ದೇಶಾದ್ಯಂತ ಸದ್ದು ಮಾಡಿರುವ ಲೈಂಗಿಕ ಶೋಷಣೆ ವಿರುದ್ಧದ ಧ್ವನಿ ‘ಮೀಟೂ’ ಅಭಿಯಾನದ ಹಿನ್ನೆಲೆಯಲ್ಲಿ ಸಂಬಂಧಿತ ದೂರುಗಳ ಪರಿಶೀಲನೆಗೆ ಕೇಂದ್ರ ಸರ್ಕಾರ ನಾಲ್ವರು ಹಿರಿಯ ನ್ಯಾಯಮೂರ್ತಿಗಳು ಮತ್ತು ಕಾನೂನು ತಜ್ಞರನ್ನು ಒಳಗೊಂಡ ಸಮಿತಿ ರಚಿಸುವುದಾಗಿ ಹೇಳಿದೆ. ಲೈಂಗಿಕ ಶೋಷಣೆಯ ದೂರುಗಳನ್ನು ಪರಿಶೀಲಿಸಿ ವಿಚಾರಣೆಗೆ ಯೋಗ್ಯವಾದವನ್ನು ಸಮಿತಿ ತನಿಖೆಗೆ ಶಿಫಾರಸು ಮಾಡಲಿದೆ.
10-15 ವರ್ಷಗಳ ಹಿಂದೆ ಘಟನೆ ನಡೆದಿದ್ದರೂ ದೂರು ನೀಡಬಹುದು ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮೇನಕಾ ಗಾಂಧಿ ಹೇಳಿದ್ದಾರೆ. ಬಾಲಿವುಡ್ ನಟರು, ಗಾಯಕರು ಸೇರಿದಂತೆ ಕೇಂದ್ರ ಸಚಿವ ಎಂ.ಜೆ.ಅಕ್ಬರ್ ವಿರುದ್ಧವೂ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ.
ಅಕ್ಬರ್ ರಾಜೀ ನಾಮೆಗೆ ಕಾಂಗ್ರೆಸ್ ಆಗ್ರಹಿಸಿದೆ. ಉದ್ಯೋಗದ ಸ್ಥಳದಲ್ಲಿ ಮಹಿಳೆಯರು ಎದುರಿಸುವ ಸಮಸ್ಯೆಗಳ ಬಗ್ಗೆ ದೂರು ನೀಡಲು ಸಚಿವಾಲಯ ಇತ್ತೀಚೆಗೆ ‘ಶಿ ಬಾಕ್ಸ್’ ವೆಬ್ಪೋರ್ಟ್ಲ್ ಮತ್ತು ಟ್ವಿಟರ್ ಖಾತೆಯನ್ನು ಆರಂಭಿಸಿತ್ತು.
ಮಹಿಳೆ ಜತೆ ಘನತೆ, ಗೌರವ ದೊಂದಿಗೆ ಹೇಗೆ ನಡೆದುಕೊಳ್ಳಬೇಕು ಎಂದು ಎಲ್ಲರೂ ಅರಿಯಬೇಕು. ಸತ್ಯವನ್ನು ಜೋರಾಗಿ ಮತ್ತು ಸ್ಪಷ್ಟವಾಗಿ ಹೇಳಿದಾಗ ಮಾತ್ರ ಬದಲಾವಣೆ ಸಾಧ್ಯ.
| ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷ
ನ್ಯಾಯಾಂಗದ ಒತ್ತಾಸೆ
ಮಧ್ಯಪ್ರದೇಶ ಹೈಕೋರ್ಟ್ ನ್ಯಾಯಮೂರ್ತಿ ವಿರುದ್ಧ ಲೈಂಗಿಕ ಶೋಷಣೆ ಆರೋಪ ಮಾಡಿ, ರಾಜೀನಾಮೆ ನೀಡಿದ್ದ ಜಿಲ್ಲಾ ಕೋರ್ಟ್ನ ನ್ಯಾಯಾಧೀಶೆಯ ಮರುನೇಮಕಾತಿ ಅರ್ಜಿ ವಿಚಾರಣೆಗೆ ಸುಪ್ರೀಂಕೋರ್ಟ್ ಸಮ್ಮತಿಸಿದೆ. ಈ ಸಂಬಂಧ ಆರು ವಾರದೊಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಮಧ್ಯಪ್ರದೇಶ ಹೈಕೋರ್ಟ್ಗೆ ಸೂಚಿಸಿದೆ. ನ್ಯಾಯಾಧೀಶೆ ದೂರು ನೀಡಿದ ನಂತರ, ರಾಜ್ಯಸಭೆಯ 58 ಸದಸ್ಯರು ಆರೋಪಿತ ನ್ಯಾಯಮೂರ್ತಿ ವಿರುದ್ಧ ಮಹಾಭಿಯೋಗಕ್ಕೆ 2015ರಲ್ಲಿ ನೋಟಿಸ್ ನೀಡಿದ್ದರು. ಜತೆಗೆ ಸಭಾಧ್ಯಕ್ಷರು ನ್ಯಾ. ಭಾನುಮತಿ, ನ್ಯಾ.ಮಂಜುಳಾ ಚೆಲ್ಲೂರು ಹಾಗೂ ಹಿರಿಯ ವಕೀಲ ಕೆ.ಕೆ.ವೇಣುಗೋಪಾಲ್ ಅವರನ್ನು ಒಳಗೊಂಡ ತನಿಖಾ ಸಮಿತಿ ರಚಿಸಿದ್ದರು. ಮತ್ತೊಂದೆಡೆ, ಲೈಂಗಿಕ ಶೋಷಣೆಗೆ ಒಳಗಾದವರು ಆ ಬಗ್ಗೆ ಧ್ವನಿ ಎತ್ತುತ್ತಿರುವುದು ಒಳ್ಳೆಯ ಬೆಳವಣಿಗೆ. ಇದನ್ನು ನ್ಯಾಯಾಂಗ ಬೆಂಬಲಿಸಬೇಕು ಎಂದು ಬಾಂಬೆ ಹೈಕೋರ್ಟ್ ನ್ಯಾಯಮೂರ್ತಿ ಗೌತಮ್ ಪಟೇಲ್ ಹೇಳಿದ್ದಾರೆ.
ಶೂಟಿಂಗ್ ನಿಲ್ಲಿಸಿದ ಅಕ್ಷಯ್ ಕುಮಾರ್
ನಿರ್ದೇಶಕ ಸಾಜಿದ್ ಖಾನ್ ಮತ್ತು ನಟ ನಾನಾ ಪಾಟೇಕರ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಕೇಳಿಬಂದಿರುವ ಹಿನ್ನೆಲೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ‘ಹೌಸ್ಫುಲ್ 4’ ಸಿನಿಮಾ ಶೂಟಿಂಗನ್ನು ಶುಕ್ರವಾರ ರದ್ದು ಮಾಡಿದರು. ಸಾಜಿದ್ ಖಾನ್, ನಾನಾಪಾಟೇಕರ್ ಹೌಸ್ಫುಲ್ ಸಿನಿಮಾದಿಂದ ಹೊರ ನಡೆದಿದ್ದಾರೆ.
ಉದ್ಯೋಗದ ಸ್ಥಳದಲ್ಲಿ ಅಧಿಕಾರ ದುರುಪಯೋಗ ಮಾಡುವ ಪುರುಷರಿಂದ ಮಹಿಳೆಯರಿಗೆ ಲೈಂಗಿಕ ಕಿರುಕುಳ ತಪ್ಪಬೇಕು. ಈ ನಿಟ್ಟಿನಲ್ಲಿ ಸಮಿತಿ ರಚಿಸಲಾಗಿದೆ.
| ಮೇನಕಾ ಗಾಂಧಿ ಕೇಂದ್ರ ಸಚಿವೆ
ಮೀಟೂ ಅಭಿಯಾನದಲ್ಲಿ ಪ್ರಭಾವಿಗಳ ಕೃತ್ಯ ಹೊರ ಬೀಳುತ್ತಿದೆ. ದೌರ್ಜನ್ಯ ತಡೆಯಲು ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ‘ಫೈರ್’ ಸಮಿತಿ ರಚಿಸುತ್ತಿದೆ. ಕವಿತಾ ಲಂಕೇಶ್, ಪ್ರಿಯಾಂಕಾ ಉಪೇಂದ್ರ ಹಾಗೂ ನಾನು ಸಮಿತಿಯಲ್ಲಿ ಇದ್ದೇವೆ.
| ಶ್ರುತಿ ಹರಿಹರನ್ ಚಿತ್ರ ನಟಿ

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ