**ಜ್ಞಾನ ಕಾರಂಜಿ**::: ಬೆಂಗಳೂರು, ಹೈದರಾಬಾದ್ ವಿಮಾನ ನಿಲ್ದಾಣಗಳಲ್ಲಿ ಫೆಬ್ರವರಿ ವೇಳೆಗೆ ಮುಖ ಗುರುತಿಸುವ ಬಯೋಮೆಟ್ರಿಕ್
ದೇಶದ ಎಲ್ಲ ವಿಮಾನ ನಿಲ್ದಾಣಗಳಲ್ಲಿ ಇನ್ನು ಅತಿ ಶೀಘ್ರದಲ್ಲೇ ಮುಖವನ್ನು ಗುರುತಿಸುವ ಬಯೋಮೆಟ್ರಿಕ್ ವ್ಯವಸ್ಥೆಯನ್ನು ಅಳವಡಿಸಲಾಗುತ್ತದೆ ಎಂದು ನಾಗರಿಕ ವಿಮಾನಯಾನ ಸಚಿವ ಸುರೇಶ್ ಪ್ರಭು ತಿಳಿಸಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಸರ್ಕಾರದ ಡಿಜಿ ಯಾತ್ರಾ ಯೋಜನೆಯಡಿ ಮುಖ ಗುರುತಿನ ಬಯೋಮೆಟ್ರಿಕ್ ಪದ್ಧತಿ ಅತಿ ಶೀಘ್ರದಲ್ಲಿ ಪ್ರಾರಂಭವಾಗುತ್ತದೆ. ಇದು ವಿಮಾನ ಪ್ರಯಾಣಿಕರಿಗೆ ಐಚ್ಛಿಕವಾಗಿರುತ್ತದೆ. ವಿಮಾನ ನಿಲ್ದಾಣದಲ್ಲಿ ಕಾಗದ ರಹಿತ ಹಾಗೂ ಕಾದಾಟ, ವಿವಾದ ಮುಕ್ತ ವಾತಾವರಣ ಕಲ್ಪಿಸಲು ಈ ಬಯೋಮೆಟ್ರಿಕ್ ಜಾರಿಗೊಳಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಬೆಂಗಳೂರು ಮತ್ತು ಹೈದರಾಬಾದ್ ಏರ್ಪೋರ್ಟ್ಗಳಲ್ಲಿ ಮುಖ ಗುರುತಿಸುವಿಕೆಯ ಬಯೋಮೆಟ್ರಿಕ್ ವ್ಯವಸ್ಥೆ ಜಾರಿಗೆ ಎಲ್ಲ ಸಿದ್ಧತೆಗಳಾಗಿದ್ದು 2019ರ ಫೆಬ್ರವರಿ ಅಂತ್ಯದೊಳಗೆ ಜಾರಿ ಮಾಡಲಾಗುತ್ತದೆ. ಏಪ್ರಿಲ್ನಲ್ಲಿ ಕೋಲ್ಕತ, ವಾರಾಣಸಿ, ಪುಣೆ ಮತ್ತು ವಿಜಯವಾಡಾದ ನಿಲ್ದಾಣಗಳಲ್ಲಿ ಪ್ರಾರಂಭಿಸಲು ವಿಮಾನ ನಿಲ್ದಾಣಗಳ ಪ್ರಾಧಿಕಾರ ಯೋಜನೆ ರೂಪಿಸಿದೆ ಎಂದು ಹೇಳಿದರು.
ಹೀಗೆ ಕಾರ್ಯನಿರ್ವಹಿಸಲಿದೆ ಬಯೋಮೆಟ್ರಿಕ್
ಡಿಜಿ ಯಾತ್ರೆ ಯೋಜನೆಯಡಿ ವಿಮಾನಯಾನ ಮಾಡುವವರಿಗಾಗಿ ಒಂದು ಕೇಂದ್ರೀಕೃತ ನೋಂದಣಿ ವ್ಯವಸ್ಥೆ ಇರುತ್ತದೆ. ಅದು ಪ್ರತಿ ಪ್ರಯಾಣಿಕರಿಗೂ ಒಂದು ಐಡಿ ಕೊಡುತ್ತದೆ. ಹೆಸರು, ಇ-ಮೇಲ್, ಮೊಬೈಲ್ ನಂಬರ್, ಆಧಾರ್ಗಳನ್ನೊಳಗೊಂಡ ಈ ಐಡಿಯನ್ನು ಪ್ರಯಾಣಿಕರು ಏರ್ಲೈನ್ನಿಂದ ಟಿಕೆಟ್ ಖರೀದಿ ಮಾಡುವಾಗ ನೀಡಲಾಗುವುದು.
ನಂತರ ಏರ್ಲೈನ್ ನವರು ಪ್ರಯಾಣಿಕರ ಡಿಜಿ ಯಾತ್ರಾ ಐಡಿಯನ್ನು ಅವರು ಪ್ರಯಾಣಿಸಲಿರುವ ಏರ್ಪೋರ್ಟ್ಗೆ ನೀಡುತ್ತಾರೆ. ಪ್ರಯಾಣಿಕರು ವಿಮಾನ ಏರುವುದಕ್ಕೂ ಮೊದಲು ಒಮ್ಮೆ ಮಾತ್ರ ಡಿಜಿ ಐಡಿ ಪರಿಶೀಲಿಸಲಾಗುವುದು. ಭಾವಚಿತ್ರ ಸೆರೆಹಿಡಿದು ಡಿಜಿ ಯಾತ್ರಾ ಐಡಿಯಲ್ಲಿ ಸಂಗ್ರಹಿಸಲಾಗುವುದು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ