ವಿಷಯಕ್ಕೆ ಹೋಗಿ

**ಜ್ಞಾನ ಕಾರಂಜಿ**::: ಜನ ಆರೋಗ್ಯಕ್ಕೆ ಚಾಲನೆ,

ರಾಂಚಿ: ಕೇಂದ್ರ ಸರ್ಕಾರದ ಬಹುನಿರೀಕ್ಷಿತ, ವಿಶ್ವದ ಅತಿದೊಡ್ಡ ಆರೋಗ್ಯ ಯೋಜನೆಯಾಗಿರುವ ಪ್ರಧಾನ ಮಂತ್ರಿ ಜನ ಆರೋಗ್ಯ-ಆಯುಷ್ಮಾನ್ ಭಾರತ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಜಾರ್ಖಂಡದಲ್ಲಿ ಭಾನುವಾರ ಚಾಲನೆ ನೀಡಿದ್ದಾರೆ.
ಈ ಯೋಜನೆಯ ಫಲಾನುಭವಿಗಳು ದೇಶಾ ದ್ಯಂತ ಸರ್ಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ ನಗದು ರಹಿತ ಆರೋಗ್ಯ ಸೇವೆಗಳನ್ನು ಪಡೆಯಬಹುದಾಗಿದೆ. ಜಾರ್ಖಂಡದ 10 ಆರೋಗ್ಯ ಕೇಂದ್ರ, ಎರಡು ಮೆಡಿಕಲ್ ಕಾಲೇಜುಗಳಿಗೂ ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಿದರು. ಕೆಲ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಇ-ಕಾರ್ಡ್​ಗಳನ್ನು ವಿತರಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಯೋಜನೆಯ ಲಾಭಗಳನ್ನು ವಿವರಿಸುತ್ತ ಕಾಂಗ್ರೆಸ್​ನತ್ತ ಚಾಟಿ ಬೀಸಿದರು.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ: ಕಳೆದ 60 ವರ್ಷಗಳಿಂದ ಮತಬ್ಯಾಂಕ್ ರಾಜಕಾರಣ ನಡೆಸಿರುವ ಕಾಂಗ್ರೆಸ್, ಬಡವರ ಆರೋಗ್ಯ ಕುರಿತು ಕಾಳಜಿ ವಹಿಸಿಲ್ಲ.
ಹಲವು ದಶಕಗಳಿಂದ ಬಡತನ ಮಂತ್ರ ಪಠಿಸುತ್ತಿರುವವರು ಉತ್ತಮ ಕ್ರಮಗಳನ್ನು ಕೈಗೊಂಡಿದ್ದರೆ, ಈಗ ಪರಿಸ್ಥಿತಿ ಬದಲಾಗಿರುತ್ತಿತ್ತು. ಈಗ ಕೇಂದ್ರದ ಯೋಜನೆಯಿಂದ ಬಡತನ ಹಂತ ಹಂತವಾಗಿ ನಿಮೂಲನೆ ಆಗುತ್ತಿದೆ ಎಂದರು.
ಯಾರು ಫಲಾನುಭವಿಗಳಲ್ಲ
ದ್ವಿಚಕ್ರ, ತ್ರಿಚಕ್ರ, ನಾಲ್ಕು ಚಕ್ರಗಳ ಮೋಟಾರು ವಾಹನ ಹೊಂದಿರುವವರು
ತ್ರಿಚಕ್ರ, ನಾಲ್ಕು ಚಕ್ರಗಳ ಯಾಂತ್ರೀಕೃತ ಕೃಷಿ ಉಪಕರಣ ಹೊಂದಿದವರು
50,000 ರೂ. ಗಿಂತ ಹೆಚ್ಚು ಕ್ರೆಡಿಟ್ ಲಿಮಿಟ್​ನ ಕಿಸಾನ್ ಕ್ರೆಡಿಟ್ ಕಾರ್ಡ್​ದಾರರು
ಸರ್ಕಾರಿ ಉದ್ಯೋಗಿಗಳು
ಸರ್ಕಾರದಲ್ಲಿ ನೋಂದಣಿಯಾಗಿರುವ ಕೃಷಿಯೇತರ ಉದ್ಯಮ ಹೊಂದಿರುವವರು
ಮಾಸಿಕ -ಠಿ; 10,000 ರೂಪಾಯಿಗಿಂತ ಹೆಚ್ಚು ಆದಾಯ ಹೊಂದಿರುವವರು
ಆದಾಯ ತೆರಿಗೆ, ವೃತ್ತಿ ತೆರಿಗೆ ಪಾವತಿದಾರರು
ಮೂರು ಕೊಠಡಿಯ ಮನೆ, ಪಕ್ಕಾಗೋಡೆ, ಛಾವಣಿ ಹೊಂದಿರುವ ಮನೆಯಲ್ಲಿ ವಾಸ ಮಾಡುವವರು
ಫ್ರಿಜ್, ಲ್ಯಾಂಡ್​ಲೈನ್ ದೂರವಾಣಿ ಹೊಂದಿರುವವರು
2.5 ಎಕರೆಗಿಂತ ಹೆಚ್ಚಿನ ನಿರಾವರಿ ಭೂಮಿ, ಕೃಷಿ ಉಪಕರಣಗಳನ್ನು ಹೊಂದಿರುವವರು
7.5 ಎಕರೆಗಿಂತ ಹೆಚ್ಚು ಭೂಮಿ, ಕೃಷಿ ಉಪಕರಣಗಳನ್ನು ಹೊಂದಿರುವವರು
ಮೌಸಮಿ ಮೊದಲ ಫಲಾನುಭವಿ
ಹರಿಯಾಣದ ಕರ್ನಾಲ್ ಪ್ರದೇಶದ ಮೌಸಮಿ ಎಂಬುವವರು ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯ ಮೊದಲ ಫಲಾನುಭವಿ. ಕೃಷಿ ಕೂಲಿ ಕೆಲಸ ಮಾಡುತ್ತಿರುವ ಅಮಿತ್ ಕುಮಾರ್ ಎಂಬುವವರ ಪತ್ನಿ. ಹರಿಯಾಣದಲ್ಲಿ ಯೋಜನೆಯ ಪ್ರಾಯೋಗಿಕ ಪರೀಕ್ಷೆ ನಡೆಯುತ್ತಿದ್ದಾಗ, ಈಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಆಸ್ಪತ್ರೆಯ ವೆಚ್ಚ 9 ಸಾವಿರ ರೂಪಾಯಿಯನ್ನು ಈ ಯೋಜನೆಯ ಅನ್ವಯ ಅವರಿಗೆ ಮರುಪಾವತಿ ಮಾಡಲಾಗಿತ್ತು.
ಮೋದಿ ಕೇರ್ ಅಂತಾರೆ ಜನ
‘ನಾನೂ ಬಡತನದಿಂದ ಬಂದವನು. ನನಗೆ ಬಡವರ ಕಷ್ಟ ಅರ್ಥವಾಗುತ್ತದೆ. ವೈದ್ಯಕೀಯ ಸೇವೆಯೇ ಅವರಿದ್ದಲ್ಲಿಗೆ ಬರಲಿದೆ. ಈ ಯೋಜನೆಯನ್ನು ಜನರು ಮೋದಿ ಕೇರ್ ಎಂದು ಕರೆಯುತ್ತಿದ್ದಾರೆ. ಆದರೆ ಇದು ಜನರ ಸೇವೆಗೆ ನನಗೆ ಸಿಕ್ಕಿರುವ ಅವಕಾಶ ಎಂದು ತಿಳಿಯುತ್ತೇನೆ. ಫಲಾನುಭವಿಗಳು ಔಪಚಾರಿಕವಾಗಿಯೇ ಯೋಜನೆಯಲ್ಲಿ ಒಳಗೊಳ್ಳಬೇಕು ಎಂಬ ನಿಯಮವಿಲ್ಲ. ಅರ್ಹ ಫಲಾನುಭವಿಗಳು ಸಹಜವಾಗಿಯೇ ಈ ಯೋಜನೆ ವ್ಯಾಪ್ತಿಗೆ ಬರುತ್ತಾರೆ’ ಎಂದು ಮೋದಿ ಹೇಳಿದರು.
ಆಕ್ಷೇಪಣೆಗಳೇನು?
ಫ್ರಿಜ್, ದ್ವಿಚಕ್ರ ವಾಹನಗಳನ್ನು ಹೊಂದಿರುವ ಬಿಪಿಎಲ್ ಕಾರ್ಡದಾರ ರನ್ನು ಪಟ್ಟಿ ಯಿಂದ ಹೊರಗಿಟ್ಟಿರುವುದು
2011ರ ಸಾಮಾಜಿಕ, ಆರ್ಥಿಕ ಹಾಗೂ ಜಾತಿ ಜನಗಣತಿ ನಂತರ ನಡೆಸಲಾದ ಗಣತಿ, ನೋಂದಣಿಯಲ್ಲಿ ಸೇರ್ಪಡೆಯಾದವರು ಪಟ್ಟಿಯಲ್ಲಿಲ್ಲ
ಫಲಾನುಭವಿಗಳ ಸಂಖ್ಯೆ ಯುರೋಪ್​ಗೆ ಸಮ!
ಜನ ಆರೋಗ್ಯ ಯೋಜನೆಯ ಫಲಾನುಭವಿಗಳ ಸಂಖ್ಯೆ ಐರೋಪ್ಯ ಒಕ್ಕೂಟದ ಒಟ್ಟೂ ಜನಸಂಖ್ಯೆಗೆ ಸಮವಾಗಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಜಾರಿಗೊಂಡಿರುವ ವಿಶ್ವದ ಮೊದಲ ಯೋಜನೆ ಇದಾಗಿದೆ ಎಂದು ಮೋದಿ ಹೇಳಿದರು.
ಫಲಾನುಭವಿಗಳು ಯಾರು?
2011ರ ಸಾಮಾಜಿಕ, ಆರ್ಥಿಕ ಹಾಗೂ ಜಾತಿ ಜನಗಣತಿಯಲ್ಲಿ ನೋಂದಣಿಯಾಗಿರುವ ಗ್ರಾಮೀಣ ಭಾಗದ ಜನರು
ವಾಸಿಸಲು ಮನೆ ಇಲ್ಲದವರು, ನಿರ್ಗತಿಕರು
ಕಡುಬಡವರು, ನಿರ್ಗತಿಕರು, ನಿರಾಶ್ರಿತರು
ಮಲಹೊರುವ ಪದ್ಧತಿಯಲ್ಲಿ ಭಾಗಿಯಾಗಿದ್ದವರು, ಅವರ ಕುಟುಂಬದವರು
ಪ್ರಾಚೀನ ಬುಡಕಟ್ಟು ಜನಾಂಗದವರು
ಜೀತಪದ್ಧತಿಯಿಂದ ಕಾನೂನುಬದ್ಧವಾಗಿ ಬಿಡುಗಡೆಗೊಂಡವರು
ಒಂದು ಕೋಣೆಯ ಮನೆ, ಕಚ್ಚಾಗೋಡೆ, ಕಚ್ಚಾಛಾವಣಿ ಹೊಂದಿರುವ ಮನೆಯಲ್ಲಿ ವಾಸಿಸುತ್ತಿರುವವರು
18ರಿಂದ 59 ವರ್ಷದ ಒಳಗಿನ ಯಾವುದೇ ಸದಸ್ಯರಿಲ್ಲದೇ; ಕಿರಿಯರು ಮಾತ್ರ ಇರುವ ಕುಟುಂಬ – ಕುಟುಂಬಕ್ಕೆ ಮಹಿಳೆ ಯಜಮಾನಿಯಾಗಿದ್ದು, ಮನೆಯಲ್ಲಿ 16ರಿಂದ 59 ವರ್ಷದ ಯಾವುದೇ ಪುರುಷ ಸದಸ್ಯ ಇರದಿದ್ದರೆ
ಮನೆಯಲ್ಲಿ ಅಂಗವಿಕಲರಿದ್ದು, ಅವರಿಗೆ ವಯಸ್ಕ ಪೋಷಕರು ಇರದಿದ್ದರೆ
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ
25 ವರ್ಷಕ್ಕಿಂತ ಹೆಚ್ಚಿನ ವಯೋಮಾನದ ಅನಕ್ಷರಸ್ಥರು
ಭೂಮಿರಹಿತ ಕೂಲಿ ಕಾರ್ವಿುಕರು

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

**ಜ್ಞಾನ ಕಾರಂಜಿ**::: ಬೇನಾಮಿ ಆಸ್ತಿ ಪ್ರಕರಣ ವಿಲೇವಾರಿಗೆ ನ್ಯಾಯಾಧಿಕರಣ,

ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್​ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್​ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್​ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...

.. ಭಾರತೀಯ ಕಾವ್ಯ ಮೀಮಾಂಸೆ

ಭಾರತೀಯ ಕಾವ್ಯ ಮೀಮಾಂಸೆ ಭಾರತೀಯ ಕಾವ್ಯಮೀಮಾಂಸೆಗೆ ಸುಮಾರು ಎರಡು ಸಾವಿರ ವರ್ಷಗಳ ದೀರ್ಘ ಇತಿಹಾಸವಿದೆ. ಕವಿ ಮತ್ತು ಕಾವ್ಯದ ಲಕ್ಷಣಗಳು, ಕಾವ್ಯ ಪ್ರಭೇದಗಳು. ಕಾವ್ಯಾಲಂಕಾರಗಳು, ಕಾವ್ಯದ ವಸ್ತು ಇತ್ಯಾದಿ ಕಾವ್ಯನಿರ್ಮಿತಿಗೆ ಸಂಬಂಧಿಸಿದ ಮಹತ್ತ್ವದ ಅಂಶಗಳ ಶಾಸ್ತ್ರೀಯ ನಿರೂಪಣೆಯೇ ಕಾವ್ಯನಿಮೀಮಾಂಸೆ. ಇದನ್ನು ಅಲಂಕಾರ ಶಾಸ್ತ್ರವೆಂದೂ ಕರೆಯಲಾಗುತ್ತದೆ. ಪ್ರಾಚೀನ ಯುಗದಲ್ಲಿ ಅಲಂಕಾರಶಾಸ್ತ್ರವೆಂದರೆ ಪ್ರಧಾನವಾಗಿ ನಾಟ್ಯ ನೃತ್ಯ ಇತ್ಯಾದಿ ರಂಗ ಸಂಸ್ಕರಣ ಅಥವಾ ನಾಟ್ಯಕಲೆಯನ್ನು ಸರ್ವಾಂಗ ಸುಂದರವಾಗಿ ಮಾಡುವ ಒಂದು ಪರಿಷ್ಕಾರ ಶಾಸ್ತ್ರವಾಗಿದ್ದಿತು. ಕಾಲಕ್ರಮೇಣ ಇದು ಕಾವ್ಯಕಲೆಯನ್ನು ಪರಿಷ್ಕರಿಸುವ ಶಾಸ್ತ್ರವಾಗಿ ಪರಿಣಮಿಸಿತು. ಇದರ ಆರಂಭ ಯಾವಾಗಿ ಯಾರಿಂದ ಆಯಿತೆಂದು ಇತ್ಯರ್ಥಪಡಿಸುವುದು ಕಷ್ಟದ ಕೆಲಸ. ಸಾಹಿತ್ಯದಲ್ಲಿ ಸೌಂದರ್ಯೋಪಾಸನೆ ಪ್ರಾರಂಭವಾದಂದಿನಿಂದಲೂ ಪಂಡಿತರು ಮತ್ತು ವಿಮರ್ಶಕರು ಸಾಹಿತ್ಯದಲ್ಲಿ ಸೌಂದರ್ಯ ಅರಸಿ ಈ ಚಿತ್ತ ಸಂಸ್ಕರಣ ಶಾಸ್ತ್ರವನ್ನು ಬೆಳೆಸಿಕೊಂಡು ಬಂದಿದ್ದಾರೆ. ಕ್ರಿ. ಪೂ. 6ನೆಯ ಶತಮಾನದಲ್ಲಿದ ಯಾಸ್ಕಾಚಾರ್ಯ ಉಪಮೆ ರೂಪಕಗಳ ಬಗ್ಗೆ ಉಲ್ಲೇಖಸಿದ್ದಾನೆ. ಕ್ರಿ. ಪೂ. 5ನೆಯ ಶತಕದ ವೇಳೆಗೆ ಪಾಣಿನಿ ನಟರ ವಿಷಯ ಪ್ರಸ್ತಾಪಿಸಿದ್ದಾನೆ. ವೇದಗಳ ಕಾಲದಲ್ಲೂ ಉಪಮಾ ರೂಪಕಾದಿಗಳ ಪ್ರಯೋಗವಿದೆ. ಋಗ್ವೇದದಲ್ಲಿ ಕಂಡುಬರುವ ಯಮಯಮಿಯರ ಸಂವಾದ, ಊರ್ವಶೀ ಪುರೂರವರ ಸಂವಾದ_ಇವುಗಳಿಂದ ವೇದಕಾಲದಲ್ಲಿ ನಾಟಕದ ಅಂಕುರಾರ್ಪಣವಿದ್ದಂತಿದೆ....

**ಜ್ಞಾನ ಕಾರಂಜಿ**::: ನೀತಿ ಆಯೋಗ ಸ್ಥಾಪನೆ

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ಅಧಿಕಾರಕ್ಕೆ ಬಂದು ಮೇ 26ಕ್ಕೆ ನಾಲ್ಕು ವರ್ಷ. ಸರ್ಕಾರದ ಈ ಅವಧಿಯ ಪಯಣದಲ್ಲಿನ ಪ್ರಮುಖ ರಂಗಗಳ ಚಿತ್ರಣವನ್ನು ವಿಜಯವಾಣಿ ಸರಣಿಯಾಗಿ ಕಟ್ಟಿಕೊಡಲಿದ್ದು, ಅದರ ಎರಡನೇ ಭಾಗ ಇಲ್ಲಿದೆ. ನೆಹರು ಅವಧಿಯಲ್ಲಿ ರಚನೆಯಾಗಿದ್ದ ಯೋಜನಾ ಆಯೋಗವನ್ನು ರದ್ದುಗೊಳಿಸಿ 2015ರ ಜ.1ರಂದು ನೀತಿ ಆಯೋಗ ರಚಿಸಲಾಯಿತು. ಅಮೃತ್, ಡಿಜಿಟಲ್ ಇಂಡಿಯಾ, ಅಟಲ್ ಇನೋವೇಷನ್, ಸಂಚಾರ ದಟ್ಟಣೆ ನಿಯಂತ್ರಣ ಸೇರಿ ಕೆಲ ಯೋಜನೆಗಳ ನೇರ ಉಸ್ತುವಾರಿಯನ್ನು ನೀತಿ ಆಯೋಗ ವಹಿಸಿಕೊಂಡಿದೆ. ಪ್ರಧಾನಿ ಅಧ್ಯಕ್ಷತೆಯ ಈ ಆಯೋಗದಲ್ಲಿ ರಾಜ್ಯಗಳ ಹಣಕಾಸು ಸಚಿವರು ಸದಸ್ಯರಾಗಿರುತ್ತಾರೆ. 15 ವರ್ಷ ಹಾಗೂ 7 ವರ್ಷಗಳ ಪ್ರತ್ಯೇಕ ಗುರಿಯ ಯೋಜನೆಯ ಜತೆಗೆ, ವಾರ್ಷಿಕ ಕಾರ್ಯಕ್ರಮಗಳ ಬಗ್ಗೆ ಈ ಸಂಸ್ಥೆ ನಿಗಾ ಇಡಲಿದೆ. ಆಡಳಿತಕ್ಕೆ ಹೊಸ ಸ್ಪರ್ಶ ‘ಮಿನಿಮಮ್ ಗವರ್ನಮೆಂಟ್, ಮ್ಯಾಕ್ಸಿಮಮ್ ಗವರ್ನನ್ಸ್’ (ಕನಿಷ್ಠ ಸರ್ಕಾರ ಗರಿಷ್ಠ ಆಡಳಿತ) ಧ್ಯೇಯ ವಾಕ್ಯದೊಂದಿಗೆ ಪ್ರಧಾನಿ ಕಚೇರಿಗೆ ನರೇಂದ್ರ ಮೋದಿ ಕಾಲಿಟ್ಟಿದ್ದರು. ತೆರಿಗೆ ವ್ಯವಸ್ಥೆಯಿಂದ ಹಿಡಿದು ಆಡಳಿತದ ಪ್ರತಿ ಹಂತದಲ್ಲಿಯೂ ಸುಧಾರಣೆ ತರುವ ಭರವಸೆ ನೀಡಿದ್ದರು. ಈ ನಿಟ್ಟಿನಲ್ಲಿ ಸರ್ಕಾರ ಕೆಲ ಹೆಜ್ಜೆಗಳನ್ನು ಇರಿಸಿದೆ. ಓಬೀರಾಯನ ಕಾಲದ ಕಾನೂನು ರದ್ದು ದೇಶದಲ್ಲಿ ಹಳೆಯ ಅನವಶ್ಯಕ ಕಾಯ್ದೆಗಳಿಂದ ಕೋರ್ಟ್ ಖಟ್ಲೆಗಳಲ್ಲಿ ವಿಳಂಬವಾಗುತ್ತದೆ. ಈ ಕಾರಣದಿಂದ ಸುಮಾರು 3 ಸಾವಿರ ...