ಹಿಂಗಾರು ಬೆಳೆಗೂ ಬೆಂಬಲ ಬೆಲೆ ನೀಡುವ ಮಹತ್ವದ ತೀರ್ವನವನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟ ಬುಧವಾರ ಕೈಗೊಂಡಿದೆ. ಮುಂಗಾರು ಬೆಳೆಗಳ ಜತೆಗೆ ಎಲ್ಲ ರೀತಿಯ ಹಿಂಗಾರು ಕೃಷಿ ಬೆಳೆಗಳಿಗೂ ಕನಿಷ್ಠ ಬೆಂಬಲ ಬೆಲೆ(ಎಂಎಸ್ಪಿ) ದೊರೆಯಲಿದೆ. ರೈತರ ಆದಾಯ ದ್ವಿಗುಣಗೊಳಿಸುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯನ್ವಯ ಈ ಕ್ರಮ ತೆಗೆದುಕೊಳ್ಳಲಾಗಿದೆ. ಪ್ರಸಕ್ತ ಸಾಲಿನ ಹಿಂಗಾರು ಬೆಳೆ ಮುಂದಿನ ಆರ್ಥಿಕ ಸಾಲಿನಲ್ಲಿ ಮಾರಾಟವಾಗುವಾಗ ಈ ಎಂಎಸ್ಪಿ ಅನ್ವಯವಾಗಲಿದೆ. ಇದರಿಂದ ರೈತರಿಗೆ ಹೆಚ್ಚುವರಿಯಾಗಿ 62,365 ಕೋಟಿ ರೂ. ಆದಾಯ ಬರಲಿದೆ. ಎಂಎಸ್ಪಿಯು ಉತ್ಪಾದನೆ ವೆಚ್ಚಕ್ಕಿಂತ ಶೇ.50 ಹೆಚ್ಚಿರಲಿದೆ.
6 ಬೆಳೆಗಳ ಎಂಎಸ್ಪಿ ಹೆಚ್ಚಳ: ಹಿಂಗಾರು ಬೆಳೆಗಳನ್ನು ಎಂಎಸ್ಪಿ ವ್ಯಾಪ್ತಿಗೆ ತರುವುದರ ಜತೆಗೆ 6 ಪ್ರಮುಖ ಬೆಳೆಗಳ ಎಂಎಸ್ಪಿಯನ್ನು ಕೂಡ ಏರಿಸಲಾಗಿದೆ. ಗೋಧಿ(105 ರೂ.), ಬಾರ್ಲಿ(30ರೂ.), ಕಡಲೆಬೇಳೆ(220 ರೂ.), ಮಸೂರ್(225 ರೂ.), ಸೂರ್ಯಕಾಂತಿ(845 ರೂ.) ಹಾಗೂ ಸಾಸಿವೆ(200 ರೂ.) ಎಂಎಸ್ಪಿ ಹೆಚ್ಚಳವಾಗಿದೆ.
ಇತರ ನಿರ್ಣಯಗಳು
ಖಾಸಗಿ ಸಹಭಾಗಿತ್ವದಲ್ಲಿ ಭಾರತೀಯ ರೈಲ್ವೆ ನಿಲ್ದಾಣ ಅಭಿವೃದ್ಧಿ ಪ್ರಾಧಿಕಾರಗಳಿಂದ ರೈಲ್ವೆ ನಿಲ್ದಾಣ ಅಭಿವೃದ್ಧಿ, 99 ವರ್ಷಗಳವರೆಗೆ ನಿಲ್ದಾಣ ಭೋಗ್ಯಕ್ಕೆ ನೀಡಿಕೆ.
ರಸ್ತೆ ಸಾರಿಗೆ ಹಾಗೂ ಉದ್ಯಮಕ್ಕೆ ಸಂಬಂಧಿಸಿ ಭಾರತ-ರಷ್ಯಾ ಜಂಟಿ ಒಪ್ಪಂದ.
ಇಂದೋರ್ ಹಾಗೂ ಭೋಪಾಲ್ ಮೆಟ್ರೋ ರೈಲು ಯೋಜನೆಗೆ ಸಮ್ಮತಿ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ