ವಿಷಯಕ್ಕೆ ಹೋಗಿ

**ಜ್ಞಾನ ಕಾರಂಜಿ**::: ಏಷ್ಯಾ ಕ್ರೀಡಾಹಬ್ಬಕ್ಕೆ ವೈಭವದ ತೆರೆ,

ತಡವಾದ ಮಾಹಿತಿ.  ಜಕಾರ್ತ: ಕಳೆದ ಹದಿನೈದು ದಿನಗಳಿಂದ ವಿಶ್ವ ಕ್ರೀಡಾಲೋಕದ ಗಮನಸೆಳೆದಿದ್ದ 18ನೇ ಏಷ್ಯನ್ ಕ್ರೀಡಾಕೂಟಕ್ಕೆ ಭಾನುವಾರ ತೆರೆಬಿದ್ದಿತು. ಉದ್ಘಾಟನಾ ಸಮಾರಂಭಕ್ಕೆ ವೇದಿಕೆಯಾಗಿದ್ದ ಗೆಲೊರಾ ಬಂಗ್ ಕರ್ನೆ ಸ್ಟೇಡಿಯಂನಲ್ಲೆ ಭಾನುವಾರ ನಡೆದ ಸಮಾರೋಪ ಸಮಾರಂಭವೂ ಕೂಟದ ಧ್ಯೇಯವಾದ ‘ಏಷ್ಯಾದ ಶಕ್ತಿ’ (ಏನರ್ಜಿ ಆಫ್ ಏಷ್ಯಾ) ಎಂಬ ಸಂದೇಶವನ್ನು ಸಾರಿ ಹೇಳುವಂತಿತ್ತು. ತುಂತುರು ಮಳೆಯ ನಡುವೆಯೂ ಆರಂಭಗೊಂಡ ಸಮಾರಂಭಕ್ಕೆ ಇಂಡೋನೇಷ್ಯಾ ರಾಷ್ಟ್ರಗೀತೆ ಹಾಡುವ ಮೂಲಕ ಚಾಲನೆ ನೀಡಲಾಯಿತು. ಏಷ್ಯಾ ಒಲಿಂಪಿಕ್ ಕೌನ್ಸಿಲ್ ಅಧ್ಯಕ್ಷ ಅಹಮದ್ ಎಲ್ ಫಹಾದ್ 2018ರ ಏಷ್ಯಾಡ್ ಮುಕ್ತಾಯವನ್ನು ಘೋಷಿಸಿದರು. ಜತೆಗೆ ಕ್ರೀಡಾಕೂಟ ಕಳೆಕಟ್ಟುವಲ್ಲಿ ಪ್ರಮುಖ ಪಾತ್ರವಹಿಸಿದ 13 ಸಾವಿರ ಸ್ವಯಂ ಸೇವಕರು ಹಾಗೂ ಮಾಧ್ಯಮದವರಿಗೆ ಧನ್ಯವಾದ ಅರ್ಪಿಸಿದರು. ಉದ್ಘಾಟನಾ ಸಮಾರಂಭದಂತೆಯೇ ಸಂಗೀತ ಕಾರ್ಯಕ್ರಮಕ್ಕೆ ಸಮಾರೋಪದಲ್ಲೂ ಒತ್ತು ನೀಡಲಾಗಿತ್ತು. ಸಂಗೀತಗಾರ್ತಿ ಇಸ್ಯಾನಾ ಸರಸ್ವತಿ ರಂಜಿಸಿದರೆ, ಕೂಟದ ಲಾಂಛನಗಳಾದ ಭಿನ್ ಭಿನ್, ಅತುಂಗ್, ಕಾಕಾ ವೇದಿಕೆಯಲ್ಲಿ ಹೆಜ್ಜೆಹಾಕಿದವು. ಬಾಮ್್ಸ ಹಾಗೂ ಲಿಯಾ ಸಿಮಾನ್​ಜುನ್ಟಕ್ ಅಥ್ಲೆಟಿಕ್ಸ್ ಹಾಗೂ ಅಭಿಮಾನಿಗಳು ಕುರಿತು ಹೇಳಿದ ಹಾಡು ಮನತುಂಬಿತು. ಭಾರತೀಯ ಮೂಲದ ಸಂಗೀತಗಾರರಾದ ಸಿದ್ದಾರ್ಥ್ ಸ್ಲಾಥಿಯಾ ಹಾಗೂ ದೆನಾಡಾ ಜೋಡಿ ಕೆಲ ಬಾಲಿವುಡ್ ಗೀತೆಗಳನ್ನು ಹಾಡಿದರು. ಸ್ಥಳೀಯ ಪ್ರತಿಭೆಗಳಾದ ದಿರಾ ಸುಗಂಧಿ, ಡಿಜೆಗಳಾದ ವಿಂಕಿ ವೈರ್​ವಾನ್, ಜೆವಿನ್ ಜೂಲಿಯನ್ ನಡೆಸಿಕೊಟ್ಟ ಕಾರ್ಯಕ್ರಮ ಹುಚ್ಚೆದ್ದು ಕುಣಿಯುವಂತೆ ಮಾಡಿತು. ಇದೇ ವೇಳೆ ಚಿತ್ತಾಕರ್ಷಕ ಪಟಾಕಿ, ಸಿಡಿಮದ್ದುಗಳು ಬಾನಂಗಳ ಸೇರಿದವು. ಸುಮಾರು 56 ವರ್ಷಗಳ ಬಳಿಕ ಇಂಡೋನೇಷ್ಯಾ ಏಷ್ಯಾಡ್​ಗೆ ಆತಿಥ್ಯ ವಹಿಸಿಕೊಂಡಿತ್ತು.
ಚೀನಾ ಪ್ರಾಬಲ್ಯ
ಚೀನಾ ತಂಡ ಎಂದಿನಂತೆ ಏಷ್ಯಾಡ್​ನ ಅಗ್ರಗಣ್ಯ ತಂಡವಾಗಿ ಮತ್ತೊಮ್ಮೆ ಹೊರಹೊಮ್ಮಿತು. 132 ಸ್ವರ್ಣ, 92 ಬೆಳ್ಳಿ ಹಾಗೂ 65 ಕಂಚು ಸೇರಿದಂತೆ 289 ಪದಕ ಗೆದ್ದುಕೊಂಡಿತು. ಕಳೆದ ಬಾರಿ 151 ಸ್ವರ್ಣ ಗೆದ್ದಿದ್ದ ಚೀನಾದ ಓಟಕ್ಕೆ ಈ ಬಾರಿ ಕೊಂಚ ಹಿನ್ನಡೆಯಾಗಿದೆ. ಕಳೆದ ಬಾರಿ 3ನೇ ಸ್ಥಾನದಲ್ಲಿದ್ದ ಜಪಾನ್ ತಂಡ (75 ಸ್ವರ್ಣ, 56 ಬೆಳ್ಳಿ, 74 ಕಂಚು, ಒಟ್ಟು: 205) 2ನೇ ಸ್ಥಾನಕ್ಕೇರಿದ್ದರೆ, ಕಳೆದ ಬಾರಿ 2ನೇ ಸ್ಥಾನದಲ್ಲಿದ್ದ ಕೊರಿಯಾ (49 ಸ್ವರ್ಣ58 ಬೆಳ್ಳಿ, 70 ಕಂಚು, ಒಟ್ಟು: 177) 3ನೇ ಸ್ಥಾನಕ್ಕೆ ಕುಸಿಯಿತು. 2014ರಲ್ಲಿ ಅಗ್ರ10ರೊಳಗೆ ಸ್ಥಾನ ಪಡೆಯಲು ವಿಫಲವಾಗಿದ್ದ ಆತಿಥೇಯ ಇಂಡೋನೇಷ್ಯಾ ಈ ಬಾರಿ 4ನೇ ಸ್ಥಾನಕ್ಕೆ ಜಿಗಿಯತು. ಕೂಟದ ಇತಿಹಾಸದಲ್ಲೇ ಭಾರತ ಶ್ರೇಷ್ಠ ಮಾಡಿದ್ದರೂ 8ನೇ ಸ್ಥಾನವನ್ನೇ ಕಾಯ್ದುಕೊಂಡಿತು.
ಜಪಾನ್ ತಂಡಕ್ಕೆ ಕೊನೇ ಸ್ವರ್ಣ
ಕೂಟದ ಕೊನೇ ಸ್ವರ್ಣ ಪದಕ ಜಪಾನ್ ತಂಡದ ಪಾಲಾಯಿತು. ಮಿಶ್ರ ಟ್ರಯಾಥ್ಲಾನ್ ವಿಭಾಗದಲ್ಲಿ ಜಪಾನ್ ತಂಡ ಸ್ವರ್ಣ, ಕೊರಿಯಾ ಬೆಳ್ಳಿ ಹಾಗೂ ಹಾಂಕಾಂಗ್ ತಂಡ ಕಂಚಿನ ಪದಕ ಗೆದ್ದುಕೊಂಡಿತು. ಕೂಟದ ಮೊದಲ ಸ್ವರ್ಣ ಚೀನಾ ಪಾಲಾಗಿತ್ತು. ಆ ತಂಡದ 28 ವರ್ಷದ ಸನ್ ಪೀಯಾನ್, ವುಶುವಿನ ಚಾಂಗ್​ಕ್ವಾನ್ ವಿಭಾಗದಲ್ಲಿ 9.57 ಅಂಕ ಕಲೆಹಾಕಿ ಸ್ವರ್ಣ ಗೆದ್ದುಕೊಂಡಿದ್ದರು.
ರಾಣಿ ರಾಂಪಾಲ್ ಧ್ವಜಧಾರಿ
ಮಹಿಳಾ ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್ ಸಮಾರೋಪದ ವೇಳೆ ರಾಷ್ಟ್ರೀಯ ಧ್ವಜಧಾರಿಯಾಗಿ ಭಾರತ ತಂಡ ವನ್ನು ಮುನ್ನಡೆಸಿದರು. ರಾಣಿ ಸಾರಥ್ಯದ ತಂಡ 1998ರ ಬಳಿಕ ಕೂಟದಲ್ಲಿ ರಜತ ಪದಕ ಜಯಿಸಿತ್ತು. ಉದ್ಘಾಟನಾ ಸಮಾರಂಭದ ವೇಳೆ ಜಾವೆಲಿನ್ ಪಟು ನೀರಜ್ ಚೋಪ್ರಾ ಧ್ವಜಧಾರಿಯಾಗಿದ್ದರು.
2022ಕ್ಕೆ ಚೀನಾದ ಹಾಂಗ್ಝೌದಲ್ಲಿ ಭೇಟಿ
2022ರ ಏಷ್ಯನ್ ಕ್ರೀಡಾಕೂಟವು ಚೀನಾದ ಹಾಂಗ್ಝೌನಲ್ಲಿ ನಡೆಯಲಿದೆ. ಹಾಂಗ್ಝೌ ನಗರದ ಪ್ರತಿನಿಧಿಗಳು ಸಮಾರಂಭದ ಸಮಾರಂಭದ ವೇಳೆ ಕೂಟದ ಏಷ್ಯಾಡ್ ಧ್ವಜ ಪಡೆದುಕೊಂಡರು. ಇದರೊಂದಿಗೆ ಏಷ್ಯಾಡ್ ಆಯೋಜಿಸುತ್ತಿರುವ ಚೀನಾದ 3ನೇ ನಗರ ಎನಿಸಿಕೊಳ್ಳಲಿದೆ. ಇದಕ್ಕೂ ಮೊದಲು 1990ರಲ್ಲಿ ಬೀಜಿಂಗ್ ಹಾಗೂ 2010ರಲ್ಲಿ ಗುವಾಂಗ್​ರೆkೌನಲ್ಲಿ ಈ ಕೂಟ ಆಯೋಜಿಸಲಾಗಿತ್ತು. ಸಮಾರಂಭದ ವೇಳೆ ಹಾಂಗ್ಝೌ ನಗರದ ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟು ಗಮನಸೆಳೆದರು. ಸುಮಾರು 95 ಲಕ್ಷ ಜನ ಸಂಖ್ಯೆ ಹೊಂದಿರುವ ಹಾಂಗ್ಝೌ ನಗರ ಚೀನಾದ ಜಿಯಾಂಗ್ ಪ್ರದೇಶದಲ್ಲಿದೆ. 9ನೇ ಶತಮಾನದಿಂದಲ್ಲೂ ಈ ನಗರದ ಅಸ್ಥಿತ್ವದಲ್ಲಿದ್ದರೂ ಇತ್ತೀಚೆಗೆ ಮರು ನಿರ್ಮಾಣ ಮಾಡಲಾಗಿದೆ. ಪುರಾತನ ಕಾಲದ ಕಟ್ಟಡಗಳನ್ನು ಈ ಪ್ರದೇಶದಲ್ಲಿ ಸಂರಕ್ಷಿಸಲಾಗಿದೆ.
 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

**ಜ್ಞಾನ ಕಾರಂಜಿ**::: ಬೇನಾಮಿ ಆಸ್ತಿ ಪ್ರಕರಣ ವಿಲೇವಾರಿಗೆ ನ್ಯಾಯಾಧಿಕರಣ,

ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್​ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್​ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್​ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...

.. ಭಾರತೀಯ ಕಾವ್ಯ ಮೀಮಾಂಸೆ

ಭಾರತೀಯ ಕಾವ್ಯ ಮೀಮಾಂಸೆ ಭಾರತೀಯ ಕಾವ್ಯಮೀಮಾಂಸೆಗೆ ಸುಮಾರು ಎರಡು ಸಾವಿರ ವರ್ಷಗಳ ದೀರ್ಘ ಇತಿಹಾಸವಿದೆ. ಕವಿ ಮತ್ತು ಕಾವ್ಯದ ಲಕ್ಷಣಗಳು, ಕಾವ್ಯ ಪ್ರಭೇದಗಳು. ಕಾವ್ಯಾಲಂಕಾರಗಳು, ಕಾವ್ಯದ ವಸ್ತು ಇತ್ಯಾದಿ ಕಾವ್ಯನಿರ್ಮಿತಿಗೆ ಸಂಬಂಧಿಸಿದ ಮಹತ್ತ್ವದ ಅಂಶಗಳ ಶಾಸ್ತ್ರೀಯ ನಿರೂಪಣೆಯೇ ಕಾವ್ಯನಿಮೀಮಾಂಸೆ. ಇದನ್ನು ಅಲಂಕಾರ ಶಾಸ್ತ್ರವೆಂದೂ ಕರೆಯಲಾಗುತ್ತದೆ. ಪ್ರಾಚೀನ ಯುಗದಲ್ಲಿ ಅಲಂಕಾರಶಾಸ್ತ್ರವೆಂದರೆ ಪ್ರಧಾನವಾಗಿ ನಾಟ್ಯ ನೃತ್ಯ ಇತ್ಯಾದಿ ರಂಗ ಸಂಸ್ಕರಣ ಅಥವಾ ನಾಟ್ಯಕಲೆಯನ್ನು ಸರ್ವಾಂಗ ಸುಂದರವಾಗಿ ಮಾಡುವ ಒಂದು ಪರಿಷ್ಕಾರ ಶಾಸ್ತ್ರವಾಗಿದ್ದಿತು. ಕಾಲಕ್ರಮೇಣ ಇದು ಕಾವ್ಯಕಲೆಯನ್ನು ಪರಿಷ್ಕರಿಸುವ ಶಾಸ್ತ್ರವಾಗಿ ಪರಿಣಮಿಸಿತು. ಇದರ ಆರಂಭ ಯಾವಾಗಿ ಯಾರಿಂದ ಆಯಿತೆಂದು ಇತ್ಯರ್ಥಪಡಿಸುವುದು ಕಷ್ಟದ ಕೆಲಸ. ಸಾಹಿತ್ಯದಲ್ಲಿ ಸೌಂದರ್ಯೋಪಾಸನೆ ಪ್ರಾರಂಭವಾದಂದಿನಿಂದಲೂ ಪಂಡಿತರು ಮತ್ತು ವಿಮರ್ಶಕರು ಸಾಹಿತ್ಯದಲ್ಲಿ ಸೌಂದರ್ಯ ಅರಸಿ ಈ ಚಿತ್ತ ಸಂಸ್ಕರಣ ಶಾಸ್ತ್ರವನ್ನು ಬೆಳೆಸಿಕೊಂಡು ಬಂದಿದ್ದಾರೆ. ಕ್ರಿ. ಪೂ. 6ನೆಯ ಶತಮಾನದಲ್ಲಿದ ಯಾಸ್ಕಾಚಾರ್ಯ ಉಪಮೆ ರೂಪಕಗಳ ಬಗ್ಗೆ ಉಲ್ಲೇಖಸಿದ್ದಾನೆ. ಕ್ರಿ. ಪೂ. 5ನೆಯ ಶತಕದ ವೇಳೆಗೆ ಪಾಣಿನಿ ನಟರ ವಿಷಯ ಪ್ರಸ್ತಾಪಿಸಿದ್ದಾನೆ. ವೇದಗಳ ಕಾಲದಲ್ಲೂ ಉಪಮಾ ರೂಪಕಾದಿಗಳ ಪ್ರಯೋಗವಿದೆ. ಋಗ್ವೇದದಲ್ಲಿ ಕಂಡುಬರುವ ಯಮಯಮಿಯರ ಸಂವಾದ, ಊರ್ವಶೀ ಪುರೂರವರ ಸಂವಾದ_ಇವುಗಳಿಂದ ವೇದಕಾಲದಲ್ಲಿ ನಾಟಕದ ಅಂಕುರಾರ್ಪಣವಿದ್ದಂತಿದೆ....

**ಜ್ಞಾನ ಕಾರಂಜಿ**::: ನೀತಿ ಆಯೋಗ ಸ್ಥಾಪನೆ

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ಅಧಿಕಾರಕ್ಕೆ ಬಂದು ಮೇ 26ಕ್ಕೆ ನಾಲ್ಕು ವರ್ಷ. ಸರ್ಕಾರದ ಈ ಅವಧಿಯ ಪಯಣದಲ್ಲಿನ ಪ್ರಮುಖ ರಂಗಗಳ ಚಿತ್ರಣವನ್ನು ವಿಜಯವಾಣಿ ಸರಣಿಯಾಗಿ ಕಟ್ಟಿಕೊಡಲಿದ್ದು, ಅದರ ಎರಡನೇ ಭಾಗ ಇಲ್ಲಿದೆ. ನೆಹರು ಅವಧಿಯಲ್ಲಿ ರಚನೆಯಾಗಿದ್ದ ಯೋಜನಾ ಆಯೋಗವನ್ನು ರದ್ದುಗೊಳಿಸಿ 2015ರ ಜ.1ರಂದು ನೀತಿ ಆಯೋಗ ರಚಿಸಲಾಯಿತು. ಅಮೃತ್, ಡಿಜಿಟಲ್ ಇಂಡಿಯಾ, ಅಟಲ್ ಇನೋವೇಷನ್, ಸಂಚಾರ ದಟ್ಟಣೆ ನಿಯಂತ್ರಣ ಸೇರಿ ಕೆಲ ಯೋಜನೆಗಳ ನೇರ ಉಸ್ತುವಾರಿಯನ್ನು ನೀತಿ ಆಯೋಗ ವಹಿಸಿಕೊಂಡಿದೆ. ಪ್ರಧಾನಿ ಅಧ್ಯಕ್ಷತೆಯ ಈ ಆಯೋಗದಲ್ಲಿ ರಾಜ್ಯಗಳ ಹಣಕಾಸು ಸಚಿವರು ಸದಸ್ಯರಾಗಿರುತ್ತಾರೆ. 15 ವರ್ಷ ಹಾಗೂ 7 ವರ್ಷಗಳ ಪ್ರತ್ಯೇಕ ಗುರಿಯ ಯೋಜನೆಯ ಜತೆಗೆ, ವಾರ್ಷಿಕ ಕಾರ್ಯಕ್ರಮಗಳ ಬಗ್ಗೆ ಈ ಸಂಸ್ಥೆ ನಿಗಾ ಇಡಲಿದೆ. ಆಡಳಿತಕ್ಕೆ ಹೊಸ ಸ್ಪರ್ಶ ‘ಮಿನಿಮಮ್ ಗವರ್ನಮೆಂಟ್, ಮ್ಯಾಕ್ಸಿಮಮ್ ಗವರ್ನನ್ಸ್’ (ಕನಿಷ್ಠ ಸರ್ಕಾರ ಗರಿಷ್ಠ ಆಡಳಿತ) ಧ್ಯೇಯ ವಾಕ್ಯದೊಂದಿಗೆ ಪ್ರಧಾನಿ ಕಚೇರಿಗೆ ನರೇಂದ್ರ ಮೋದಿ ಕಾಲಿಟ್ಟಿದ್ದರು. ತೆರಿಗೆ ವ್ಯವಸ್ಥೆಯಿಂದ ಹಿಡಿದು ಆಡಳಿತದ ಪ್ರತಿ ಹಂತದಲ್ಲಿಯೂ ಸುಧಾರಣೆ ತರುವ ಭರವಸೆ ನೀಡಿದ್ದರು. ಈ ನಿಟ್ಟಿನಲ್ಲಿ ಸರ್ಕಾರ ಕೆಲ ಹೆಜ್ಜೆಗಳನ್ನು ಇರಿಸಿದೆ. ಓಬೀರಾಯನ ಕಾಲದ ಕಾನೂನು ರದ್ದು ದೇಶದಲ್ಲಿ ಹಳೆಯ ಅನವಶ್ಯಕ ಕಾಯ್ದೆಗಳಿಂದ ಕೋರ್ಟ್ ಖಟ್ಲೆಗಳಲ್ಲಿ ವಿಳಂಬವಾಗುತ್ತದೆ. ಈ ಕಾರಣದಿಂದ ಸುಮಾರು 3 ಸಾವಿರ ...