ವಿಷಯಕ್ಕೆ ಹೋಗಿ

**ಜ್ಞಾನ ಕಾರಂಜಿ**::: ಆರ್ಚರ್ ಹರ್ವಿಂದರ್ ಸಿಂಗ್​ಗೆ ಸ್ವರ್ಣ ಪದಕ,

ಭಾರತೀಯ ಪ್ಯಾರಾ ಕ್ರೀಡಾಪಟುಗಳ ಶ್ರೇಷ್ಠ ನಿರ್ವಹಣೆ ಸತತ 5ನೇ ದಿನವೂ ಮುಂದುವರಿದಿದೆ. ಒಂದು ಸ್ವರ್ಣ, 3 ಬೆಳ್ಳಿ ಹಾಗೂ4 ಕಂಚು ಸೇರಿದಂತೆ ಗುರುವಾರ 8 ಪದಕ ಜಯಿಸಿದ ಭಾರತ ಒಟ್ಟಾರೆ 37 ಪದಕಗಳೊಂದಿಗೆ ಪದಕಪಟ್ಟಿಯಲ್ಲಿ 9ನೇ ಸ್ಥಾನ ಪಡೆದಿದೆ. ಇದು ಪ್ಯಾರಾ ಏಷ್ಯಾಡ್ ಇತಿಹಾಸದಲ್ಲಿ ಭಾರತದ ಸರ್ವಶ್ರೇಷ್ಠ ನಿರ್ವಹಣೆಯಾಗಿದೆ. ಆರ್ಚರಿ ಪಟು ಹರ್ವಿಂದರ್ ಸಿಂಗ್ ವೈಯಕ್ತಿಕ ರಿಕರ್ವ್ ವಿಭಾಗದಲ್ಲಿ ಸ್ವರ್ಣ ಸಾಧನೆ ಮಾಡಿ ದಿನದ ಗೌರವ ದಕ್ಕಿಸಿಕೊಂಡರು. ಇದರಿಂದ ಕೂಟದಲ್ಲಿ ಭಾರತ ಗೆದ್ದಿರುವ ಸ್ವರ್ಣಗಳ ಸಂಖ್ಯೆ 7ಕ್ಕೇರಿದೆ. ಪದಕಪಟ್ಟಿಯಲ್ಲಿ ಪಾರಮ್ಯ ಮುಂದುವರಿಸಿದ ಚೀನಾ ಇದುವರೆಗೂ 100 ಸ್ವರ್ಣ ಸಾಧನೆ ಮಾಡಿದೆ.
ಚಿನ್ನಕ್ಕೆ ಗುರಿಯಿಟ್ಟ ಹರ್ವಿಂದರ್: ಆರ್ಚರಿ ವೈಯಕ್ತಿಕ ರಿಕರ್ವ್ ಡಬ್ಲ್ಯು2/ಎಸ್​ಟಿ ವಿಭಾಗದಲ್ಲಿ ಹರ್ವಿಂದರ್ ಸಿಂಗ್ 6-0ರಿಂದ ಚೀನಾದ ಜಾವೊ ಲಿಕ್ಸೂ ವಿರುದ್ಧ ಜಯ ದಾಖಲಿಸಿ ಸ್ವರ್ಣಕ್ಕೆ ಮುತ್ತಿಕ್ಕಿದರು. ಸೆಮಿಫೈನಲ್​ನಲ್ಲಿ ಕೊರಿಯಾ ಸ್ಪರ್ಧಿಯಿಂದ ಪ್ರಬಲ ಪೈಪೋಟಿ ಎದುರಿಸಿದ್ದ ಹರ್ವಿಂದರ್, ಪ್ರಶಸ್ತಿ ಸುತ್ತಿನ ಹೋರಾಟದಲ್ಲಿ ನಿರಾಯಾಸವಾಗಿ ಜಯ ದಾಖಲಿಸಿದರು.
ಮೊನು ಗಂಗಾಸ್​ಗೆ ರಜತ ಪದಕ: ಡಿಸ್ಕಸ್ ಥ್ರೋ ಎಫ್-11 ವಿಭಾಗದಲ್ಲಿ ಮೊನು ಗಂಗಾಸ್, 35.89 ಮೀಟರ್ ಎಸೆದು ಬೆಳ್ಳಿ ಸಾಧನೆ ಮಾಡಿದರು. ಇದರೊಂದಿಗೆ ದಿನದ ಆರಂಭದಲ್ಲೇ ಭಾರತಕ್ಕೆ ಮೊದಲ ಪದಕ ಗೆದ್ದುಕೊಟ್ಟರು. ಆರಂಭಿಕ ಎರಡು ಯತ್ನಗಳಲ್ಲಿ ಎಸೆದ ಎಸೆತಗಳು ವಿಫಲಗೊಂಡರೂ 3ನೇ ಯತ್ನದಲ್ಲಿ ರಜತ ಸಾಧನೆ ಮಾಡಿದರು. ಇದೇ ವಿಭಾಗದಲ್ಲಿ ಏಷ್ಯಾಡ್ ದಾಖಲೆ ನಿರ್ವಿುಸಿದ ಇರಾನ್​ನ ಒಲಾದ್ ಮೆಹದಿ (42ಮೀ) ಸ್ವರ್ಣ ಪದಕ ಜಯಿಸಿದರು. ಲಾಂಗ್​ಜಂಪ್ ಟಿ42/ಟಿ61/ಟಿ63 ವಿಭಾಗದಲ್ಲಿ ವಿಜಯ್ ಕುಮಾರ್, 5.05 ಮೀಟರ್ ಹಾರುವ ಮೂಲಕ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು. ಇದೇ ವಿಭಾಗದಲ್ಲಿ ವೈಯಕ್ತಿಕ ಶ್ರೇಷ್ಠ ಸಾಧನೆ ಮಾಡಿದ ಶ್ರೀಲಂಕಾ ಚರಿತಾ ನಿರ್ಮಲಾ ಬುದ್ದಿಕಾ (5.22 ಮೀ) ಸ್ವರ್ಣ ಗೆದ್ದರು.
ಶಾಟ್​ಪುಟ್ ಎಫ್46 ವಿಭಾಗದಲ್ಲಿ ಮೊಹಮದ್ ಯಾಸೀರ್, 14.22 ಮೀಟರ್ ಎಸೆದು ಕಂಚು ಗೆದ್ದುಕೊಂಡರು. ಕಜಕ್​ಸ್ತಾನದ ಮನ್ಸುರ್​ಬಾಯೆವ್ ರಾವಿಲ್ (14.66ಮೀ) ಬೆಳ್ಳಿ ಗೆದ್ದರೆ, ಚೀನಾದ ವೀ ಇನ್​ಲಾಂಗ್ (15.67ಮೀ) ನೂತನ ಕೂಟ ದಾಖಲೆಯೊಂದಿಗೆ ಸ್ವರ್ಣ ಸಂಪಾದಿಸಿದರು. ದೈಹಿಕವಾಗಿ ದುರ್ಬಲಗೊಂಡವರಿಗೆ ಈ ಸ್ಪರ್ಧೆ ಆಯೋಜಿಸಲಾಗಿತ್ತು. -ಏಜೆನ್ಸೀಸ್
ಮಹಿಳಾ ಟೇಬಲ್ ಟೆನಿಸ್ ತಂಡಕ್ಕೆ ರಜತ
ಮಹಿಳೆಯರ ಟೇಬಲ್ ಟೆನಿಸ್​ನ ಟಿಟಿ 3-5 ವಿಭಾಗದಲ್ಲಿ ಭಾರತದ ಭವಿನಾಬೆನ್ ಪಟೇಲ್ ಹಾಗೂ ಸೊನಾಲ್​ಬೆನ್ ಪಟೇಲ್ ಜೋಡಿ ಫೈನಲ್ ಪಂದ್ಯದಲ್ಲಿ ಇಂಡೋನೇಷ್ಯಾದ ಅಸಾಯೂತ್ ದರಾರತ್ ಹಾಗೂ ಪಾಟ್ಟಾವರ್ಧಿ ಜೋಡಿ ಎದುರು 4-11, 12-14ರಿಂದ ಸೋಲನುಭವಿಸಿತು. ಉಳಿದಂತೆ ಚೆಸ್ ವಿಭಾಗದಲ್ಲಿ ಒಂದು ಬೆಳ್ಳಿ ಹಾಗೂ ಎರಡು ಕಂಚು ಗೆದ್ದುಕೊಂಡಿತು. ಜೆನ್ನಿತ್ತಾ ಅಂಟೋ ಮಹಿಳೆಯರ ವೈಯಕ್ತಿಕ ಪಿ1 ವಿಭಾಗದಲ್ಲಿ ಬೆಳ್ಳಿ ಗೆದ್ದರೆ, ತಂಡದ ವಿಭಾಗದಲ್ಲಿ ಜೆನ್ನಿತ್ತಾ ಹಾಗೂ ಪ್ರೇಮಾ ಕನಿಶ್ರೀ ಜತೆಗೂಡಿ ಕಂಚು ಪಡೆದರು. ಮಹಿಳೆಯರ ಸ್ಟಾ್ಯಂಡರ್ಡ್ ವಿಭಾಗದಲ್ಲಿ ಬಿ2/ಬಿ3 ವಿಭಾಗದಲ್ಲಿ ಮೃನಾಲಿ ಪ್ರಕಾಶ್, ಮೇಘಾ ಚಕ್ರಬೊರ್ತಿ ಹಾಗೂ ತಿಜನ್ ಪುನಾರಮ್ ಒಳಗೊಂಡ ಭಾರತ ತಂಡ ಕಂಚಿಗೆ ತೃಪ್ತಿಪಟ್ಟುಕೊಂಡಿತು. ಬಿ2/ಬಿ3 ವಿಭಾಗ ಸಂಪೂರ್ಣ ಅಂಧತ್ವ ಹೊಂದಿದವರ ನಡುವಿನ ಸ್ಪರ್ಧೆಯಾಗಿದೆ. ಪ್ಯಾರಾ ಪವರ್​ಲಿಫ್ಟಿಂಗ್ ವಿಭಾಗದಲ್ಲಿ ಸುಧೀರ್ 80 ಕೆಜಿ ವಿಭಾಗದಲ್ಲಿ 192 ಕೆಜಿ ಭಾರ ಎತ್ತುವ ಮೂಲಕ ಕಂಚು ಜಯಿಸಿದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

**ಜ್ಞಾನ ಕಾರಂಜಿ**::: ಬೇನಾಮಿ ಆಸ್ತಿ ಪ್ರಕರಣ ವಿಲೇವಾರಿಗೆ ನ್ಯಾಯಾಧಿಕರಣ,

ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್​ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್​ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್​ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...

.. ಭಾರತೀಯ ಕಾವ್ಯ ಮೀಮಾಂಸೆ

ಭಾರತೀಯ ಕಾವ್ಯ ಮೀಮಾಂಸೆ ಭಾರತೀಯ ಕಾವ್ಯಮೀಮಾಂಸೆಗೆ ಸುಮಾರು ಎರಡು ಸಾವಿರ ವರ್ಷಗಳ ದೀರ್ಘ ಇತಿಹಾಸವಿದೆ. ಕವಿ ಮತ್ತು ಕಾವ್ಯದ ಲಕ್ಷಣಗಳು, ಕಾವ್ಯ ಪ್ರಭೇದಗಳು. ಕಾವ್ಯಾಲಂಕಾರಗಳು, ಕಾವ್ಯದ ವಸ್ತು ಇತ್ಯಾದಿ ಕಾವ್ಯನಿರ್ಮಿತಿಗೆ ಸಂಬಂಧಿಸಿದ ಮಹತ್ತ್ವದ ಅಂಶಗಳ ಶಾಸ್ತ್ರೀಯ ನಿರೂಪಣೆಯೇ ಕಾವ್ಯನಿಮೀಮಾಂಸೆ. ಇದನ್ನು ಅಲಂಕಾರ ಶಾಸ್ತ್ರವೆಂದೂ ಕರೆಯಲಾಗುತ್ತದೆ. ಪ್ರಾಚೀನ ಯುಗದಲ್ಲಿ ಅಲಂಕಾರಶಾಸ್ತ್ರವೆಂದರೆ ಪ್ರಧಾನವಾಗಿ ನಾಟ್ಯ ನೃತ್ಯ ಇತ್ಯಾದಿ ರಂಗ ಸಂಸ್ಕರಣ ಅಥವಾ ನಾಟ್ಯಕಲೆಯನ್ನು ಸರ್ವಾಂಗ ಸುಂದರವಾಗಿ ಮಾಡುವ ಒಂದು ಪರಿಷ್ಕಾರ ಶಾಸ್ತ್ರವಾಗಿದ್ದಿತು. ಕಾಲಕ್ರಮೇಣ ಇದು ಕಾವ್ಯಕಲೆಯನ್ನು ಪರಿಷ್ಕರಿಸುವ ಶಾಸ್ತ್ರವಾಗಿ ಪರಿಣಮಿಸಿತು. ಇದರ ಆರಂಭ ಯಾವಾಗಿ ಯಾರಿಂದ ಆಯಿತೆಂದು ಇತ್ಯರ್ಥಪಡಿಸುವುದು ಕಷ್ಟದ ಕೆಲಸ. ಸಾಹಿತ್ಯದಲ್ಲಿ ಸೌಂದರ್ಯೋಪಾಸನೆ ಪ್ರಾರಂಭವಾದಂದಿನಿಂದಲೂ ಪಂಡಿತರು ಮತ್ತು ವಿಮರ್ಶಕರು ಸಾಹಿತ್ಯದಲ್ಲಿ ಸೌಂದರ್ಯ ಅರಸಿ ಈ ಚಿತ್ತ ಸಂಸ್ಕರಣ ಶಾಸ್ತ್ರವನ್ನು ಬೆಳೆಸಿಕೊಂಡು ಬಂದಿದ್ದಾರೆ. ಕ್ರಿ. ಪೂ. 6ನೆಯ ಶತಮಾನದಲ್ಲಿದ ಯಾಸ್ಕಾಚಾರ್ಯ ಉಪಮೆ ರೂಪಕಗಳ ಬಗ್ಗೆ ಉಲ್ಲೇಖಸಿದ್ದಾನೆ. ಕ್ರಿ. ಪೂ. 5ನೆಯ ಶತಕದ ವೇಳೆಗೆ ಪಾಣಿನಿ ನಟರ ವಿಷಯ ಪ್ರಸ್ತಾಪಿಸಿದ್ದಾನೆ. ವೇದಗಳ ಕಾಲದಲ್ಲೂ ಉಪಮಾ ರೂಪಕಾದಿಗಳ ಪ್ರಯೋಗವಿದೆ. ಋಗ್ವೇದದಲ್ಲಿ ಕಂಡುಬರುವ ಯಮಯಮಿಯರ ಸಂವಾದ, ಊರ್ವಶೀ ಪುರೂರವರ ಸಂವಾದ_ಇವುಗಳಿಂದ ವೇದಕಾಲದಲ್ಲಿ ನಾಟಕದ ಅಂಕುರಾರ್ಪಣವಿದ್ದಂತಿದೆ....

**ಜ್ಞಾನ ಕಾರಂಜಿ**::: ನೀತಿ ಆಯೋಗ ಸ್ಥಾಪನೆ

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ಅಧಿಕಾರಕ್ಕೆ ಬಂದು ಮೇ 26ಕ್ಕೆ ನಾಲ್ಕು ವರ್ಷ. ಸರ್ಕಾರದ ಈ ಅವಧಿಯ ಪಯಣದಲ್ಲಿನ ಪ್ರಮುಖ ರಂಗಗಳ ಚಿತ್ರಣವನ್ನು ವಿಜಯವಾಣಿ ಸರಣಿಯಾಗಿ ಕಟ್ಟಿಕೊಡಲಿದ್ದು, ಅದರ ಎರಡನೇ ಭಾಗ ಇಲ್ಲಿದೆ. ನೆಹರು ಅವಧಿಯಲ್ಲಿ ರಚನೆಯಾಗಿದ್ದ ಯೋಜನಾ ಆಯೋಗವನ್ನು ರದ್ದುಗೊಳಿಸಿ 2015ರ ಜ.1ರಂದು ನೀತಿ ಆಯೋಗ ರಚಿಸಲಾಯಿತು. ಅಮೃತ್, ಡಿಜಿಟಲ್ ಇಂಡಿಯಾ, ಅಟಲ್ ಇನೋವೇಷನ್, ಸಂಚಾರ ದಟ್ಟಣೆ ನಿಯಂತ್ರಣ ಸೇರಿ ಕೆಲ ಯೋಜನೆಗಳ ನೇರ ಉಸ್ತುವಾರಿಯನ್ನು ನೀತಿ ಆಯೋಗ ವಹಿಸಿಕೊಂಡಿದೆ. ಪ್ರಧಾನಿ ಅಧ್ಯಕ್ಷತೆಯ ಈ ಆಯೋಗದಲ್ಲಿ ರಾಜ್ಯಗಳ ಹಣಕಾಸು ಸಚಿವರು ಸದಸ್ಯರಾಗಿರುತ್ತಾರೆ. 15 ವರ್ಷ ಹಾಗೂ 7 ವರ್ಷಗಳ ಪ್ರತ್ಯೇಕ ಗುರಿಯ ಯೋಜನೆಯ ಜತೆಗೆ, ವಾರ್ಷಿಕ ಕಾರ್ಯಕ್ರಮಗಳ ಬಗ್ಗೆ ಈ ಸಂಸ್ಥೆ ನಿಗಾ ಇಡಲಿದೆ. ಆಡಳಿತಕ್ಕೆ ಹೊಸ ಸ್ಪರ್ಶ ‘ಮಿನಿಮಮ್ ಗವರ್ನಮೆಂಟ್, ಮ್ಯಾಕ್ಸಿಮಮ್ ಗವರ್ನನ್ಸ್’ (ಕನಿಷ್ಠ ಸರ್ಕಾರ ಗರಿಷ್ಠ ಆಡಳಿತ) ಧ್ಯೇಯ ವಾಕ್ಯದೊಂದಿಗೆ ಪ್ರಧಾನಿ ಕಚೇರಿಗೆ ನರೇಂದ್ರ ಮೋದಿ ಕಾಲಿಟ್ಟಿದ್ದರು. ತೆರಿಗೆ ವ್ಯವಸ್ಥೆಯಿಂದ ಹಿಡಿದು ಆಡಳಿತದ ಪ್ರತಿ ಹಂತದಲ್ಲಿಯೂ ಸುಧಾರಣೆ ತರುವ ಭರವಸೆ ನೀಡಿದ್ದರು. ಈ ನಿಟ್ಟಿನಲ್ಲಿ ಸರ್ಕಾರ ಕೆಲ ಹೆಜ್ಜೆಗಳನ್ನು ಇರಿಸಿದೆ. ಓಬೀರಾಯನ ಕಾಲದ ಕಾನೂನು ರದ್ದು ದೇಶದಲ್ಲಿ ಹಳೆಯ ಅನವಶ್ಯಕ ಕಾಯ್ದೆಗಳಿಂದ ಕೋರ್ಟ್ ಖಟ್ಲೆಗಳಲ್ಲಿ ವಿಳಂಬವಾಗುತ್ತದೆ. ಈ ಕಾರಣದಿಂದ ಸುಮಾರು 3 ಸಾವಿರ ...