ವಿಷಯಕ್ಕೆ ಹೋಗಿ

**ಜ್ಞಾನ ಕಾರಂಜಿ**::: ಆರೋಗ್ಯ, ಅನಾರೋಗ್ಯ ಮತ್ತು ಆಹಾರ ಎ,

ಇಂದಿನ ಕಲುಷಿತ ಆಹಾರಪದಾರ್ಥಗಳು ನಮ್ಮ ದೇಹ ಮತ್ತು ಮನಸ್ಸಿಗೆ ಅನಾರೋಗ್ಯವನ್ನು ಉಂಟುಮಾಡುತ್ತಿವೆ. ಆಹಾರಶುದಿಟಛಿಯಿಂದಲೇ ಮನಸ್ಸಿನ ಶುದ್ಧಿ ಎಂಬುದನ್ನು ಮರೆಯಬಾರದು. ಆದರೆ ಇಂದಿನ ಪರಿಸ್ಥಿತಿಯೇ ಹೀಗಿರುವಾಗ ಯಾವುದೇ ವಸ್ತುವನ್ನು ಬಳಸಲು ಭಯವಾಗುತ್ತದೆ. ಅಲ್ಲದೆ ಒಂದು ರೀತಿಯ ಅಸಹ್ಯ ಭಾವನೆಯೂ ಬೆಳೆಯುತ್ತಿದೆ.
ಲ್ಲರೂ ಆರೋಗ್ಯವಂತರಾಗಿರಲು ಬಯಸುತ್ತಾರೆ. ಇದು ತೀರಾ ಸಹಜವಾದದ್ದು. ಏಕೆಂದರೆ ಆರೋಗ್ಯವೆಂಬುದು ಸುಖ, ಅನಾರೋಗ್ಯವೇ ದುಃಖ; ಆರೋಗ್ಯವೇ ಭಾಗ್ಯ, ಅನಾರೋಗ್ಯವೇ ದೌರ್ಭಾಗ್ಯ. ಉತ್ತಮ ಆರೋಗ್ಯ ಶ್ರೇಷ್ಠವ್ಯಕ್ತಿತ್ವದ ಬುನಾದಿಯೂ ಹೌದು. ಆರೋಗ್ಯವನ್ನು 2 ವಿಧವಾಗಿ ವಿಂಗಡಿಸಬಹುದು. ಮೊದಲನೆಯದು ಸ್ವಾಭಾವಿಕವಾದದ್ದು. ನಮ್ಮ ದೇಹಪ್ರಕೃತಿ, ಉದ್ಯೋಗ, ಕೌಟುಂಬಿಕ ವಾತಾವರಣದಿಂದ ಈ ಆರೋಗ್ಯ ಸ್ವಾಭಾವಿಕವಾಗಿರುತ್ತದೆ.
ಇನ್ನೊಂದು ಕೃತಕವಾದದ್ದು. ಇನ್ನೊಬ್ಬರ ಕಾಯಿಲೆ ಕಂಡು, ತಮ್ಮ ಆರೋಗ್ಯವನ್ನು ಹೇಗೆ ರಕ್ಷಿಸಿಕೊಳ್ಳಬೇಕೆಂಬ ಚಿಂತೆ ಮತ್ತು ದಿನವೂ ಸುದ್ದಿಜಾಲಗಳಲ್ಲಿ ಬರುವ ಮಾಹಿತಿ ಅನುಸರಿಸಿ ಅನಾರೋಗ್ಯ ತಂದುಕೊಂಡು, ಆರೋಗ್ಯ ಸಂಪಾದಿಸಲು ಯತ್ನಿಸುವುದು- ಇದು ಕೃತಕ. ಈ 2ನೇ ವಿಧಾನದಲ್ಲಿ ಆರೋಗ್ಯದ ಬಗ್ಗೆ ಚಿಂತಿಸಿ ಚಿಂತಿಸಿ ಮತ್ತು ಕೆಲವೊಮ್ಮೆ ತಪ್ಪು ಮಾಹಿತಿಗಳಿಂದಾಗಿ, ಆರೋಗ್ಯವಂತ ಶರೀರವನ್ನು ಅನಾರೋಗ್ಯದ ಗೂಡಾಗಿಸಿಕೊಳ್ಳುತ್ತಾರೆ. ಹಾಗಾಗಿ ಆರೋಗ್ಯ-ಸಂಬಂಧಿತ ಭೀತಿ, ಚಿಂತೆಯೂ ಅನಾರೋಗ್ಯಕ್ಕೆ ಕಾರಣವಾಗಬಹುದು.
ಜಂಕ್​ಫುಡ್ ಅವಾಂತರ: ರೋಗ-ರುಜಿನವಿರುವ ದೇಹದಲ್ಲಿ ಆತ್ಮ ಬರಡಾಗುತ್ತದೆ. ಚಿಂತನಶಕ್ತಿಗೆ ಮಂಕು ಕವಿಯುತ್ತದೆ.
ದೇಹ-ಮನಸ್ಸುಗಳ ಸಂಬಂಧವೇ ವಿಶಿಷ್ಟವಾದದ್ದು. ಶ್ರೇಷ್ಠಕವಿ ಡಿ.ವಿ.ಜಿ. ಹೀಗೆ ಹೇಳಿದ್ದಾರೆ-
‘ದೇಹವೆಂಬುದು ಕುದುರೆಯಾತ್ಮನದರಾರೋಹಿ |
ವಾಹನವನುಪವಾಸವಿರಿಸೆ ನಡೆದೀತೆ?
ಆರೋಹಿ ಜಾಗ್ರತೆದಪ್ಪೆ ಯಾತ್ರೆ ಸುಖಸಾಗೀತೇ?
ಸ್ನೇಹವೆರಡಕಮುಚಿತ- ಮಂಕುತಿಮ್ಮ’
‘ಹಿತಭುಕ್, ಮಿತಭುಕ್, ಋತಭುಕ್’ ಎಂಬುದು ಆಯುರ್ವೆದದ ಆರೋಗ್ಯಸೂತ್ರ. ಆದರೆ ಬಹುತೇಕರು ಯೌವನದಲ್ಲಿ ಅವಶ್ಯಕತೆಗಿಂತ ಹೆಚ್ಚು ಆಹಾರವನ್ನು ಅದರಲ್ಲೂ ಕೊಬ್ಬಿನಂಶದ ಆಹಾರವನ್ನು ಸೇವಿಸುತ್ತಾರೆ, ಸಮಯವಲ್ಲದ ಸಮಯದಲ್ಲೂ ತಿನ್ನುತ್ತಾರೆ, ಸ್ವೇಚ್ಛೆಯಿಂದ ಬದುಕುತ್ತಾರೆ. ಅವರಿಗೆ ಆರೋಗ್ಯದ ಚಿಂತೆಯಿಲ್ಲ, ಬದಲಾಗಿ ನಾಲಿಗೆಚಪಲದ ಚಿಂತೆ. ಜತೆಗೆ ದೇಹಚಟುವಟಿಕೆಯಿಲ್ಲದ ಆಧುನಿಕ ಜೀವನಶೈಲಿ ಸೇರಿಕೊಂಡು ಬಗೆಬಗೆಯ ಆರೋಗ್ಯ ಸಮಸ್ಯೆಗಳಿಗೆ ಒಳಗಾಗುತ್ತಾರೆ. ಹಿಂದೆಲ್ಲ ಬಂಧು-ಬಳಗ, ಸ್ನೇಹಿತರು ಬಂದಾಗ ಮನೆಯಲ್ಲಿಯೇ ಆಹಾರವನ್ನು ಸಿದಟಛಿಪಡಿಸಿ ತಿನ್ನುತ್ತಿದ್ದರು.
ಇದು ಆನಂದದಾಯಕವೂ ಆರೋಗ್ಯಪೂರ್ಣವೂ ಆಗಿರುತ್ತಿತ್ತು. ಆದರೀಗ ಅಂಥ ಸಂದರ್ಭ ಬಂದಾಗಲೂ ಹೊರಗಿನ ಆಹಾರವನ್ನು, ಅದರಲ್ಲೂ ಪ್ರಚಲಿತದಲ್ಲಿರುವ ‘ಜಂಕ್​ಫುಡ್’ ಅನ್ನು ಸೇವಿಸುತ್ತಾರೆ. ಇದೊಂದು ಅಸಹಜ ಮತ್ತು ಅನಾರೋಗ್ಯಕರ ಆಹಾರ. ಕೇವಲ ಬಾಯಿಚಪಲಕ್ಕೆ ಸೇವಿಸುವ ತಿನಿಸುಗಳು ದೇಹಕ್ಕೆ ಸಮಸ್ಯೆ ತಂದೊಡ್ಡುತ್ತವೆ. ಮಾನವಸಹಜ ಬಯಕೆಯಿಂದ ಯಾವತ್ತೋ ಒಮ್ಮೆ ರಜಾದಿನಗಳಲ್ಲಿ ಅಥವಾ ಸ್ನೇಹಿತರೆಲ್ಲ ಸೇರಿದಾಗ ಹೊರಗಿನ ಆಹಾರ ತಿಂದರೆ ಅಷ್ಟು ದೋಷವಾಗಲಿಕ್ಕಿಲ್ಲವೇನೋ! ಆದರೆ ಒಮ್ಮೆ ಈ ಜಂಕ್​ಫುಡ್ ಚಟ ಹತ್ತಿದರೆ ಅದು ಸೇವಿಸಿದವರನ್ನು ದಣಿಸಿ, ಸಾತ್ವಿಕ ಆಹಾರದ ರುಚಿಯನ್ನೇ ಮರೆಸಿಬಿಡುತ್ತದೆ.
ನೀರನ್ನೂ ವಿಷಯವನ್ನೂ ಸೋಸಿ ಸ್ವೀಕರಿಸಬೇಕು: ಇತ್ತೀಚೆಗೆ ವ್ಯಸನಮುಕ್ತಿ ಕಾರ್ಯಕ್ರಮದ ‘ಜನಜಾಗೃತಿ ವೇದಿಕೆ’ಯ ಒಂದು ಶಿಬಿರಕ್ಕೆ ಹೋಗಿದ್ದೆ. ಅಲ್ಲಿ ಸೇರಿದವರ ವರ್ತನೆ, ಜೀವನದ ಹಿನ್ನೆಲೆ ಕೇಳಿದಾಗ ಮಹತ್ತರ ವಿಷಯವೊಂದು ನನ್ನ ಗಮನಕ್ಕೆ ಬಂತು. ಈ ಚಟ ಎಂಬುದು 2 ವಿಧ. ಒಂದು ಒಳ್ಳೆಯ ಚಟ; ಇದನ್ನು ಹವ್ಯಾಸ ಎನ್ನಬಹುದು. ಇನ್ನೊಂದು ದುಶ್ಚಟ; ಇದನ್ನು ದುರಭ್ಯಾಸ, ದುರ್ಗಣ ಎಂದೂ ಕರೆಯಬಹುದು. ಒಳ್ಳೆಯ ಚಟವೆಂದರೆ ನಮ್ಮ ನಂಬಿಕೆ, ನಡವಳಿಕೆ, ಧಾರ್ವಿುಕ ಅಭ್ಯಾಸಗಳು, ಹಿರಿಯರು ನಮಗೆ ಬಳುವಳಿಯಾಗಿ ಬಿಟ್ಟುಹೋದ ಸಂಸ್ಕಾರ, ಆಹಾರ-ವಿಹಾರ ಕ್ರಮಗಳನ್ನು ಅನುಸರಿಸುವುದು ಅರ್ಥಾತ್ ನಮ್ಮ ಸಹಜ ಜೀವನಕ್ರಮವಿದು. ಇದರಿಂದ ಆರೋಗ್ಯಪೂರ್ಣ ಜೀವನವನ್ನು ನಡೆಸಬಹುದು. ಶುಭಕರವಾದ, ಅನುಕೂಲಕರವಾದ ಮತ್ತು ಅನುಸರಣೆಯಿಂದ ನಮಗೆ ಉಪಕಾರಕವಾದಂತಹ ಹವ್ಯಾಸಗಳನ್ನು, ಆಹಾರಕ್ರಮವನ್ನು ಬೆಳೆಸಿಕೊಳ್ಳಬಹುದು. ಇದಕ್ಕೂ ಸಂಸ್ಕೃತಿ, ಸಂಸ್ಕಾರ, ಸಂಪ್ರದಾಯಗಳಿಗೂ ಸಂಬಂಧವನ್ನು ಕಲ್ಪಿಸುತ್ತೇವೆ. ಯಾಕೆಂದರೆ ಇವೆಲ್ಲ ನೀರನ್ನು ಸೋಸಿ ಕುಡಿದ ಹಾಗೆ. ಬಾವಿ, ಕೆರೆಯ ನೀರು ಕಣ್ಣಿಗೆ ಕಂಡಷ್ಟು ಶುದಟಛಿವಾಗಿರಲಿಕ್ಕಿಲ್ಲ. ಅದರಲ್ಲೂ ಕಲ್ಮಷಗಳಿರುತ್ತವೆ. ಆದ್ದರಿಂದ ವಸಣಉದಿಂದ ಶೋಧಿಸಿದ ನೀರು ಅಥವಾ ಬಿಸಿಮಾಡಿ ಆರಿಸಿದ ನೀರು ಅಥವಾ ಅನೇಕ ಆಧುನಿಕ ಉಪಕರಣಗಳಿಂದ ಶುದಿಟಛೀಕರಿಸಿದ ನೀರು ಆರೋಗ್ಯಪೂರ್ಣವಾಗಿರುತ್ತದೆ. ಅಂದರೆ, ಈ ಚಟ ಎನ್ನುವುದನ್ನು ಪರಿಷ್ಕರಿಸಿ ಅರಿತುಕೊಂಡು ಮಾಡಿದರೆ ಒಳ್ಳೆಯ ಹವ್ಯಾಸವಾಗಿರುತ್ತದೆ. ಇಂತಹ ಅನೇಕ ಒಳ್ಳೆಯ ಚಟಗಳು/ಹವ್ಯಾಸಗಳು ಸ್ವಸ್ಥ ಮನಸ್ಸು, ಆರೋಗ್ಯಪೂರ್ಣ ದೇಹ ಮತ್ತು ಸಾತ್ವಿಕ ಬುದಿಟಛಿಯನ್ನು ಬೆಳೆಸುತ್ತವೆ.
ದುಶ್ಚಟಗಳು ಎಂದರೆ ನಮ್ಮ ಸ್ವಾಭಾವಿಕ ಹವ್ಯಾಸಗಳನ್ನು ಇನ್ನೊಬ್ಬರ ಪ್ರಭಾವಕ್ಕೆ ಒಳಗಾಗಿ ಅಥವಾ ಸಹವಾಸದೋಷದಿಂದ ಕೆಡಿಸಿಕೊಳ್ಳುವುದು. ವಿಶೇಷವಾಗಿ ಇಂದು ಯುವಜನರು ಈ ವಾಮಮಾರ್ಗವನ್ನು ಅನುಸರಿಸುತ್ತಿದ್ದಾರೆ. ಸುಸಂಸ್ಕೃತ ಕುಟುಂಬಕ್ಕೆ ಸೇರಿದ ಹುಡುಗ ಅಥವಾ ಹುಡುಗಿ, ಕೆಟ್ಟವರ ಸಹವಾಸದಿಂದಾಗಿ ಮಾದಕವಸ್ತುಗಳ ವ್ಯಸನಕ್ಕೆ ತುತ್ತಾಗುತ್ತಿದ್ದಾರೆ. ಪರಂಪರಾಗತವಾಗಿ ಬಂದ ಜೀವನಶೈಲಿ, ಆಹಾರ ಪದಟಛಿತಿಯನ್ನು ನಗಣ್ಯವಾಗಿ ಕಾಣುತ್ತಿದ್ದಾರೆ. ಗಾಳಿಗೆ ಬಂದ ಧೂಳು ಮತ್ತು ದುರ್ವಾಸನೆ ನಮ್ಮ ಮೈಗೆ ಅಂಟಿಕೊಳ್ಳುವ ಹಾಗೆ, ನಮ್ಮ ಆರೋಗ್ಯವನ್ನು ಕೆಡಿಸಿಕೊಳ್ಳುವಂತಹ ಚಪಲವೇ ಕೆಟ್ಟಚಟ. ಬಯಸದೇ ಬಂದ ಅಪಚಾರ, ಅಪವಾದಗಳಂತೆ ಈ ಕೆಟ್ಟಚಟಗಳೂ ನಮಗೆ ಅಂಟಿಕೊಳ್ಳಬಹುದು. ಇದರಿಂದ ಜೀವನದಲ್ಲಿ ಅನಾರೋಗ್ಯ, ಅಧೋಗತಿಗಳು ಉಂಟಾಗುತ್ತವೆ.
ಸಜ್ಜನರು ಪರೀಕ್ಷೆ ಮಾಡಿ ಯೋಗ್ಯವಾದದ್ದನ್ನು  ಮಾತ್ರ ಸ್ವೀಕರಿಸುತ್ತಾರೆ: ಆರೋಗ್ಯದ ಬಗ್ಗೆ ಸಲಹೆ ಕೊಡುವವರ ಸಂಖ್ಯೆ ಇತ್ತೀಚೆಗೆ ಹೆಚ್ಚಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಆರೋಗ್ಯ ಸಂಬಂಧಿತ ಸಲಹೆಗಳು ಬಹಳಷ್ಟು ಬರುತ್ತವೆ. ಇವನ್ನು ನೆಚ್ಚಿಕೊಂಡು ಮನೆಗಳಲ್ಲಿ ಅನೇಕರು ಆ ಪದಟಛಿತಿಯನ್ನು ಅನುಸರಿಸುತ್ತಾರೆ. ಅಥವಾ ಇನ್ನಾರೋ ಬಂದವರು ಹೇಳಿದ ವಿಷಯ, ‘ಹಳೆಯ ಆಹಾರಕ್ರಮ ಸರಿಯಲ್ಲ’ ಎಂಬಿತ್ಯಾದಿ ಸಲಹೆಗಳಿಂದ ನಾವು ಬದಲಾವಣೆಗಳನ್ನು ತಂದುಬಿಡುತ್ತೇವೆ. ಇದು ಒಂದು ರೀತಿಯಲ್ಲಿ ಆಧುನಿಕ ಜಗತ್ತಿನ ಒಳಿತೂ ಹೌದು, ಸಮಸ್ಯೆಯೂ ಹೌದು. ವಾಟ್ಸ್ ಆಪ್ ನಂತಹ ಮಾಧ್ಯಮಗಳಲ್ಲಿ ಯಾವ ಯಾವುದನ್ನು ಹೇಗೆ ಬಳಸಬೇಕೆಂದು ಸೂಚನೆ ಇರುತ್ತದೆ. ಹೇಗೆ ಬಳಸಿದರೆ ಒಳಿತು, ಯಾವ ಕ್ರಮ ಸರಿಯಲ್ಲ ಎಂದೂ ಲೇಖನವಿರುತ್ತದೆ. ಆದರೆ ಈ ಯಾವ ಲೇಖನಗಳನ್ನೂ ಆಧಾರವಿಲ್ಲದೆ ನಂಬಬಾರದು. ಹೀಗೆ ಅಜ್ಞಾತರಿಂದ ಬರುವ ಮಾಹಿತಿಗಳ ಬಗ್ಗೆ ತುಂಬ ಎಚ್ಚರದಿಂದಿರಬೇಕು. ಯಾಕೆಂದರೆ ‘ಆಪ್ತರಾದವರ ಮಾತನ್ನು ಪ್ರಮಾಣವೆಂದು ತಿಳಿಯಬೇಕು’ ಎಂಬುದು ಶಾಸಣಉಸಮ್ಮತವೇ ಆದರೂ, ಆಪ್ತನು ಯಥಾರ್ಥವನ್ನು ನುಡಿಯುವವನಾಗಿರಬೇಕು. ನಮಗೆ ಸಲಹೆ-ಸೂಚನೆಗಳನ್ನು ನೀಡುವವರಲ್ಲಿ ಎಂತಹ ತಿಳಿವಳಿಕೆ ಇದೆ, ವೈಜ್ಞಾನಿಕ ಚಿಂತನೆ ಇದೆ ಎಂಬುದನ್ನು ತಿಳಿದು ಅವರ ಸಲಹೆಯನ್ನು ಸ್ವೀಕರಿಸುವುದೋ ಅಥವಾ ತ್ಯಜಿಸುವುದೋ ಎಂದು ನಿರ್ಣಯಿಸಬೇಕು. ‘ಸಂತಃ ಪರೀಕ್ಷ್ಯ ಅನ್ಯತರದ್ಭಜಂತೇ ಮೂಢಃ ಪರಪ್ರತ್ಯಯನೇಯ ಬುದಿಟಛಿಃ’- ಹಳೆಯದೆಂಬ ಒಂದೇ ಕಾರಣಕ್ಕೆ ಎಲ್ಲವೂ ಒಳ್ಳೆಯದಾಗಿರಬೇಕೆಂದೇನಿಲ್ಲ, ಹೊಸದೆಲ್ಲವೂ ಕೆಟ್ಟದ್ದೆಂದು ನಿಂದಿಸಬೇಕಾಗಿಲ್ಲ. ಸಜ್ಜನರು ಪರೀಕ್ಷೆ ಮಾಡಿ ಯೋಗ್ಯವಾದದ್ದನ್ನು ಸ್ವೀಕರಿಸುತ್ತಾರೆ. ಮೂರ್ಖರು ಮಾತ್ರ ಇನ್ನೊಬ್ಬರು ಹೇಳಿದ್ದನ್ನೇ ನಂಬಿ ನಡೆದುಬಿಡುತ್ತಾರೆ.
ಕೆಲವು ಪ್ರಸಿದಟಛಿ ವೈದ್ಯರು, ಜೀವನಶೈಲಿಯ ಮಾರ್ಗದರ್ಶಕರು ಹೇಳಿದ ಸಲಹೆಯನ್ನು ನಾವು ವಿಶ್ಲೇಷಿಸಿಯೇ ಸ್ವೀಕರಿಸಬೇಕು. ಏಕೆಂದರೆ ಹಾಗೆ ಹೇಳುವವರಿಗೆ
ಅವರದೇ ಆದ ಸಿದ್ಧಾಂತಗಳಿರುತ್ತವೆ ಮತ್ತು ಅವರದೇ ಪದಟಛಿತಿಯ ಬಗ್ಗೆ ಒಲವಿರುತ್ತದೆ. ಅಲೋಪಥಿ, ಆಯುರ್ವೆದ, ಹೋಮಿಯೋಪಥಿ, ಪ್ರಕೃತಿ ಚಿಕಿತ್ಸೆ ಹೀಗೆ ಅವರವರ ಕ್ಷೇತ್ರದ ಬಗ್ಗೆ ಒಲವಿದ್ದು ಮಾತನಾಡಬಹುದು. ಒಬ್ಬ ಧರ್ಮದ ಬಗ್ಗೆ, ಆ ಧರ್ಮದಲ್ಲಿ ಪ್ರತಿಪಾದಿಸಿರುವ ಮೌಲ್ಯದ ಬಗ್ಗೆ ಮಾತನಾಡುವವನು ತನ್ನ ಧರ್ಮದ ಸಿದಾಟಛಿಂತವೇ ಸತ್ಯ. ಎಲ್ಲರೂ ಅದನ್ನೇ ಅನುಸರಿಸುವುದು ಒಳ್ಳೆಯದೆಂದು ಹೇಳಿಬಿಡಬಹುದು. ಎಲ್ಲ ಸಿದಾಟಛಿಂತಗಳಲ್ಲಿಯೂ ಒಂದು ತತ್ತ್ವವಿರುತ್ತದೆ. ಹಾಗಾಗಿ ಯಾವುದನ್ನೂ ಪರಿಶೀಲಿಸಿ, ಪರಾಂಬರಿಸಿ, ಸೋಸಿ ಶುದಿಟಛೀಕರಿಸಿ ಸ್ವೀಕರಿಸಬೇಕು. ಇಲ್ಲದಿದ್ದರೆ ಅಂತಹ ಸಲಹೆಗಳು ಉಪಕಾರಕ್ಕಿಂತ ಉಪವಾಸಕ್ಕೆ ಕಾರಣವಾಗಬಹುದು.
ಆಹಾರಶುದ್ಧಿಯಿಂದಲೇ ಮನಸ್ಸಿನ ಶುದ್ಧಿ: ಇಂದು ನಮ್ಮ ಆಹಾರ ಪದಾರ್ಥಗಳೆಲ್ಲ ಹೆಚ್ಚು ಹೆಚ್ಚು ಕಲುಷಿತವಾಗುತ್ತಿವೆ. ಎಲ್ಲರೂ ತರಕಾರಿ, ಅಕ್ಕಿ, ಬೇಳೆ-ಕಾಳುಗಳನ್ನು ಪೇಟೆಯಿಂದ ತಂದು ಅಡುಗೆಯನ್ನು ಸಿದಟಛಿಪಡಿಸುತ್ತಾರೆ. ಪೇಟೆಯಲ್ಲಿ ಸಿಗುವ ಇಂತಹ ಹಣ್ಣು-ಹಂಪಲುಗಳು ಹೊರಗಿನಿಂದ ನೋಡಲು ಸುಂದರವಾಗಿ ಕಂಡರೂ, ಕೃತಕ ಗೊಬ್ಬರ, ರಾಸಾಯನಿಕ ಸಿಂಪಡಣೆಗಳಿಂದ ಬೆಳೆದ ಇವು ಒಡಲಲ್ಲಿ ವಿಷಾಂಶವನ್ನೇ ತುಂಬಿಕೊಂಡಿರುತ್ತವೆ. ರಾಸಾಯನಿಕಗಳ ಅತಿಯಾದ ಬಳಕೆಯಿಂದ ಮಣ್ಣು ಸತ್ವವನ್ನು ಕಳೆದುಕೊಂಡಿದೆ. ಬೆಳೆದ ವಸ್ತುಗಳು ಹಾಳಾಗದಂತೆ ಸಂರಕ್ಷಣೆಮಾಡಲು ರಾಸಾಯನಿಕವನ್ನು ಉಪಯೋಗಿಸುತ್ತಾರೆ. ಹಿಂದಿನ ಕಾಲದಲ್ಲಿ ಮನೆಗೆ ಬೇಕಾದ ಎಲ್ಲ ಆಹಾರ ಪದಾರ್ಥಗಳನ್ನೂ ನಾವೇ ಬೆಳೆಸಿಕೊಳ್ಳುತ್ತಿದ್ದೆವು. ಮನೆಯಲ್ಲೋ ಗ್ರಾಮದಲ್ಲೋ ಬೆಳೆದ ತರಕಾರಿ, ಮನೆಯ ಹಣ್ಣುಗಳು, ಮನೆಯ ಹಾಲು, ಸಾವಯವದಿಂದ ಬೆಳೆದ ಭತ್ತ ಇಂತಹ ಶುದಟಛಿವಸ್ತುಗಳು ಇಂದು ಸಿಗಲಿಕ್ಕಿಲ್ಲ. ಹಳ್ಳಿಯಲ್ಲಿ ವಾಸಿಸುವವರು ಕೂಡ ಇಂದು ಪೇಟೆಯ ಹಣ್ಣು-ಹಂಪಲು, ತರಕಾರಿಗಳನ್ನು ತಂದು ಬಳಸುತ್ತಾರೆ. ನಮ್ಮನ್ನು ಗಾಬರಿಗೊಳಿಸುವಂತಹ ಅಂಶ- ಈ ಹಣ್ಣು, ತರಕಾರಿ ವಿಷಯಗಳಲ್ಲಿ ಹೆಚ್ಚಾಗುತ್ತಿದೆ. ಬಾಳೆಹಣ್ಣು ಮತ್ತು ಇತರ ಎಲ್ಲ ಹಣ್ಣುಗಳನ್ನು ರಾಸಾಯನಿಕ ಉಪಯೋಗಿಸಿ ಹಣ್ಣು ಮಾಡುತ್ತಾರೆ. ಹಾಲುಗಳಿಗೆ ಡಿಟರ್ಜೆಂಟ್ ಗಳನ್ನು ಉಪಯೋಗಿಸುತ್ತಾರೆ. ಎಣ್ಣೆ ಕಲುಷಿತವಾಗಿದೆ. ತರಕಾರಿಗಳ ತೂಕ ಹೆಚ್ಚಿಸುವುದಕ್ಕಾಗಿ ಅಡ್ಡದಾರಿ ಹಿಡಿದಿದ್ದಾರೆಂಬುದು ನಮಗೆ ಮನವರಿಕೆಯಾಗಿದೆ. ಇಂತಹ ಕಲುಷಿತ ಆಹಾರ ಪದಾರ್ಥಗಳಿಂದ ಉತ್ತಮ ಆರೋಗ್ಯವನ್ನು ನಿರೀಕ್ಷಿಸುವುದು ಹೇಗೆ ತಾನೆ ಸಾಧ್ಯ? ನಾವು ತಿಂದ ಆಹಾರ ಮೂರು ಭಾಗವಾಗುತ್ತದೆಂದು ಉಪನಿಷತ್ತು ಹೇಳುತ್ತದೆ.
ನಾವು ಸೇವಿಸಿದ ಆಹಾರದ ಮೂರನೇ ಒಂದು ಭಾಗ ಜೀರ್ಣವಾಗಿ ಮಲ-ಮೂತ್ರದ ಮೂಲಕ ದೇಹದಿಂದ ಹೊರಗೆ ಹೋಗುತ್ತದೆ. ಇನ್ನೊಂದು ಮೂರನೇ ಒಂದು ಭಾಗ ರಕ್ತವಾಗುತ್ತದೆ. ಉಳಿದ ಮೂರನೇ ಒಂದು ಭಾಗ ನಮ್ಮ ಮನಸ್ಸಾಗುತ್ತದಂತೆ. ಆದ್ದರಿಂದ ಇಂದಿನ ಕಲುಷಿತ ಆಹಾರಪದಾರ್ಥಗಳು ನಮ್ಮ ದೇಹ ಮತ್ತು ಮನಸ್ಸಿಗೆ ಅನಾರೋಗ್ಯವನ್ನು ಉಂಟುಮಾಡುತ್ತಿವೆ. ಆಹಾರಶುದಿಟಛಿಯಿಂದಲೇ ಮನಸ್ಸಿನ ಶುದ್ಧ. ಆದರೆ ಇಂದಿನ ಪರಿಸ್ಥಿತಿಯೇ ಹೀಗಿರುವಾಗ ನಮಗೆ ಯಾವುದೇ ವಸ್ತುವನ್ನು ಬಳಸಲು ಭಯವಾಗುತ್ತದೆ. ನಾನು ಕಳೆದ ಕೆಲವು ವರ್ಷಗಳಿಂದ ಸೇಬುಹಣ್ಣು ತಿನ್ನುವುದನ್ನು ಬಿಟ್ಟಿದ್ದೇನೆ. ಏಕೆಂದರೆ ಅಪರೂಪಕ್ಕೆ ಒಳ್ಳೆಯ ಸೇಬು ಕಂಡರೆ, ಅದರ ಸಿಪ್ಪೆ ತೆಗೆದಾಗ ಮೂಲರುಚಿ ಮಾಯವಾಗಿರುತ್ತದೆ. ಅಲ್ಲದೆ, ಕೃತಕ ರುಚಿಯು ಗೊತ್ತಾಗಿಬಿಡುತ್ತದೆ. ಹೊರಗೆ ಪಕ್ವವಾದದ್ದೆಂದು ತುಂಡರಿಸಿದಾಗ ಒಳಗೆ ಹುಳುಕಾಗಿರುತ್ತದೆ. ಯಾಕೆಂದರೆ ಅದಕ್ಕೆ ಯಾವ್ಯಾವುದೋ ಬಣ್ಣ, ರಾಸಾಯನಿಕ ಸಿಂಪಡಣೆ ಮಾಡಿ ‘ಕ್ವಾಲಿಟಿ ಫ್ರೂಟ್​’ ಎಂದು ಸ್ಟಿಕ್ಕರ್ ಅಂಟಿಸಿರುತ್ತಾರೆ. ಆದರೆ ಇವೆಲ್ಲವೂ ಕೃತಕವಾಗಿ ಮಾಡಲ್ಪಟ್ಟಂಥವು.
ಹಾಗಾಗಿ ಇಂದಿನ ಯುಗದಲ್ಲಿ ಸಹಜ ಆಹಾರ ಯಾವುದು, ಕೃತಕ ಯಾವುದೆಂದು ತಿಳಿಯುವುದು ಕಷ್ಟ. ಆದರೂ ಸಹಜವಾದ ಉತ್ತಮ ವಸ್ತುಗಳನ್ನು ಆಯ್ಕೆ ಮಾಡುವುದು, ಕೃಷಿಕರು ತಾವೇ ಬೆಳೆಸಿ ಅಥವಾ ತಯಾರಿಸಿ ಉಪಯೋಗಿಸುವುದು ಒಳ್ಳೆಯದು. ದೃಢನಂಬಿಕೆಯಿಂದ ವಿಷವನ್ನು ಸೇವಿಸಿದರೂ ಅದು ಅಮೃತವೇ ಆಗುತ್ತದೆ ಎನ್ನುತ್ತಾರೆ. ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಶುದ್ಧ ಮನಸ್ಸು,  ಶುದ್ಧ ಹಸ್ತದಿಂದ ಮತ್ತು ತಾಯಿ/ಪತ್ನಿ ಮನೆಯಲ್ಲಿ ಪ್ರೀತಿಯಿಂದ ಸಿದ್ಧಪಡಿಸಿದ ಆಹಾರವನ್ನು ಸ್ವೀಕರಿಸಿ ಆರೋಗ್ಯವನ್ನು ರಕ್ಷಿಸಿಕೊಳ್ಳುವುದು ಒಳ್ಳೆಯದು. ಏಕೆಂದರೆ ‘ಶರೀರಮಾದ್ಯಂ ಖಲು ಧರ್ಮಸಾಧನಮ್ ಎಂಬ ಆರ್ಯೋಕ್ತಿಯಂತೆ ಜೀವನದ ಪರಮಗುರಿಯನ್ನು ಸಾಧಿಸಲು ಆರೋಗ್ಯಪೂರ್ಣ ಶರೀರ ಬಹಳ ಮುಖ್ಯ.
(ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು)

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

**ಜ್ಞಾನ ಕಾರಂಜಿ**::: ಬೇನಾಮಿ ಆಸ್ತಿ ಪ್ರಕರಣ ವಿಲೇವಾರಿಗೆ ನ್ಯಾಯಾಧಿಕರಣ,

ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್​ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್​ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್​ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...

**ಜ್ಞಾನ ಕಾರಂಜಿ**::: ★ ವೈಜ್ಞಾನಿಕ ಉಪಕರಣಗಳು ಹಾಗೂ ಅವುಗಳ ಉಪಯೋಗಗಳು

1) ಅಲ್ಟಿಮೀಟರ್ —————> ಎತ್ತರ ಮತ್ತು ವಾಯುವಿನ ಒತ್ತಡವನ್ನು ಸೂಚಿಸುವ ಸಾಧನ. 2) ಲ್ಯಾಕ್ಟೊಮೀಟರ್ —————> ಹಾಲಿನಲ್ಲಿರುವ ನೀರಿನ ಪ್ರಮಾಣವನ್ನು ಅಳೆಯುವ ಸಾಧನ. 3) ಬ್ಯಾರೋಮೀಟರ್ —————> ಭೂಮಿಯ ಮೇಲಿನ ಹವೆಯ ಒತ್ತಡವನ್ನು ಅಳೆಯುವ ಸಾಧನ. 4) ಮೈಕ್ರೋಮೀಟರ್ —————> ಸಣ್ಣ ವಸ್ತುಗಳ ದಪ್ಪವನ್ನು ಅಳೆಯುವ ಸಾಧನ. 5) ಹೈಡ್ರೋಮೀಟರ್ —————> ದ್ರವಗಳ ಸಾಪೇಕ್ಷ ಸಾಂದ್ರತೆಯನ್ನು ಅಳೆಯುವ ಸಾಧನ. 6) ಪೈರೋಮೀಟರ್ —————> ಹೆಚ್ಚು ಉಷ್ಣತೆಯನ್ನು ಅಳೆಯುವ ಸಾಧನ. 7) ಪ್ಯಾಥೋಮೀಟರ್ —————> ಸಮುದ್ರದ ಆಳವನ್ನು ಅಳೆಯುವ ಸಾಧನ. 8) ವೋಲ್ಟಾಮೀಟರ್ —————> ವಿದ್ಯುತ್ ಕೋಶದ ವಿದ್ಯುತ್ ಚಾಲಕ ಬಲವನ್ನು ಅಳೆಯುವ ಸಾಧನ. 9) ಗ್ಯಾಲ್ವನೋಮೀಟರ್ —————> ಕಡಿಮೆ ವಿದ್ಯುತ್ ಅಳೆಯುವ ಸಾಧನ. 10) ಅನಿಮಾಮೀಟರ್ —————> ಗಾಳಿಯ ವೇಗವನ್ನು ಅಳೆಯುವ ಸಾಧನ. 11) ಓಡೋಮೀಟರ್ —————> ಚಕ್ರವಾಹನಗಳು ಚಲಿಸುವ ದೂರವನ್ನು ಅಳೆಯುವ ಸಾಧನ. 12) ಸ್ಪೀಡೋಮೀಟರ್ —————> ವಾಹನಗಳ ವೇಗವನ್ನು ಅಳೆಯುವ ಸಾಧನ. 13) ಗ್ರಾಫಿಮೀಟರ್ —————> ನೀರಿನ ಸೆಲೆಯನ್ನು ಪತ್ತೆ ಹಚ್ಚುವ ಸಾಧನ. 14) ಮೋನೋಮೀಟರ್ —————> ಅನಿಲಗಳ ಒತ್ತಡಗಳನ್ನು ಅಳೆಯುವ ಸಾಧನ. 15) ಕ್ರೋನೋಮೀಟರ್ —————> ಹಡಗಿನ ನಿಖರವಾದ ಕಾಲವನ್ನು ಅಳತೆ ಮಾಡುವ ಸಾಧನ. 16) ರೆಡಿಯೋಮೀಟರ್ —————> ವಿಕಿರಣಗಳಿಂದ ಹೊರಬರುವ ಶಕ್ತಿಯನ್ನು ಅಳೆಯುವ ಸಾಧನ. 1...

.. ಭಾರತೀಯ ಕಾವ್ಯ ಮೀಮಾಂಸೆ

ಭಾರತೀಯ ಕಾವ್ಯ ಮೀಮಾಂಸೆ ಭಾರತೀಯ ಕಾವ್ಯಮೀಮಾಂಸೆಗೆ ಸುಮಾರು ಎರಡು ಸಾವಿರ ವರ್ಷಗಳ ದೀರ್ಘ ಇತಿಹಾಸವಿದೆ. ಕವಿ ಮತ್ತು ಕಾವ್ಯದ ಲಕ್ಷಣಗಳು, ಕಾವ್ಯ ಪ್ರಭೇದಗಳು. ಕಾವ್ಯಾಲಂಕಾರಗಳು, ಕಾವ್ಯದ ವಸ್ತು ಇತ್ಯಾದಿ ಕಾವ್ಯನಿರ್ಮಿತಿಗೆ ಸಂಬಂಧಿಸಿದ ಮಹತ್ತ್ವದ ಅಂಶಗಳ ಶಾಸ್ತ್ರೀಯ ನಿರೂಪಣೆಯೇ ಕಾವ್ಯನಿಮೀಮಾಂಸೆ. ಇದನ್ನು ಅಲಂಕಾರ ಶಾಸ್ತ್ರವೆಂದೂ ಕರೆಯಲಾಗುತ್ತದೆ. ಪ್ರಾಚೀನ ಯುಗದಲ್ಲಿ ಅಲಂಕಾರಶಾಸ್ತ್ರವೆಂದರೆ ಪ್ರಧಾನವಾಗಿ ನಾಟ್ಯ ನೃತ್ಯ ಇತ್ಯಾದಿ ರಂಗ ಸಂಸ್ಕರಣ ಅಥವಾ ನಾಟ್ಯಕಲೆಯನ್ನು ಸರ್ವಾಂಗ ಸುಂದರವಾಗಿ ಮಾಡುವ ಒಂದು ಪರಿಷ್ಕಾರ ಶಾಸ್ತ್ರವಾಗಿದ್ದಿತು. ಕಾಲಕ್ರಮೇಣ ಇದು ಕಾವ್ಯಕಲೆಯನ್ನು ಪರಿಷ್ಕರಿಸುವ ಶಾಸ್ತ್ರವಾಗಿ ಪರಿಣಮಿಸಿತು. ಇದರ ಆರಂಭ ಯಾವಾಗಿ ಯಾರಿಂದ ಆಯಿತೆಂದು ಇತ್ಯರ್ಥಪಡಿಸುವುದು ಕಷ್ಟದ ಕೆಲಸ. ಸಾಹಿತ್ಯದಲ್ಲಿ ಸೌಂದರ್ಯೋಪಾಸನೆ ಪ್ರಾರಂಭವಾದಂದಿನಿಂದಲೂ ಪಂಡಿತರು ಮತ್ತು ವಿಮರ್ಶಕರು ಸಾಹಿತ್ಯದಲ್ಲಿ ಸೌಂದರ್ಯ ಅರಸಿ ಈ ಚಿತ್ತ ಸಂಸ್ಕರಣ ಶಾಸ್ತ್ರವನ್ನು ಬೆಳೆಸಿಕೊಂಡು ಬಂದಿದ್ದಾರೆ. ಕ್ರಿ. ಪೂ. 6ನೆಯ ಶತಮಾನದಲ್ಲಿದ ಯಾಸ್ಕಾಚಾರ್ಯ ಉಪಮೆ ರೂಪಕಗಳ ಬಗ್ಗೆ ಉಲ್ಲೇಖಸಿದ್ದಾನೆ. ಕ್ರಿ. ಪೂ. 5ನೆಯ ಶತಕದ ವೇಳೆಗೆ ಪಾಣಿನಿ ನಟರ ವಿಷಯ ಪ್ರಸ್ತಾಪಿಸಿದ್ದಾನೆ. ವೇದಗಳ ಕಾಲದಲ್ಲೂ ಉಪಮಾ ರೂಪಕಾದಿಗಳ ಪ್ರಯೋಗವಿದೆ. ಋಗ್ವೇದದಲ್ಲಿ ಕಂಡುಬರುವ ಯಮಯಮಿಯರ ಸಂವಾದ, ಊರ್ವಶೀ ಪುರೂರವರ ಸಂವಾದ_ಇವುಗಳಿಂದ ವೇದಕಾಲದಲ್ಲಿ ನಾಟಕದ ಅಂಕುರಾರ್ಪಣವಿದ್ದಂತಿದೆ....