ಬೀದಿ ದೀಪಗಳ ಸಂಖ್ಯೆ ಕಡಿಮೆ ಮಾಡುವ ಮೂಲಕ ನಗರ ಪ್ರದೇಶಗಳಲ್ಲಿ ವಿದ್ಯುತ್ ಉಳಿತಾಯಕ್ಕಾಗಿ ಚೀನಾ ಕೃತಕ ಚಂದ್ರನನ್ನು ಆಕಾಶಕ್ಕೆ ಹಾರಿಬಿಡಲಿದೆ! ಆಶ್ಚರ್ಯ ಎನಿಸಿದರೂ, ಇದು ಸತ್ಯ. ಸಿಶುಯಾನ್ ಪ್ರಾಂತ್ಯದ ಶೆಂಗ್ಡು ನಗರದಲ್ಲಿ ‘ಇಲ್ಯೂಮಿನೇಷನ್ ಉಪಗ್ರಹ’ಗಳನ್ನು ಈಗಾಗಲೇ ಅಭಿವೃದ್ಧಿಪಡಿಸ ಲಾಗುತ್ತಿದೆ. ಈ ಉಪಗ್ರಹಗಳು ಚಂದ್ರನಂತೆ ಹೊಳೆಯುವುದಲ್ಲದೆ, 8 ಪಟ್ಟು ಹೆಚ್ಚು ಬೆಳಕನ್ನು ಚೆಲ್ಲುತ್ತವೆ. 2020 ರೊಳಗೆ ಈ ಉಪಗ್ರಹಗಳನ್ನು ಶಿಚಾಂಗ್ ಉಪಗ್ರಹ ಉಡಾವಣೆ ಕೇಂದ್ರದಿಂದ ಅಂತರಿಕ್ಷಕ್ಕೆ ಕಳಿಸಲಾಗುತ್ತದೆ. 2022ರೊಳಗೆ ಮತ್ತೆ ಮೂರು ಉಪಗ್ರಹಗಳನ್ನು ಆಕಾಶಕ್ಕೆ ಏರಿಸಿ ಕೃತಕ ಚಂದ್ರನನ್ನು ಸೃಷ್ಟಿಸಲಾಗುವುದು ಎಂದು ಯೋಜನೆಯ ಉಸ್ತುವಾರಿ ಹೊತ್ತಿರುವ ಟಿಯಾನ್ ಫು ನ್ಯೂ ಎರಾ ಸೈನ್ಸ್ ಸೊಸೈಟಿ ಮುಖ್ಯಸ್ಥ ವು ಶುನ್ಫೆಂಗ್ ತಿಳಿಸಿದ್ದಾರೆ.
ಕಾರ್ಯನಿರ್ವಹಣೆ ಹೇಗೆ?
ಈ ಉಪಗ್ರಹಗಳು ಸೂರ್ಯನ ಬೆಳಕನ್ನು ಪ್ರತಿಫಲಿಸುತ್ತವೆ. ಈ ಬೆಳಕು ನಗರ ಪ್ರದೇಶಗಳ ರಸ್ತೆಗಳ ಮೇಲೆ ಬೀಳಲಿದೆ. 50 ಚದರ ಕಿ.ಮೀ. ಪ್ರದೇಶಕ್ಕೆ ಉಪಗ್ರಹಗಳು ಬೆಳಕು ಚೆಲ್ಲಿದಲ್ಲಿ ಶೆಂಗ್ಡು ನಗರದಲ್ಲಿ ವಾರ್ಷಿಕ 1248 ಕೋಟಿ ರೂ. ವಿದ್ಯುತ್ ಉಳಿತಾಯವಾಗಲಿದೆ ಎಂದು ವು ಶುನ್ಫೆಂಗ್ ಹೇಳಿದ್ದಾರೆ. 1990ರಲ್ಲಿ ರಷ್ಯಾ ವಿಜ್ಞಾನಿಗಳು ‘ ಬ್ಯಾನರ್’ ಹೆಸರಿನಲ್ಲಿ ಬೃಹತ್ ಕನ್ನಡಿಗಳನ್ನು ಬಳಸಿ ಅಂತರಿಕ್ಷದಿಂದ ಬೆಳಕನ್ನು ಪ್ರತಿಫಲಿಸುವ ಪ್ರಯೋಗ ನಡೆಸಿದ್ದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ