ಬಿಪಿಎಲ್ ಕುಟುಂಬಗಳಿಗೆ ನೀಡುವ ಪಡಿತರ ವಿತರಣೆಯಲ್ಲಿ ಮತ್ತಷ್ಟ್ಟು ಪಾರದರ್ಶಕತೆ ತರಲು ಮುಂದಾಗಿರುವ ರಾಜ್ಯ ಸರ್ಕಾರ, ಎಲ್ಲ ನ್ಯಾಯಬೆಲೆ ಅಂಗಡಿಗಳಲ್ಲಿ ಎಲೆಕ್ಟ್ರಾನಿಕ್ ತೂಕದ ಯಂತ್ರ ಅಳವಡಿಸಲು ಚಿಂತಿಸಿದೆ.
ಈ ಕುರಿತು ಇಲಾಖೆ ಅಧಿಕಾರಿಗಳ ಜತೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ರ್ಚಚಿಸಿದ್ದು, ಕೂಡಲೇ ರೂಪುರೇಷೆ ಸಿದ್ಧಪಡಿಸುವಂತೆ ಸೂಚಿಸಿ ದ್ದಾರೆ. ಎಲ್ಲ ಅಂದು ಕೊಂಡಂತಾದರೆ, ಬರುವ ತಿಂಗಳಿಂದಲೇ ಜಾರಿಗೆ ಬರಲಿದೆ.
ಏನಿದು ಎಲೆಕ್ಟ್ರಾನಿಕ್ ಯಂತ್ರದ ಬಿಲ್?: ರೇಷನ್ ವಿತರಣೆ ವೇಳೆ ನ್ಯಾಯಬೆಲೆ ಅಂಗಡಿ ಮತ್ತು ಕಾರ್ಡ್ದಾರರ ನಡುವೆ ಗಲಾಟೆ ಆಗುತ್ತಿತ್ತು, ಕೆಲ ಬಾರಿ ಮಾಲೀಕರು ರೇಷನ್ ನೀಡುತ್ತಿಲ್ಲ ಎಂಬ ದೂರುಗಳು ಇಲಾಖೆಗೆ ಸಾಕಷ್ಟು ಬರುತ್ತಿವೆ. ಪಾರದರ್ಶಕತೆ ತರಲೆಂದು ಈಗಾಗಲೇ ನ್ಯಾಯಬೆಲೆ ಅಂಗಡಿಗಳಲ್ಲಿ ಆಧಾರ್ ಆಧಾರಿತ ಪಾಯಿಂಟ್ ಆಫ್ ಸೇಲ್ (ಪಿಒಎಸ್) ಅಳವಡಿಸಿಕೊಳ್ಳುವಂತೆ ಆಹಾರ ಇಲಾಖೆ ಸೂಚಿಸಿದೆ. ಅದರಂತೆ ರಾಜ್ಯಾದ್ಯಂತ ಇರುವ 20,033 ನ್ಯಾಯಬೆಲೆ ಅಂಗಡಿಗಳ ಪೈಕಿ 18,898 ಅಂಗಡಿಗಳು ಪಿಒಎಸ್ ಅಳವಡಿಸಿಕೊಂಡಿವೆ. ಇನ್ನಷ್ಟು ಪಾರದರ್ಶಕತೆ ತರಲೆಂದು ತೂಕ ಮತ್ತು ಬಿಲ್ ನೀಡಲು ಎಲೆಕ್ಟ್ರಾನಿಕ್ ಯಂತ್ರ ಅಳವಡಿಸಲು ಸರ್ಕಾರ ಚಿಂತಿಸಿದೆ. ಇದನ್ನು ಅಳವಡಿಸಿಕೊಂಡರೆ ಪ್ರತಿ ತಿಂಗಳು ಫಲಾನುಭವಿಗಳಿಗೆ ವಿತರಿಸುವ ರೇಷನ್ ಪ್ರಮಾಣ ಸಂಬಂಧ ಎರಡು ಪ್ರತ್ಯೇಕ ಬಿಲ್ಗಳು ಬರುತ್ತವೆ. ಒಂದು ಮಾಲೀಕನಿಗೆ, ಮತ್ತೊಂದು ಫಲಾನುಭವಿಗೆ. ಇದರಿಂದಾಗಿ ಮೋಸ ತಪ್ಪಿಸಬಹುದು ಎಂಬುದು ಸರ್ಕಾರದ ಆಶಯ.
ಕಮಿಷನ್ ಬಿಡುಗಡೆ ಮಾಡಿ!: ನ್ಯಾಯಬೆಲೆ ಅಂಗಡಿ ಮಾಲೀಕರು ಈಗಾಗಲೇ 4 ಸಾವಿರ ಕೊಟ್ಟು ಪಿಒಎಸ್ ಮೆಷಿನ್ ಅಳವಡಿಸಿಕೊಂಡಿದ್ದಾರೆ. ಫಲಾನುಭವಿಗಳು ಬಯೋ ಮೆಟ್ರಿಕ್ನಲ್ಲೇ ಹೆಬ್ಬೆಟ್ಟು ಗುರುತು ನೀಡಿ ರೇಷನ್ ಪಡೆಯುತ್ತಿದ್ದಾರೆ. ರಾಜ್ಯ ಸರ್ಕಾರ ಇದ್ದಕ್ಕಿದ್ದಂತೆ 9 ಸಾವಿರ ರೂ. ವೆಚ್ಚದ ಎಲೆಕ್ಟ್ರಾನಿಕ್ ಯಂತ್ರ ಅಳವಡಿಸಿ ಎನ್ನುವುದು ಸರಿಯಲ್ಲ. ಕೆಲ ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಸರಿಯಾಗಿ ಕಮಿಷನ್ ಸಿಗುತ್ತಿಲ್ಲ. ಕಳೆದ ಬಜೆಟ್ನಲ್ಲಿ 87 ರೂ. (ಪ್ರತಿ ಕ್ವಿಂಟಲ್ಗೆ) ಇದ್ದ ಕಮಿಷನ್ ದರವನ್ನು 100 ರೂ.ಗೆ ಹೆಚ್ಚಿಸಿದ್ದರೂ ಏ.1ರಿಂದ ಅನುದಾನ ಬಿಡುಗಡೆಯಾಗಿಲ್ಲ. ಹೆಚ್ಚಿಸಿದ ಕಮಿಷನ್ ಹಣವನ್ನು ಮೊದಲು ಬಿಡುಗಡೆಗೊಳಿಸದಿದ್ದರೆ ಎಲೆಕ್ಟ್ರಾನಿಕ್ ಯಂತ್ರ ಆಧಾರಿತ ತೂಕದ ಬಿಲ್ ಅಳವಡಿಸಿಕೊಳ್ಳುವುದಿಲ್ಲ ಎಂದು ರಾಜ್ಯ ಸರ್ಕಾರಿ ಪಡಿತರ ವಿತರಕ ಸಂಘ ರಾಜ್ಯಾಧ್ಯಕ್ಷ ಟಿ.ಕೃಷ್ಣಪ್ಪ ಎಚ್ಚರಿಸಿದ್ದಾರೆ.
ಪಡಿತರ ವಿತರಣೆಯಲ್ಲಿ ಮತ್ತಷ್ಟು ಪಾರದರ್ಶಕ ತರಲೆಂದು ತೂಕದ ಬಿಲ್ ನೀಡಲು ಎಲೆಕ್ಟ್ರಾನಿಕ್ ಯಂತ್ರ ಅಳವಡಿಸುವ ಚಿಂತನೆ ನಡೆಯುತ್ತಿದ್ದು, ಈ ಕುರಿತು ನ್ಯಾಯಬೆಲೆ ಅಂಗಡಿಗಳ ಮಾಲೀಕರ ಜತೆ ಮಾತುಕತೆ ನಡೆಯುತ್ತಿದೆ.
| ಟಿ.ಎಚ್.ಎಂ.ಕುಮಾರ್, ಆಯುಕ್ತ ಆಹಾರ ಇಲಾಖೆ
ಬಯೋಮೆಟ್ರಿಕ್ ಅಳವಡಿಸಿ
ರಾಜ್ಯದ ಎಲ್ಲ 229 ಸಗಟು ಮಳಿಗೆಗಳಿಗೆ ಬಯೋ ಮೆಟ್ರಿಕ್ ಯಂತ್ರ ಅಳವಡಿಸಿದರೆ, ಕಳ್ಳ ಮಾರ್ಗದಲ್ಲಿ ಸೋರಿಕೆಯಾಗುವ ರೇಷನ್ ತಡೆಗಟ್ಟ ಬಹುದು. ನಕಲಿ ಅಥವಾ ಬೇರೆ ಯಾರೋ ಬಂದು ರೇಷನ್ ಪಡೆದು ಕೊಳ್ಳುವುದಕ್ಕೆ ಸಾಧ್ಯವಿಲ್ಲ ಎಂದು ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ