ಪ್ರತಿಷ್ಠಿತ ಸಿಯೋಲ್ ಶಾಂತಿ ಪುರಸ್ಕಾರ 2018ಕ್ಕೆ ಪ್ರಧಾನಿ ನರೇಂದ್ರ ಮೋದಿ ಭಾಜನರಾಗಿದ್ದಾರೆ. ಈ ಪ್ರಶಸ್ತಿಯು 1.47 ಕೋಟಿ ನಗದು ಪುರಸ್ಕಾರ ಹಾಗೂ ಪಾರಿತೋಷಕವನ್ನು ಒಳಗೊಂಡಿದೆ.
ಶ್ರೀಮಂತರು ಮತ್ತು ಬಡವರ ನಡುವಿನ ಅಂತರ ಕಡಿಮೆ ಮಾಡುವ ‘ಮೋದಿನಾಮಿಕ್ಸ್’ ನೀತಿ ಜಾರಿಗೊಳಿಸಿದ್ದಕ್ಕಾಗಿ ಭಾರತದ ಪ್ರಧಾನಿಯನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿದ್ದಾಗಿ ಕ್ವಾನ್ ಇ ಹೈಯಾಕ್ ಅಧ್ಯಕ್ಷತೆಯ ಸಿಯೋಲ್ ಶಾಂತಿ ಪುರಸ್ಕಾರ ಸಾಂಸ್ಕೃತಿಕ ಪ್ರತಿಷ್ಠಾನ ಹೇಳಿದೆ.
ವಿವಿಧ ರಾಷ್ಟ್ರಗಳ ಜತೆ ಆರ್ಥಿಕ ಸಹಕಾರ, ಮಾನವೀಯ ಹಿತಾಸಕ್ತಿ ಸಂರಕ್ಷಣೆ ಮತ್ತು ವಿಶ್ವಶಾಂತಿಗೆ ಉತ್ತೇಜನ ನೀಡಿರುವುದು ಮೋದಿಯವರ ಹಿರಿಯ ಸಾಧನೆ. ಅಲ್ಲದೆ, ರಾಜತಾಂತ್ರಿಕ ನೀತಿಗಳ ಮೂಲಕ ಅಂತಾರಾಷ್ಟ್ರೀಯ ಸಹಕಾರ ಏರ್ಪಡಿಸಿಕೊಂಡು ಏಷ್ಯಾ-ಪೆಸಿಫಿಕ್ ವಲಯದಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಮುಂದಾಗಿರುವ ಅವರು ಈ ಪ್ರಶಸ್ತಿಗೆ ಎಲ್ಲ ರೀತಿಯಲ್ಲೂ ಅರ್ಹರು ಎಂದು ಪ್ರತಿಷ್ಠಾನ ತಿಳಿಸಿದೆ.
ನೋಟು ಅಮಾನ್ಯೀಕರಣಕ್ಕೆ ಮೆಚ್ಚುಗೆ: ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಜತೆಗೆ ಸರ್ಕಾರಕ್ಕೆ ಭ್ರಷ್ಟಾಚಾರದ ಕಳಂಕ ಅಂಟಿಕೊಳ್ಳದಂತೆ ಪ್ರಧಾನಿ ಮೋದಿ ನೋಡಿಕೊಂಡಿದ್ದಾರೆ. ಇದಕ್ಕಾಗಿ ಅವರು ನೋಟು ಅಮಾನ್ಯೀಕರಣ ಸೇರಿ ಹಲವು ಭ್ರಷ್ಟಾಚಾರ ನಿಗ್ರಹ ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ಪ್ರತಿಷ್ಠಾನ ಮೆಚ್ಚುಗೆ ವ್ಯಕ್ತಪಡಿಸಿದೆ.
ಇತ್ತೀಚೆಗೆ ಮೋದಿ ಅವರಿಗೆ ವಿಶ್ವಸಂಸ್ಥೆಯು ‘ಚಾಂಪಿಯನ್ಸ್ ಆಫ್ ಅರ್ಥ್’ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. ಸೌರ ವಿದ್ಯುತ್ ಕ್ಷೇತ್ರಕ್ಕೆ ಉತ್ತೇಜನ ನೀಡುವ ಯೋಜನೆ ರೂಪಿಸಿದ್ದಕ್ಕಾಗಿ ಈ ಪುರಸ್ಕಾರವನ್ನು ಪ್ರದಾನ ಮಾಡಿತ್ತು.
ಸಿಯೋಲ್ ಶಾಂತಿ ಪುರಸ್ಕಾರವನ್ನು ಅತ್ಯಂತ ವಿನಯಪೂರ್ವಕವಾಗಿ ಸ್ವೀಕರಿಸುತ್ತೇನೆ. ಈ ಪ್ರಶಸ್ತಿಗಾಗಿ ನನ್ನನ್ನು ಆಯ್ಕೆ ಮಾಡಿದ್ದಕ್ಕಾಗಿ ಆಭಾರಿ.
| ನರೇಂದ್ರ ಮೋದಿ ಪ್ರಧಾನಿ

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ