ವಿಷಯಕ್ಕೆ ಹೋಗಿ

**ಜ್ಞಾನ ಕಾರಂಜಿ**::: ಸ್ವಚ್ಛ, ಹಸಿರು ಪರಿಸರದತ್ತ ಹೆಜ್ಜೆ,

|ನರೇಂದ್ರ ಮೋದಿ, ಪ್ರಧಾನಮಂತ್ರಿ
ಇದೇ ಬುಧವಾರ ವಿಶ್ವಸಂಸ್ಥೆ ನನಗೆ ‘ಚಾಂಪಿಯನ್ಸ್ ಆಫ್ ದಿ ಅರ್ಥ್ ಅವಾರ್ಡ್’ ನೀಡಿ ಗೌರವಿಸಿತು. ನಾನು ವಿನೀತನಾಗಿ ಈ ಗೌರವ ಸ್ವೀಕರಿಸಿದ್ದು, ಈ ಪ್ರಶಸ್ತಿ ಯಾವುದೇ ವ್ಯಕ್ತಿಗಲ್ಲ; ಬದಲಿಗೆ, ಇದು ಪ್ರಕೃತಿ ಮಾತೆಯೊಂದಿಗೆ ಸದಾ ಸಾಮರಸ್ಯದಿಂದ ಬದುಕುವಂತೆ ಪ್ರತಿಪಾದಿಸುವ ಭಾರತೀಯ ಸಂಸ್ಕೃತಿ ಮತ್ತು ಮೌಲ್ಯಗಳಿಗೆ ಸಂದ ಮನ್ನಣೆ ಎಂಬುದಾಗಿ ಭಾವಿಸುತ್ತೇನೆ. ಹವಾಮಾನ ಬದಲಾವಣೆಯನ್ನು ತಗ್ಗಿಸುವಲ್ಲಿ ಭಾರತದ ಸಕ್ರಿಯ ಪಾತ್ರವನ್ನು ವಿಶ್ವಸಂಸ್ಥೆ ಗುರುತಿಸಿ, ಮನ್ನಣೆ ನೀಡಿದೆ.
ಮನುಷ್ಯ ಮತ್ತು ಪ್ರಕೃತಿಯ ನಡುವೆ ವಿಶೇಷವಾದ ಬಾಂಧವ್ಯವಿದೆ. ಮೊದಲ ನಾಗರಿಕತೆ ನದಿಗಳ ದಡದಲ್ಲಿ ಹುಟ್ಟಿತ್ತು. ಪ್ರಕೃತಿಯೊಂದಿಗೆ ಸೌಹಾರ್ದ ಹೊಂದಿದ್ದ ಸಮಾಜಗಳು ಪ್ರಗತಿ ಮತ್ತು ಏಳಿಗೆ ಸಾಧಿಸಿದವು.
ಇಂದು ಮಾನವ ಸಮಾಜ ಮಹತ್ವದ ಕವಲುದಾರಿಯಲ್ಲಿ ನಿಂತಿದೆ. ನಾವು ನಡೆಯುವ ಹಾದಿ, ನಮ್ಮ ಮಾತ್ರವೇ ಅಲ್ಲ ನಮ್ಮ ನಂತರ ನಮ್ಮ ಭೂಗ್ರಹದಲ್ಲಿ ವಾಸಿಸುವ ಮುಂದಿನ ಪೀಳಿಗೆಗಳ ಕ್ಷೇಮವನ್ನೂ ನಿಶ್ಚಯಿಸುತ್ತದೆ. ನಮ್ಮ ದುರಾಸೆ ಮತ್ತು ಆವಶ್ಯಕತೆಗಳ ನಡುವಿನ ಅಸಮತೋಲನವು ಭೀಕರ ಪರಿಸರ ಅಸಮತೋಲನಕ್ಕೆ ಇಂಬು ನೀಡುತ್ತಿದೆ. ಒಂದು ಸಮಾಜವಾಗಿ ನಾವು ಹೇಗೆ ಧನಾತ್ಮಕ ಬದಲಾವಣೆ ತರಬಹುದು ಎಂಬುದನ್ನು ಮೂರು ಸಂಗತಿಗಳು ನಿಶ್ಚಯಿಸುತ್ತವೆ.
ಮೊದಲನೆಯದು ಆಂತರಿಕ ಪ್ರಜ್ಞೆ. ಇದಕ್ಕಾಗಿ ನಾವು ನಮ್ಮ ಹಿಂದಿನ ವೈಭವವನ್ನು ನೋಡುವುದಕ್ಕಿಂತ ಉತ್ತಮವಾದದ್ದು ಮತ್ತೊಂದಿಲ್ಲ. ಭಾರತೀಯ ಸಂಪ್ರದಾಯದಲ್ಲಿ ಪ್ರಕೃತಿಗೆ ನೀಡುವ ಗೌರವ ಅತ್ಯುನ್ನತವಾದದ್ದಾಗಿದೆ. ಅಥರ್ವವೇದದಲ್ಲಿ ಪೃಥ್ವಿಸೂಕ್ತವೇ ಇದೆ, ಅದರಲ್ಲಿ ಪ್ರಕೃತಿ ಮತ್ತು ಪರಿಸರದ ಬಗ್ಗೆ ಅಪ್ರತಿಮ ಜ್ಞಾನವಿದೆ.
ಪೃಥ್ವಿ, ವಾಯು, ಜಲ, ಅಗ್ನಿ ಮತ್ತು ಆಕಾಶ – ಈ ಪಂಚಭೂತಗಳ ಸೌಹಾರ್ದ ಕಾರ್ಯನಿರ್ವಹಣೆಯೊಂದಿಗೆ ನಮ್ಮ ಜೀವನ ವ್ಯವಸ್ಥೆ ಹೇಗೆ ಆಧರಿಸಿದೆ ಎಂಬ ಬಗ್ಗೆ ಪಂಚತತ್ತ್ವಗಳ ಕುರಿತ ಪುರಾತನವಾದ ಬರಹ ಹೇಳುತ್ತದೆ. ಪ್ರಕೃತಿಯ ಅಂಶಗಳು ದೈವತ್ವದ ಅಂಶಗಳಾಗಿವೆ.
ಸಾಮರಸ್ಯ ಮತ್ತು ಸಮರ್ಥನೀಯ ಜೀವನಶೈಲಿ ನಮ್ಮ ತತ್ತ್ವಗಳ ಒಂದು ಭಾಗವಾಗಿದೆ. ನಾವು ಶ್ರೀಮಂತ ಸಂಪ್ರದಾಯದ ಧ್ವಜಧಾರಕರಾಗಿದ್ದೇವೆ ಎಂಬುದನ್ನು ಅರಿತರೆ, ಅದು ನಮ್ಮ ಕಾರ್ಯಗಳ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ.
ಎರಡನೆಯದು ಸಾರ್ವಜನಿಕ ಜಾಗೃತಿ. ನಾವು ಪರಿಸರಕ್ಕೆ ಸಂಬಂಧಿಸಿದ ಪ್ರಶ್ನೆಗಳ ಬಗ್ಗೆ ಎಷ್ಟು ಸಾಧ್ಯವೋ ಅಷ್ಟು ರ್ಚಚಿಸಬೇಕು, ಮಾತನಾಡಬೇಕು, ಬರೆಯಬೇಕು, ಸಂವಾದ ನಡೆಸಬೇಕು ಮತ್ತು ಘೊಷಿಸಬೇಕು. ಅದೇ ವೇಳೆ ಪರಿಸರಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಸಂಶೋಧನೆ ಮತ್ತು ನಾವೀನ್ಯತೆಗೆ ಉತ್ತೇಜನ ನೀಡುವುದು ಮುಖ್ಯವಾಗಿದೆ. ನಾವು ಒಂದು ಸಮಾಜವಾಗಿ ಪರಿಸರ ಸಂರಕ್ಷಣೆಯೊಂದಿಗಿನ ಬಲವಾದ ನಂಟುಗಳ ಬಗ್ಗೆ ತಿಳಿದಾಗ, ನಿಯತವಾಗಿ ಅದರ ಬಗ್ಗೆ ಮಾತನಾಡುತ್ತೇವೆ ಮತ್ತು ಪರಿಸರಪೂರಕ ಕೆಲಸ ಮಾಡುವಲ್ಲಿ ನಾವು ಸ್ವಯಂ ಸಕ್ರಿಯರಾಗುತ್ತೇವೆ. ಹೀಗಾಗಿಯೇ, ಧನಾತ್ಮಕ ಬದಲಾವಣೆಯನ್ನು ತರಲು ಪ್ರಾಮಾಣಿಕ ಪ್ರಯತ್ನವನ್ನು ಮೂರನೆಯ ಅಂಶವಾಗಿ ಪ್ರತಿಪಾದಿಸುತ್ತೇನೆ.

ಈ ನಿಟ್ಟಿನಲ್ಲಿ, ಭಾರತದ 130 ಕೋಟಿ ಜನರು ಸ್ವಚ್ಛ ಮತ್ತು ಹಸಿರು ಪರಿಸರದತ್ತ ಮುಂಪಡೆಯಲ್ಲಿ ಕಾರ್ಯೋನ್ಮುಖರಾಗಿ ಸಕ್ರಿಯರಾಗಿದ್ದಾರೆ ಎಂದು ಹೇಳಲು ನಾನು ಹರ್ಷಿಸುತ್ತೇನೆ.
ಸ್ವಚ್ಛ ಭಾರತದ ಅಭಿಯಾನದಲ್ಲಿ ಈ ಸಕ್ರಿಯತೆಯನ್ನು ನೋಡಿದ್ದೇನೆ, ಇದು ಸುಸ್ಥಿರ ಭವಿಷ್ಯಕ್ಕೆ ನೇರ ನಂಟು ಹೊಂದಿದೆ. ಭಾರತದ 85 ದಶಲಕ್ಷ ಕುಟುಂಬಗಳು ಇದೇ ಮೊದಲ ಬಾರಿಗೆ ಶೌಚಗೃಹ ಬಳಕೆ ಅವಕಾಶ ಪಡೆದಿವೆ. 400 ದಶಲಕ್ಷ ಭಾರತೀಯರು ಬಯಲು ಶೌಚಕ್ಕೆ ಹೋಗುತ್ತಿಲ್ಲ. ನೈರ್ಮಲ್ಯದ ವ್ಯಾಪ್ತಿ ಶೇ.39ರಿಂದ ಶೇ.95 ತಲುಪಿದೆ. ನಮ್ಮ ನೈಸರ್ಗಿಕ ಪರಿಸರದ ಮೇಲಿನ ಒತ್ತಡವನ್ನು ತಗ್ಗಿಸುವ ಅನ್ವೇಷಣೆಯಲ್ಲಿ ಇವುಗಳು ಮಹತ್ವದ ಪ್ರಯತ್ನಗಳಾಗಿವೆ.
ಉಜ್ವಲ ಯೋಜನೆಯ ಯಶಸ್ಸಿನಲ್ಲೂ ನಾವು ಈ ಪ್ರಾಮಾಣಿಕ ಪ್ರಯತ್ನವನ್ನು ನೋಡಿದ್ದೇವೆ. ಶ್ವಾಸಕೋಶದ ಸಮಸ್ಯೆಗಳಿಗೆ ಕಾರಣವಾಗುತ್ತಿದ್ದ ಅನಾರೋಗ್ಯಕರವಾದ ಅಡುಗೆಯ ಪದ್ಧತಿಗಳಿಂದಾಗಿ ಮನೆಯೊಳಗೆ ಆಗುತ್ತಿದ್ದ ವಾಯುಮಾಲಿನ್ಯವನ್ನು ಇದು ಗಣನೀಯವಾಗಿ ತಗ್ಗಿಸಿದೆ. ಈವರೆಗೆ ಐದು ಕೋಟಿ ಉಜ್ವಲ ಸಂಪರ್ಕಗಳನ್ನು ವಿತರಿಸಲಾಗಿದೆ.
ಪರಿಸರ ವಲಯದಲ್ಲಿ ನಾವು ಕೌಶಲ ಭಾರತದ ಉದ್ದೇಶವನ್ನೂ ಸೇರ್ಪಡೆ ಮಾಡಿದ್ದು, 2021ರ ವೇಳೆಗೆ ಪರಿಸರ, ಅರಣ್ಯ, ವನ್ಯಜೀವಿ ಮತ್ತು ಹವಾಮಾನ ಬದಲಾವಣೆಯ ವಲಯಗಳಲ್ಲಿ ಸುಮಾರು 70 ಲಕ್ಷ ಯುವಕರ ಪರಿಣತಿಗಾಗಿ ಹಸಿರು ಕೌಶಲ ಅಭಿವೃದ್ಧಿ ಕಾರ್ಯಕ್ರಮ ಸೇರಿದಂತೆ ಹಲವು ಯೋಜನೆಗಳನ್ನು ಪ್ರಾರಂಭಿಸಿದ್ದೇವೆ. ಇದು ಪರಿಸರ ವಲಯದಲ್ಲಿ ನುರಿತ ಉದ್ಯೋಗಗಳು ಮತ್ತು ಉದ್ಯಮಶೀಲತೆಗಾಗಿ ಹಲವಾರು ಅವಕಾಶಗಳನ್ನು ಸೃಷ್ಟಿಸುತ್ತದೆ.
ಭಾರತದ ಪ್ರಾಮಾಣಿಕ ಪ್ರಯತ್ನ ಅಂತಾರಾಷ್ಟ್ರೀಯವಾಗಿಯೂ ಗೋಚರಿಸುತ್ತಿದೆ. ಭಾರತ 2015ರ ಪ್ಯಾರಿಸ್ ಮಾತುಕತೆಯ ಸಿಓಪಿ -21ರಲ್ಲಿ ಮುಂಚೂಣಿಯಲ್ಲಿತ್ತು. ಅಂತಾರಾಷ್ಟ್ರೀಯ ಸೌರ ಸಹಯೋಗಕ್ಕೆ ಚಾಲನೆ ನೀಡಲು 2018ರ ಮಾರ್ಚ್​ನಲ್ಲಿ ವಿಶ್ವದ ಹಲವು ನಾಯಕರು ನವದೆಹಲಿಯಲ್ಲಿ ಸೇರಿದ್ದರು.
ಪರಿಸರ ಸಿದ್ಧಾಂತದ ಮಾದರಿಗೆ ಜಗತ್ತು ಬದಲಾಗಬೇಕಾಗಿದೆ, ಅದು ಸರ್ಕಾರಿ ನಿಯಮಗಳಲ್ಲಿ ಮಾತ್ರವಲ್ಲದೆ ಪರಿಸರ ಪ್ರಜ್ಞೆಯಲ್ಲಿ ವ್ಯಕ್ತವಾಗಬೇಕಿದೆ. ಈ ದಿಕ್ಕಿನಲ್ಲಿ ಕಾರ್ಯಪ್ರವೃತ್ತರಾಗಿರುವ ಎಲ್ಲ ವ್ಯಕ್ತಿಗಳನ್ನೂ ಮತ್ತು ಸಂಸ್ಥೆಗಳನ್ನೂ ನಾನು ಅಭಿನಂದಿಸಲು ಇಚ್ಛಿಸುತ್ತೇನೆ. ಅವರ ಈ ಪ್ರಯತ್ನಕ್ಕೆ ಸರ್ಕಾರದಿಂದ ಎಲ್ಲ ಕಾರ್ಯಸಾಧ್ಯ ಬೆಂಬಲದ ಭರವಸೆ ನೀಡುತ್ತೇನೆ. ನಾವೆಲ್ಲರೂ ಸೇರಿ ಮಾನವನ ಸಬಲೀಕರಣದ ಅಡಿಗಲ್ಲಾದ ಶುದ್ಧ ಪರಿಸರವನ್ನು ನಿರ್ವಿುಸೋಣ!
ನಿರ್ಮಲವಾಗುತ್ತಿರುವ ಗಂಗೆ
ಭಾರತ ತನ್ನ ನದಿಗಳನ್ನು ಶುದ್ಧಗೊಳಿಸುವತ್ತ ಹೆಜ್ಜೆ ಹಾಕಿದೆ. ಭಾರತದ ಜೀವನದಿಯಾದ ಗಂಗೆ ಹಲವು ಭಾಗಗಳಲ್ಲಿ ಮಲಿನವಾಗಿತ್ತು. ನಮಾಮಿ ಗಂಗೆ ಅಭಿಯಾನ ಈ ಐತಿಹಾಸಿಕ ತಪ್ಪನ್ನು ಸರಿಪಡಿಸುತ್ತಿದೆ. ತ್ಯಾಜ್ಯ ನೀರಿನ ಶುದ್ಧೀಕರಣಕ್ಕೆ ಒತ್ತು ನೀಡಲಾಗಿದೆ. ಅಮೃತ್ ಮತ್ತು ಸ್ಮಾರ್ಟ್ ಸಿಟಿ ಅಭಿಯಾನದಂಥ ನಮ್ಮ ಮಹತ್ವದ ಉಪಕ್ರಮಗಳಲ್ಲಿ, ನಗರಾಭಿವೃದ್ಧಿ ಮತ್ತು ಪರಿಸರ ಕಾಳಜಿ ಎರಡನ್ನೂ ಸರಿಯಾಗಿ ತೂಗಿಸಬೇಕಿದೆ. 13 ಕೋಟಿ ಮಣ್ಣಿನ ಆರೋಗ್ಯ ಕಾರ್ಡ್​ಗಳನ್ನು ರೈತರಿಗೆ ವಿತರಿಸಲಾಗಿದ್ದು, ಈ ಮಾಹಿತಿ ರೈತರಿಗೆ ಉತ್ಪಾದನೆಯ ಹೆಚ್ಚಳಕ್ಕೆ ಮತ್ತು ಭೂಮಿಯ ಆರೋಗ್ಯದ ಸುಧಾರಣೆಗೆ ನೆರವಾಗಿದೆ.
ಹೊಸ ಪ್ರಯೋಗ
ನಮ್ಮ ದೇಶ ಹೊಸ ಮತ್ತು ನವೀಕರಿಸಬಹುದಾದ ಇಂಧನ ಮೂಲಗಳತ್ತ ಗಮನವನ್ನು ಹರಿಸಿದೆ. ಕಳೆದ ನಾಲ್ಕು ವರ್ಷಗಳಲ್ಲಿ, ಈ ವಲಯ ಹೆಚ್ಚು ಆಪ್ತವಾಗಿದೆ ಮತ್ತು ಕೈಗೆಟಕುವಂತಾಗಿದೆ. ಉಜಾಲ ಯೋಜನೆಯಡಿಯಲ್ಲಿ ಕಡಿಮೆ ದರದಲ್ಲಿ ಸುಮಾರು 31 ಕೋಟಿ ಎಲ್.ಇ.ಡಿ. ಬಲ್ಬ್ ವಿತರಿಸಲಾಗಿದೆ. ಇದರಿಂದ ಸಿ-ತ್ಯಾಜ್ಯ ಹೊರಸೂಸುವಿಕೆ ಮತ್ತು ವಿದ್ಯುತ್ ಬಿಲ್ ಮೊತ್ತವೂ ತಗ್ಗಿದೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

**ಜ್ಞಾನ ಕಾರಂಜಿ**::: ಬೇನಾಮಿ ಆಸ್ತಿ ಪ್ರಕರಣ ವಿಲೇವಾರಿಗೆ ನ್ಯಾಯಾಧಿಕರಣ,

ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್​ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್​ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್​ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...

**ಜ್ಞಾನ ಕಾರಂಜಿ**::: ★ ವೈಜ್ಞಾನಿಕ ಉಪಕರಣಗಳು ಹಾಗೂ ಅವುಗಳ ಉಪಯೋಗಗಳು

1) ಅಲ್ಟಿಮೀಟರ್ —————> ಎತ್ತರ ಮತ್ತು ವಾಯುವಿನ ಒತ್ತಡವನ್ನು ಸೂಚಿಸುವ ಸಾಧನ. 2) ಲ್ಯಾಕ್ಟೊಮೀಟರ್ —————> ಹಾಲಿನಲ್ಲಿರುವ ನೀರಿನ ಪ್ರಮಾಣವನ್ನು ಅಳೆಯುವ ಸಾಧನ. 3) ಬ್ಯಾರೋಮೀಟರ್ —————> ಭೂಮಿಯ ಮೇಲಿನ ಹವೆಯ ಒತ್ತಡವನ್ನು ಅಳೆಯುವ ಸಾಧನ. 4) ಮೈಕ್ರೋಮೀಟರ್ —————> ಸಣ್ಣ ವಸ್ತುಗಳ ದಪ್ಪವನ್ನು ಅಳೆಯುವ ಸಾಧನ. 5) ಹೈಡ್ರೋಮೀಟರ್ —————> ದ್ರವಗಳ ಸಾಪೇಕ್ಷ ಸಾಂದ್ರತೆಯನ್ನು ಅಳೆಯುವ ಸಾಧನ. 6) ಪೈರೋಮೀಟರ್ —————> ಹೆಚ್ಚು ಉಷ್ಣತೆಯನ್ನು ಅಳೆಯುವ ಸಾಧನ. 7) ಪ್ಯಾಥೋಮೀಟರ್ —————> ಸಮುದ್ರದ ಆಳವನ್ನು ಅಳೆಯುವ ಸಾಧನ. 8) ವೋಲ್ಟಾಮೀಟರ್ —————> ವಿದ್ಯುತ್ ಕೋಶದ ವಿದ್ಯುತ್ ಚಾಲಕ ಬಲವನ್ನು ಅಳೆಯುವ ಸಾಧನ. 9) ಗ್ಯಾಲ್ವನೋಮೀಟರ್ —————> ಕಡಿಮೆ ವಿದ್ಯುತ್ ಅಳೆಯುವ ಸಾಧನ. 10) ಅನಿಮಾಮೀಟರ್ —————> ಗಾಳಿಯ ವೇಗವನ್ನು ಅಳೆಯುವ ಸಾಧನ. 11) ಓಡೋಮೀಟರ್ —————> ಚಕ್ರವಾಹನಗಳು ಚಲಿಸುವ ದೂರವನ್ನು ಅಳೆಯುವ ಸಾಧನ. 12) ಸ್ಪೀಡೋಮೀಟರ್ —————> ವಾಹನಗಳ ವೇಗವನ್ನು ಅಳೆಯುವ ಸಾಧನ. 13) ಗ್ರಾಫಿಮೀಟರ್ —————> ನೀರಿನ ಸೆಲೆಯನ್ನು ಪತ್ತೆ ಹಚ್ಚುವ ಸಾಧನ. 14) ಮೋನೋಮೀಟರ್ —————> ಅನಿಲಗಳ ಒತ್ತಡಗಳನ್ನು ಅಳೆಯುವ ಸಾಧನ. 15) ಕ್ರೋನೋಮೀಟರ್ —————> ಹಡಗಿನ ನಿಖರವಾದ ಕಾಲವನ್ನು ಅಳತೆ ಮಾಡುವ ಸಾಧನ. 16) ರೆಡಿಯೋಮೀಟರ್ —————> ವಿಕಿರಣಗಳಿಂದ ಹೊರಬರುವ ಶಕ್ತಿಯನ್ನು ಅಳೆಯುವ ಸಾಧನ. 1...

.. ಭಾರತೀಯ ಕಾವ್ಯ ಮೀಮಾಂಸೆ

ಭಾರತೀಯ ಕಾವ್ಯ ಮೀಮಾಂಸೆ ಭಾರತೀಯ ಕಾವ್ಯಮೀಮಾಂಸೆಗೆ ಸುಮಾರು ಎರಡು ಸಾವಿರ ವರ್ಷಗಳ ದೀರ್ಘ ಇತಿಹಾಸವಿದೆ. ಕವಿ ಮತ್ತು ಕಾವ್ಯದ ಲಕ್ಷಣಗಳು, ಕಾವ್ಯ ಪ್ರಭೇದಗಳು. ಕಾವ್ಯಾಲಂಕಾರಗಳು, ಕಾವ್ಯದ ವಸ್ತು ಇತ್ಯಾದಿ ಕಾವ್ಯನಿರ್ಮಿತಿಗೆ ಸಂಬಂಧಿಸಿದ ಮಹತ್ತ್ವದ ಅಂಶಗಳ ಶಾಸ್ತ್ರೀಯ ನಿರೂಪಣೆಯೇ ಕಾವ್ಯನಿಮೀಮಾಂಸೆ. ಇದನ್ನು ಅಲಂಕಾರ ಶಾಸ್ತ್ರವೆಂದೂ ಕರೆಯಲಾಗುತ್ತದೆ. ಪ್ರಾಚೀನ ಯುಗದಲ್ಲಿ ಅಲಂಕಾರಶಾಸ್ತ್ರವೆಂದರೆ ಪ್ರಧಾನವಾಗಿ ನಾಟ್ಯ ನೃತ್ಯ ಇತ್ಯಾದಿ ರಂಗ ಸಂಸ್ಕರಣ ಅಥವಾ ನಾಟ್ಯಕಲೆಯನ್ನು ಸರ್ವಾಂಗ ಸುಂದರವಾಗಿ ಮಾಡುವ ಒಂದು ಪರಿಷ್ಕಾರ ಶಾಸ್ತ್ರವಾಗಿದ್ದಿತು. ಕಾಲಕ್ರಮೇಣ ಇದು ಕಾವ್ಯಕಲೆಯನ್ನು ಪರಿಷ್ಕರಿಸುವ ಶಾಸ್ತ್ರವಾಗಿ ಪರಿಣಮಿಸಿತು. ಇದರ ಆರಂಭ ಯಾವಾಗಿ ಯಾರಿಂದ ಆಯಿತೆಂದು ಇತ್ಯರ್ಥಪಡಿಸುವುದು ಕಷ್ಟದ ಕೆಲಸ. ಸಾಹಿತ್ಯದಲ್ಲಿ ಸೌಂದರ್ಯೋಪಾಸನೆ ಪ್ರಾರಂಭವಾದಂದಿನಿಂದಲೂ ಪಂಡಿತರು ಮತ್ತು ವಿಮರ್ಶಕರು ಸಾಹಿತ್ಯದಲ್ಲಿ ಸೌಂದರ್ಯ ಅರಸಿ ಈ ಚಿತ್ತ ಸಂಸ್ಕರಣ ಶಾಸ್ತ್ರವನ್ನು ಬೆಳೆಸಿಕೊಂಡು ಬಂದಿದ್ದಾರೆ. ಕ್ರಿ. ಪೂ. 6ನೆಯ ಶತಮಾನದಲ್ಲಿದ ಯಾಸ್ಕಾಚಾರ್ಯ ಉಪಮೆ ರೂಪಕಗಳ ಬಗ್ಗೆ ಉಲ್ಲೇಖಸಿದ್ದಾನೆ. ಕ್ರಿ. ಪೂ. 5ನೆಯ ಶತಕದ ವೇಳೆಗೆ ಪಾಣಿನಿ ನಟರ ವಿಷಯ ಪ್ರಸ್ತಾಪಿಸಿದ್ದಾನೆ. ವೇದಗಳ ಕಾಲದಲ್ಲೂ ಉಪಮಾ ರೂಪಕಾದಿಗಳ ಪ್ರಯೋಗವಿದೆ. ಋಗ್ವೇದದಲ್ಲಿ ಕಂಡುಬರುವ ಯಮಯಮಿಯರ ಸಂವಾದ, ಊರ್ವಶೀ ಪುರೂರವರ ಸಂವಾದ_ಇವುಗಳಿಂದ ವೇದಕಾಲದಲ್ಲಿ ನಾಟಕದ ಅಂಕುರಾರ್ಪಣವಿದ್ದಂತಿದೆ....