ಕಬ್ಬು ಬೆಳೆಗಾರರು ಹಾಗೂ ಸಕ್ಕರೆ ಕಾರ್ಖಾನೆಗಳ ನೆರವಿಗೆ
ಬಂದಿರುವ ಕೇಂದ್ರ ಸರ್ಕಾರ, ಎಥನಾಲ್ ಬೆಲೆಯನ್ನು ಶೇ. 25 ಏರಿಕೆ ಮಾಡಿದೆ.
ಎಥನಾಲ್ ಪ್ರತಿ ಲೀಟರ್ಗೆ 47.13 ರೂ.ನಿಂದ 59.13 ರೂ.ಗೆ ಏರಿಸಲಾಗಿದೆ. ಮೊಲಾಸಿಸ್ ಅಥವಾ
ಭಾಗಶಃ ಕಬ್ಬಿನ ಹಾಲಿನಿಂದ ಎಥನಾಲ್ ತಯಾರಿಸಿದ್ದರೆ ಪ್ರತಿ ಲೀಟರ್ಗೆ 52.43 ರೂ.
ನೀಡಲಾಗುತ್ತದೆ. ಸಂಪೂರ್ಣ ಕಬ್ಬಿನ ಹಾಲಿನಿಂದ ತಯಾರಿಸಿದ ಎಥನಾಲ್ ಗೆ ಮಾತ್ರ 59.13 ರೂ.
ನೀಡಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ
ನಿರ್ಧರಿಸಲಾಗಿದೆ. ಈ ಆದೇಶ 2018ರ ಡಿ.1ರಿಂದ 2019ರ ನ.30ರವರೆಗೆ ಅನ್ವಯವಾಗಲಿದೆ.
ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ಕಬ್ಬು ಬೆಲೆ ನಿಗದಿ ಮೇಲೂ ಪರಿಣಾಮ ಬೀರಲಿದೆ. ಕಬ್ಬಿನ
ಮಾರುಕಟ್ಟೆ ಬೆಲೆ ನಿಗದಿ ಮಾಡುವಾಗ ಉಪ-ಉತ್ಪನ್ನಗಳ ಬಗೆಗೂ ಲೆಕ್ಕ ಹಾಕಲಾಗುತ್ತದೆ. ಹೀಗಾಗಿ
ಕಬ್ಬಿನ ಬೆಲೆ ಏರಿಕೆಯಾಗಬಹುದು. ಇನ್ನೊಂದೆಡೆ ದೇಶದಲ್ಲಿ ಎಥನಾಲ್ ಉತ್ಪಾದನೆ ಪ್ರಮಾಣವು 140
ಕೋಟಿ ಲೀಟರ್ಗೆ ಏರಿಕೆ ಯಾಗಿದೆ. ಇದರಿಂದ ತೈಲ ಆಮದಿನಲ್ಲಿ ಸ್ವಲ್ಪ ಇಳಿಕೆ ಯಾಗಲಿದೆ.
ಸಕ್ಕರೆ ಕಾರ್ಖಾನೆಗಳು ತಯಾರಿಸಿ ರುವ ಈ ಎಥನಾಲ್ ಖರೀದಿಗೆ ಮೊದಲ ಆದ್ಯತೆ ನೀಡುವಂತೆ ತೈಲ
ಸಂಸ್ಕರಣಾ ಕಂಪನಿ ಗಳಿಗೆ ಸರ್ಕಾರ ಸೂಚಿಸಿದೆ.ಕಬ್ಬಿನ ಇಳುವರಿ ಹೆಚ್ಚಾದಾಗ ಮಾರುಕಟ್ಟೆ
ಬೇಡಿಕೆಗಿಂತ ಹೆಚ್ಚಿನ ಸಕ್ಕರೆ ಉತ್ಪಾದನೆಯಾಗುತ್ತಿದೆ. ಹೀಗಾಗಿ ಸಕ್ಕರೆ ಕಾರ್ಖಾನೆ ಹಾಗೂ
ರೈತರ ನೆರವಿಗಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ
ಧಮೇಂದ್ರ ಪ್ರಧಾನ್ ತಿಳಿಸಿದ್ದಾರೆ.
*ತೈಲ ಉತ್ಪಾದನೆಗೆ ಅನುಮತಿ*: ಎನ್ಹಾನ್ಸಡ್ ಆಯಿಲ್ ರಿಕವರಿ ಯೋಜನೆಯಲ್ಲಿ ಹೊಸದಾಗಿ 50
ಲಕ್ಷ ಕೋಟಿ ರೂ. ಮೌಲ್ಯದ ಹೈಡ್ರೋಕಾರ್ಬನ್ ಉತ್ಪಾದನೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ.
*ಅನ್ನದಾತ ಮೌಲ್ಯ ಸಂರಕ್ಷಣಾ ಯೋಜನೆ*
ಎಣ್ಣೆಕಾಳುಗಳ ಬೆಲೆ ಕುಸಿತವಾದಾಗ ಕನಿಷ್ಠ ಬೆಂಬಲ ಬೆಲೆಯನ್ನು ವರ್ಷಪೂರ್ತಿ ನೀಡುವ
ಯೋಜನೆಗೆ ಸರ್ಕಾರ ಒಪ್ಪಿಗೆ ನೀಡಿದೆ. ಪ್ರಧಾನಮಂತ್ರಿ ಅನ್ನದಾತ ಮೌಲ್ಯ ಸಂರಕ್ಷಣಾ ಯೋಜನೆ
ಎಂದು ಇದಕ್ಕೆ ಹೆಸರಿಡಲಾ ಗಿದೆ. ಕೇಂದ್ರ ಸರ್ಕಾರದ ಬೆಂಬಲ ಬೆಲೆ ವರ್ಷವಿಡಿ ರೈತರಿಗೆ ಇನ್ನು
ಲಭ್ಯವಾಗಲಿದೆ. ಎಣ್ಣೆಕಾಳುಗಳ ಮಾರುಕಟ್ಟೆ ಬೆಲೆ ಬೆಂಬಲ ಬೆಲೆಗಿಂತ ಕಡಿಮೆಯಾದಲ್ಲಿ
ಸರ್ಕಾರವೇ ಇದನ್ನು ತುಂಬಿಕೊಡಲಿದೆ. ಬೆಂಬಲ ಬೆಲೆಗಿಂತ ಮಾರುಕಟ್ಟೆ ಬೆಲೆ ಕಡಿಮೆ ಇದ್ದಲ್ಲಿ
ಮಾಸಿಕ ಮಾರುಕಟ್ಟೆ ಬೆಲೆಯ ಸರಾಸರಿ ಮೊತ್ತಕ್ಕೆ ಹೋಲಿಸ ಲಾಗುತ್ತದೆ. ಇವೆರಡರ ನಡುವಿನ
ವ್ಯತ್ಯಾಸದ ಹಣವನ್ನು ನೇರವಾಗಿ ರೈತರ ಖಾತೆಗೆ ವರ್ಗಾವಣೆ ಯಾಗಲಿದೆ.
*ರೈಲ್ವೆ ಹಳಿ ವಿದ್ಯುದೀಕರಣ*
ಭಾರತದಲ್ಲಿನ ರೈಲ್ವೆ ಹಳಿಗಳು 2021-22ರೊಳಗೆ ಸಂಪೂರ್ಣ ವಿದ್ಯುದೀಕರಣವಾಗಲಿವೆ. ಇದಕ್ಕಾಗಿ
ಕೇಂದ್ರ ಸರ್ಕಾರ ಹೊಸದಾಗಿ 13,675 ಕಿ.ಮೀ ಮಾರ್ಗದ ವಿದ್ಯುದೀಕರಣಕ್ಕೆ 12,134 ಕೋಟಿ ರೂ.
ಮೀಸಲಿಟ್ಟಿದೆ. ಸಂಪೂರ್ಣ ವಿದ್ಯುದೀಕರಣದಿಂದ ವಾರ್ಷಿಕ 13,510 ಕೋಟಿ ರೂ.
ಉಳಿತಾಯವಾಗಲಿದೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ