ಗ್ರಾಹಕರ ದೃಢೀಕರಣಕ್ಕಾಗಿ ಆಧಾರ್ ಬಳಸುವುದನ್ನು ನಿಲ್ಲಿಸುವ ಬಗ್ಗೆ ನಿಮ್ಮ ಯೋಜನೆಗಳನ್ನು ಇನ್ನು 15 ದಿನಗಳಲ್ಲಿ ಸಲ್ಲಿಸಬೇಕು ಎಂದು ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಟೆಲಿಕಾಂ ಕಂಪನಿಗಳಿಗೆ ತಿಳಿಸಿದೆ.
ಆಧಾರ್ ಕಡ್ಡಾಯವಲ್ಲ ಎಂದು ಸುಪ್ರೀಂಕೋರ್ಟ್ ಆದೇಶ ಹೊರಡಿಸಿದ ಬಳಿಕ, ಯುಡಿಎಐ ಸೋಮವಾರ ಸರ್ಕ್ಯುಲರ್ ಹೊರಡಿಸಿದೆ. ಎಲ್ಲ ಟೆಲಿಕಾಂ ಕಂಪನಿಗಳೂ ಸುಪ್ರೀಂಕೋರ್ಟ್ ಆದೇಶವನ್ನು ಅನುಸರಿಸಿ ತಕ್ಷಣ ಕ್ರಮ ಕೈಗೊಳ್ಳಬೇಕು. 15 ದಿನಗಳ ಒಳಗೆ ಆಧಾರ್ ಬಳಕೆಯಿಂದ ಹೊರಬರಲು ಯೋಜನೆಗಳನ್ನು ರೂಪಿಸಬೇಕು ಎಂದು ಹೇಳಿವೆ.
ಕಳೆದ ವಾರ ಸುಪ್ರೀಂಕೋರ್ಟ್ ಸರ್ಕಾರದ ಕಲ್ಯಾಣ ಯೋಜನೆಗಳ ಫಲಾನುಭವಿಗಳಾಗುವುದನ್ನುಹೊರತುಪಡಿಸಿ ಟೆಲಿಕಾಂ, ಬ್ಯಾಂಕ್, ಶಾಲಾ ಕಾಲೇಜುಗಳಿಗೆ ಆಧಾರ್ ಕಡ್ಡಾಯವಲ್ಲ ಎಂದಿತ್ತು. ಅಲ್ಲದೆ, 12 ಡಿಜಿಟ್ನ ಬಯೋಮೆಟ್ರಿಕ್ ಆಧರಿತ ಇಕೆವೈಸಿಗೆ ಅವಕಾಶ ಮಾಡಿಕೊಟ್ಟಿದೆ. ಹಾಗಾಗಿ ಖಾಸಗಿ ಕಂಪನಿಗಳು ಆಧಾರ್ ಇ-ಕೆವೈಸಿ ಪದ್ಧತಿಯನ್ನು ಕೈಬಿಡಬೇಕಾಗಿದೆ. ಉದ್ಯಮಗಳು ಆಧಾರ್ಗೆ ಪರ್ಯಾಯವಾಗಿ ಮಾರ್ಗ ಕಂಡುಕೊಳ್ಳಲೇಬೇಕು.
ಗ್ರಾಹಕರ ಸಹಿ, ಫೋಟೋ ಇರುವ ಹಣ, ಆಸ್ತಿ ಪತ್ರಗಳನ್ನು ಪರಿಶೀಲನಾ ಕೇಂದ್ರಕ್ಕೆ ಸಾಗಿಸಬೇಕು. ಮತ್ತು ಸಂಬಂಧಪಟ್ಟ ಗ್ರಾಹಕರನ್ನು ಕರೆದು ಪರಿಶೀಲಿಸಲು ಹೇಳಬೇಕು. ಇದೆಲ್ಲ ಪತ್ರ ಸಲ್ಲಿಸಿದ 24-36 ಗಂಟೆಯೊಳಗೆ ಆಗಬೇಕು ಎಂದು UIDAI ಅಭಿಪ್ರಾಯ ಪಟ್ಟಿದೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ