ವಿಷಯಕ್ಕೆ ಹೋಗಿ

**ಜ್ಞಾನ ಕಾರಂಜಿ**::: ಮೀನು ಬೇಟೆ ಆಡುವ ಮಿಡತೆ,

ಎಲೆಶೆಟ್ಟಿ ಕೀಟ ಎಂದು ಕರೆಸಿಕೊಳ್ಳುವ ಹಸಿರು ಮಿಡತೆ ಮೀನನ್ನೂ ತಿನ್ನಬಲ್ಲದು! ಕೊಳದ ಬಳಿ ಕಾಯ್ದು ಕುಳಿತುಕೊಂಡು ತಲೆಯನ್ನು ಎಲ್ಲ ಆಂಗಲ್​ನಲ್ಲೂ ಬಾಗಿಸಿ, ಮೀನುಗಳನ್ನು ಹಿಡಿದು ತಿನ್ನುವ ಇದರ ಕೌಶಲ ಬೆರಗು ಮೂಡಿಸುವಂಥದ್ದು. ಇತ್ತೀಚೆಗಷ್ಟೇ ನಮ್ಮ ರಾಜ್ಯದ ಸಂಶೋಧಕರ ತಂಡ ಈ ವಿದ್ಯಮಾನವನ್ನು ಪತ್ತೆ ಮಾಡಿದೆ.
|ರಾಜು ಹೊಸಮನಿ ನರಗುಂದ
ಮಿಡತೆಗಳು ಸೊಳ್ಳೆ, ನೊಣ, ಜೇನುನೊಣ, ಕಂಬಳಿ ಹುಳು, ಚಿಟ್ಟೆ, ಪತಂಗ, ದುಂಬಿ ಇತ್ಯಾದಿ ಕೀಟಗಳನ್ನು ಮಾತ್ರ ಬೇಟೆಯಾಡುತ್ತವೆ ಎನ್ನುವುದು ಇದುವರೆಗಿನ ಸಾಮಾನ್ಯ ನಂಬಿಕೆ. ಆದರೆ, ಅಚ್ಚರಿ ಎಂಬಂತೆ ಮೀನು ತಿನ್ನುವ ಮಿಡತೆಯೊಂದು ಪತ್ತೆಯಾಗಿದೆ! ವಿಜ್ಞಾನ ಲೋಕಕ್ಕೂ ಅಚ್ಚರಿ ಉಂಟುಮಾಡಿರುವ ಈ ಮಿಡತೆಗೆ ‘ಪ್ರಾರ್ಥನಾ ಮಿಡತೆ’, ‘ಏಲಿಯನ್ ಮಿಡತೆ’ ಹಾಗೂ ‘ಶಿವನ ಕುದುರೆ’ ಎಂದು ಹೆಸರು. ಮ್ಯಾಂಟೊಡಿಯ ಎಂಬ ವರ್ಗಕ್ಕೆ ಈ ಮಿಡತೆಗೆ ಹೈಯರುಡುಲಾ ಟೆನ್ಯೂಡೆಂಟಾಟ್ (ಏಷ್ಯನ್ ದೈತ್ಯ ಮ್ಯಾಂಟಿಸ್) ಎನ್ನುತ್ತಾರೆ.
ಜಗತ್ತಿನಲ್ಲಿ 2400ಕ್ಕೂ ಹೆಚ್ಚು ಜಾತಿಯ ಮ್ಯಾಂಟಿಸ್​ಗಳನ್ನು ಸಂಶೋಧಕರು ಗುರುತಿಸಿದ್ದಾರೆ. ಭಾರತದಲ್ಲಿ ಒಟ್ಟು 178 ಜಾತಿಯ ಮ್ಯಾಂಟಿಸ್​ಗಳಿವೆ. ಇವುಗಳ ಮೇಲೆ ಅಧ್ಯಯನಗಳು ನಡೆದಿರುವುದು ಅತಿ ಕಡಿಮೆ. ವಿಜ್ಞಾನಿಗಳ ಪ್ರಕಾರ, ಕೆಲವು ಸಂದರ್ಭದಲ್ಲಿ ಮಿಲನವಾದ ನಂತರ ಹೆಣ್ಣು, ಗಂಡು ಮ್ಯಾಂಟಿಸ್ ಅನ್ನು ತಿನ್ನುತ್ತದೆ. ತನ್ನ ಸಂತತಿ ಸಾಮರ್ಥ್ಯ ಹೆಚ್ಚಲೆಂದು ಗಂಡು ತನ್ನನ್ನೇ ತಾನು ಈ ಮೂಲಕ ಸಮರ್ಪಿಸಿಕೊಳ್ಳುತ್ತದೆ! ಹೆಣ್ಣು ಮಿಡತೆ 150ರಿಂದ 250 ಗಸಗಸೆ ಬೀಜ ಗಾತ್ರದ ಮೊಟ್ಟೆಗಳನ್ನು (ಉಥೀಕಾ) ಇಡುತ್ತವೆ.
ಪತ್ತೆಯಾಗಿದ್ದು ನಮ್ಮಲ್ಲೇ: ಸಂಶೋಧಕರು ಅಧ್ಯಯನಕ್ಕೆಂದು ಮ್ಯಾಂಟಿಸ್​ಗಳನ್ನು ಅವುಗಳಿಗೆ ಪೂರಕ ವಾತಾವರಣ ನಿರ್ವಿುಸಿ ಪ್ರಯೋಗಾಲಯಗಳಲ್ಲಿ ಸಾಕುತ್ತಾರೆ. ಇಂತಹ ಸಂದರ್ಭದಲ್ಲಿ ಅತಿ ವಿರಳವಾಗಿ ಕಪ್ಪೆ, ಹಲ್ಲಿ, ಪುಟ್ಟ ಕೀಟಗಳನ್ನು ನೀಡಿದಾಗ ತಿಂದ ದಾಖಲೆಗಳಿವೆ. ಆದರೆ, ಜಗತ್ತಿನ ವಿಜ್ಞಾನಿಗಳು ಚಕಿತರಾಗಿ ತಲೆಕೆಡಿಸಿಕೊಳ್ಳುವಂಥ ಈ ಕುತೂಹಲಕಾರಿ ಘಟನೆ ಕರ್ನಾಟಕದ ಬೆಂಗಳೂರಿನ ಮಾಗಡಿ ರಸ್ತೆಯ ಕಡಬಗೆರೆಯ ರಾಜೇಶ ಪುಟ್ಟಸ್ವಾಮಿ ಎಂಬ ಸಂಶೋಧಕರ ಮನೆ ಕೈತೋಟದಲ್ಲಿ ಕಂಡು ಬಂದಿದೆ. ರಾಜ್ಯದ ವಿಜ್ಞಾನಿಗಳೇ ಈ ತಂಡದಲ್ಲಿ ಇದ್ದಿದ್ದು ವಿಶೇಷ. ಇಟಲಿ ವಿಜ್ಞಾನಿ ಡಾ. ರಾಬಟೋ ಬ್ಯಾಟಿಸ್ಟನ್ ಜತೆಗೂಡಿ ರಾಜ್ಯದ ಬ್ಯಾಟ್ಸ್ ಕನ್ಸರ್ವೆಷನ್ ಇಂಡಿಯನ್
ಟ್ರಸ್ಟ್​ನ ವಿಜ್ಞಾನಿಗಳಾದ ಮಂಜುನಾಥ ನಾಯಕ, ರಾಜೇಶ ಪುಟ್ಟಸ್ವಾಮಿ ಅವರು ಮಿಡತೆಯೊಂದು ಮೀನು ತಿನ್ನುವ ಅಚ್ಚರಿಯ ವಿದ್ಯಮಾನವನ್ನು ದಾಖಲಿಸಿದ್ದಾರೆ.
ಅಧ್ಯಯನ ಅಚ್ಚರಿ: ಅಂತರಗಂಗೆ ಜಲಸಸ್ಯ ವನ್ನೊಳಗೊಂಡ ಕೊಳದಲ್ಲಿ ಗಪ್ಪಿ, ಮೊಲ್ಲಿ, ಝಿಬ್ರಾ ಮತ್ತು ಸಕ್ರ ಜಾತಿಯ ವಿವಿಧ 40 ಬಗೆಯ ಮೀನುಗಳಿದ್ದವು. ಆದರೆ, ಈ ಮಿಡತೆ ಗಪ್ಪಿ ಮೀನುಗಳನ್ನು ಮಾತ್ರ ಹಿಡಿದು ತಿನ್ನುತ್ತಿತ್ತು. ‘ಸತತ ಐದು ದಿನಗಳಲ್ಲಿ ದಿನಕ್ಕೆರಡರಂತೆ ಒಟ್ಟು ಒಂಬತ್ತು ಗಪ್ಪಿ ಮೀನುಗಳನ್ನು ಬೇಟೆಯಾಡಿ ತಿಂದಿದ್ದು ಮ್ಯಾಂಟಿಸ್​ಗಳ ಬೇಟೆ ಕೌಶಲ, ತಂತ್ರಗಾರಿಕೆ ಮತ್ತು ಬುದ್ಧಿವಂತಿಕೆಯನ್ನು ತೋರಿಸುತ್ತದೆ’ ಎನ್ನುತ್ತಾರೆ ವಿಜ್ಞಾನಿ ಮಂಜುನಾಥ ನಾಯಕ್. ಇಲ್ಲಿ ಕಂಡುಬಂದ ಇನ್ನೊಂದು ಅಚ್ಚರಿ ಎಂದರೆ ಪ್ರತಿ ಬಾರಿಯೂ ಮ್ಯಾಂಟಿಸ್ ಬೇಟೆಯಾಡುತ್ತಿದ್ದ ಸಮಯ ಮುಸ್ಸಂಜೆಯಾಗಿತ್ತು! ಆ ಮಂದ ಬೆಳಕಿನಲ್ಲೂ ಅದು ಪರಿಪೂರ್ಣ ದೃಷ್ಟಿಸಾಮರ್ಥ್ಯ ಹೊಂದಿತ್ತು. ಕೊಳದಲ್ಲಿ ವಿವಿಧ ಜಾತಿಯ ಮೀನುಗಳಿದ್ದರೂ ಗಪ್ಪಿ ಮೀನುಗಳನ್ನು ಮಾತ್ರ ಅದು ಬೇಟೆಯಾಡಿತ್ತು. ಇದು ಮೇಲ್ನೋಟಕ್ಕೆ ವಿಚಿತ್ರ ಎನಿಸುತ್ತದೆ. ಆದರೆ, ಇದರಿಂದ ಆಹಾರದ ಆಯ್ಕೆ ವಿಚಾರವೂ ಮ್ಯಾಂಟಿಸ್​ಗಿದೆ ಹಾಗೂ ಅದರ ಆಹಾರ ಬೇಟೆಯ ಪೋಷಕಾಂಶವನ್ನು ಆಧರಿಸಿರುತ್ತದೆ ಎನ್ನುವುದು ಸಾಬೀತಾದಂತೆ ಆಗಿದೆ. ಈ ಮಿಡತೆಯ ತಲೆಯು 280ರಿಂದ 320 ಡಿಗ್ರಿಗಳವರೆಗೆ ಸುಲಭವಾಗಿ ತಿರುಗಬಹುದಾದ ಸಾಮರ್ಥ್ಯ ಹೊಂದಿದ್ದು, ಬೇಟೆ ಹುಡುಕಲು ಸುಲಭವಾಗುವಂಥ ರಚನೆ ಹೊಂದಿದೆ. ಮುಂದಿನ ಪಾದ ಬೇಟೆ ಹಿಡಿಯಲು ಗರಗಸದಂಥ ಸೂಕ್ಷ್ಮ ರಚನೆಗಳನ್ನು ಹೊಂದಿರುವುದರಿಂದ ಸಿಕ್ಕ ಬೇಟೆ ಇದರ ಕೈಯಿಂದ ತಪ್ಪಿಸಿಕೊಳ್ಳುವುದು ಅಸಾಧ್ಯ.
ಪ್ರಾರ್ಥನಾ ಮಿಡತೆ
ಮುಂಪಾದಗಳು ಯಾವಾಗಲೂ ಪ್ರಾರ್ಥನೆ ಮಾಡುವಾಗ ಕೈಮುಗಿದಂಥ ಸ್ಥಿತಿಯಲ್ಲಿರುವ ಇದಕ್ಕೆ ಕಾರಣ ‘ಪ್ರಾರ್ಥನಾ ಮಿಡತೆ’ ಎಂದು ಹೆಸರು. ಅಲ್ಲದೆ, ಇದರ ಮುಖ ಏಲಿಯನ್​ಗೆ ಹೋಲುವ ಕಾರಣ ‘ಏಲಿಯನ್ ಮಿಡತೆ’ ಅಂತಲೂ ಕೆಲವು ಗ್ರಾಮೀಣ ಭಾಗದಲ್ಲಿ ಎಲೆಶೆಟ್ಟಿ ಕೀಟ ಎಂದೂ ಕರೆಯುವರು.
ಪರಿಸರ ಸಮತೋಲನದಲ್ಲಿ ಪಾತ್ರ
ಸೊಳ್ಳೆ, ನೊಣ, ದುಂಬಿ, ಜೇಡ ಮತ್ತು ಕೃಷಿಗೆ ಪೀಡಕವಾದ ಕೀಟಗಳನ್ನು ಭಕ್ಷಿಸುವುದರ ಮೂಲಕ ಮ್ಯಾಂಟಿಸ್ ಜೈವಿಕ ಕೀಟ ನಿಯಂತ್ರಕವಾಗಿ ಕೆಲಸಮಾಡುತ್ತದೆ. ಆಹಾರ ಸರಪಳಿಯಲ್ಲಿ ಇದು ಪಕ್ಷಿ, ಹಲ್ಲಿಯಂತಹ ಮೇಲ್ತಸರದ ಜೀವಿಗಳಿಗೆ ಆಹಾರವಾಗಿದೆ. ಜೀವವೈವಿಧ್ಯಕ್ಕೆ ಸಂಬಂಧಿಸಿದ ಹಾಗೆ, 15 ಕೋಟಿ ವರ್ಷಗಳ ಇತಿಹಾಸವಿರುವ ಮ್ಯಾಂಟಿಸ್ ಪರಿಸರ ಸಮತೋಲನದಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಈ ಹಿನ್ನೆಲೆಯಲ್ಲಿ ಇದರ ಸಂರಕ್ಷಣೆಯೂ ಅವಶ್ಯವಾಗಿದೆ. ವಿಶ್ವದ ಎಲ್ಲ ಕಡೆ ಪ್ರಾಣಿ-ಪಕ್ಷಿಗಳ ಮೇಲೆ ಸಾಕಷ್ಟು ಸಂಶೋಧನೆಗಳು ನಡೆಯುತ್ತವೆ, ಆದರೆ ಪರಿಸರದ ಸಮತೋಲನಕ್ಕೆ ಪ್ರಮುಖ ಕಾರಣವಾದ ಕೀಟಗಳ ಬಗ್ಗೆ ಅಧ್ಯಯನ ತುಂಬ ಕಡಿಮೆ. ವಿಶೇಷವಾಗಿ ಮ್ಯಾಂಟಿಸ್​ನಂತಹ ಕೀಟಗಳು ಅಧ್ಯಯನದಿಂದ ದೂರವೇ ಉಳಿದಿರುವ ಜೀವಿಗಳಾಗಿವೆ.
 ಇತ್ತೀಚಿನ ದಿನಗಳಲ್ಲಿ ಮ್ಯಾಂಟಿಸ್​ಗಳ ಸಂತತಿ ಕ್ಷೀಣಿಸುತ್ತಿದೆ. ಇವುಗಳ ರಕ್ಷಣೆಯಾಗಿ ಮುಂದಿನ ಜನಾಂಗಕ್ಕೆ ಸಂಶೋಧನೆಯಿಂದ ಉಪಯುಕ್ತ ಮಾಹಿತಿ ದೊರೆಯುವಂತಾಗಬೇಕು. ಪರಿಸರದ ಸಮತೋಲನಕ್ಕೆ ಪ್ರಮುಖ ಕಾರಣವಾದ ಕೀಟಗಳ ಬಗ್ಗೆ ಅಧ್ಯಯನ ಅಗತ್ಯವಾಗಿದೆ.
| ಮಂಜುನಾಥ ನಾಯಕ್ ಜೀವವೈವಿಧ್ಯ ಸಂಶೋಧಕರು

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

**ಜ್ಞಾನ ಕಾರಂಜಿ**::: ಬೇನಾಮಿ ಆಸ್ತಿ ಪ್ರಕರಣ ವಿಲೇವಾರಿಗೆ ನ್ಯಾಯಾಧಿಕರಣ,

ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್​ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್​ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್​ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...

.. ಭಾರತೀಯ ಕಾವ್ಯ ಮೀಮಾಂಸೆ

ಭಾರತೀಯ ಕಾವ್ಯ ಮೀಮಾಂಸೆ ಭಾರತೀಯ ಕಾವ್ಯಮೀಮಾಂಸೆಗೆ ಸುಮಾರು ಎರಡು ಸಾವಿರ ವರ್ಷಗಳ ದೀರ್ಘ ಇತಿಹಾಸವಿದೆ. ಕವಿ ಮತ್ತು ಕಾವ್ಯದ ಲಕ್ಷಣಗಳು, ಕಾವ್ಯ ಪ್ರಭೇದಗಳು. ಕಾವ್ಯಾಲಂಕಾರಗಳು, ಕಾವ್ಯದ ವಸ್ತು ಇತ್ಯಾದಿ ಕಾವ್ಯನಿರ್ಮಿತಿಗೆ ಸಂಬಂಧಿಸಿದ ಮಹತ್ತ್ವದ ಅಂಶಗಳ ಶಾಸ್ತ್ರೀಯ ನಿರೂಪಣೆಯೇ ಕಾವ್ಯನಿಮೀಮಾಂಸೆ. ಇದನ್ನು ಅಲಂಕಾರ ಶಾಸ್ತ್ರವೆಂದೂ ಕರೆಯಲಾಗುತ್ತದೆ. ಪ್ರಾಚೀನ ಯುಗದಲ್ಲಿ ಅಲಂಕಾರಶಾಸ್ತ್ರವೆಂದರೆ ಪ್ರಧಾನವಾಗಿ ನಾಟ್ಯ ನೃತ್ಯ ಇತ್ಯಾದಿ ರಂಗ ಸಂಸ್ಕರಣ ಅಥವಾ ನಾಟ್ಯಕಲೆಯನ್ನು ಸರ್ವಾಂಗ ಸುಂದರವಾಗಿ ಮಾಡುವ ಒಂದು ಪರಿಷ್ಕಾರ ಶಾಸ್ತ್ರವಾಗಿದ್ದಿತು. ಕಾಲಕ್ರಮೇಣ ಇದು ಕಾವ್ಯಕಲೆಯನ್ನು ಪರಿಷ್ಕರಿಸುವ ಶಾಸ್ತ್ರವಾಗಿ ಪರಿಣಮಿಸಿತು. ಇದರ ಆರಂಭ ಯಾವಾಗಿ ಯಾರಿಂದ ಆಯಿತೆಂದು ಇತ್ಯರ್ಥಪಡಿಸುವುದು ಕಷ್ಟದ ಕೆಲಸ. ಸಾಹಿತ್ಯದಲ್ಲಿ ಸೌಂದರ್ಯೋಪಾಸನೆ ಪ್ರಾರಂಭವಾದಂದಿನಿಂದಲೂ ಪಂಡಿತರು ಮತ್ತು ವಿಮರ್ಶಕರು ಸಾಹಿತ್ಯದಲ್ಲಿ ಸೌಂದರ್ಯ ಅರಸಿ ಈ ಚಿತ್ತ ಸಂಸ್ಕರಣ ಶಾಸ್ತ್ರವನ್ನು ಬೆಳೆಸಿಕೊಂಡು ಬಂದಿದ್ದಾರೆ. ಕ್ರಿ. ಪೂ. 6ನೆಯ ಶತಮಾನದಲ್ಲಿದ ಯಾಸ್ಕಾಚಾರ್ಯ ಉಪಮೆ ರೂಪಕಗಳ ಬಗ್ಗೆ ಉಲ್ಲೇಖಸಿದ್ದಾನೆ. ಕ್ರಿ. ಪೂ. 5ನೆಯ ಶತಕದ ವೇಳೆಗೆ ಪಾಣಿನಿ ನಟರ ವಿಷಯ ಪ್ರಸ್ತಾಪಿಸಿದ್ದಾನೆ. ವೇದಗಳ ಕಾಲದಲ್ಲೂ ಉಪಮಾ ರೂಪಕಾದಿಗಳ ಪ್ರಯೋಗವಿದೆ. ಋಗ್ವೇದದಲ್ಲಿ ಕಂಡುಬರುವ ಯಮಯಮಿಯರ ಸಂವಾದ, ಊರ್ವಶೀ ಪುರೂರವರ ಸಂವಾದ_ಇವುಗಳಿಂದ ವೇದಕಾಲದಲ್ಲಿ ನಾಟಕದ ಅಂಕುರಾರ್ಪಣವಿದ್ದಂತಿದೆ....

**ಜ್ಞಾನ ಕಾರಂಜಿ**::: ನೀತಿ ಆಯೋಗ ಸ್ಥಾಪನೆ

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ಅಧಿಕಾರಕ್ಕೆ ಬಂದು ಮೇ 26ಕ್ಕೆ ನಾಲ್ಕು ವರ್ಷ. ಸರ್ಕಾರದ ಈ ಅವಧಿಯ ಪಯಣದಲ್ಲಿನ ಪ್ರಮುಖ ರಂಗಗಳ ಚಿತ್ರಣವನ್ನು ವಿಜಯವಾಣಿ ಸರಣಿಯಾಗಿ ಕಟ್ಟಿಕೊಡಲಿದ್ದು, ಅದರ ಎರಡನೇ ಭಾಗ ಇಲ್ಲಿದೆ. ನೆಹರು ಅವಧಿಯಲ್ಲಿ ರಚನೆಯಾಗಿದ್ದ ಯೋಜನಾ ಆಯೋಗವನ್ನು ರದ್ದುಗೊಳಿಸಿ 2015ರ ಜ.1ರಂದು ನೀತಿ ಆಯೋಗ ರಚಿಸಲಾಯಿತು. ಅಮೃತ್, ಡಿಜಿಟಲ್ ಇಂಡಿಯಾ, ಅಟಲ್ ಇನೋವೇಷನ್, ಸಂಚಾರ ದಟ್ಟಣೆ ನಿಯಂತ್ರಣ ಸೇರಿ ಕೆಲ ಯೋಜನೆಗಳ ನೇರ ಉಸ್ತುವಾರಿಯನ್ನು ನೀತಿ ಆಯೋಗ ವಹಿಸಿಕೊಂಡಿದೆ. ಪ್ರಧಾನಿ ಅಧ್ಯಕ್ಷತೆಯ ಈ ಆಯೋಗದಲ್ಲಿ ರಾಜ್ಯಗಳ ಹಣಕಾಸು ಸಚಿವರು ಸದಸ್ಯರಾಗಿರುತ್ತಾರೆ. 15 ವರ್ಷ ಹಾಗೂ 7 ವರ್ಷಗಳ ಪ್ರತ್ಯೇಕ ಗುರಿಯ ಯೋಜನೆಯ ಜತೆಗೆ, ವಾರ್ಷಿಕ ಕಾರ್ಯಕ್ರಮಗಳ ಬಗ್ಗೆ ಈ ಸಂಸ್ಥೆ ನಿಗಾ ಇಡಲಿದೆ. ಆಡಳಿತಕ್ಕೆ ಹೊಸ ಸ್ಪರ್ಶ ‘ಮಿನಿಮಮ್ ಗವರ್ನಮೆಂಟ್, ಮ್ಯಾಕ್ಸಿಮಮ್ ಗವರ್ನನ್ಸ್’ (ಕನಿಷ್ಠ ಸರ್ಕಾರ ಗರಿಷ್ಠ ಆಡಳಿತ) ಧ್ಯೇಯ ವಾಕ್ಯದೊಂದಿಗೆ ಪ್ರಧಾನಿ ಕಚೇರಿಗೆ ನರೇಂದ್ರ ಮೋದಿ ಕಾಲಿಟ್ಟಿದ್ದರು. ತೆರಿಗೆ ವ್ಯವಸ್ಥೆಯಿಂದ ಹಿಡಿದು ಆಡಳಿತದ ಪ್ರತಿ ಹಂತದಲ್ಲಿಯೂ ಸುಧಾರಣೆ ತರುವ ಭರವಸೆ ನೀಡಿದ್ದರು. ಈ ನಿಟ್ಟಿನಲ್ಲಿ ಸರ್ಕಾರ ಕೆಲ ಹೆಜ್ಜೆಗಳನ್ನು ಇರಿಸಿದೆ. ಓಬೀರಾಯನ ಕಾಲದ ಕಾನೂನು ರದ್ದು ದೇಶದಲ್ಲಿ ಹಳೆಯ ಅನವಶ್ಯಕ ಕಾಯ್ದೆಗಳಿಂದ ಕೋರ್ಟ್ ಖಟ್ಲೆಗಳಲ್ಲಿ ವಿಳಂಬವಾಗುತ್ತದೆ. ಈ ಕಾರಣದಿಂದ ಸುಮಾರು 3 ಸಾವಿರ ...