ಇದೇ ಮೊದಲ ಬಾರಿಗೆ ವಿಶ್ವದ ಪ್ರಖ್ಯಾತ ನಯಾಗರಾ ಫಾಲ್ಸ್ನಲ್ಲಿ ದೀಪಗಳ ಹಬ್ಬ ಆಚರಿಸಲಾಗುತ್ತಿದ್ದು, ದೀಪಾವಳಿ ಪ್ರಯುಕ್ತ ನಯಾಗರ ಫಾಲ್ಸ್ ಅನ್ನು ದೀಪಗಳಿಂದ ಸಿಂಗರಿಸಿ ಮತ್ತು ಪಟಾಕಿಗಳಿಂದ ಸಿಡಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ವಿಶ್ವದ ಪ್ರವಾಸಿಗರನ್ನು ತನ್ನತ್ತ ಸೆಳೆಯುವ ಉದ್ದೇಶದಿಂದ ನಾನ್ ಪ್ರಾಫಿಟ್ ಇಂಡೋ-ಕೆನಡಿಯನ್ ಆರ್ಟ್ಸ್ ಕೌನ್ಸಿಲ್ (ಐಸಿಎಸಿ) ನಯಾಗರ ಪಾರ್ಕ್ಸ್ ಕಮಿಷನ್ ಸಹಯೋಗದೊಂದಿಗೆ ಈ ಕಾರ್ಯಕ್ರಮ ಹಮ್ಮಿಕೊಂಡಿದೆ.
ನಯಾಗರ ಜಲಪಾತದಲ್ಲಿ ದೀಪಾವಳಿ ಆಚರಿಸಲು ಅನುಮತಿ ದೊರೆತ ನಂತರ ಪ್ರತಿಕ್ರಿಯಿಸಿರುವ ಐಸಿಎಸಿ ನಿರ್ದೇಶಕ ಅಜಯ್ ಮೋದಿ, ಕೆನಡಾದಲ್ಲಿ ಈ ಸಾಲಿನ ದೀಪಾವಳಿ ಆಚರಣೆಗೆ ಲ್ಯಾಂಡ್ಮಾರ್ಕ್ ಡೆಸ್ಟಿನೇಶನ್ ಹುಡುಕುತ್ತಿದ್ದೆವು. ಸುಂದರ ಜಾಗವೇ ಸಿಕ್ಕಿದೆ. ನ.7ರಂದು ದೀಪಾವಳಿ ಹಬ್ಬ ಇದ್ದು, ನಾವು ಅ.14ರಂದು ದೀಪಾವಳಿ ಆಚರಿಸುತ್ತೇವೆ. ನವೆಂಬರ್ ತಿಂಗಳಲ್ಲಿ ತುಂಬಾ ಚಳಿಯಿರುವುದರಿಂದ ಮುಂಚಿತವಾಗಿ ಆಚರಿಸಲು ತೀರ್ಮಾನಿಸಿದ್ದೇವೆ ಎಂದು ಹೇಳಿದ್ದಾರೆ.
ಈ ಆಚರಣೆಯನ್ನು ಕೇವಲ ಕೆನಡಾ ಜನ ನೋಡದೆ ವಿಶ್ವದ ಎಲ್ಲರೂ ಬಂದು ನೋಡಬೇಕು ಎಂಬುದು ಆಯೋಜಕರ ಆಸೆಯಾಗಿದೆ.
ದೀಪಾವಳಿ ಆಚರಣೆ ವೇಳೆ ನಯಾಗರ ಜಲಪಾತವನ್ನು ಭಾರತದ ತ್ರಿವರ್ಣದಿಂದ ಸಿಂಗರಿಸಲು ತಯಾರಿ ನಡೆಸಲಾಗುತ್ತಿದೆ. ಪಟಾಕಿ ಹೊಡೆದು ಸಂಭ್ರಮಿಸುವ ಮುಂಚೆ ಮಧ್ಯಾಹ್ನ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗಿದೆ ಎಂದು ಅಜಯ್ ಮೋದಿ ತಿಳಿಸಿದ್ದಾರೆ. (ಏಜೆನ್ಸೀಸ್)

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ