ವಿಷಯಕ್ಕೆ ಹೋಗಿ

**ಜ್ಞಾನ ಕಾರಂಜಿ**::: ಹಶಿಮೋಟೊ ಥೈರಾಯ್ಡಿಟಿಸ್​ನಿಂದ ಮುಕ್ತಿ ಹೇಗೆ?,

*| ಡಾ. ವೆಂಕಟ್ರಮಣ ಹೆಗಡೆ*

*ಹಶಿಮೋಟೊ ಥೈರಾಯ್ಡಿಟಿಸ್ ಒಂದು ಆಟೋಇಮ್ಯೂನ್ ಕಾಯಿಲೆ. ಇಲ್ಲಿ ನಮ್ಮ ಇಮ್ಯೂನ್
ವ್ಯವಸ್ಥೆಯು (ಪ್ರತಿರಕ್ಷಣಾ ವ್ಯವಸ್ಥೆಯು) ಥೈರಾಯ್ಡ್ ಮೇಲೆ ದಾಳಿ ಮಾಡಿರುತ್ತದೆ.
ಥೈರಾಯ್ಡ್​ ಗ್ಲಾಂಡ್ ಕುತ್ತಿಗೆಯ ಮಧ್ಯಭಾಗ ಗಂಟಲಿನ ಕೆಳಭಾಗದಲ್ಲಿರುವ ಗ್ರಂಥಿ. ಇದು
ಅಂತಃಸ್ರಾವಕ (ಎಂಡೋಕ್ರೈನ್) ವ್ಯವಸ್ಥೆಯ ಮುಖ್ಯ ಭಾಗ. ದೇಹದ ಅನೇಕ ಕಾರ್ಯಗಳಿಗೆ ಬೇಕಾದ
ಹಾಮೋನ್ ಸ್ರವಿಕೆಯಲ್ಲಿ ಮುಖ್ಯ ಪಾತ್ರ ವಹಿಸುತ್ತದೆ.*


ಹಷಿಮೊಟೋ ಥೈರಾಯ್ಡಿಟಿಸ್ ಹೆಚ್ಚಾಗಿ 40 ವರ್ಷ ದಾಟಿದ ಮಹಿಳೆಯರಲ್ಲಿ ಕಂಡುಬರುತ್ತದೆ.
ಇತ್ತೀಚೆಗೆ ಪುರುಷರಲ್ಲಿ ಮತ್ತು ಮಕ್ಕಳಲ್ಲಿಯೂ ಕಾಣಿಸಿಕೊಳ್ಳುತ್ತಿದೆ. ಹಶಿಮೋಟೊ
ಥೈರಾಯ್ಡಿಟಿಸ್ ನಿಧಾನವಾಗಿ ತನ್ನ ಗುರುತುಗಳನ್ನು ತೋರಿಸುತ್ತದೆ. ಮೊದಮೊದಲು ಗಂಟಲಿನ
ಭಾಗಗಳಲ್ಲಿ ಬಾವು ಕಂಡುಬರುವುದು. ವರ್ಷಗಳು ಕಳೆದಂತೆ ಕ್ರೋನಿಕ್ ಥೈರಾಯ್ಡ್ ಸಮಸ್ಯೆಗೆ
ಕಾರಣವಾಗುತ್ತದೆ. ರಕ್ತದಲ್ಲಿ ಹಾಮೋನ್​ಗಳ ಸ್ರವಿಕೆ ಕಡಿಮೆಯಾಗುತ್ತದೆ. ಸುಸ್ತು,
ಸೋಮಾರಿತನ, ಪದೇಪದೆ ಶೀತ, ವಾತಾವರಣದಲ್ಲಿ ಸ್ವಲ್ಪ ಚಳಿಯಿದ್ದರೂ ದೇಹಕ್ಕೆ ಹೆಚ್ಚು
ಚಳಿಯಾದಂತೆ ಭಾಸವಾಗುವುದು, ಮಲಬದ್ಧತೆ, ತೆಳು-ಒಣ ಚರ್ಮ, ಚರ್ಮದ ಬಣ್ಣದಲ್ಲಿ ಕುಂದುವಿಕೆ,
ಊದಿಕೊಂಡ ಮುಖ, ಉಗುರು ತನ್ನಷ್ಟಕ್ಕೇ ಪದೇಪದೆ ಮುರಿದುಹೋಗುವುದು, ಕೂದಲುದುರುವಿಕೆ,
ನಾಲಿಗೆ ಊದಿಕೊಳ್ಳುವುದು, ಒಂದೇ ಸಮನೆ ತೂಕ ಹೆಚ್ಚಳ, ಮಾಂಸಖಂಡಗಳಲ್ಲಿ ನೋವು,
ಮಹಿಳೆಯರಲ್ಲಾದರೆ ಮುಟ್ಟಿನ ಸಮಯದಲ್ಲಿ ಅತ್ಯಧಿಕ ರಕ್ತಸ್ರಾವ, ಖಿನ್ನತೆ ಇತ್ಯಾದಿ ಲಕ್ಷಣಗಳು
ಕಂಡುಬರಬಹುದು. ಆದ್ದರಿಂದ ಇಂತಹ ಕೆಲವು ಲಕ್ಷಣಗಳು ಒಮ್ಮೆಲೇ ಕಾಣಿಸಿಕೊಳ್ಳುತ್ತಿರುವಾಗ
ವೈದ್ಯರನ್ನು ಭೇಟಿಯಾಗುವುದು ಮುಖ್ಯ.

ಗಟ್ ಬ್ಯಾಕ್ಟೀರಿಯಾಗಳನ್ನು ಸರಿಪಡಿಸುವುದು ಈ ಕಾಯಿಲೆಗಿರುವ ಮುಖ್ಯ ಪರಿಹಾರ. ಸಮಸ್ಯೆಗೆ
ತಕ್ಕುದಾದ ಆಹಾರಪದ್ಧತಿಯನ್ನು ರೂಢಿಸಿಕೊಳ್ಳುವುದು ಅಗತ್ಯ. ಕರಿದ ಆಹಾರ, ಫಾಸ್ಟ್ ಫುಡ್,
ಬೇಕರಿಯ ಆಹಾರಗಳನ್ನು ತ್ಯಜಿಸಬೇಕು. ಇಲ್ಲದಿದ್ದಲ್ಲಿ ಇವು ಕರುಳಿನಲ್ಲಿ ಇನ್ನೂ ಹೆಚ್ಚಿನ
ಕೆಟ್ಟ ಬ್ಯಾಕ್ಟೀರಿಯಾಗಳ ಉತ್ಪಾದನೆಗೆ ಕಾರಣವಾಗಿ ಸಮಸ್ಯೆಯು ಉಲ್ಬಣವಾಗಬಹುದು.
ಕರುಳಿನಲ್ಲಿ ಒಳ್ಳೆಯ ಬ್ಯಾಕ್ಟೀರಿಯಾಗಳನ್ನು ಹೆಚ್ಚಿಸಬೇಕು. ಪ್ರೀ ಪ್ರೋ ಬಯಾಟಿಕ್
ಆಹಾರಗಳನ್ನು ಸೇವಿಸಬೇಕು. ಸೋರ್​ಕ್ರೋಟ್ ಸೇವನೆಯು ಮನೆಯಲ್ಲಿಯೇ ಮಾಡಿಕೊಳ್ಳಬಹುದಾದ
ಅತ್ಯಂತ ಸುಲಭ ಹಾಗೂ ಪರಿಣಾಮಕಾರಿ ವಿಧಾನ. ಎಪಲ್ ಸಿಡರ್ ವಿನೆಗರ್​ನ್ನು ದಿನನಿತ್ಯ ಎರಡು
ಬಾರಿ ಎರಡು ಚಮಚದಂತೆ ನೀರಿನೊಂದಿಗೆ ಸೇರಿಸಿ ತೆಗೆದುಕೊಳ್ಳಬೇಕು. ರಾತ್ರಿ ಮಲಗುವ ಮೊದಲು
ಕಾಲು ಕಪ್ ಮೃದುವಾದ ಅನ್ನ, ಅರ್ಧ ಚಮಚ ಮಜ್ಜಿಗೆ ಹಾಗೂ ಸ್ವಲ್ಪ ನೀರು ಸೇರಿಸಿ ಇಡಬೇಕು.
ಮರುದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸಬೇಕು. ಇದು ಒಳ್ಳೆಯ ಗಟ್
ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ನೆರವಾಗುತ್ತದೆ. ಮಜ್ಜಿಗೆ ಹಾಗೂ ಹಸಿ ಶುಂಠಿ ಸೇರಿಸಿ
ದಿನಕ್ಕೆ 3-4 ಬಾರಿ ಸೇವಿಸಬೇಕು. ಆಂಟಿ ಥೈರೋಗ್ಲೋಬುಲಿನ್ ಆಂಟಿ ಬಾಡಿ ರಕ್ತಪರೀಕ್ಷೆ
ಮಾಡಿಸಿದಾಗ ಸಮಸ್ಯೆ ಇರುವುದು ಸ್ಪಷ್ಟವಾಗಿ ತಿಳಿಯುತ್ತದೆ. ಪ್ರಕೃತಿಚಿಕಿತ್ಸೆಯಲ್ಲಿ ನೀಡುವ
ಥೈರಾಯ್್ಡ ಪ್ಯಾಕ್, ಮಜ್ಜಿಗೆ ಎನಿಮಾ, ಪ್ರೀ ಪ್ರೋ ಬಯಾಟಿಕ್ ಆಹಾರ ಮಾತ್ರ ತೆಗೆದುಕೊಂಡು
ಮಾಡುವ ಉಪವಾಸ, ಪ್ರಾಣಾಯಾಮ, ಮಣ್ಣಿನ ಚಿಕಿತ್ಸೆ ಇವು ಈ ಸಮಸ್ಯೆಯನ್ನು ನಿರ್ವಹಿಸುವ
ಉಪಾಯಗಳು.

*ಕೊನೇ ಹನಿ*

ಮಲಗುವ ಮುನ್ನ ಒಂದು ಲೋಟ ಬಿಸಿನೀರಿಗೆ ಒಂದು ಚಮಚ ತುಪ್ಪ ಸೇರಿಸಿ ಕುಡಿದರೆ ಮಲಬದ್ಧತೆ
ನಿವಾರಣೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

**ಜ್ಞಾನ ಕಾರಂಜಿ**::: ಬೇನಾಮಿ ಆಸ್ತಿ ಪ್ರಕರಣ ವಿಲೇವಾರಿಗೆ ನ್ಯಾಯಾಧಿಕರಣ,

ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್​ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್​ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್​ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...

**ಜ್ಞಾನ ಕಾರಂಜಿ**::: ★ ವೈಜ್ಞಾನಿಕ ಉಪಕರಣಗಳು ಹಾಗೂ ಅವುಗಳ ಉಪಯೋಗಗಳು

1) ಅಲ್ಟಿಮೀಟರ್ —————> ಎತ್ತರ ಮತ್ತು ವಾಯುವಿನ ಒತ್ತಡವನ್ನು ಸೂಚಿಸುವ ಸಾಧನ. 2) ಲ್ಯಾಕ್ಟೊಮೀಟರ್ —————> ಹಾಲಿನಲ್ಲಿರುವ ನೀರಿನ ಪ್ರಮಾಣವನ್ನು ಅಳೆಯುವ ಸಾಧನ. 3) ಬ್ಯಾರೋಮೀಟರ್ —————> ಭೂಮಿಯ ಮೇಲಿನ ಹವೆಯ ಒತ್ತಡವನ್ನು ಅಳೆಯುವ ಸಾಧನ. 4) ಮೈಕ್ರೋಮೀಟರ್ —————> ಸಣ್ಣ ವಸ್ತುಗಳ ದಪ್ಪವನ್ನು ಅಳೆಯುವ ಸಾಧನ. 5) ಹೈಡ್ರೋಮೀಟರ್ —————> ದ್ರವಗಳ ಸಾಪೇಕ್ಷ ಸಾಂದ್ರತೆಯನ್ನು ಅಳೆಯುವ ಸಾಧನ. 6) ಪೈರೋಮೀಟರ್ —————> ಹೆಚ್ಚು ಉಷ್ಣತೆಯನ್ನು ಅಳೆಯುವ ಸಾಧನ. 7) ಪ್ಯಾಥೋಮೀಟರ್ —————> ಸಮುದ್ರದ ಆಳವನ್ನು ಅಳೆಯುವ ಸಾಧನ. 8) ವೋಲ್ಟಾಮೀಟರ್ —————> ವಿದ್ಯುತ್ ಕೋಶದ ವಿದ್ಯುತ್ ಚಾಲಕ ಬಲವನ್ನು ಅಳೆಯುವ ಸಾಧನ. 9) ಗ್ಯಾಲ್ವನೋಮೀಟರ್ —————> ಕಡಿಮೆ ವಿದ್ಯುತ್ ಅಳೆಯುವ ಸಾಧನ. 10) ಅನಿಮಾಮೀಟರ್ —————> ಗಾಳಿಯ ವೇಗವನ್ನು ಅಳೆಯುವ ಸಾಧನ. 11) ಓಡೋಮೀಟರ್ —————> ಚಕ್ರವಾಹನಗಳು ಚಲಿಸುವ ದೂರವನ್ನು ಅಳೆಯುವ ಸಾಧನ. 12) ಸ್ಪೀಡೋಮೀಟರ್ —————> ವಾಹನಗಳ ವೇಗವನ್ನು ಅಳೆಯುವ ಸಾಧನ. 13) ಗ್ರಾಫಿಮೀಟರ್ —————> ನೀರಿನ ಸೆಲೆಯನ್ನು ಪತ್ತೆ ಹಚ್ಚುವ ಸಾಧನ. 14) ಮೋನೋಮೀಟರ್ —————> ಅನಿಲಗಳ ಒತ್ತಡಗಳನ್ನು ಅಳೆಯುವ ಸಾಧನ. 15) ಕ್ರೋನೋಮೀಟರ್ —————> ಹಡಗಿನ ನಿಖರವಾದ ಕಾಲವನ್ನು ಅಳತೆ ಮಾಡುವ ಸಾಧನ. 16) ರೆಡಿಯೋಮೀಟರ್ —————> ವಿಕಿರಣಗಳಿಂದ ಹೊರಬರುವ ಶಕ್ತಿಯನ್ನು ಅಳೆಯುವ ಸಾಧನ. 1...

.. ಭಾರತೀಯ ಕಾವ್ಯ ಮೀಮಾಂಸೆ

ಭಾರತೀಯ ಕಾವ್ಯ ಮೀಮಾಂಸೆ ಭಾರತೀಯ ಕಾವ್ಯಮೀಮಾಂಸೆಗೆ ಸುಮಾರು ಎರಡು ಸಾವಿರ ವರ್ಷಗಳ ದೀರ್ಘ ಇತಿಹಾಸವಿದೆ. ಕವಿ ಮತ್ತು ಕಾವ್ಯದ ಲಕ್ಷಣಗಳು, ಕಾವ್ಯ ಪ್ರಭೇದಗಳು. ಕಾವ್ಯಾಲಂಕಾರಗಳು, ಕಾವ್ಯದ ವಸ್ತು ಇತ್ಯಾದಿ ಕಾವ್ಯನಿರ್ಮಿತಿಗೆ ಸಂಬಂಧಿಸಿದ ಮಹತ್ತ್ವದ ಅಂಶಗಳ ಶಾಸ್ತ್ರೀಯ ನಿರೂಪಣೆಯೇ ಕಾವ್ಯನಿಮೀಮಾಂಸೆ. ಇದನ್ನು ಅಲಂಕಾರ ಶಾಸ್ತ್ರವೆಂದೂ ಕರೆಯಲಾಗುತ್ತದೆ. ಪ್ರಾಚೀನ ಯುಗದಲ್ಲಿ ಅಲಂಕಾರಶಾಸ್ತ್ರವೆಂದರೆ ಪ್ರಧಾನವಾಗಿ ನಾಟ್ಯ ನೃತ್ಯ ಇತ್ಯಾದಿ ರಂಗ ಸಂಸ್ಕರಣ ಅಥವಾ ನಾಟ್ಯಕಲೆಯನ್ನು ಸರ್ವಾಂಗ ಸುಂದರವಾಗಿ ಮಾಡುವ ಒಂದು ಪರಿಷ್ಕಾರ ಶಾಸ್ತ್ರವಾಗಿದ್ದಿತು. ಕಾಲಕ್ರಮೇಣ ಇದು ಕಾವ್ಯಕಲೆಯನ್ನು ಪರಿಷ್ಕರಿಸುವ ಶಾಸ್ತ್ರವಾಗಿ ಪರಿಣಮಿಸಿತು. ಇದರ ಆರಂಭ ಯಾವಾಗಿ ಯಾರಿಂದ ಆಯಿತೆಂದು ಇತ್ಯರ್ಥಪಡಿಸುವುದು ಕಷ್ಟದ ಕೆಲಸ. ಸಾಹಿತ್ಯದಲ್ಲಿ ಸೌಂದರ್ಯೋಪಾಸನೆ ಪ್ರಾರಂಭವಾದಂದಿನಿಂದಲೂ ಪಂಡಿತರು ಮತ್ತು ವಿಮರ್ಶಕರು ಸಾಹಿತ್ಯದಲ್ಲಿ ಸೌಂದರ್ಯ ಅರಸಿ ಈ ಚಿತ್ತ ಸಂಸ್ಕರಣ ಶಾಸ್ತ್ರವನ್ನು ಬೆಳೆಸಿಕೊಂಡು ಬಂದಿದ್ದಾರೆ. ಕ್ರಿ. ಪೂ. 6ನೆಯ ಶತಮಾನದಲ್ಲಿದ ಯಾಸ್ಕಾಚಾರ್ಯ ಉಪಮೆ ರೂಪಕಗಳ ಬಗ್ಗೆ ಉಲ್ಲೇಖಸಿದ್ದಾನೆ. ಕ್ರಿ. ಪೂ. 5ನೆಯ ಶತಕದ ವೇಳೆಗೆ ಪಾಣಿನಿ ನಟರ ವಿಷಯ ಪ್ರಸ್ತಾಪಿಸಿದ್ದಾನೆ. ವೇದಗಳ ಕಾಲದಲ್ಲೂ ಉಪಮಾ ರೂಪಕಾದಿಗಳ ಪ್ರಯೋಗವಿದೆ. ಋಗ್ವೇದದಲ್ಲಿ ಕಂಡುಬರುವ ಯಮಯಮಿಯರ ಸಂವಾದ, ಊರ್ವಶೀ ಪುರೂರವರ ಸಂವಾದ_ಇವುಗಳಿಂದ ವೇದಕಾಲದಲ್ಲಿ ನಾಟಕದ ಅಂಕುರಾರ್ಪಣವಿದ್ದಂತಿದೆ....