ಪರಮೇಶ್ವರಯ್ಯ ಸೊಪ್ಪಿಮಠ
ಐಸಿಸ್ ಉಗ್ರರ ಉಪಟಳದಿಂದ ನಲುಗಿರುವವರು ಯಾಜಿದಿ ಹೆಣ್ಣುಮಕ್ಕಳು. ಯಾಜಿದಿ ಹುಡುಗಿಯರನ್ನು ಇಸ್ಲಾಮಿಕ್ ಉಗ್ರರ ವೇಶ್ಯಾವಾಟಿಕೆಗೆ ತಳ್ಳುವ ವ್ಯವಸ್ಥಿತ ಜಾಲವೇ ಇರಾಕ್ನಲ್ಲಿದೆ. ಇಂಥ ಜಾಲದ ಬಲಿಪಶುವಾದವರು ನಾದಿಯಾ ಮುರಾದ್. ಶೋಷಣೆಗೆ ಬಲಿಯಾಗಿ ಬದುಕೇ ಮುಗಿದುಹೋಯಿತು ಎನ್ನುವಂತಿದ್ದ ನಾದಿಯಾ ಇಂದು ಶಾಂತಿ ನೊಬೆಲ್ ಪುರಸ್ಕೃತರು. ಇಡೀ ವಿಶ್ವವೇ ಇವರ ಛಲಕ್ಕೆ ತಲೆಬಾಗಿದೆ.
ಇರಾಕ್ನ ವಿಶೇಷವಾದ ಪಂಥ ಯಾಜಿದಿ. ಇವರನ್ನು ಐಸಿಸ್ ಸದಸ್ಯರು ಧರ್ಮಹೀನರು ಮತ್ತು ಗುಲಾಮಗಿರಿ ಅಥವಾ ಸಾವಿಗೆ ಅರ್ಹರು ಎಂದು ಪರಿಗಣಿಸುತ್ತಾರೆ! ಇಂತಹ ಧಾರ್ವಿುಕ ಅಲ್ಪಸಂಖ್ಯಾತರ ಯಾಜಿದಿ ಪಂಥದಲ್ಲಿ ಜನಿಸಿದವರು ನಾದಿಯಾ. ಇರಾಕ್ನ ಕೊಚೊ ಎಂಬ ಹಳ್ಳಿಯಲ್ಲಿದ್ದ ಇವರ ಕುಟುಂಬ ಕೃಷಿ ಅವಲಂಬಿಸಿ ಬದುಕು ಸಾಗಿಸುತ್ತಿತ್ತು. ಮೆದುಮಾತಿನ, ನಾಚಿಕೆ ಸ್ವಭಾವದ ನಾದಿಯಾ ಶಾಲಾ ಶಿಕ್ಷಕಿಯಾಗಬೇಕು ಅಥವಾ ಬ್ಯೂಟಿ ಪಾರ್ಲರ್ ತೆರೆಯಬೇಕು ಎನ್ನುವ ಕನಸು ಹೊಂದಿದ್ದಳು. ಆದರೆ, ಬದುಕಿನ ಅನುಭವಗಳು ಈಕೆಯನ್ನು ಹೋರಾಟಗಾರ್ತಿಯನ್ನಾಗಿ ರೂಪಿಸಿವೆ.
ಶೋಷಣೆಯ ಬಲಿಪಶು
2014ರ ಆಗಸ್ಟ್ 3ರಂದು ನಾದಿಯಾ ಕುಟುಂಬ ವಾಸವಿದ್ದ ನಗರದ ಮೇಲೆ ಐಸಿಸ್ ಉಗ್ರರು ದಾಳಿ ನಡೆಸಿದರು. ಸುಮಾರು 6500ಕ್ಕೂ ಹೆಚ್ಚು ಮಹಿಳೆಯರು ಮತ್ತು ಮಕ್ಕಳನ್ನು ಅಪಹರಿಸಿ ಐದು ಸಾವಿರ ಜನರನ್ನು ಕೊಂದು ಹಾಕಿದರು. ಅಪಹರಿಸಲ್ಪಟ್ಟ ಯಾಜಿದಿ ಮಹಿಳೆಯರಲ್ಲಿ 21ರ ಹರೆಯದ ಮುರಾದ್ ಕೂಡ ಒಬ್ಬಳು. ಇವರನ್ನೆಲ್ಲ ಮೊಸೂಲ್ ನಗರದಲ್ಲಿ ಒತ್ತೆಯಾಗಿಡಲಾಯಿತು. ಬಂದೂಕುಧಾರಿ ಉಗ್ರನೊಬ್ಬ ಯುವತಿಯರಿಗೆ ನೀವಿನ್ನು ‘ಸಬಾಯಾ’ಗಳು ಎನ್ನುತ್ತಾನೆ. ಆಗಲೇ ಅದರ ಅರ್ಥ ನಾದಿಯಾಗೆ ತಿಳಿದದ್ದು. ಸಬಾಯಾ ಎಂದರೆ ಲೈಂಗಿಕ ಗುಲಾಮರು. ಇವರ ತಾಯಿ ಮತ್ತು ಆರು ಜನ ಸಹೋದರರನ್ನು ಅಂದೇ ಕೊಲ್ಲಲಾಗಿತ್ತು. ಮುರಾದ್ ಸೇರಿ ಹದಿಹರೆಯದ ಹುಡುಗಿಯರನ್ನು ಮಾತ್ರ ಉಗ್ರರು ಉಳಿಸಿದ್ದರು. ಅಲ್ಲಿನ ಸ್ಲೇವ್ ಮಾರ್ಕೆಟ್ (ಗುಲಾಮಗಿರಿಯ ಮಾರುಕಟ್ಟೆ) ಪ್ರತಿದಿನ ಸಂಜೆ ರಂಗೇರುತ್ತದೆ. ವಸ್ತುಗಳನ್ನು ಮಾರುವಂತೆ ಅಲ್ಲಿ ಮಹಿಳೆಯರನ್ನು ಮಾರಾಟ ಮಾಡಲಾಗುತ್ತದೆ. ಅಲ್ಲಿ ನಾದಿಯಾ ಸಲ್ಮಾನ್ ಎಂಬಾತನಿಗೆ ಮಾರಾಟವಾಗುತ್ತಾಳೆ. ನಂತರದ ಮೂರು ತಿಂಗಳಲ್ಲಿ ಈಕೆ ಅನುಭವಿಸಿದ ಸಂಕಟಕ್ಕೆ ಭಾಷೆಯಿಲ್ಲ. ಅಂಗಾಂಗಗಳನ್ನು ಸುಡುವುದು, ಹೊಡೆಯುವುದು, ಬಡಿಯುವುದು ಸೇರಿದಂತೆ ಎಲ್ಲ ರೀತಿಯ ಹಿಂಸೆಗಳನ್ನು ಅನುಭವಿಸಿದಳು. ನಂತರ ಮತ್ತೊಬ್ಬನಿಗೆ ಮಾರಾಟ! ಅಲ್ಲಿಂದ ತಪ್ಪಿಸಿಕೊಳ್ಳಲು ಈಕೆ ನಡೆಸಿದ ಮೊದಲ ಪ್ರಯತ್ನ ವಿಫಲವಾಯಿತು. ಅದಕ್ಕೆ ಶಿಕ್ಷೆಯಾಗಿ ಆರು ಉಗ್ರರು ಪ್ರಜ್ಞಾಹೀನಳಾಗುವ ತನಕ ನಿರಂತರವಾಗಿ ಅತ್ಯಾಚಾರ ನಡೆಸಿದ್ದರು! ಆಘಾತದ ನಡುವೆಯೂ ಧೈರ್ಯ ತಂದುಕೊಂಡ ಮುರಾದ್ ಎಂಟು ತಿಂಗಳ ನಂತರ ದೌರ್ಜನ್ಯದ ಸಂಕೋಲೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮುಂದುವರಿಸಿದಳು. ನವೆಂಬರ್ 2014ರಲ್ಲಿ ಮೇಲ್ವಿಚಾರಕ ಮನೆಯ ಬೀಗ ತೆರೆದು ಹೊರಹೋಗಿದ್ದಾಗ ತಪ್ಪಿಸಿಕೊಂಡಳು. ಅಲ್ಲಿನ ಜಬ್ಬಾರ್ ಎನ್ನುವವರ ಕುಟುಂಬ ಈಕೆಗೆ ಆಶ್ರಯ ನೀಡಿತು. ಯಾಜಿದಿ ಎಂದು ಗೊತ್ತಾಗದಂತೆ ನಕಲಿ ಗುರುತಿನ ಚೀಟಿ ತಯಾರಿಸಿಕೊಟ್ಟಿತು. ಆ ಕುಟುಂಬದ ಯುವಕ ಜಬ್ಬಾರ್ ನಾದಿಯಾಗೆ ಬುರ್ಖಾ ತೊಡಿಸಿ, ತನ್ನ ಹೆಂಡತಿ ಎಂದು ಎಲ್ಲರನ್ನೂ ನಂಬಿಸಿ, ತನ್ನ ಜೀವವನ್ನೇ ಒತ್ತೆಯಾಗಿಟ್ಟು ಗೌಪ್ಯವಾಗಿ ಮೊಸೂಲ್ ದಾಟಿಸಿದ. ಇಸ್ಲಾಮಿಕ್ ರಾಜ್ಯ ನಿಯಂತ್ರಿತ ಪ್ರದೇಶದಿಂದ ಹೊರಬಂದ ನಾದಿಯಾ ಉತ್ತರ ಇರಾಕ್ನ ಡುಹೊಕ್ನಲ್ಲಿ ನಿರಾಶ್ರಿತರ ಶಿಬಿರಕ್ಕೆ ಸೇರಿದಳು.
ಲೈಂಗಿಕ ದೌರ್ಜನ್ಯದ ವಿರುದ್ಧ ಗಟ್ಟಿ ಧ್ವನಿ
2015ರ ಫೆಬ್ರವರಿಯಲ್ಲಿ ಬೆಲ್ಜಿಯನ್ ದಿನಪತ್ರಿಕೆ ಲಾ ಲಿಬ್ರೆ ಬೆಲ್ಜಿಕ್ ವರದಿಗಾರರಿಗೆ ತಾನು ಅನುಭವಿಸಿದ ಶೋಷಣೆಯ ಕರಾಳ ಮುಖವನ್ನು ನಾದಿಯಾ ತೆರೆದಿಟ್ಟಳು. 2015ರ ಡಿಸೆಂಬರ್ನಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಮಾನವ ಕಳ್ಳಸಾಗಣೆ ಮತ್ತು ಸಂಘರ್ಷದ ಕುರಿತು ವಿವರಿಸಿದಳು. ಮಾನವ ಕಳ್ಳಸಾಗಣೆಯ ಕುರಿತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಮೊಟ್ಟಮೊದಲ ಚರ್ಚೆ ಅದಾಗಿತ್ತು. ಆಗ ಐಸಿಸ್ ಉಗ್ರರ ಪೈಶಾಚಿಕ ಕೃತ್ಯ ವಿಶ್ವದ ಗಮನಕ್ಕೆ ಬಂತು. ಬಳಿಕ, ದೌರ್ಜನ್ಯದಿಂದ ನಲುಗಿದ್ದ ಜನರ ಪರವಾಗಿ ಹೋರಾಡುವ ಕಾರ್ಯಕ್ಕೆ ತನ್ನನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡಳು. ತನ್ನ ಜನರಿಗೆ ನ್ಯಾಯ ಒದಗಿಸುವ, ಹರಿದು ಹಂಚಿಹೋಗಿರುವ ಯಾಜಿದಿ ಜನಾಂಗದವರನ್ನು ಒಂದೆಡೆ ಸೇರಿಸುವ, ಉಗ್ರರು ತನ್ನ ಸಮುದಾಯಕ್ಕೆ ಮಾಡಿದ ಘೊರ ಅನ್ಯಾಯಗಳನ್ನು ಜಗತ್ತಿಗೆ ಸಾರುವ ನಿಟ್ಟಿನಲ್ಲಿ ಅಭಿಯಾನ ಆರಂಭಿಸಿದಳು. ಈಗ, ವಿಶ್ವಸಂಸ್ಥೆ ಇವಳನ್ನು ಮಾನವ ಹಕ್ಕುಗಳ ಹೋರಾಟಕ್ಕೆ ಬೆಂಬಲವಾಗಿ ಮಾನವ ಕಳ್ಳಸಾಗಣೆಯ ಸಂತ್ರಸ್ತರ ಮೊದಲ ಸೌಹಾರ್ದ ರಾಯಭಾರಿಯನ್ನಾಗಿ ನೇಮಕ ಮಾಡಿದೆ. ಅಷ್ಟೇ ಅಲ್ಲ, ವಿಶ್ವಸಂಸ್ಥೆಯ ಮಾದಕದ್ರವ್ಯ ಮತ್ತು ಅಪರಾಧ ವಿಭಾಗದ ಅಧಿಕಾರಿಯಾಗಿಯೂ ನಾದಿಯಾ ಕಾರ್ಯ ನಿರ್ವಹಿಸುತ್ತಿದ್ದಾಳೆ. ಮಾನವ ಕಳ್ಳಸಾಗಣೆಗೆ ಸಂಬಂಧಿಸಿದಂತೆ ಜನಜಾಗೃತಿ ಮೂಡಿಸುವ ಜವಾಬ್ದಾರಿಯನ್ನೂ ಹೊತ್ತಿದ್ದಾಳೆ.
ನಾರ್ವೆಯ ನೊಬೆಲ್ ಸಮಿತಿಯು ಪ್ರಶಸ್ತಿ ಘೊಷಣೆಯ ಸಮಯದಲ್ಲಿ ‘ನಾದಿಯಾ ಮುರಾದ್, ಇರಾಕ್ನಲ್ಲಿನ ಯಾಜಿದಿ ಅಲ್ಪಸಂಖ್ಯಾತರ ಗುಂಪಿನ ಸದಸ್ಯರಾಗಿದ್ದು, ಐಸಿಸ್ ಉಗ್ರರಿಂದ ಅಪಹರಣಕ್ಕೊಳಗಾಗಿ ಅತ್ಯಾಚಾರಕ್ಕೊಳಗಾಗಿದ್ದಾರೆ. ಸ್ವತಃ ನೋವು ನುಂಗಿಕೊಂಡು ಎಲ್ಲವನ್ನು ಧೈರ್ಯದಿಂದ ಎದುರಿಸಿದ್ದಾರೆ. ಅಂಥವರಿಗೆ ನೆರವಾಗಲು ಮಾನವ ಹಕ್ಕುಗಳ ರಕ್ಷಣೆಯಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ’ ಎಂದು ಹೇಳಿರುವ ಮಾತುಗಳು ಶೋಷಣೆಗೆ ಒಳಗಾದವರಿಗೆ ಆತ್ಮಸ್ಥೈರ್ಯ ತುಂಬುತ್ತವೆ. ಐಸಿಸ್ ಕ್ರೌರ್ಯಕ್ಕೆ ಸಾಕ್ಷಿಯಾಗಿ ನಿಲ್ಲುವ ನಾದಿಯಾ, ವಿಕೃತ ಮನಸ್ಸುಗಳ ಚಿತ್ರಹಿಂಸೆಯನ್ನು ಕಂಡ ಯಾಜಿದಿ ಹೆಣ್ಣುಮಕ್ಕಳ ಪ್ರತಿನಿಧಿಯಾಗಿ ಕಾಣುತ್ತಾಳೆ.
ಹೋರಾಟಕ್ಕೆ ಸಂದ ಪ್ರತಿಫಲ
‘ಇಂಥದ್ದೊಂದು ದುರಂತ ಕಥೆಗೆ ಸಾಕ್ಷಿಯಾದ ಜಗತ್ತಿನ ಕೊನೆಯ ಹುಡುಗಿ ನಾನಾಗಿರಲಿ…’ ಎನ್ನುವುದು ನಾದಿಯಾ ಮಾತು. ‘ನನ್ನ ಕಥೆಯೇ ನನ್ನಲ್ಲಿರುವ ಅಸ್ತ್ರ’ ಎಂದು ಯಾವ ಹಿಂಜರಿಕೆ ಇಲ್ಲದೆ ಹೇಳುತ್ತ ತನ್ನ ಅನುಭವವನ್ನೆಲ್ಲ ಅಕ್ಷರ ರೂಪಕ್ಕಿಳಿಸಿ ‘ದಿ ಲಾಸ್ಟ್ ಗರ್ಲ್’ (2017) ಎನ್ನುವ ಕೃತಿಯನ್ನು ಹೊರತಂದಿದ್ದಾಳೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಐಸಿಸ್ ಉಗ್ರರ ಕ್ರೌರ್ಯಗಳ ಕುರಿತು ಸಾಕ್ಷ್ಯ ಸಂಗ್ರಹ ಮಾಡಲು ನಿರ್ಧರಿಸಿರುವುದು ಈಕೆಯ ಹೋರಾಟಕ್ಕೆ ಸಿಕ್ಕ ವಿಶೇಷ ಬಹುಮಾನ ಎನ್ನಬಹುದು. ಇತ್ತೀಚೆಗಷ್ಟೇ ಶಾಂತಿ ನೊಬೆಲ್ ಪ್ರಶಸ್ತಿಗೆ ಭಾಜನರಾಗಿರುವುದು ಇವರ ಹೋರಾಟಕ್ಕೆ ಸಂದ ಬಹುದೊಡ್ಡ ಮನ್ನಣೆ.
(ಲೇಖಕರು ಶಿಕ್ಷಕ ಮತ್ತು ಹವ್ಯಾಸಿ ಬರಹಗಾರರು)

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ