ವಿಷಯಕ್ಕೆ ಹೋಗಿ

**ಜ್ಞಾನ ಕಾರಂಜಿ**::: ಪ್ರವಾಹಕ್ಕೆ ಎದುರಾಗಿ ಈಜುವ ಸವಾಲು!

ಷೇರು ಮಾರುಕಟ್ಟೆಯಲ್ಲಿ ನೀವು ಎಷ್ಟು ಬೇಕಾದರೂ ಹಣ ಹೂಡಿ. ಆದರೆ, ಎರಡು ನಿಯಮಗಳನ್ನು ಮಾತ್ರ ಎಂದಿಗೂ ಮರೆಯಬೇಡಿ, ಅವೆಂದರೆ : ನಿಯಮ 1. ಎಂದೂ ಹಣ ಕಳೆದುಕೊಳ್ಳಬೇಡಿ; ನಿಯಮ 2 : ಮೊದಲನೇ ನಿಯಮವನ್ನು ಎಂದೂ ಮರೆಯಬೇಡಿ ! ಇದು ಜಾಗತಿಕ ಷೇರು ಮಾರುಕಟ್ಟೆಯ ಗುರು ಎನಿಸಿರುವ ವಾರನ್ ಬಫೆಟ್ ಹೇಳಿರುವ ಮಾತು. ಈ ಮಾತನ್ನು ಅವರಷ್ಟೇ ಕಾರ್ಯಗತಗೊಳಿಸಲು ಸಾಧ್ಯ ಎನ್ನುವಷ್ಟರ ಮಟ್ಟಿಗೆ ಇತ್ತೀಚಿನ ದಿನಗಳಲ್ಲಿ ಷೇರು ಮಾರುಕಟ್ಟೆ ಜಟಿಲವಾಗಿ ಕಾಣಿಸಿಕೊಂಡಿದೆ. ಅಂಕಿ ಅಂಶಗಳ ಹಾವು ಏಣಿ ಆಟದಲ್ಲಿ ಪೇರುಪೇಟೆಯು ಅಂದಾಜಿಗೇ ಸಿಲುಕದಿರುವುದು ಈಗ ಸ್ವಾಭಾವಿಕವಾಗಿ ಬಿಟ್ಟಿದೆ. ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡು ವಾರಗಳ ನಿರಂತರ ಹಿನ್ನಡೆ ಅನುಭವಿಸಿದ್ದು , ಕಳೆದ ವಾರದಲ್ಲೇ ಶೇ 2.8 ರಷ್ಟು ಕುಸಿತ ಕಂಡು ಏಳು ತಿಂಗಳ ಹಿಂದೆ ಇದ್ದ ಸ್ಥಿತಿಗೆ ತಲುಪಿವೆ.
ಅಕ್ಟೋಬರ್ ತಿಂಗಳಲ್ಲಿ ಈ ಎರಡು ಮಾರುಕಟ್ಟೆಗಳ ಸೂಚ್ಯಂಕಗಳು ಶೇ 8 ರಷ್ಟು ಕುಸಿತ ಕಂಡು, 2018 ರಲ್ಲಿ ಒಟ್ಟಾರೆಯಾಗಿ ಕಂಡುಬಂದಿದ್ದ ಸಕಾರಾತ್ಮಕ ಗುರುತುಗಳನ್ನು ಅಳಿಸಿಹಾಕಿವೆ. ಅಕ್ಟೋಬರ್ 26 ರಂದು ಕೊನೆಗೊಂಡ ಪೇಟೆಯ ವಹಿವಾಟಿನಂತೆ ನವೆಂಬರ್‌ನ ಆರಂಭದಲ್ಲೂ ಮಾರುಕಟ್ಟೆ ಅಷ್ಟೇನು ಸುಧಾರಣೆ ಕಾಣದು ಎಂಬ ಮುನ್ಸೂಚನೆ ಸಿಕ್ಕಿದೆ. ವಾರಾಂತ್ಯಕ್ಕೆ ಸೆನ್ಸೆಕ್ಸ್ ಸೂಚ್ಯಂಕ 33,349 ಅಂಶಗಳಿಗೆ ಕೊನೆಯಾಗಿದ್ದರೆ, ನಿಫ್ಟಿ 10,030 ಅಂಶಗಳಲ್ಲಿ ವಹಿವಾಟು ಮುಗಿಸಿದೆ. ಅಂದರೆ ಕಳೆದ ವಾರದಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಕ್ರಮವಾಗಿ 966 ಮತ್ತು 274 ಅಂಶಗಳನ್ನು ಕಳೆದುಕೊಂಡಿವೆ. ಹೀಗಾಗಿ ಪ್ರವಾಹಕ್ಕೆ ಎದುರಾಗಿ ಈಜುವ ಸವಾಲು ಮುಂದೆಯೂ ಇರಲಿದೆ.
ವಿದೇಶಿ ಷೇರು ಮಾರುಕಟ್ಟೆಯಲ್ಲಿ ನೆಗಡಿ ಬಂದರೆ ಭಾರತದ ಷೇರು ಮಾರುಕಟ್ಟೆಯಲ್ಲಿ ವಿಷಮಶೀತ ಜ್ವರ ಬರುತ್ತದೆ ಎನ್ನುವುದು ಷೇರು ತಜ್ಞರ ವಲಯದಲ್ಲಿರುವ ಮಾತು. ಅದಕ್ಕೆ ಇಂಬು ಕೊಡುವಂತೆ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ , ಹೌಸಿಂಗ್ ಫೈನಾನ್ಸ್ ಮತ್ತು ಬ್ಯಾಂಕಿಂಗ್‌ಯೇತರ ಕಂಪನಿಗಳ ಆರ್ಥಿಕ ಒತ್ತಡ, ಗ್ರಾಹಕರು ಒತ್ತಡದಿಂದ ತಮ್ಮ ವಹಿವಾಟು ಚುಕ್ತಾ ಮಾಡಿಕೊಂಡಿಕೊಳ್ಳುತ್ತಿರುವುದು, ವಿದೇಶಿ ಮಾರು
ಕಟ್ಟೆಗಳಲ್ಲಿ ಭಾರಿ ಹಿಂಜರಿಕೆ, ವಿತ್ತೀಯ ಕೊರತೆ ಸೇರಿದಂತೆ ಹಲವು ವಿಚಾರಗಳು ಷೇರು
ಪೇಟೆಯನ್ನು ಕದಡಿದ ಸ್ಥಿತಿಗೆ ತಂದಿವೆ. ಕಚ್ಚಾ ತೈಲ ಬೆಲೆ ಏರಿಕೆ ವಾರಾಂತ್ಯದಲ್ಲಿ ಕಡಿಮೆಯಾಗಿದ್ದರೂ ಅದಕ್ಕೆ ಷೇರು ಮಾರುಕಟ್ಟೆ ಸೂಕ್ತವಾಗಿ ಸ್ಪಂದಿಸಿಲ್ಲ. ಹೀಗಾಗಿ 2018 ರ ಮಾರ್ಚ್ ನಂತರದ ಅತಿ ಕಡಿಮೆ ವಹಿವಾಟನ್ನು ಷೇರುಪೇಟೆ ದಾಖಲಿಸಿದೆ.
ಯೆಸ್ ಬ್ಯಾಂಕ್ ಉಜ್ಜೀವನ್‌ಗೆ ತಟ್ಟಿದ ಬಿಸಿ: ಯೆಸ್ ಬ್ಯಾಂಕ್ ತನ್ನ ಎರಡನೇ ತ್ರೈಮಾಸಿಕ ಅವಧಿಯಲ್ಲಿ ₹ 964.7 ಕೋಟಿ  ನಿವ್ವಳ ಲಾಭ ಗಳಿಸಿದ್ದರೂ  ಶೇ 4 ರಷ್ಟು ಕುಸಿತ ದಾಖಲಿಸಿರುವುದರಿಂದ  ಬ್ಯಾಂಕ್‌ ಷೇರಿನ ಬೆಲೆ ಶೇ 9 ರಷ್ಟು ಕುಸಿತ ಕಂಡಿದೆ. ಅ.19 ರಂದು ₹217.70 ಇದ್ದ ಷೇರಿನ ಬೆಲೆ  26 ರಂದು ₹180.60 ಗೆ ಕುಸಿದಿದೆ.
ಉಜ್ಜೀವನ್ ಫೈನಾನ್ಶಿಯಲ್ ಸರ್ವೀಸಸ್ ಮತ್ತು ಇಕ್ವೀಟಾಸ್ ಹೋಲ್ಡಿಂಗ್ಸ್‌ನ ಷೇರುಗಳು ಶೇ 23 ರಷ್ಟು ಕುಸಿತ ಕಂಡು ಮಾರಾಟದ ಒತ್ತಡಕ್ಕೆ ಸಿಲುಕಿದ್ದವು. ಸಣ್ಣ ಮಟ್ಟದ ಬ್ಯಾಂಕ್‌ಗಳು ಆರಂಭವಾದ ಮೂರು ವರ್ಷಗಳ ಒಳಗಾಗಿ ಲೀಸ್ಟೆಡ್‌ ವ್ಯಾಪ್ತಿಗೆ ಬರಬೇಕು ಎಂದು ಆರ್‌ಬಿಐ ಪುನರುಚ್ಚರಿಸಿದ ಪರಿಣಾಮ ದಿಢೀರ್ ಕುಸಿತ ದಾಖಲಾಗಿತ್ತು.
ಮಾರುತಿಗೂ ತಟ್ಟಿದ ಬಿಸಿ : ಭಾರತದ ಅತಿ ದೊಡ್ಡ ಕಾರು ತಯಾರಿಕಾ ಕಂಪನಿ ಮಾರುತಿ ಸುಜುಕಿ  ಗುರುವಾರ ತನ್ನ ತ್ರೈಮಾಸಿಕ ವರದಿಯಲ್ಲಿ ಲಾಭಾಂಶ ಕುಸಿತದ ಬಗ್ಗೆ ಪ್ರಕಟಿಸಿತು. ₹ 2,240.4 ಕೋಟಿ ಆದಾಯ ಗಳಿಸಿದ್ದು ,ನಿವ್ವಳ ಲಾಭದಲ್ಲಿ 9.8 ರಷ್ಟು ಕಡಿಮೆಯಾಗಿದೆ ಎಂದು ತಿಳಿಸಿತು. ನಾಲ್ಕು ವರ್ಷಗಳಲ್ಲೇ ಮೊದಲ ಬಾರಿಗೆ ಮಾರುತಿ ಸುಜುಕಿ ತನ್ನ ಲಾಭ ತಗ್ಗಿರುವ ಬಗ್ಗೆ ವಿವರಿಸಿತು. ತಯಾರಿಕಾ ವೆಚ್ಚ , ಜಾಹೀರಾತು ವೆಚ್ಚ ಮತ್ತು ರೂಪಾಯಿ ಮೌಲ್ಯ ಕುಸಿತ ನಿವ್ವಳ ಲಾಭ ತಗ್ಗಲು ಕಾರಣ ಎಂದಿತು. ಇದರಿಂದ ₹ 6,760.40 ಇದ್ದ ಷೇರಿನ ಬೆಲೆ ₹ 6,705.30ಗೆ ಇಳಿಯಿತು.
ಏರಿಕೆ ದಾಖಲೆ :  ಪೇಟೆಯ ಇಂಡೆಕ್ಸ್‌ನಲ್ಲಿರುವ ಎಂಟು ಕಂಪನಿಗಳು ಶೇ 10 ಕ್ಕಿಂತ ಹೆಚ್ಚು ಪ್ರಗತಿ ದಾಖಲಿಸಿವೆ. ಇಐಡಿ ಪ್ಯಾರಿ ( ಶೇ 14), ಒಬೆರಾಯ್ ರಿಯಾಲ್ಟಿ (ಶೇ 13), ಇಂಟಲೆಕ್ಟ್ ಡಿಸೈನ್ ಅರೇನಾ (ಶೇ 12.73 ), ಕಜಾರಿಯ ಸೆರಾಮಿಕ್ಸ್ (ಶೇ 12), ಎಸ್ ಜಿವಿಎನ್ (ಶೇ 11.66), ಎಐಎ ಎಂಜಿನಿಯರಿಂಗ್ ( ಶೇ 11.23), ಫಿನೋಲೆಕ್ಸ್ ಇಂಡಸ್ಟ್ರೀಸ್ (ಶೇ 10.98), ಕ್ಯಾನ್ ಫಿನ್ ಹೋಮ್ಸ್ (ಶೇ 10.44) . ಇನ್ನು ಪ್ರಮುಖ ಕಂಪನಿಗಳಾದ ಎಚ್‌ಡಿಎಫ್‌ಸಿ ಶೇ 2.63, ಕೋಲ್ ಇಂಡಿಯಾ ಶೇ 1.83, ಮತ್ತು ಐಸಿಐಸಿಐ ಬ್ಯಾಂಕ್ ಶೇ 0.05 ರಷ್ಟು ಏರಿಕೆ ಕಂಡಿವೆ.
ಭಾರ್ತಿ ಏರ್‌ಟೆಲ್‌ನ ಅಚ್ಚರಿ ಫಲಿತಾಂಶ : ಭಾರ್ತಿ ಏರ್‌ಟೆಲ್‌ನ ಷೇರುಗಳು ಶೇ 4.24 ರಷ್ಟು ಏರಿಕೆ ಕಂಡಿವೆ.  ಎರಡನೇ ತ್ರೈಮಾಸಿಕ ಅವಧಿಯಲ್ಲಿ ಕಂಪನಿಯು ಅಚ್ಚರಿಯ ರೀತಿಯಲ್ಲಿ ₹ 118.8 ಕೋಟಿ ನಿವ್ವಳ ಲಾಭ ದಾಖಲಿಸಿರುವುದು ಇದಕ್ಕೆ ಕಾರಣವಾಗಿದೆ.
ಇಳಿಕೆ:  ಬಾಂಬೆ ಡೈಯಿಂಗ್,  ದಿಲೀಪ್ ಬಿಲ್ಡ್ ಕಾನ್, 8ಕೆ ಮೈಲ್ಸ್ , ಜುಬ್ಲಿಯಂಟ್ ಫುಡ್, ಕ್ವಾಲಿಟಿ ಸೇರಿದಂತೆ ಇನ್ನು ಕೆಲ ಕಂಪನಿಗಳು ಶೇ 23 ಕ್ಕಿಂತ ಹೆಚ್ಚು ಅಂಶಗಳ ಇಳಿಕೆ ಕಂಡಿವೆ. ಪ್ರಮುಖ ಕಂಪನಿಗಳಾದ ಸನ್ ಫಾರ್ಮಾ ಶೇ 9, ಇಂಡಸ್ ಇಂಡ್ ಬ್ಯಾಂಕ್ ಶೇ 8.33 , ಇನ್ಫೊಸಿಸ್ , ಶೇ 7.19, ಮತ್ತು ಟಿಸಿಎಸ್ ಶೇ 6.13 ರಷ್ಟು ಇಳಿಕೆ ಕಂಡಿವೆ.
ಸಾರ್ವಕಾಲಿಕ ಕುಸಿತ: ನಾರಾಯಣ ಹೃದಯಾಲಯ, ಹಿಂದೂಸ್ತಾನ್ ಏರೊನಾಟಿಕ್ಸ್, ಆದಿತ್ಯಾ ಬಿರ್ಲಾ ಕ್ಯಾಪಿಟಲ್, ಪಿಎನ್‌ಬಿ ಹೌಸಿಂಗ್ ಫೈನಾನ್ಸ್ , ಮ್ಯಾಕ್ಸ್ ಇಂಡಿಯಾ, ಉಜ್ಜೀವನ್ ಫೈನಾನ್ಶಿಯಲ್ , ಡಿಬಿ ಕಾರ್ಪ್ ಸೇರಿದಂತೆ ಇನ್ನೂ ಕೆಲ ಕಂಪನಿಗಳು  ಕುಸಿತ ದಾಖಲಿಸಿವೆ.
ವಾರದ ಮುನ್ನೋಟ: ಈ ವಾರವೂ ವಿವಿಧ ಕಂಪನಿಗಳ ತ್ರೈಮಾಸಿಕ ಆರ್ಥಿಕ ಪ್ರಗತಿ ವರದಿಗಳು ಷೇರು ಮಾರುಕಟ್ಟೆಯ ಮೇಲೆ ಪ್ರಭಾವ ಬೀರಲಿವೆ.
ವಿಜಯ ಬ್ಯಾಂಕ್, ಯುನಿಯನ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡ, ಅದಾನಿ ಪವರ್, ಬ್ಲೂ ಡಾರ್ಟ್, ಡಾಬರ್, ಎಸ್ಕಾರ್ಟ್ಸ್, ಟಾಟಾ ಮೋಟರ್ಸ್ , ಎಚ್‌ಡಿಎಫ್‌ಸಿ, ಎನ್‌ಟಿಪಿಸಿ , ಆ್ಯಕ್ಸಿಸ್ ಬ್ಯಾಂಕ್, ಎಸ್‌ಎಐಎಲ್ , ಐಒಸಿ , ಸೇರಿದಂತೆ ಪ್ರಮುಖ ಕಂಪನಿಗಳು ಅಕ್ಟೋಬರ್ 29 ರಿಂದ ನವೆಂಬರ್ 2 ಅವಧಿಯಲ್ಲಿ ವರದಿ ನೀಡಲಿವೆ. ಹೀಗಾಗಿ ಕಾದು ನೋಡುವ ತಂತ್ರ ಅನಿವಾರ್ಯವಾಗಲಿದೆ.
(ಸುವಿಷನ್‌ ಹೋಲ್ಡಿಂಗ್ಸ್‌ ಪ್ರವೇಟ್‌ ಲಿಮಿಟೆಡ್‌ನ ಕಾರ್ಪೊರೇಟ್‌ ಫೈನಾನ್ಸ್‌ ಉಪಾಧ್ಯಕ್ಷ)

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

**ಜ್ಞಾನ ಕಾರಂಜಿ**::: ಬೇನಾಮಿ ಆಸ್ತಿ ಪ್ರಕರಣ ವಿಲೇವಾರಿಗೆ ನ್ಯಾಯಾಧಿಕರಣ,

ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್​ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್​ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್​ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...

**ಜ್ಞಾನ ಕಾರಂಜಿ**::: ★ ವೈಜ್ಞಾನಿಕ ಉಪಕರಣಗಳು ಹಾಗೂ ಅವುಗಳ ಉಪಯೋಗಗಳು

1) ಅಲ್ಟಿಮೀಟರ್ —————> ಎತ್ತರ ಮತ್ತು ವಾಯುವಿನ ಒತ್ತಡವನ್ನು ಸೂಚಿಸುವ ಸಾಧನ. 2) ಲ್ಯಾಕ್ಟೊಮೀಟರ್ —————> ಹಾಲಿನಲ್ಲಿರುವ ನೀರಿನ ಪ್ರಮಾಣವನ್ನು ಅಳೆಯುವ ಸಾಧನ. 3) ಬ್ಯಾರೋಮೀಟರ್ —————> ಭೂಮಿಯ ಮೇಲಿನ ಹವೆಯ ಒತ್ತಡವನ್ನು ಅಳೆಯುವ ಸಾಧನ. 4) ಮೈಕ್ರೋಮೀಟರ್ —————> ಸಣ್ಣ ವಸ್ತುಗಳ ದಪ್ಪವನ್ನು ಅಳೆಯುವ ಸಾಧನ. 5) ಹೈಡ್ರೋಮೀಟರ್ —————> ದ್ರವಗಳ ಸಾಪೇಕ್ಷ ಸಾಂದ್ರತೆಯನ್ನು ಅಳೆಯುವ ಸಾಧನ. 6) ಪೈರೋಮೀಟರ್ —————> ಹೆಚ್ಚು ಉಷ್ಣತೆಯನ್ನು ಅಳೆಯುವ ಸಾಧನ. 7) ಪ್ಯಾಥೋಮೀಟರ್ —————> ಸಮುದ್ರದ ಆಳವನ್ನು ಅಳೆಯುವ ಸಾಧನ. 8) ವೋಲ್ಟಾಮೀಟರ್ —————> ವಿದ್ಯುತ್ ಕೋಶದ ವಿದ್ಯುತ್ ಚಾಲಕ ಬಲವನ್ನು ಅಳೆಯುವ ಸಾಧನ. 9) ಗ್ಯಾಲ್ವನೋಮೀಟರ್ —————> ಕಡಿಮೆ ವಿದ್ಯುತ್ ಅಳೆಯುವ ಸಾಧನ. 10) ಅನಿಮಾಮೀಟರ್ —————> ಗಾಳಿಯ ವೇಗವನ್ನು ಅಳೆಯುವ ಸಾಧನ. 11) ಓಡೋಮೀಟರ್ —————> ಚಕ್ರವಾಹನಗಳು ಚಲಿಸುವ ದೂರವನ್ನು ಅಳೆಯುವ ಸಾಧನ. 12) ಸ್ಪೀಡೋಮೀಟರ್ —————> ವಾಹನಗಳ ವೇಗವನ್ನು ಅಳೆಯುವ ಸಾಧನ. 13) ಗ್ರಾಫಿಮೀಟರ್ —————> ನೀರಿನ ಸೆಲೆಯನ್ನು ಪತ್ತೆ ಹಚ್ಚುವ ಸಾಧನ. 14) ಮೋನೋಮೀಟರ್ —————> ಅನಿಲಗಳ ಒತ್ತಡಗಳನ್ನು ಅಳೆಯುವ ಸಾಧನ. 15) ಕ್ರೋನೋಮೀಟರ್ —————> ಹಡಗಿನ ನಿಖರವಾದ ಕಾಲವನ್ನು ಅಳತೆ ಮಾಡುವ ಸಾಧನ. 16) ರೆಡಿಯೋಮೀಟರ್ —————> ವಿಕಿರಣಗಳಿಂದ ಹೊರಬರುವ ಶಕ್ತಿಯನ್ನು ಅಳೆಯುವ ಸಾಧನ. 1...

.. ಭಾರತೀಯ ಕಾವ್ಯ ಮೀಮಾಂಸೆ

ಭಾರತೀಯ ಕಾವ್ಯ ಮೀಮಾಂಸೆ ಭಾರತೀಯ ಕಾವ್ಯಮೀಮಾಂಸೆಗೆ ಸುಮಾರು ಎರಡು ಸಾವಿರ ವರ್ಷಗಳ ದೀರ್ಘ ಇತಿಹಾಸವಿದೆ. ಕವಿ ಮತ್ತು ಕಾವ್ಯದ ಲಕ್ಷಣಗಳು, ಕಾವ್ಯ ಪ್ರಭೇದಗಳು. ಕಾವ್ಯಾಲಂಕಾರಗಳು, ಕಾವ್ಯದ ವಸ್ತು ಇತ್ಯಾದಿ ಕಾವ್ಯನಿರ್ಮಿತಿಗೆ ಸಂಬಂಧಿಸಿದ ಮಹತ್ತ್ವದ ಅಂಶಗಳ ಶಾಸ್ತ್ರೀಯ ನಿರೂಪಣೆಯೇ ಕಾವ್ಯನಿಮೀಮಾಂಸೆ. ಇದನ್ನು ಅಲಂಕಾರ ಶಾಸ್ತ್ರವೆಂದೂ ಕರೆಯಲಾಗುತ್ತದೆ. ಪ್ರಾಚೀನ ಯುಗದಲ್ಲಿ ಅಲಂಕಾರಶಾಸ್ತ್ರವೆಂದರೆ ಪ್ರಧಾನವಾಗಿ ನಾಟ್ಯ ನೃತ್ಯ ಇತ್ಯಾದಿ ರಂಗ ಸಂಸ್ಕರಣ ಅಥವಾ ನಾಟ್ಯಕಲೆಯನ್ನು ಸರ್ವಾಂಗ ಸುಂದರವಾಗಿ ಮಾಡುವ ಒಂದು ಪರಿಷ್ಕಾರ ಶಾಸ್ತ್ರವಾಗಿದ್ದಿತು. ಕಾಲಕ್ರಮೇಣ ಇದು ಕಾವ್ಯಕಲೆಯನ್ನು ಪರಿಷ್ಕರಿಸುವ ಶಾಸ್ತ್ರವಾಗಿ ಪರಿಣಮಿಸಿತು. ಇದರ ಆರಂಭ ಯಾವಾಗಿ ಯಾರಿಂದ ಆಯಿತೆಂದು ಇತ್ಯರ್ಥಪಡಿಸುವುದು ಕಷ್ಟದ ಕೆಲಸ. ಸಾಹಿತ್ಯದಲ್ಲಿ ಸೌಂದರ್ಯೋಪಾಸನೆ ಪ್ರಾರಂಭವಾದಂದಿನಿಂದಲೂ ಪಂಡಿತರು ಮತ್ತು ವಿಮರ್ಶಕರು ಸಾಹಿತ್ಯದಲ್ಲಿ ಸೌಂದರ್ಯ ಅರಸಿ ಈ ಚಿತ್ತ ಸಂಸ್ಕರಣ ಶಾಸ್ತ್ರವನ್ನು ಬೆಳೆಸಿಕೊಂಡು ಬಂದಿದ್ದಾರೆ. ಕ್ರಿ. ಪೂ. 6ನೆಯ ಶತಮಾನದಲ್ಲಿದ ಯಾಸ್ಕಾಚಾರ್ಯ ಉಪಮೆ ರೂಪಕಗಳ ಬಗ್ಗೆ ಉಲ್ಲೇಖಸಿದ್ದಾನೆ. ಕ್ರಿ. ಪೂ. 5ನೆಯ ಶತಕದ ವೇಳೆಗೆ ಪಾಣಿನಿ ನಟರ ವಿಷಯ ಪ್ರಸ್ತಾಪಿಸಿದ್ದಾನೆ. ವೇದಗಳ ಕಾಲದಲ್ಲೂ ಉಪಮಾ ರೂಪಕಾದಿಗಳ ಪ್ರಯೋಗವಿದೆ. ಋಗ್ವೇದದಲ್ಲಿ ಕಂಡುಬರುವ ಯಮಯಮಿಯರ ಸಂವಾದ, ಊರ್ವಶೀ ಪುರೂರವರ ಸಂವಾದ_ಇವುಗಳಿಂದ ವೇದಕಾಲದಲ್ಲಿ ನಾಟಕದ ಅಂಕುರಾರ್ಪಣವಿದ್ದಂತಿದೆ....