ಯದ ಲಕ್ಷಣಗಳು, ಕಾವ್ಯ ಪ್ರಭೇದಗಳು. ಕಾವ್ಯಾಲಂಕಾರಗಳು, ಕಾವ್ಯದ ವಸ್ತು ಇತ್ಯಾದಿ ಕಾವ್ಯನಿರ್ಮಿತಿಗೆ ಸಂಬಂಧಿಸಿದ ಮಹತ್ತ್ವದ ಅಂಶಗಳ ಶಾಸ್ತ್ರೀಯ ನಿರೂಪಣೆಯೇ ಕಾವ್ಯನಿಮೀಮಾಂಸೆ. ಇದನ್ನು ಅಲಂಕಾರ ಶಾಸ್ತ್ರವೆಂದೂ ಕರೆಯಲಾಗುತ್ತದೆ. ಪ್ರಾಚೀನ ಯುಗದಲ್ಲಿ ಅಲಂಕಾರಶಾಸ್ತ್ರವೆಂದರೆ ಪ್ರಧಾನವಾಗಿ ನಾಟ್ಯ ನೃತ್ಯ ಇತ್ಯಾದಿ ರಂಗ ಸಂಸ್ಕರಣ ಅಥವಾ ನಾಟ್ಯಕಲೆಯನ್ನು ಸರ್ವಾಂಗ ಸುಂದರವಾಗಿ ಮಾಡುವ ಒಂದು ಪರಿಷ್ಕಾರ ಶಾಸ್ತ್ರವಾಗಿದ್ದಿತು. ಕಾಲಕ್ರಮೇಣ ಇದು ಕಾವ್ಯಕಲೆಯನ್ನು ಪರಿಷ್ಕರಿಸುವ ಶಾಸ್ತ್ರವಾಗಿ ಪರಿಣಮಿಸಿತು. ಇದರ ಆರಂಭ ಯಾವಾಗಿ ಯಾರಿಂದ ಆಯಿತೆಂದು ಇತ್ಯರ್ಥಪಡಿಸುವುದು ಕಷ್ಟದ ಕೆಲಸ. ಸಾಹಿತ್ಯದಲ್ಲಿ ಸೌಂದರ್ಯೋಪಾಸನೆ ಪ್ರಾರಂಭವಾದಂದಿನಿಂದಲೂ ಪಂಡಿತರು ಮತ್ತು ವಿಮರ್ಶಕರು ಸಾಹಿತ್ಯದಲ್ಲಿ ಸೌಂದರ್ಯ ಅರಸಿ ಈ ಚಿತ್ತ ಸಂಸ್ಕರಣ ಶಾಸ್ತ್ರವನ್ನು ಬೆಳೆಸಿಕೊಂಡು ಬಂದಿದ್ದಾರೆ. ಕ್ರಿ. ಪೂ. 6ನೆಯ ಶತಮಾನದಲ್ಲಿದ ಯಾಸ್ಕಾಚಾರ್ಯ ಉಪಮೆ ರೂಪಕಗಳ ಬಗ್ಗೆ ಉಲ್ಲೇಖಸಿದ್ದಾನೆ. ಕ್ರಿ. ಪೂ. 5ನೆಯ ಶತಕದ ವೇಳೆಗೆ ಪಾಣಿನಿ ನಟರ ವಿಷಯ ಪ್ರಸ್ತಾಪಿಸಿದ್ದಾನೆ. ವೇದಗಳ ಕಾಲದಲ್ಲೂ ಉಪಮಾ ರೂಪಕಾದಿಗಳ ಪ್ರಯೋಗವಿದೆ. ಋಗ್ವೇದದಲ್ಲಿ ಕಂಡುಬರುವ ಯಮಯಮಿಯರ ಸಂವಾದ, ಊರ್ವಶೀ ಪುರೂರವರ ಸಂವಾದ_ಇವುಗಳಿಂದ ವೇದಕಾಲದಲ್ಲಿ ನಾಟಕದ ಅಂಕುರಾರ್ಪಣವಿದ್ದಂತಿದೆ....

**ಜ್ಞಾನ ಕಾರಂಜಿ**::: ನೀತಿ ಆಯೋಗ ಸ್ಥಾಪನೆ

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ಅಧಿಕಾರಕ್ಕೆ ಬಂದು ಮೇ 26ಕ್ಕೆ ನಾಲ್ಕು ವರ್ಷ. ಸರ್ಕಾರದ ಈ ಅವಧಿಯ ಪಯಣದಲ್ಲಿನ ಪ್ರಮುಖ ರಂಗಗಳ ಚಿತ್ರಣವನ್ನು ವಿಜಯವಾಣಿ ಸರಣಿಯಾಗಿ ಕಟ್ಟಿಕೊಡಲಿದ್ದು, ಅದರ ಎರಡನೇ ಭಾಗ ಇಲ್ಲಿದೆ. ನೆಹರು ಅವಧಿಯಲ್ಲಿ ರಚನೆಯಾಗಿದ್ದ ಯೋಜನಾ ಆಯೋಗವನ್ನು ರದ್ದುಗೊಳಿಸಿ 2015ರ ಜ.1ರಂದು ನೀತಿ ಆಯೋಗ ರಚಿಸಲಾಯಿತು. ಅಮೃತ್, ಡಿಜಿಟಲ್ ಇಂಡಿಯಾ, ಅಟಲ್ ಇನೋವೇಷನ್, ಸಂಚಾರ ದಟ್ಟಣೆ ನಿಯಂತ್ರಣ ಸೇರಿ ಕೆಲ ಯೋಜನೆಗಳ ನೇರ ಉಸ್ತುವಾರಿಯನ್ನು ನೀತಿ ಆಯೋಗ ವಹಿಸಿಕೊಂಡಿದೆ. ಪ್ರಧಾನಿ ಅಧ್ಯಕ್ಷತೆಯ ಈ ಆಯೋಗದಲ್ಲಿ ರಾಜ್ಯಗಳ ಹಣಕಾಸು ಸಚಿವರು ಸದಸ್ಯರಾಗಿರುತ್ತಾರೆ. 15 ವರ್ಷ ಹಾಗೂ 7 ವರ್ಷಗಳ ಪ್ರತ್ಯೇಕ ಗುರಿಯ ಯೋಜನೆಯ ಜತೆಗೆ, ವಾರ್ಷಿಕ ಕಾರ್ಯಕ್ರಮಗಳ ಬಗ್ಗೆ ಈ ಸಂಸ್ಥೆ ನಿಗಾ ಇಡಲಿದೆ. ಆಡಳಿತಕ್ಕೆ ಹೊಸ ಸ್ಪರ್ಶ ‘ಮಿನಿಮಮ್ ಗವರ್ನಮೆಂಟ್, ಮ್ಯಾಕ್ಸಿಮಮ್ ಗವರ್ನನ್ಸ್’ (ಕನಿಷ್ಠ ಸರ್ಕಾರ ಗರಿಷ್ಠ ಆಡಳಿತ) ಧ್ಯೇಯ ವಾಕ್ಯದೊಂದಿಗೆ ಪ್ರಧಾನಿ ಕಚೇರಿಗೆ ನರೇಂದ್ರ ಮೋದಿ ಕಾಲಿಟ್ಟಿದ್ದರು. ತೆರಿಗೆ ವ್ಯವಸ್ಥೆಯಿಂದ ಹಿಡಿದು ಆಡಳಿತದ ಪ್ರತಿ ಹಂತದಲ್ಲಿಯೂ ಸುಧಾರಣೆ ತರುವ ಭರವಸೆ ನೀಡಿದ್ದರು. ಈ ನಿಟ್ಟಿನಲ್ಲಿ ಸರ್ಕಾರ ಕೆಲ ಹೆಜ್ಜೆಗಳನ್ನು ಇರಿಸಿದೆ. ಓಬೀರಾಯನ ಕಾಲದ ಕಾನೂನು ರದ್ದು ದೇಶದಲ್ಲಿ ಹಳೆಯ ಅನವಶ್ಯಕ ಕಾಯ್ದೆಗಳಿಂದ ಕೋರ್ಟ್ ಖಟ್ಲೆಗಳಲ್ಲಿ ವಿಳಂಬವಾಗುತ್ತದೆ. ಈ ಕಾರಣದಿಂದ ಸುಮಾರು 3 ಸಾವಿರ ...