ಮಂಗಳೂರು*
ಮಣ್ಣಿನ ಮೇಲ್ಪದರ ಅಡಿಯಲ್ಲೊಂದು ಸ್ಪ್ರಿಂಗ್ ಹಾಕಿದರೆ ಮೇಲ್ಪದರ ಜಗ್ಗುತ್ತದೆ! ಅದೇ ರೀತಿಯ
ವಿದ್ಯಮಾನ ದ.ಕ. ಜಿಲ್ಲೆಯಲ್ಲಿ ಕಂಡುಬಂದಿದೆ.
ಗಟ್ಟಿಯಾಗಿರುವ ಭೂಮಿ ಸ್ಪ್ರಿಂಗ್ ರೀತಿಯಲ್ಲೇ ವರ್ತಿಸುತ್ತಿದೆ. ಮೇಲ್ನೋಟಕ್ಕೆ ಗಟ್ಟಿಯಾದ
ನೆಲ, ಅದರ ಮೇಲೆ ಹುಲ್ಲು, ಆದರೆ ಅದರ ಮೇಲೆ ಯಾರಾದರೂ ನಿಂತಲ್ಲೇ ಹಾರಿದರೆ ಮೇಲ್ಪದರ ಒಳಗೆ
ಹೋಗಿ ಮೇಲೆ ಬರುತ್ತದೆ ಸ್ಪೋಂಜ್ ರೀತಿಯಲ್ಲಿ.
ಮಂಗಳೂರಿನ ಮೂಡುಬಿದಿರೆಯ ಕಡಂದಲೆ ಬಳಿಯಲ್ಲಿ ಈ ಅಚ್ಚರಿಯ ವಿದ್ಯಮಾನ ಕಂಡುಬಂದಿದೆ. ಕಡಂದಲೆ
ಗ್ರಾಮದ ಪಾಪ್ಸನ್ ಎಂಬ ಪ್ರದೇಶದಲ್ಲಿ ಒಂದು ಎಕರೆ ಜಾಗದಲ್ಲಿ ಮಾತ್ರ ಈ ಅಚ್ಚರಿ ಕಾಣಬಹುದು.
ಮೂಡುಬಿದಿರೆ ಆಸುಪಾಸಿನ ಸುಂದರ ತಾಣ ಕಡಂದಲೆ. ಹಾಗಾಗಿ ಇಲ್ಲಿ ಫೊಟೊಗ್ರಫಿ ನಡೆಸಲೆಂದು ಬಂದ
ವಿದ್ಯಾರ್ಥಿ ಸುಮನ್ ಶೆಟ್ಟಿ ಎಂಬವರು ಇದನ್ನು ಗಮನಿಸಿದರು. ಗೆಳೆಯರೊಂದಿಗೆ ಬಂದ ಅವವರು
ಇಲ್ಲಿ ಕುಳಿತುಕೊಳ್ಳಲು ಮುಂದಾದಾಗ ಭೂಮಿಯ ವಿಚಿತ್ರ ವರ್ತನೆ ನೋಡಿ ದಂಗಾದರು.
ದೇಶದ ಕೆಲವೆಡೆ ಉಸುಕು ಮಣ್ಣಿನ ಜವುಗು ಪ್ರದೇಶಗಳಿವೆ. ಅಲ್ಲಿ ನಡೆದರೆ ಆಳಕ್ಕೆ ಎಳೆದುಕೊಂಡು
ಮನುಷ್ಯ/ಇತರ ಪ್ರಾಣಿಗಳು ಪ್ರಾಣಾಪಾಯಕ್ಕೀಡಾಗುವುದಿದೆ. ಆದರೆ ಈ ಪ್ರದೇಶ ಹಾಗಲ್ಲ. ಇದರ
ಮೇಲೆ ಆರಾಮವಾಗಿ ನಡೆದರೂ ಒಳಗೆ ಸೆಳೆದುಕೊಳ್ಳುವುದಿಲ್ಲ.
ಪಾಪ್ಸನ್ ಪ್ರದೇಶದ ವಿಸ್ಮಯ ಗ್ರಾಮಸ್ಥರ ಕುತೂಹಲ ಕೆರಳಿಸಿದೆ. ಭೂ ತಜ್ಞರು ಹೇಳುವ ಪ್ರಕಾರ
ಭೂಮಿಯ ಒಳಗಿನ ಅನಿಲ ಹೊರಗೆ ಬಂದು ಭೂಪದರ ಮೇಲೆ ಬಂದಾಗ ಈ ರೀತಿಯ ಘಟನೆ ನಡೆಯುತ್ತದೆ.
ಸೈಬೀರಿಯಾ ಪ್ರದೇಶದಲ್ಲಿ ಅಪರೂಪವಾಗಿ ಇಂತಹ ದೃಶ್ಯ ಕಂಡುಬರುತ್ತದೆ. ಭಾರತದಲ್ಲಿ ಇದೇ ಪ್ರಥಮ
ಬಾರಿಗೆ ಎನ್ನುವುದು ತಜ್ಞರ ಅಭಿಪ್ರಾಯ.
*ಕುಣಿದರೂ ಕುಸಿಯದು!:* ಹಿಂದೊಮ್ಮೆ ಕಗ್ಗಲ್ಲಿನ ಗಣಿಗಾರಿಕೆ ನಡೆಸುತ್ತಿದ್ದ ಪ್ರದೇಶವಿದು.
ಅದಕ್ಕೆ ಮಣ್ಣು ತುಂಬಲಾಗಿದೆ. ಕಗ್ಗಲ್ಲ ಕೋರೆಯ ಒಂದು ಭಾಗದಲ್ಲಿ ಈಗಲೂ ನೀರು
ತುಂಬಿಕೊಂಡಿದೆ. ಇಡೀ ಮಣ್ಣಿನ ಮೇಲ್ಪದರ ನೀರಿನ ಮೇಲೆ ತೇಲುತ್ತಿದೆಯೋ ಎಂಬಂತೆ
ಭಾಸವಾಗುತ್ತದೆ. ಹಾಗೆಂದು ನೀವು ಅದರ ಮೇಲೆ ಎಷ್ಟು ಕುಣಿದಾಡಿದರೂ ಒಳಗೆ ಸಿಲುಕುವ ಸಾಧ್ಯತೆ
ಇಲ್ಲ.
ನಾನು ಮಿತ್ರರೊಂದಿಗೆ ಫೊಟೋಶೂಟ್‌ಗೆ ಹೋದಾಗ ಈ ವಿಸ್ಮಯ ನೋಡಿದೆವು. ಮಣ್ಣಿನ ಮೇಲೆ ನಡೆದರೆ
ಒಳಗೆ ಜಗ್ಗುತ್ತದೆ, ಆದರೆ ಕಾಲು ಹೂತು ಹೋಗುವುದಿಲ್ಲ. ಸ್ವಲ್ಪ ಅಗೆದರೆ ಕೆಸರು ಸಿಗುತ್ತದೆ.
ಇದುವರೆಗೆ ಇಂಥದ್ದನ್ನು ನಾವು ನೋಡಿಲ್ಲ.
*-ಸುಮಂತ್ ಶೆಟ್ಟಿ, ಕಡಂದಲೆ ನಿವಾಸಿ*
ಭೂಮಿಯಲ್ಲಿ ಮಣ್ಣಿನ ಆಳದಲ್ಲಿ ಕೆಲವೊಮ್ಮೆ ನಿರ್ವಾತ ಪ್ರದೇಶಗಳು ಉಂಟಾಗುತ್ತವೆ, ಅದರ ಮೇಲೆ
ಮಣ್ಣು, ಎಲೆ ಇತ್ಯಾದಿ ಸೇರಿಕೊಂಡು ಈ ರೀತಿಯ ವಿದ್ಯಮಾನ ಕಂಡುಬರುತ್ತದೆ.
*-ಡಾ.ಗಂಗಾಧರ ಭಟ್, ಭೂಗರ್ಭಶಾಸ್ತ್ರಜ್ಞ, ಮಂಗಳೂರು ವಿವಿ*

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ