ಮೂಲದ ಬರಹಗಾರ್ತಿ ಆನಾ ಬರ್ನ್ಸ್ (1962) ಅವರಿಗೆ 2018ನೆಯ ಸಾಲಿನ ಪ್ರತಿಷ್ಠಿತ ‘ಮ್ಯಾನ್ ಬುಕರ್’ ಪ್ರಶಸ್ತಿ ಒಲಿದಿದೆ. ಉತ್ತರ ಐರ್ಲೆಂಡ್ನವರಾದ ಆನಾ, ಅಲ್ಲಿನ ಕ್ಯಾಥೊಲಿಕ್-ಪ್ರೊಟೆಸ್ಟಂಟ್ ಸಮುದಾಯದ ನಡುವೆ ಸಂಭವಿಸಿದ ಹಿಂಸಾಚಾರ ಘಟನೆಯನ್ನು ಆಧರಿಸಿ ರಚಿಸಿದ ‘ಮಿಲ್ಕ್ ಮ್ಯಾನ್’ ಕಾದಂಬರಿಗೆ ಈ ಪ್ರಶಸ್ತಿ ಲಭಿಸಿದೆ. ಈ ಮೂಲಕ ಪ್ರತಿಷ್ಠಿತ ಮ್ಯಾನ್ ಬುಕರ್ ಪ್ರಶಸ್ತಿಗೆ ಭಾಜನರಾಗಿರುವ ಐರ್ಲೆಂಡ್ನ ಪ್ರಪ್ರಥಮ ಬರಹಗಾರ್ತಿ ಎನಿಸಿದ್ದಾರೆ. ಬುಕರ್ ಪ್ರಶಸ್ತಿ ಸ್ಥಾಪನೆಯಾದ ಕಳೆದ 49 ವರ್ಷಗಳ ಇತಿಹಾಸದಲ್ಲಿ ಈ ಪ್ರಶಸ್ತಿ ಪಡೆಯುತ್ತಿರುವ 17ನೆಯ ಬರಹಗಾರ್ತಿ ಎನಿಸಿದ್ದಾರೆ. ಪ್ರಶಸ್ತಿಯೊಂದಿಗೆ 50 ಸಾವಿರ ಪೌಂಡ್ (66 ಸಾವಿರ ಅಮೆರಿಕನ್ ಡಾಲರ್) ಮೊತ್ತದ ನಗದು ಬಹುಮಾನ ಪಡೆಯಲಿದ್ದಾರೆ. ‘ಮಿಲ್ಕ್ ಮ್ಯಾನ್’ ಒಂದು ಕುಟುಂಬದ ಸಂಬಂಧಗಳನ್ನು, ಸಾಮಾಜಿಕ ಒತ್ತಡ ಮತ್ತು ರಾಜಕೀಯ ದೌರ್ಜನ್ಯ, ಲೈಂಗಿಕ ದಬ್ಬಾಳಿಕೆ ಮತ್ತು ಕಿರುಕುಳದ ಹಿನ್ನೆಲೆಯೊಡನೆ ವಿವರಿಸುತ್ತದೆ. ‘ಸಾಂಪ್ರದಾಯಿಕ ಆಲೋಚನೆಗೆ ಸವಾಲೊಡ್ಡುವ ಕಥೆ ಇದಾಗಿದ್ದು, ವಿಶಿಷ್ಟವಾದ ಗದ್ಯಶೈಲಿ ಹೊಂದಿದೆ. ಇದಕ್ಕೂ ಮೊದಲು ನಮ್ಮಲ್ಲಿ ಯಾರೊಬ್ಬರೂ ಇಂತಹ ಕಾದಂಬರಿಯನ್ನು ಓದಿರಲಿಲ್ಲ’ ಎಂದು ಆಯ್ಕೆ ಸಮಿತಿಯ ಸದಸ್ಯರಲ್ಲೊಬ್ಬರಾದ ಕ್ವೇಮ್ ಆಂಟನಿ ಹೇಳಿದ್ದಾರೆ.
ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ