ವಿಷಯಕ್ಕೆ ಹೋಗಿ

**ಜ್ಞಾನ ಕಾರಂಜಿ**::: ◼ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಬಗೆಗಿನ ಇಂಟರೆಸ್ಟಿಂಗ್ ಸಂಗತಿಗಳು ◼

ಭಾರತಕ್ಕೆ ಸ್ವಾತಂತ್ರ್ಯ ದೊರಕಿಸಲು ತಮ್ಮ ಜೀವನವನ್ನೇ ಮುಡುಪಾಗಿಟ್ಟು ಶ್ರಮಿಸಿದ ಗಾಂಧೀಜಿಯವರ ನೆನಪು ಬರುವುದು ನಮಗೆ ಗಾಂಧಿಜಯಂತಿಯಂದು ಅಥವಾ ನೋಟುಗಳನ್ನು ನೋಡಿದಾಗ ಮಾತ್ರ. ಭಾರತಕ್ಕೆ ಸ್ವಾತಂತ್ರ್ಯ ದೊರಕಿಸಲು ಅಹಿಂಸೆಯ ಅಸ್ತ್ರ ಹಿಡಿದು ಇಡಿಯ ರಾಷ್ಟ್ರವನ್ನೇ ಸ್ವತಂತ್ರ ಸಂಗ್ರಾಮದಲ್ಲಿ ಭಾಗವಹಿಸಲು ಪ್ರೇರೇಪಿಸಿ ಯಶಸ್ವಿಯಾದ ಬಳಿಕವೂ ಎಲ್ಲವೂ ಭಗವಂತನ ಕೃಪೆ ಎಂದು ಭಾವಿಸಿ ತಮ್ಮ ಸರಳ ಬದುಕನ್ನು ಮುಂದುವರೆಸಿದ್ದ ಈ ಮಹಾನ್ ಚೇತನ ಇಂದಿಗೂ ಒಂದು ಮಾದರಿ ನಾಯಕರಾಗಿದ್ದಾರೆ.
👉 ಮಹಾತ್ಮಾ ಎಂಬ ಹೆಸರನ್ನು ರವೀಂದ್ರನಾಥ ಠಾಗೋರ್ ಅವರು ನೀಡುವ ಮೊದಲು ಮೋಹನದಾಸ್ ಕರಮಚಂದ್ ಗಾಂಧಿಯವರನ್ನು ಬಾಪು ಎಂದೇ ಹೆಚ್ಚಾಗಿ ಜನರು ಕರೆಯುತ್ತಿದ್ದರು. ಸ್ವಾತಂತ್ರ್ಯ ಸಂಗ್ರಾಮದ ನೇತೃತ್ವ ವಹಿಸಿದ್ದ ಗಾಂಧೀಜಿಯವರು ಅಪ್ರತಿಮ ನಾಯಕರಾಗಿದ್ದರೂ, ಸಮಾಜದ ಎಲ್ಲಾ ವರ್ಗದ ಜನರೊಂದಿಗೆ ಅವರು ಮುಕ್ತವಾಗಿ ಬೆರೆಯುತ್ತಿದ್ದರು ಮತ್ತು ಎಲ್ಲರ ಪರ ಕಾಳಜಿ ವಹಿಸುತ್ತಿದ್ದರು.
ಸ್ವಾತಂತ್ರ್ಯಪೂರ್ವದಲ್ಲಿ ಪ್ರತಿಯೊಬ್ಬ ಭಾರತೀಯನೂ ಅವರ ಅಭಿಮಾನಿಯಾಗಿದ್ದರು, ಅಷ್ಟೇ ಏಕೆ, ವಿದೇಶೀಯರೂ ಅವರ ಸರಳತೆ ಮತ್ತು ಸಮರ್ಥ ನಾಯಕತ್ವವನ್ನು ಮೆಚ್ಚಿ ಅವರ ಅಭಿಮಾನಿಯಾಗುತ್ತಿದ್ದರು. ಅಂದಿನ ದಿನಗಳಲ್ಲಿ ಅವರು ತಮ್ಮ ಸಾಮಾಜಿಕ ಮತ್ತು ವೈಯಕ್ತಿಕ ಜೀವನವನ್ನು ಅತ್ಯಂತ ಸಮತೋಲನದಲ್ಲಿ ಕಾಯ್ದಿರಿಸಿಕೊಳ್ಳುತ್ತಿದ್ದರು. ಇಡಿಯ ದೇಶಕ್ಕೇ ಮಾದರಿಯಾದ ಅವರಂತಹ ಇನ್ನೋರ್ವ ವ್ಯಕ್ತಿಯನ್ನು ಇಂದು ಕಾಣುವುದು ಭಾರತದಲ್ಲಿಯೇ ಏಕೆ ಇಡಿಯ ವಿಶ್ವದಲ್ಲಿಯೇ ಅತಿ ಕಷ್ಟಕರ.
ಬರೆಯ ಭಾರತದಲ್ಲಿ ಮಾತ್ರವಲ್ಲದೇ ಇಡಿಯ ವಿಶ್ವದ ಹಲವು ರಾಷ್ಟ್ರಗಳು ಗಾಂಧೀಜಿಯವರಿಗೆ ಆಯಾ ದೇಶದ ಉನ್ನತ ಗೌರವವನ್ನು ನೀಡಿ ಗೌರವಿಸಿವೆ. ಅಹಿಂಸೆ ಮೂಲಕ ಗೆದ್ದ ಯುದ್ಧದ ಮೂಲಕ ಇಂದಿಗೂ ಗಾಂಧೀಜಿ ಇಡಿಯ ವಿಶ್ವಕ್ಕೆ ಸವಾಲಾಗುತ್ತಾರೆ. ಈ ಮಹಾನ್ ಚೇತನದ ಬಗ್ಗೆ ಹಲವು ಕುತೂಹಲಕಾರಿ ಸಂಗತಿಗಳಿದ್ದು ಗಾಂಧಿಜಯಂತಿಯ ಶುಭಸಂದರ್ಭದಲ್ಲಿ ಇವನ್ನು ಕೆಳಗಿನ ಸ್ಲೈಡ್ ಶೋ ಮೂಲಕ ಪ್ರಸ್ತುತಪಡಿಸಲು ಹರ್ಷವೆನಿಸುತ್ತದೆ....
👉 ಮುಂದೆ ಓದಿ 👉
ಬಾಲ್ಯದಲ್ಲಿ ಅವರು ಧೈರ್ಯಶಾಲಿಯಾಗಿರಲಿಲ್ಲ
ಅವರು ಬಾಲ್ಯದಲ್ಲಿ ಇತರ ಯಾವುದೇ ಸಾಮಾನ್ಯ ಮಕ್ಕಳಂತೆ ಪುಕ್ಕಲರಾಗಿದ್ದರು. ಅವರ ಜೀವನಚರಿತ್ರೆಯಲ್ಲಿ ಅವರೇ ಹೇಳಿಕೊಂಡ ಹಾಗೆ, ಚಿಕ್ಕ ಹುಡುಗನಾಗಿದ್ದಾಗ ಅವರು ಶಾಲೆ ಬಿಟ್ಟ ತಕ್ಷಣ ಮನೆಗೆ ಓಡೋಡಿ ಬರುತ್ತಿದ್ದರಂತೆ. ಏಕೆಂದರೆ ನಡುವೆ ಯಾರಾದರೂ ಮಾತನಾಡಿಸಿದರೆ ಎಂದು ಅಳುಕು ಅವರಲ್ಲಿ ಮನೆ ಮಾಡಿತ್ತು ಎಂದು ಹೇಳಿಕೊಂಡಿದ್ದಾರೆ.
◾ ನಡಿಗೆ ಪ್ರಿಯರಾಗಿದ್ದರು◾
ಗಾಂಧೀಜಿಯವರಿಗೆ ನಡೆಯುವುದು ಎಂದರೆ ಅತ್ಯಂತ ಪ್ರಿಯವಾದ ಹವ್ಯಾಸವಾಗಿತ್ತು. ಅವರು ಹೇಳಿಕೊಂಡ ಪ್ರಕಾರ 'ನಡಿಗೆ ಎಲ್ಲಾ ವ್ಯಾಯಮಗಳ ಪೈಕಿ ರಾಜಕುಮಾರನಿದ್ದಂತೆ'. ತಮ್ಮ ಶಾಲಾ ಕಾಲೇಜಿನ ದಿನಗಳಲ್ಲಿ ಅವರು ಮನೆಯಿಂದ ಕಾಲೇಜಿನವರೆಗೆ ನಡೆದುಕೊಂಡೇ ಹೋಗಿ ನಡೆದೇ ಹಿಂದಿರುಗುತ್ತಿದ್ದರು.
ಅವರಿಗೆ ಶಾಲೆಯ ಆಟಗಳಿಗಿಂತಲೂ ನಡಿಗೆಯೇ ಹೆಚ್ಚು ಪ್ರಿಯವಾಗಿತ್ತು. ಲಂಡನ್ ನಲ್ಲಿ ವಕೀಲ ಪದವಿಯನ್ನು ಓದುತ್ತಿದ್ದಾಗ ಪ್ರತಿದಿನ ಎಂಟರಿಂದ ಹತ್ತು ಮೈಲಿ ನಡೆದೇ ಹೋಗಿ ಆ ಪ್ರಯಾಣದ ಹಣವನ್ನೂ ಉಳಿಸುತ್ತಿದ್ದರು.
ಬ್ರಿಟಿಷರ ಕಪ್ಪುಮುಖ ಕಂಡ ಮೊದಲ ಅನುಭವ
ಒಮ್ಮೆ ಟಿಕೆಟ್ ಖರೀದಿಸಿ ರೈಲಿನಲ್ಲಿ ಪ್ರಯಾಣಿಸಲು ಒಳಗಡಿಯಿಟ್ಟಾಗ ಬ್ರಿಟಿಷ್ ಅಧಿಕಾರಿ ಅವರನ್ನು ದರ್ಪದಿಂದ ರೈಲಿನಿಂದ ಕೆಳಗಿಳಿಯಲು ಬಲವಂತಪಡಿಸಿದರು. ಇದಕ್ಕೆ ಕಾರಣ ಗಾಂಧೀಜಿಯವರು ಕಪ್ಪು ಮೈಬಣ್ಣ ಹೊಂದಿದ್ದರು. ಆದರೆ ಗಾಂಧೀಜಿಯವರು ತಮ್ಮ ಟಿಕೆಟ್ ತೋರಿಸಿ ರೈಲಿನಲ್ಲಿ ಪ್ರಯಾಣಿಸುವ ಹಕ್ಕನ್ನು ಪ್ರತಿಪಾದಿಸಿದರು.

ಬ್ರಿಟಿಷರ ಕಪ್ಪುಮುಖ ಕಂಡ ಮೊದಲ ಅನುಭವ
ಆದರೆ ಇದಕ್ಕೆ ಒಪ್ಪದ ಆ ಬ್ರಿಟಿಷ್ ಅಧಿಕಾರಿ ಇತರ ರೈಲ್ವೇ ಅಧಿಕಾರಿಗಳ ನೆರವಿನಿಂದ ಬಲವಂತವಾಗಿ ರೈಲಿನಿಂದ ಹೊರದೂಡಿದರು. ಇದು ಬ್ರಿಟಿಷರ ಕಪ್ಪು ಮನಸ್ಸನ್ನು ಪ್ರಥಮವಾಗಿ ಗಾಂಧೀಜಿಯವರಿಗೆ ಪರಿಚಯಿಸಿತು.
ನಾನು ಈ ವಸ್ತುವಿನ ಮೂಲಕ ಮಾತನಾಡಬೇಕೇ?"
1931ರಲ್ಲಿ ಇಂಗ್ಲೆಂಡಿನಲ್ಲಿದ್ದಾಗ ಅವರಿಗೆ ರೇಡಿಯೋ ಮಾಧ್ಯಮದ ಮೂಲಕ ಅಮೇರಿಕಾ ಸಂಯುಕ್ತ ಸಂಸ್ಥಾನದ ಬಗ್ಗೆ ಮಾತನಾಡುವ ಅವಕಾಶ ಸಿಕ್ಕಿತ್ತು. ಅತ್ತ ಗಾಂಧೀಜಿಯವರ ಮಾತುಗಳನ್ನು ಕೇಳಲು ಕಾತರದಿಂದ ಕಾದು ಮೈಯೆಲ್ಲಾ ಕಿವಿಯಾಗಿ ನಿಂತಿದ್ದ ಜನರಿಗೆ ಮೊತ್ತ ಮೊದಲನೆಯದಾಗಿ ಗಾಂಧೀಜಿಯವರ ಧ್ವನಿಯಲ್ಲಿ ಕೇಳಿ ಬಂದ ಪದಗಳು ಇವು: 'ನಾನು ಈ ವಸ್ತುವಿನ ಮೂಲಕ ಮಾತನಾಡಬೇಕೇ?'
◾ ಒಂದು ಪಾದರಕ್ಷೆ ಕಳೆದಾಗ ಇನ್ನೊಂದನ್ನೂ ಎಸೆದ ಗಾಂಧೀಜಿ! ◾
ಗಾಂಧೀಜಿಯವರು ತಮ್ಮ ಸುತ್ತಮುತ್ತಲ ಎಲ್ಲಾ ಜನರ ಬಗ್ಗೆ ಕಾಳಜಿ ಹೊಂದಿರುವ ವ್ಯಕ್ತಿಯಾಗಿದ್ದರು. ಒಮ್ಮೆ ರೈಲಿಗೆ ಹತ್ತುವ ಗಡಿಬಿಡಿಯಲ್ಲಿ ಅವರ ಒಂದು ಕಾಲಿನ ಪಾದರಕ್ಷೆ ರೈಲ್ವೇ ನಿಲ್ದಾಣದ ಕಟ್ಟೆಯಲ್ಲಿ ಕಳಚಿಕೊಂಡಿತು. ಈಗಾಗಲೇ ರೈಲು ವೇಗ ಪಡೆದುಕೊಂಡಿದ್ದರಿಂದ ಇಳಿದು ತರಲು ಸಾಧ್ಯವೇ ಇರಲಿಲ್ಲ. ತಕ್ಷಣ ಗಾಂಧೀಜಿಯವರು ಇನ್ನೊಂದು ಕಾಲಿನ ಪಾದರಕ್ಷೆಯನ್ನೂ ಕಳಚಿ ಹಿಂದಿನ ಪಾದರಕ್ಷೆಯತ್ತ ಎಸೆದರು.
ಹೀಗೇಕೆ ಮಾಡಿದಿರಿ ಎಂದು ಕೇಳಿದವರಿಗೆ ಅವರು ಹೀಗೆ ಉತ್ತರ ನೀಡಿದರು: 'ಈ ಒಂದು ಪಾದರಕ್ಷೆ ಹೇಗೂ ನನ್ನ ಕೆಲಸಕ್ಕೆ ಬರುವುದಿಲ್ಲ. ಇದು ಸಿಗುವ ಬೇರಾರಿಗಾದರೂ ಇದು ಪ್ರಯೋಜನಕ್ಕೆ ಬರಲಿ ಎಂದು ಎಸೆದೆ'. ಎಂದರು
ಮಹಾತ್ಮಾ ಹೆಸರಿಗೆ ತಕ್ಕ ವ್ಯಕ್ತಿತ್ವ
ಯಾವುದೇ ವ್ಯಕ್ತಿಗೆ ಮಹಾತ್ಮಾ ಎಂಬ ಬಿರುದು ಸಿಗಲು ಅವರ ಅಂತರಂಗದಲ್ಲಿರುವ ಸದ್ಗುಣಗಳು ಬೇರೆಯವರಿಗೆ ಮಾದರಿಯಾಗಬೇಕು. ಗಾಂಧೀಜಿಯವರಲ್ಲಿದ್ದ ಅಹಿಂಸಾ ತತ್ವ, ಆಧ್ಯಾತ್ಮಿಕ, ಧಾರ್ಮಿಕ ಭಾವನೆಗಳು, ಪ್ರಾಮಾಣಿಕತೆ, ಶಿಸ್ತು, ನಿಷ್ಠೆ, ಅಭಿಲಾಷೆ ಮೊದಲಾದ ಗುಣಗಳು ಅವರ ಸುತ್ತ ಇರುವ ಎಲ್ಲರನ್ನೂ ಪ್ರೇರೇಪಿಸುತ್ತಿತ್ತು. ಈ ಗುಣಗಳೇ ಅವರಿಗೆ ಮಹಾತ್ಮಾ ಎಂಬ ಬಿರುದು ಪಡೆಯಲು ಕಾರಣವಾಯಿತು.
◾ ಟೈಮ್ಸ್ ಮ್ಯಾಗಜಿನ್ನ ವರ್ಷದ ವ್ಯಕ್ತಿ ◾
ಅಮೇರಿಕಾದ ಅತ್ಯಂತ ಪ್ರಬಲ ಮತ್ತು ಜನಪ್ರಿಯ ಮಾಧ್ಯಮವಾದ ಟೈಮ್ಸ್ ಪಬ್ಲಿಕೇಶನ್ 1930ರಲ್ಲಿ ಮಹಾತ್ಮಾ ಗಾಂಧಿಯವರನ್ನು ವರ್ಷದ ವ್ಯಕ್ತಿಯನ್ನಾಗಿ ಆಯ್ಕೆ ಮಾಡಿತ್ತು.
◾ ಶತಮಾನದ ನೂರು ಪ್ರಮುಖ ಕೃತಿಗಳಲ್ಲಿ ಗಾಂಧೀಜಿಯವರ ಆತ್ಮಚರಿತ್ರೆ ◾
My Experiments with Truth ಎಂಬ ಹೆಸರಿನಲ್ಲಿ ಬರೆದ ಅವರ ಆತ್ಮಚರಿತ್ರೆಯಲ್ಲಿ 1920ರವರೆಗಿನ ಜೀವನವನ್ನು ಅವರು ವಿವರವಾಗಿ ಬರೆದಿದ್ದರು. ಈ ವಿವರಗಳ ಹೊತ್ತಿಗೆ 1927 ರಲ್ಲಿ ಬಿಡುಗಡೆಯಾಗಿತ್ತು. 1999ರಲ್ಲಿ ಪ್ರಖ್ಯಾತ ಪ್ರಕಾಶಕರಾದ ಹರ್ಪರ್ ಕೋಲಿನ್ಸ್ ರವರು ಪ್ರಕಟಿಸಿದ ಇಪ್ಪತ್ತನೆಯ ಶತಮಾನದ ಪ್ರಮುಖ ಪಾರಮಾರ್ಥಿಕವಾದ ನೂರು ಕೃತಿಗಳಲ್ಲಿ ಈ ಕೃತಿಯೂ ಪ್ರಮುಖ ಸ್ಥಾನದಲ್ಲಿತ್ತು.
◾ ಮಹಾತ್ಮಾ ಗಾಂಧೀಜಿಯವರ ಇಂಗ್ಲಿಷ್ ಉಚ್ಛಾರಣೆ ಐರ್ಲೆಂಡಿನವರಂತಿತ್ತು ◾
ಮಹಾತ್ಮಾ ಗಾಂಧೀಜಿಯವರ ಇಂಗ್ಲಿಷ್ ಉಚ್ಛಾರಣೆಯನ್ನು ಆಲಿಸಿದರೆ ಐರ್ಲೆಂಡಿನ ಉಚ್ಛಾರವಿರುವುದು ಸ್ಪಷ್ಟವಾಗುತ್ತಿತ್ತು. ಏಕೆಂದರೆ ಅವರಿಗೆ ಪ್ರಾಥಮಿಕ ಇಂಗ್ಲಿಷ್ ಬೋಧಿಸಿದ ಗುರುಗಳು ಐರ್ಲೆಂಡಿನವರಾಗಿದ್ದರು. ಸ್ವತಂತ್ರ ಸಂಗ್ರಾಮದಲ್ಲಿ ಅವರು ತಮ್ಮ ಮೈಮೇಲೆ ಖಾದಿಯ ಸರಳ ಉಡುಪನ್ನು ಮಾತ್ರ ಧರಿಸುತ್ತಿದ್ದರು
ಆದರೆ ಲಂಡನ್ನಲ್ಲಿದ್ದಾಗ ಅವರು ಸಾಮಾನ್ಯ ಉಡುಗೆ, ಕಾಲಿಗೆ ಚರ್ಮದ ಪಾದರಕ್ಷೆಯ ಮೇಲಿನ ಕವಚ ತೊಟ್ಟು ತಲೆಗೆ ರೇಷ್ಮೆಯ ಟೋಪಿ ಧರಿಸುತ್ತಿದ್ದರು.
◾ ವಿಶ್ವಸಂಸ್ಥೆ 2007 ರಿಂದ ಮಾಹಾತ್ಮ ಗಾಂಧೀಜಿಯವರ ಜನ್ಮದಿನವನ್ನು ಅಂದರೆ ಅಕ್ಟೋಬರ್ 2 ನ್ನು 'ಅಂತಾರಾಷ್ಟ್ರೀಯ ಅಹಿಂಸಾ ದಿನ' ಎಂದು ಆಚರಿಸುತ್ತಿದೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

**ಜ್ಞಾನ ಕಾರಂಜಿ**::: ಬೇನಾಮಿ ಆಸ್ತಿ ಪ್ರಕರಣ ವಿಲೇವಾರಿಗೆ ನ್ಯಾಯಾಧಿಕರಣ,

ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್​ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್​ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್​ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...

**ಜ್ಞಾನ ಕಾರಂಜಿ**::: ★ ವೈಜ್ಞಾನಿಕ ಉಪಕರಣಗಳು ಹಾಗೂ ಅವುಗಳ ಉಪಯೋಗಗಳು

1) ಅಲ್ಟಿಮೀಟರ್ —————> ಎತ್ತರ ಮತ್ತು ವಾಯುವಿನ ಒತ್ತಡವನ್ನು ಸೂಚಿಸುವ ಸಾಧನ. 2) ಲ್ಯಾಕ್ಟೊಮೀಟರ್ —————> ಹಾಲಿನಲ್ಲಿರುವ ನೀರಿನ ಪ್ರಮಾಣವನ್ನು ಅಳೆಯುವ ಸಾಧನ. 3) ಬ್ಯಾರೋಮೀಟರ್ —————> ಭೂಮಿಯ ಮೇಲಿನ ಹವೆಯ ಒತ್ತಡವನ್ನು ಅಳೆಯುವ ಸಾಧನ. 4) ಮೈಕ್ರೋಮೀಟರ್ —————> ಸಣ್ಣ ವಸ್ತುಗಳ ದಪ್ಪವನ್ನು ಅಳೆಯುವ ಸಾಧನ. 5) ಹೈಡ್ರೋಮೀಟರ್ —————> ದ್ರವಗಳ ಸಾಪೇಕ್ಷ ಸಾಂದ್ರತೆಯನ್ನು ಅಳೆಯುವ ಸಾಧನ. 6) ಪೈರೋಮೀಟರ್ —————> ಹೆಚ್ಚು ಉಷ್ಣತೆಯನ್ನು ಅಳೆಯುವ ಸಾಧನ. 7) ಪ್ಯಾಥೋಮೀಟರ್ —————> ಸಮುದ್ರದ ಆಳವನ್ನು ಅಳೆಯುವ ಸಾಧನ. 8) ವೋಲ್ಟಾಮೀಟರ್ —————> ವಿದ್ಯುತ್ ಕೋಶದ ವಿದ್ಯುತ್ ಚಾಲಕ ಬಲವನ್ನು ಅಳೆಯುವ ಸಾಧನ. 9) ಗ್ಯಾಲ್ವನೋಮೀಟರ್ —————> ಕಡಿಮೆ ವಿದ್ಯುತ್ ಅಳೆಯುವ ಸಾಧನ. 10) ಅನಿಮಾಮೀಟರ್ —————> ಗಾಳಿಯ ವೇಗವನ್ನು ಅಳೆಯುವ ಸಾಧನ. 11) ಓಡೋಮೀಟರ್ —————> ಚಕ್ರವಾಹನಗಳು ಚಲಿಸುವ ದೂರವನ್ನು ಅಳೆಯುವ ಸಾಧನ. 12) ಸ್ಪೀಡೋಮೀಟರ್ —————> ವಾಹನಗಳ ವೇಗವನ್ನು ಅಳೆಯುವ ಸಾಧನ. 13) ಗ್ರಾಫಿಮೀಟರ್ —————> ನೀರಿನ ಸೆಲೆಯನ್ನು ಪತ್ತೆ ಹಚ್ಚುವ ಸಾಧನ. 14) ಮೋನೋಮೀಟರ್ —————> ಅನಿಲಗಳ ಒತ್ತಡಗಳನ್ನು ಅಳೆಯುವ ಸಾಧನ. 15) ಕ್ರೋನೋಮೀಟರ್ —————> ಹಡಗಿನ ನಿಖರವಾದ ಕಾಲವನ್ನು ಅಳತೆ ಮಾಡುವ ಸಾಧನ. 16) ರೆಡಿಯೋಮೀಟರ್ —————> ವಿಕಿರಣಗಳಿಂದ ಹೊರಬರುವ ಶಕ್ತಿಯನ್ನು ಅಳೆಯುವ ಸಾಧನ. 1...

.. ಭಾರತೀಯ ಕಾವ್ಯ ಮೀಮಾಂಸೆ

ಭಾರತೀಯ ಕಾವ್ಯ ಮೀಮಾಂಸೆ ಭಾರತೀಯ ಕಾವ್ಯಮೀಮಾಂಸೆಗೆ ಸುಮಾರು ಎರಡು ಸಾವಿರ ವರ್ಷಗಳ ದೀರ್ಘ ಇತಿಹಾಸವಿದೆ. ಕವಿ ಮತ್ತು ಕಾವ್ಯದ ಲಕ್ಷಣಗಳು, ಕಾವ್ಯ ಪ್ರಭೇದಗಳು. ಕಾವ್ಯಾಲಂಕಾರಗಳು, ಕಾವ್ಯದ ವಸ್ತು ಇತ್ಯಾದಿ ಕಾವ್ಯನಿರ್ಮಿತಿಗೆ ಸಂಬಂಧಿಸಿದ ಮಹತ್ತ್ವದ ಅಂಶಗಳ ಶಾಸ್ತ್ರೀಯ ನಿರೂಪಣೆಯೇ ಕಾವ್ಯನಿಮೀಮಾಂಸೆ. ಇದನ್ನು ಅಲಂಕಾರ ಶಾಸ್ತ್ರವೆಂದೂ ಕರೆಯಲಾಗುತ್ತದೆ. ಪ್ರಾಚೀನ ಯುಗದಲ್ಲಿ ಅಲಂಕಾರಶಾಸ್ತ್ರವೆಂದರೆ ಪ್ರಧಾನವಾಗಿ ನಾಟ್ಯ ನೃತ್ಯ ಇತ್ಯಾದಿ ರಂಗ ಸಂಸ್ಕರಣ ಅಥವಾ ನಾಟ್ಯಕಲೆಯನ್ನು ಸರ್ವಾಂಗ ಸುಂದರವಾಗಿ ಮಾಡುವ ಒಂದು ಪರಿಷ್ಕಾರ ಶಾಸ್ತ್ರವಾಗಿದ್ದಿತು. ಕಾಲಕ್ರಮೇಣ ಇದು ಕಾವ್ಯಕಲೆಯನ್ನು ಪರಿಷ್ಕರಿಸುವ ಶಾಸ್ತ್ರವಾಗಿ ಪರಿಣಮಿಸಿತು. ಇದರ ಆರಂಭ ಯಾವಾಗಿ ಯಾರಿಂದ ಆಯಿತೆಂದು ಇತ್ಯರ್ಥಪಡಿಸುವುದು ಕಷ್ಟದ ಕೆಲಸ. ಸಾಹಿತ್ಯದಲ್ಲಿ ಸೌಂದರ್ಯೋಪಾಸನೆ ಪ್ರಾರಂಭವಾದಂದಿನಿಂದಲೂ ಪಂಡಿತರು ಮತ್ತು ವಿಮರ್ಶಕರು ಸಾಹಿತ್ಯದಲ್ಲಿ ಸೌಂದರ್ಯ ಅರಸಿ ಈ ಚಿತ್ತ ಸಂಸ್ಕರಣ ಶಾಸ್ತ್ರವನ್ನು ಬೆಳೆಸಿಕೊಂಡು ಬಂದಿದ್ದಾರೆ. ಕ್ರಿ. ಪೂ. 6ನೆಯ ಶತಮಾನದಲ್ಲಿದ ಯಾಸ್ಕಾಚಾರ್ಯ ಉಪಮೆ ರೂಪಕಗಳ ಬಗ್ಗೆ ಉಲ್ಲೇಖಸಿದ್ದಾನೆ. ಕ್ರಿ. ಪೂ. 5ನೆಯ ಶತಕದ ವೇಳೆಗೆ ಪಾಣಿನಿ ನಟರ ವಿಷಯ ಪ್ರಸ್ತಾಪಿಸಿದ್ದಾನೆ. ವೇದಗಳ ಕಾಲದಲ್ಲೂ ಉಪಮಾ ರೂಪಕಾದಿಗಳ ಪ್ರಯೋಗವಿದೆ. ಋಗ್ವೇದದಲ್ಲಿ ಕಂಡುಬರುವ ಯಮಯಮಿಯರ ಸಂವಾದ, ಊರ್ವಶೀ ಪುರೂರವರ ಸಂವಾದ_ಇವುಗಳಿಂದ ವೇದಕಾಲದಲ್ಲಿ ನಾಟಕದ ಅಂಕುರಾರ್ಪಣವಿದ್ದಂತಿದೆ....