ಪೂರ್ವ ಆಫ್ರಿಕಾದಲ್ಲಿ ಒಟ್ಟು ಸಿಂಹಗಳ ಸಂಖ್ಯೆಯ ಶೇ. 30 ರಷ್ಟು ಸಿಂಹಗಳನ್ನು ಬಲಿ ಪಡೆದಿದ್ದ ಮಾರಣಾಂತಿಕ ಕ್ಯಾನಿನ್ ಡಿಸ್ಟಂಪರ್ ವೈರಸ್ ಸೋಂಕಿನಿಂದಾಗಿ ಗಿರ್ ಅರಣ್ಯದಲ್ಲಿ ಸಿಂಹಗಳು ಮೃತಪಟ್ಟಿವೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ತಿಳಿಸಿದೆ.
ಸೆಪ್ಟೆಂಬರ್ 12 ರಿಂದ ಗುಜರಾತ್ನ ಗಿರ್ ಅರಣ್ಯ ಪ್ರದೇಶದಲ್ಲಿ ಒಟ್ಟು 23 ಸಿಂಹಗಳು ಮೃತಪಟ್ಟಿದ್ದವು. ಇವುಗಳ ಪೈಕಿ 5 ಸಿಂಹಗಳು ಕ್ಯಾನಿನ್ ಡಿಸ್ಟಂಪರ್ ವೈರಸ್ ಸೋಂಕಿನಿಂದ ಮೃತಪಟ್ಟಿರುವುದು ಪರೀಕ್ಷೆಯಲ್ಲಿ ದೃಢಪಟ್ಟಿದೆ. ಈ ವೈರಸ್ ಪೂರ್ವ ಆಫ್ರಿಕಾದಲ್ಲಿ ಸಿಂಹಗಳ ಸಾವಿಗೆ ಕಾರಣವಾಗಿದೆ ಎಂದು ಸಂಶೋಧನಾ ಸಂಸ್ಥೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಅವನತಿಯ ಅಂಚಿನಲ್ಲಿರುವ ಸಿಂಹಗಳನ್ನು ರಕ್ಷಿಸಲು ಸಿಡಿವಿ ವ್ಯಾಕ್ಸಿನ್ ಅನ್ನು ನೀಡಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದ್ದು, ಗುಜರಾತ್ ಸರ್ಕಾರ ಅಮೆರಿಕದಿಂದ 300 ಸಿಡಿವಿ ವ್ಯಾಕ್ಸಿನ್ ಆಮದು ಮಾಡಿಕೊಂಡಿದೆ. ವ್ಯಾಕ್ಸಿನ್ ರಾಜ್ಕೋಟ್ ಏರ್ಪೋರ್ಟ್ಗೆ ತಲುಪಿದ್ದು, ಆದಷ್ಟು ಶೀಘ್ರ ಸಿಂಹಗಳಿಗೆ ಲಸಿಕೆ ನೀಡಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಅರಣ್ಯ ಇಲಾಖೆ ಸೋಂಕು ಹರಡದಂತೆ ತಡೆಯಲು ಅಗತ್ಯ ಕ್ರಮ ತೆಗೆದುಕೊಂಡಿದ್ದು, 36 ಸಿಂಹಗಳಿಗೆ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದ್ದು, ಅವುಗಳ ಪೈಕಿ 3 ಸಿಂಹಗಳ ಸ್ಥಿತಿ ಗಂಭೀರವಾಗಿದೆ.
ಕ್ಯಾನಿನ್ ಡಿಸ್ಟಂಪರ್ ವೈರಸ್ ಸಾಮಾನ್ಯವಾಗಿ ನಾಯಿಗಳಲ್ಲಿ ಕಂಡುಬರುತ್ತದೆ. ನಾಯಿಗಳು ಈ ವೈರಸ್ನ ವಾಹಕಗಳು ಎಂದು ತಿಳಿದುಬಂದಿದೆ. ಈ ವೈರಸ್ ತೋಳ, ನರಿ, ರಕ್ಕೂನ್ಸ್, ರೆಡ್ ಪಾಂಡಾಗಳು, ಫೆರ್ರಿಟ್ಸ್, ಹೈನಾ, ಸಿಂಹ ಮತ್ತು ಹುಲಿಗಳಲ್ಲಿ ಕಂಡು ಬರುತ್ತದೆ. (ಏಜೆನ್ಸೀಸ್)

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ