ವಿಷಯಕ್ಕೆ ಹೋಗಿ

**ಜ್ಞಾನ ಕಾರಂಜಿ**::: ಇನ್ನು ಪರಿಸರಸ್ನೇಹಿ ಪಟಾಕಿಗಳ ಕಾಲ,

ಸುಪ್ರೀಂ ಕೋರ್ಟ್ ಒಂದಷ್ಟು ಚೌಕಟ್ಟು ವಿಧಿಸಿ, ‘ಹಸಿರು ಪಟಾಕಿ’ಗಳನ್ನು ಸಿಡಿಸಲು ಅನುಮತಿ ನೀಡಿದೆ. ಈ ಬೆಳವಣಿಗೆ ಮಾಲಿನ್ಯ ತಗ್ಗಿಸಲು, ಪರಿಸರವನ್ನು ನಿರ್ಮಲವಾಗಿಸಲು ಪೂರಕವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಈ ಕುರಿತಾದ ವಿವರ ಇಲ್ಲಿದೆ.
ಪಿಒಪಿ(ಪ್ಲಾಸ್ಟರ್ ಆಫ್ ಪ್ಯಾರಿಸ್) ಗಣಪನ ಬದಲಿಗೆ ಈಗ ಮಣ್ಣಿನ ಗಣಪನೇ ಚೌತಿಯ ಸಂಭ್ರಮ ಹೆಚ್ಚಿಸುತ್ತಿದ್ದಾನೆ. ಹಾಗೇ, ವಿಷಕಾರಿ ಅನಿಲಗಳನ್ನು ಹೊರ ಹಾಕುವ ಪಟಾಕಿಗಳ ಅಬ್ಬರ ಕಡಿಮೆಯಾಗಿ ಮುಂಬರುವ ವರ್ಷಗಳಲ್ಲಿ ‘ಹಸಿರು ಪಟಾಕಿ’ಗಳೇ ಸದ್ದು ಮಾಡಲಿವೆ. ಇದರ ವೈಜ್ಞಾನಿಕ ಪರೀಕ್ಷೆಯೂ ಫಲಪ್ರದವಾಗಿದ್ದು, ಪಟಾಕಿ ತಯಾರಕರು ಕೂಡ ಒಲವು ತೋರುತ್ತಿರುವುದು ಸಕಾರಾತ್ಮಕ ಬೆಳವಣಿಗೆ.
ಏನಿದು ಹಸಿರು ಪಟಾಕಿ?: ಇವು ಕಡಿಮೆ ಮಾಲಿನ್ಯಕಾರಕಗಳು. ಮರುಬಳಕೆ ಕಾಗದ, ಮಿತಪ್ರಮಾಣದ ರಾಸಾಯನಿಕ ಪದಾರ್ಥದ ಬಳಕೆ, ಕಡಿಮೆ ಶಬ್ದ-ಹೊಗೆಯನ್ನು ಹೊಮ್ಮಿಸುವ ಇವನ್ನು ಸಾಂಪ್ರದಾಯಿಕವಾಗಿ ತಯಾರಿಸಲಾಗುತ್ತದೆ. ಇವು ಮನುಷ್ಯನ ಸ್ವಾಸ್ಥ್ಯ ಮತ್ತು ಪರಿಸರಕ್ಕೆ ಕಡಿಮೆ ಹಾನಿ ಉಂಟುಮಾಡುತ್ತವೆ.
ಹಲವು ಸಂಸ್ಥೆಗಳ ಪ್ರಯೋಗ: ‘ಹಸಿರು ಪಟಾಕಿ’ಗಳ ತಯಾರಿಕೆಯ ಸ್ಥಿತಿಗತಿ-ಸಾಧ್ಯತೆಗಳನ್ನು ಪರಾಮಶಿಸಿಯೇ ಸುಪ್ರೀಂ ಕೋರ್ಟ್ ಇಂಥ ಪಟಾಕಿಗಳನ್ನು ಸಿಡಿಸಲು ಸಮ್ಮತಿ ನೀಡಿದೆ, ಇವು ವಾಯುಮಾಲಿನ್ಯವನ್ನು ಗಣನೀಯ ಪ್ರಮಾಣದಲ್ಲಿ ತಗ್ಗಿಸಲು ನೆರವಾಗಲಿವೆ ಎಂಬ ವಿಶ್ವಾಸ ಸಿಎಸ್​ಐಆರ್ ವಿಜ್ಞಾನಿಗಳದ್ದು. ಸಿಎಸ್​ಐಆರ್ ಪ್ರಯೋಗಾಲಯಗಳು, ಸೆಂಟ್ರಲ್ ಎಲೆಕ್ಟೋ› ಕೆಮಿಕಲ್ ರಿಸರ್ಚ್ ಇನ್​ಸ್ಟಿಟ್ಯೂಟ್(ಸಿಇಸಿಆರ್​ಐ), ಇಂಡಿಯನ್ ಇನ್​ಸ್ಟಿಟ್ಯೂಟ್ ಆಫ್ ಕೆಮಿಕಲ್ ಟೆಕ್ನಾಲಜಿ(ಐಐಸಿಟಿ), ನ್ಯಾಷನಲ್ ಬೊಟಾನಿಕಲ್ ರಿಸರ್ಚ್ ಇನ್​ಸ್ಟಿಟ್ಯೂಟ್, ನ್ಯಾಷನಲ್ ಕೆಮಿಕಲ್ ಲ್ಯಾಬೋರೆಟರಿ ಸಂಸ್ಥೆಗಳು ಹಸಿರು ಪಟಾಕಿಯ ಪ್ರಯೋಗಗಳಲ್ಲಿ ತೊಡಗಿದ್ದು, ಈಗ ತಯಾರಾಗುತ್ತಿರುವ ಪಟಾಕಿಗಳಿಂದ ಹಾನಿಕಾರಕ ಪದಾರ್ಥಗಳನ್ನು ಕೈಬಿಟ್ಟು ಬೇರೆ ಪದಾರ್ಥಗಳಿಂದ ಹಸಿರು ಪಟಾಕಿ ತಯಾರಿಸುವ ಉದ್ದೇಶಕ್ಕೆ ವಿಜ್ಞಾನಿಗಳ ವಲಯದಿಂದಲೂ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಈ ಪಟಾಕಿಪ್ರಯೋಗಗಳಿಗೆ ಸೇಫ್ ವಾಟರ್ ರಿಲೀಜರ್(ಎಸ್​ಡಬ್ಲ್ಯುಎಎಸ್), ಸೇಫ್ ಥಮೈಟ್ ಕ್ರ್ಯಾಕರ್ (ಸ್ಟಾರ್) ಮತ್ತು ಸೇಫ್ ಮಿನಿಮಲ್ ಅಲ್ಯುಮಿನಿಯಂ(ಎಸ್​ಎಎಫ್​ಎಎಲ್) ಇತ್ಯಾದಿ ವಿಭಿನ್ನ ಹೆಸರುಗಳನ್ನೂ ನೀಡಲಾಗಿದೆ. ಪೆಟ್ರೋಲಿಯಂ ಮತ್ತು ಸ್ಪೋಟಕ ಸುರಕ್ಷತೆ ಸಂಘಟನೆಯು ಈ ಪಟಾಕಿಗಳನ್ನು ಪರೀಕ್ಷಿಸಿ, ವಿಶ್ಲೇಷಿಸುತ್ತಿದ್ದು, ಭವಿಷ್ಯದಲ್ಲಿನ ಬಳಕೆಯ ಸಾಧ್ಯತೆಗಳನ್ನು ಗಮನಿಸುತ್ತಿದೆ.
ಇದು ವೈದ್ಯರ ಸಲಹೆ ಸ್ವಾಮಿ!
ಪೋಲಿಯೋ ನಿಮೂಲನೆಯಲ್ಲಿ ಡಾ.ಹರ್ಷವರ್ಧನ್ ತೋರಿದ ಬದ್ಧತೆಗೆ ವಿಶ್ವ ಆರೋಗ್ಯ ಸಂಸ್ಥೆಯೂ ಭೇಷ್ ಎಂದಿತ್ತು. ಈಗ, ‘ಹಸಿರು ಪಟಾಕಿ’ಯ ಚಿಂತನೆಯನ್ನು ಸಿಎಸ್​ಐಆರ್ (ಇಟ್ಠnಜ್ಝಿ ಟ್ಛ ಖ್ಚಜಿಛ್ಞಿಠಿಜ್ಛಿಜ್ಚಿ ಚ್ಞಛ ಐಛ್ಠಠಠ್ಟಿಜಿಚ್ಝ ್ಕಠಛಿಚ್ಟ್ಚ)ಗೆ
ಈ ವರ್ಷದ ಜನವರಿಯಲ್ಲಿ ನೀಡಿದವರು ವಿಜ್ಞಾನ-ತಂತ್ರಜ್ಞಾನ ಮತ್ತು ಪರಿಸರ ಸಚಿವ ಡಾ. ಹರ್ಷವರ್ಧನ್ ಅವರೇ. ಮಾಲಿನ್ಯ ತಗ್ಗಿಸುವ ಪಟಾಕಿಗಳನ್ನು ತಯಾರಿಸುವ ಸೂತ್ರವೊಂದನ್ನು ಅವರು ಮುಂದಿಟ್ಟಾಗ ಸಂಚಲನವೇ ಸೃಷ್ಟಿಯಾಯಿತು. ಮೂರು-ನಾಲ್ಕು ಬಗೆಯ ಫಾಮುಲಾಗಳನ್ನು ಬಳಸಿ ಇವನ್ನು ತಯಾರಿಸಲಾಗುತ್ತದೆ. ಇವು 40% ಮಾಲಿನ್ಯವನ್ನು ತಗ್ಗಿಸುತ್ತವೆ.
ಡೇಂಜರಸ್ ರಾಸಾಯನಿಕಗಳು
ಬಣ್ಣ-ಬಣ್ಣದ ಕಿರಣಗಳನ್ನು ಸೂಸುವ, ಭಾರಿ ಶಬ್ದ ಮಾಡುವ ಪಟಾಕಿಗಳಲ್ಲಿ ಜೀವಕ್ಕೇ ಕುತ್ತು ತರಬಹುದಾದ ಹಲವು ರಾಸಾಯನಿಕಗಳಿರುತ್ತವೆ. ಅಧ್ಯಯನಗಳ ಪ್ರಕಾರ, ದೀಪಾವಳಿ ಸಮಯದಲ್ಲಿ ವಾತಾವರಣದಲ್ಲಿನ ಸಲ್ಪರ್ ಡೈಆಕ್ಸೈಡ್, ನೈಟ್ರೋಜನ್ ಡೈಆಕ್ಸೈಡ್, ಟಿಎಸ್​ಪಿ ಪ್ರಮಾಣ ತೀವ್ರಗತಿಯಲ್ಲಿ ಏರಿಕೆಯಾಗುತ್ತದೆ. ಪಟಾಕಿಗಳನ್ನು ಹೊತ್ತಿಸುವುದರಿಂದ ಸಲ್ಪರ್ ಡೈಆಕ್ಸೈಡ್(ಸಿಒ2), ಕಾರ್ಬನ್ ಮೊನಾಕ್ಸೈಡ್(ಸಿಒ), ಪಿಎಂ10, ಅಲ್ಯುಮಿನಿಯಂ, ಮ್ಯಾಂಗನೀಸ್, ಕ್ಯಾಡ್ಮಿಯಂ ಮುಂತಾದ ಲೋಹಗಳ ಸಣ್ಣ ಕಣಗಳು ಗಾಳಿಯನ್ನು ಸೇರಿಕೊಂಡು ಗಂಭೀರವಾದ ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡುತ್ತವೆ.
ಎಸ್​ಒ2: ಹೆಚ್ಚಿನ ಪ್ರಮಾಣದಲ್ಲಿ ಎಸ್​ಒ2 ಮತ್ತು ಪಿಎಂ10 ಗಾಳಿಯನ್ನು ಸೇರಿಕೊಳ್ಳುವುದು ಅಪಾಯಕಾರಿ. ಇದು ಗಾಳಿಯಲ್ಲಿ ಸುಲಭವಾಗಿ ಬೆರೆತುಕೊಳ್ಳಬಹುದಾಗಿದ್ದು, ಶ್ವಾಸಕೋಶಕ್ಕೆ ಸಮಸ್ಯೆ ಉಂಟುಮಾಡುತ್ತದೆ.
ಆನ್​ಲೈನ್ ಮಾರಾಟ ನಿಷೇಧ
ಇ-ಕಾಮರ್ಸ್ ವೆಬ್​ಸೈಟ್​ಗಳ ಮೂಲಕ ಪಟಾಕಿ ಮಾರಾಟಕ್ಕೆ ಸುಪ್ರೀಂ ಕೋರ್ಟ್ ನಿಷೇಧ ಹೇರಿರು ವುದು ಪ್ರಮುಖ ಅಂಶ. ಏಕೆಂದರೆ, ಕಳೆದ ವರ್ಷ ದೆಹಲಿ-ಎನ್​ಸಿಆರ್ ಪ್ರದೇಶದಲ್ಲಿ ಸುಪ್ರೀಂ ಕೋರ್ಟ್ ದೀಪಾವಳಿ ಸಂದರ್ಭದಲ್ಲಿ ಪಟಾಕಿ ಮಾರಾಟ ನಿಷೇಧಿಸಿದ್ದರೂ ಆನ್​ಲೈನ್ ಮೂಲಕ ಮಾರಾಟದ ಭರಾಟೆ ಜೋರಾಗಿತ್ತು. ಈ ಬಾರಿ ಹಾಗಾಗದಂತೆ ನಿಗಾ ವಹಿಸಲು ಪೊಲೀಸ್ ಇಲಾಖೆಗೆ ಕೋರ್ಟ್ ಸೂಚಿಸಿದೆ.
ಪರಿಸರದ ಮೇಲೆ ಪ್ರಭಾವ
ಪಟಾಕಿಗಳಲ್ಲಿ ಹೆಚ್ಚಿನ ಪ್ರಮಾಣದ ಸಲ್ಪರ್, ಪೊಟ್ಯಾಷಿಯಂ ಕ್ಲೋರೈಡ್ ಅಂಶವಿರುತ್ತದೆ. ಇದರಿಂದ ಪರಿಸರ ಮಾಲಿನ್ಯ ಪ್ರಮಾಣವೂ ಹೆಚ್ಚುತ್ತದೆ. ಹೆಚ್ಚಿನ ಸಲ್ಪರ್ ಅಂಶಗಳಿರುವ ಕಾರಣದಿಂದ ಉತ್ಪತ್ತಿಯಾಗುವ ವಿಷಾನಿಲದ ಪ್ರಭಾವದಿಂದಾಗಿ ಕಣ್ಣಿನ ತೊಂದರೆ, ಉಸಿರಾಟದ ಸಮಸ್ಯೆಗಳು, ಪೊಟ್ಯಾಷಿಯಂ ಕ್ಲೋರೈಡ್ ಅಂಶದಿಂದ ಚರ್ಮದ ಅಲರ್ಜಿಗಳು ಎದುರಾಗಬಹುದು.
ಪಟಾಕಿ ಉದ್ಯಮ
ಶಿವಕಾಶಿಯ ಪಟಾಕಿ ಉದ್ಯಮ ವಾರ್ಷಿಕ 7000 ಕೋಟಿ ರೂ. ವಹಿವಾಟು ನಡೆಸುತ್ತದೆ. ಪಟಾಕಿ ತಯಾರಿಕಾ ಘಟಕಗಳಲ್ಲಿ 3 ಲಕ್ಷ ಕಾರ್ವಿುಕರಿದ್ದರೆ, ಪಟಾಕಿಗಳ ಪ್ಯಾಕೇಜಿಂಗ್, ಪ್ರಿಂಟಿಂಗ್, ಪೇಪರ್ ರೋಲಿಂಗ್ ಮತ್ತು ರವಾನೆ ಕ್ಷೇತ್ರದಲ್ಲಿ 5 ಲಕ್ಷ ಜನರು ಕಾರ್ಯನಿರ್ವಹಿಸುತ್ತಿದ್ದಾರೆ. ಪಟಾಕಿಯ ಬೇಡಿಕೆ ಇದೇ ರೀತಿ ಕುಸಿಯುತ್ತ ಸಾಗಿದಲ್ಲಿ ಲಕ್ಷಾಂತರ ಜನರು ಉದ್ಯೋಗ ಕಳೆದುಕೊಳ್ಳುವ ಭೀತಿ ಇದೆ. ಶಿವಕಾಶಿಯಲ್ಲಿ ತಯಾರಾಗುವ ಶೇಕಡ 20-25ರಷ್ಟು ಪಟಾಕಿಗಳು ದೆಹಲಿ-ಎನ್​ಸಿಆರ್​ನಲ್ಲಿಯೇ ಮಾರಾಟವಾಗುತ್ತವೆ.
ಈ ದುರಂತಗಳು ಕಣ್ತೆರೆಸಲಿ
ಪಟಾಕಿ ತಯಾರಿಕೆಯ ಹೊತ್ತಲ್ಲಿ ಅವಘಡಗಳು ಸಂಭವಿಸಿ ಕಾರ್ವಿುಕರು ಪ್ರಾಣ,  ಕಳೆದುಕೊಂಡ ಕಹಿನೆನಪುಗಳಿವೆ. ಬೆಳಕಿನ ಹಬ್ಬವಾದ ದೀಪಾವಳಿ ಇಂಥ ಬಡಕಾರ್ವಿುಕರ ಮನೆಗೆ ಶಾಶ್ವತ ಕತ್ತಲು ತಂದಿಟ್ಟಿದ್ದು ವಿಪರ್ಯಾಸ. ಶಿವಕಾಶಿಯಲ್ಲಿ ಇಂಥ ಹಲವು ಘಟನೆಗಳು ಸಂಭವಿಸಿವೆ. ಅಲ್ಲದೆ, ಈ ಉದ್ಯಮದಲ್ಲಿ ಬಾಲಕಾರ್ವಿುಕರನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಲಾಗುತ್ತದೆ ಎಂಬ ಕಳವಳವೂ  ಇದೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

**ಜ್ಞಾನ ಕಾರಂಜಿ**::: ಬೇನಾಮಿ ಆಸ್ತಿ ಪ್ರಕರಣ ವಿಲೇವಾರಿಗೆ ನ್ಯಾಯಾಧಿಕರಣ,

ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್​ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್​ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್​ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...

.. ಭಾರತೀಯ ಕಾವ್ಯ ಮೀಮಾಂಸೆ

ಭಾರತೀಯ ಕಾವ್ಯ ಮೀಮಾಂಸೆ ಭಾರತೀಯ ಕಾವ್ಯಮೀಮಾಂಸೆಗೆ ಸುಮಾರು ಎರಡು ಸಾವಿರ ವರ್ಷಗಳ ದೀರ್ಘ ಇತಿಹಾಸವಿದೆ. ಕವಿ ಮತ್ತು ಕಾವ್ಯದ ಲಕ್ಷಣಗಳು, ಕಾವ್ಯ ಪ್ರಭೇದಗಳು. ಕಾವ್ಯಾಲಂಕಾರಗಳು, ಕಾವ್ಯದ ವಸ್ತು ಇತ್ಯಾದಿ ಕಾವ್ಯನಿರ್ಮಿತಿಗೆ ಸಂಬಂಧಿಸಿದ ಮಹತ್ತ್ವದ ಅಂಶಗಳ ಶಾಸ್ತ್ರೀಯ ನಿರೂಪಣೆಯೇ ಕಾವ್ಯನಿಮೀಮಾಂಸೆ. ಇದನ್ನು ಅಲಂಕಾರ ಶಾಸ್ತ್ರವೆಂದೂ ಕರೆಯಲಾಗುತ್ತದೆ. ಪ್ರಾಚೀನ ಯುಗದಲ್ಲಿ ಅಲಂಕಾರಶಾಸ್ತ್ರವೆಂದರೆ ಪ್ರಧಾನವಾಗಿ ನಾಟ್ಯ ನೃತ್ಯ ಇತ್ಯಾದಿ ರಂಗ ಸಂಸ್ಕರಣ ಅಥವಾ ನಾಟ್ಯಕಲೆಯನ್ನು ಸರ್ವಾಂಗ ಸುಂದರವಾಗಿ ಮಾಡುವ ಒಂದು ಪರಿಷ್ಕಾರ ಶಾಸ್ತ್ರವಾಗಿದ್ದಿತು. ಕಾಲಕ್ರಮೇಣ ಇದು ಕಾವ್ಯಕಲೆಯನ್ನು ಪರಿಷ್ಕರಿಸುವ ಶಾಸ್ತ್ರವಾಗಿ ಪರಿಣಮಿಸಿತು. ಇದರ ಆರಂಭ ಯಾವಾಗಿ ಯಾರಿಂದ ಆಯಿತೆಂದು ಇತ್ಯರ್ಥಪಡಿಸುವುದು ಕಷ್ಟದ ಕೆಲಸ. ಸಾಹಿತ್ಯದಲ್ಲಿ ಸೌಂದರ್ಯೋಪಾಸನೆ ಪ್ರಾರಂಭವಾದಂದಿನಿಂದಲೂ ಪಂಡಿತರು ಮತ್ತು ವಿಮರ್ಶಕರು ಸಾಹಿತ್ಯದಲ್ಲಿ ಸೌಂದರ್ಯ ಅರಸಿ ಈ ಚಿತ್ತ ಸಂಸ್ಕರಣ ಶಾಸ್ತ್ರವನ್ನು ಬೆಳೆಸಿಕೊಂಡು ಬಂದಿದ್ದಾರೆ. ಕ್ರಿ. ಪೂ. 6ನೆಯ ಶತಮಾನದಲ್ಲಿದ ಯಾಸ್ಕಾಚಾರ್ಯ ಉಪಮೆ ರೂಪಕಗಳ ಬಗ್ಗೆ ಉಲ್ಲೇಖಸಿದ್ದಾನೆ. ಕ್ರಿ. ಪೂ. 5ನೆಯ ಶತಕದ ವೇಳೆಗೆ ಪಾಣಿನಿ ನಟರ ವಿಷಯ ಪ್ರಸ್ತಾಪಿಸಿದ್ದಾನೆ. ವೇದಗಳ ಕಾಲದಲ್ಲೂ ಉಪಮಾ ರೂಪಕಾದಿಗಳ ಪ್ರಯೋಗವಿದೆ. ಋಗ್ವೇದದಲ್ಲಿ ಕಂಡುಬರುವ ಯಮಯಮಿಯರ ಸಂವಾದ, ಊರ್ವಶೀ ಪುರೂರವರ ಸಂವಾದ_ಇವುಗಳಿಂದ ವೇದಕಾಲದಲ್ಲಿ ನಾಟಕದ ಅಂಕುರಾರ್ಪಣವಿದ್ದಂತಿದೆ....

**ಜ್ಞಾನ ಕಾರಂಜಿ**::: ನೀತಿ ಆಯೋಗ ಸ್ಥಾಪನೆ

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ಅಧಿಕಾರಕ್ಕೆ ಬಂದು ಮೇ 26ಕ್ಕೆ ನಾಲ್ಕು ವರ್ಷ. ಸರ್ಕಾರದ ಈ ಅವಧಿಯ ಪಯಣದಲ್ಲಿನ ಪ್ರಮುಖ ರಂಗಗಳ ಚಿತ್ರಣವನ್ನು ವಿಜಯವಾಣಿ ಸರಣಿಯಾಗಿ ಕಟ್ಟಿಕೊಡಲಿದ್ದು, ಅದರ ಎರಡನೇ ಭಾಗ ಇಲ್ಲಿದೆ. ನೆಹರು ಅವಧಿಯಲ್ಲಿ ರಚನೆಯಾಗಿದ್ದ ಯೋಜನಾ ಆಯೋಗವನ್ನು ರದ್ದುಗೊಳಿಸಿ 2015ರ ಜ.1ರಂದು ನೀತಿ ಆಯೋಗ ರಚಿಸಲಾಯಿತು. ಅಮೃತ್, ಡಿಜಿಟಲ್ ಇಂಡಿಯಾ, ಅಟಲ್ ಇನೋವೇಷನ್, ಸಂಚಾರ ದಟ್ಟಣೆ ನಿಯಂತ್ರಣ ಸೇರಿ ಕೆಲ ಯೋಜನೆಗಳ ನೇರ ಉಸ್ತುವಾರಿಯನ್ನು ನೀತಿ ಆಯೋಗ ವಹಿಸಿಕೊಂಡಿದೆ. ಪ್ರಧಾನಿ ಅಧ್ಯಕ್ಷತೆಯ ಈ ಆಯೋಗದಲ್ಲಿ ರಾಜ್ಯಗಳ ಹಣಕಾಸು ಸಚಿವರು ಸದಸ್ಯರಾಗಿರುತ್ತಾರೆ. 15 ವರ್ಷ ಹಾಗೂ 7 ವರ್ಷಗಳ ಪ್ರತ್ಯೇಕ ಗುರಿಯ ಯೋಜನೆಯ ಜತೆಗೆ, ವಾರ್ಷಿಕ ಕಾರ್ಯಕ್ರಮಗಳ ಬಗ್ಗೆ ಈ ಸಂಸ್ಥೆ ನಿಗಾ ಇಡಲಿದೆ. ಆಡಳಿತಕ್ಕೆ ಹೊಸ ಸ್ಪರ್ಶ ‘ಮಿನಿಮಮ್ ಗವರ್ನಮೆಂಟ್, ಮ್ಯಾಕ್ಸಿಮಮ್ ಗವರ್ನನ್ಸ್’ (ಕನಿಷ್ಠ ಸರ್ಕಾರ ಗರಿಷ್ಠ ಆಡಳಿತ) ಧ್ಯೇಯ ವಾಕ್ಯದೊಂದಿಗೆ ಪ್ರಧಾನಿ ಕಚೇರಿಗೆ ನರೇಂದ್ರ ಮೋದಿ ಕಾಲಿಟ್ಟಿದ್ದರು. ತೆರಿಗೆ ವ್ಯವಸ್ಥೆಯಿಂದ ಹಿಡಿದು ಆಡಳಿತದ ಪ್ರತಿ ಹಂತದಲ್ಲಿಯೂ ಸುಧಾರಣೆ ತರುವ ಭರವಸೆ ನೀಡಿದ್ದರು. ಈ ನಿಟ್ಟಿನಲ್ಲಿ ಸರ್ಕಾರ ಕೆಲ ಹೆಜ್ಜೆಗಳನ್ನು ಇರಿಸಿದೆ. ಓಬೀರಾಯನ ಕಾಲದ ಕಾನೂನು ರದ್ದು ದೇಶದಲ್ಲಿ ಹಳೆಯ ಅನವಶ್ಯಕ ಕಾಯ್ದೆಗಳಿಂದ ಕೋರ್ಟ್ ಖಟ್ಲೆಗಳಲ್ಲಿ ವಿಳಂಬವಾಗುತ್ತದೆ. ಈ ಕಾರಣದಿಂದ ಸುಮಾರು 3 ಸಾವಿರ ...