ರಾಜಕೀಯ ನಾಯಕತ್ವ, ಸಾರ್ವಜನಿಕ ಅನುದಾನ, ಪಾಲುದಾರಿಕೆ, ಸಾರ್ವಜನಿಕ ಸಹಭಾಗಿತ್ವ… ಇದು ಸ್ವಚ್ಛ ಭಾರತ ಅಭಿಯಾನದ ಮೂಲಕ ಭಾರತಕ್ಕೆ ಜಾಗತಿಕ ಪ್ರತಿಷ್ಠೆ, ಗೌರವ ತಂದುಕೊಟ್ಟ ಪ್ರಧಾನಿ ನರೇಂದ್ರ ಮೋದಿ ಅವರು ಸ್ವಚ್ಛ ಜಗತ್ತಿನ ನಿರ್ವಣಕ್ಕಾಗಿ ಮುಂದಿಟ್ಟಿರುವ 4 ಅಂಶಗಳ ಹೊಸ ಸೂತ್ರ.
ಗಾಂಧಿಜಿ 150ನೇ ಜಯಂತಿ ಅಂಗವಾಗಿ ಮಂಗಳವಾರ ದೆಹಲಿಯಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಸ್ವಚ್ಛತಾ ಸಮ್ಮೇಳನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪೊಲಿಟಿಕಲ್ ಲೀಡರ್ಶಿಪ್, ಪಬ್ಲಿಕ್ ಫಂಡಿಂಗ್, ಪಾಟರ್°ರ್ಶಿಪ್ ಮತ್ತು ಪೀಪಲ್ ಪಾರ್ಟಿಸಿಪೇಷನ್ ಎಂಬ ಈ 4-ಪಿ ಸೂತ್ರವನ್ನು ಪಾಲಿಸಿದಲ್ಲಿ ಇಡೀ ವಿಶ್ವವೇ ಸ್ವಚ್ಛ, ಸುಂದರವಾಗುವುದರಲ್ಲಿ ಅನುಮಾನ ಬೇಡ ಎಂದು ಮೋದಿ ಪ್ರತಿಪಾದಿಸಿದರು.
ಗಾಂಧಿ ಹಾಕಿಕೊಟ್ಟ ದಾರಿಯಲ್ಲಿ ನಾವು ಸಾಗುತ್ತಿದ್ದೇವೆ. ಸ್ವಾತಂತ್ರ್ಯ ಹಾಗೂ ಸ್ವಚ್ಛತೆ ಪೈಕಿ ಗಾಂಧಿ ಸ್ವಚ್ಛತೆಗೆ ಪ್ರಾಥಮಿಕ ಆದ್ಯತೆ ನೀಡಿದ್ದರು. ಕೆಲವರು ಮೂದಲಿಸಿದರೂ ಸ್ವಚ್ಛತಾ ಅಭಿಯಾನಕ್ಕೆ ಭಾರತ ಮುಂದಡಿ ಇಟ್ಟಿದೆ. ಗಾಂಧಿಯ ಸ್ವಚ್ಛತಾ ಪಥದಲ್ಲಿ ದೇಶದ 125 ಕೋಟಿ ಜನರು ಸಾಗುತ್ತಿದ್ದಾರೆ. ಈಗ ಇಡೀ ವಿಶ್ವವೇ ಸ್ವಚ್ಛತೆಯ ಕಡೆ ಹೆಜ್ಜೆ ಹಾಕುತ್ತಿದೆ. 4-ಪಿ ಸೂತ್ರ ಅನುಸರಿಸಿದರಷ್ಟೆ ಸ್ವಚ್ಛತಾ ಅಭಿಯಾನ ಯಶಸ್ವಿಯಾಗಲು ಸಾಧ್ಯ ಎಂದು ಮೋದಿ ತಿಳಿಸಿದರು.
ವಿಶ್ವಸಂಸ್ಥೆ ಶ್ಲಾಘನೆ
ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರಸ್ ಭಾರತ ಸರ್ಕಾರದ ಸ್ವಚ್ಛತಾ ಅಭಿಯಾನ ಶ್ಲಾಘನೀಯ. ಭಾರತ 2030ರ ವೇಳೆಗೆ ಸುಸ್ಥಿರ ಅಭಿವೃದ್ಧಿ ದೇಶವಾಗಿ ಹೊರಹೊಮ್ಮಲು ಇದು ಧನಾತ್ಮಕ ಹೆಜ್ಜೆಯಾಗಿದೆ. ಸ್ವಚ್ಛತಾ ಅಭಿಯಾನಕ್ಕೆ ವಿಶ್ವಸಂಸ್ಥೆಯೂ ನೆರವು ನೀಡಲಿದೆ ಎಂದು ಭರವಸೆ ನೀಡಿದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ