ಲ್ಯಾವೆಂಡರ್ ಒಂದು ಗಿಡಮೂಲಿಕೆ. ಲ್ಯಾವೆಂಡರ್ನ ಸಾರವನ್ನು ತೆಗೆಯಲಾಗುತ್ತದೆ. ಈ ಪದಾರ್ಥವು ಚರ್ಮ, ಕೂದಲಿನ ಆರೋಗ್ಯಕ್ಕೆ, ಸೌಂದರ್ಯದ ದೃಷ್ಟಿಯಿಂದ ಬಹಳ ಒಳ್ಳೆಯದು. ಸುವಾಸನಾದ್ರವ್ಯಗಳ ತಯಾರಿಕೆಯಲ್ಲಿ, ಸೋಪು, ಶಾಂಪುಗಳ ತಯಾರಿಕೆಯಲ್ಲಿ ಲ್ಯಾವೆಂಡರ್ನ್ನು ಉಪಯೋಗಿಸುತ್ತಾರೆ. ಲ್ಯಾವೆಂಡರ್ ಆಯಿಲ್ ಆಂಟಿಸೆಪ್ಟಿಕ್ ಹಾಗೂ ಆಂಟಿ ಇನ್ಪ್ಲಮೇಟರಿ ಗುಣಗಳನ್ನು ಹೊಂದಿದೆ. ಸುಟ್ಟ, ಕಡಿದ ಗಾಯಗಳನ್ನು ಗುಣ ಮಾಡಲು ಇದು ಸಹಾಯಕಾರಿ. ಮಾನಸಿಕ ಒತ್ತಡ, ನಿದ್ರಾಹೀನತೆ, ಮಾನಸಿಕ ಖಿನ್ನತೆ ಹಾಗೂ ಸುಸ್ತನ್ನು ಕಡಿಮೆ ಮಾಡಲು ಸಹಕಾರಿ ಎಂದು ಸಂಶೋಧನೆಗಳು ಸಲಹೆ ನೀಡಿವೆ. ಲ್ಯಾವೆಂಡರ್ ಟೀ ಸೇವನೆಯು ವಾಂತಿ, ತೇಗು, ಹೊಟ್ಟೆಯಲ್ಲಿ ವಾಯು ಇಂತಹ ಉದರಸಂಬಂಧಿ ಸಮಸ್ಯೆಗಳ ನಿರ್ವಹಣೆಗೆ ಸಹಾಯಕಾರಿ. ತಲೆನೋವು, ಉಳುಕು, ಹಲ್ಲುನೋವು ಇಂಥವುಗಳಲ್ಲಿಯೂ ಲ್ಯಾವೆಂಡರ್ ಪರಿಣಾಮಕಾರಿ. ಕೂದಲಿನ ಆರೋಗ್ಯಕ್ಕಂತೂ ಲ್ಯಾವೆಂಡರ್ ಹೇಳಿ ಮಾಡಿಸಿದ ಔಷಧಿ. ಕೂದಲುದುರುವಿಕೆಯನ್ನು ನಿಲ್ಲಿಸುತ್ತದೆ. ಲ್ಯಾವೆಂಡರ್ ನೋವು ನಿವಾರಕ ಗುಣವನ್ನು ಹೊಂದಿದೆ. ಮುಟ್ಟಿನ ಮುಂಚಿನ ದಿನಗಳಲ್ಲಾಗುವ ಮನೋವೈಪರೀತ್ಯಗಳನ್ನು ನಿರ್ವಹಣೆ ಮಾಡಲು ಸಹಾಯಕಾರಿ. ಹೀಗೆ ಅನೇಕ ಸಮಸ್ಯೆಗಳ ನಿರ್ವಹಣೆಯಲ್ಲಿ ಸಹಾಯ ಮಾಡಬಲ್ಲುದು.
ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ