ವಿಷಯಕ್ಕೆ ಹೋಗಿ

**ಜ್ಞಾನ ಕಾರಂಜಿ**::: ಶಷ್ಕುಲಿ ಹೋಗಿ ಚಕ್ಕುಲಿ ಬಂತು!,

ಡಾ. ಗಿರಿಧರ ಕಜೆ ಎಂ.ಡಿ.(ಆಯು)
ಮನುಷ್ಯ ಜನ್ಮಸಹಜವಾಗಿ ಯೋಜಕ. ಜೀವನವನ್ನು ಸೊಬಗಾಗಿಸಲು ನಿರಂತರ ಯತ್ನದಲ್ಲಿ ಕ್ರಿಯಾಶೀಲನಾಗಿರುತ್ತಾನೆ. ಹೀಗಾಗಿ ಏನೆಲ್ಲ ಬೇಕೋ ಅದರಲ್ಲಿ ವೈವಿಧ್ಯಗಳು ತುಂಬಿರುತ್ತವೆ. ನಿತ್ಯಜೀವನದಲ್ಲಿ ಉಪಯೋಗಿಸುವ ವಾಹನ, ಬಟ್ಟೆಬರೆ, ಮೊಬೈಲು, ಆಹಾರ ವಿಧವಿಧವಾಗಿ ಲಭ್ಯವಿರುವಂತೆ ಮಾಡಿಕೊಂಡಿರುವುದರಿಂದ ಅವರವರ ಅಭಿರುಚಿಗೆ ತಕ್ಕಂತೆ ಆಯ್ಕೆಯ ಅವಕಾಶವಿರುತ್ತದೆ. ಇದು ಇಂದು ನಿನ್ನೆಯ ಕಥೆಯಲ್ಲ. ಆದಿಯಿಂದಲೇ ಹೀಗೆ ಸಾಗಿಬಂದಿದೆ. ಆಹಾರ ವ್ಯಂಜನಗಳ ಹೆಸರುಗಳೂ ಪ್ರಾಚೀನ ಕಾಲದಲ್ಲಿ ಹೇಗಿತ್ತೋ ಬಹುತೇಕ ಅದೇ ತೆರನಾಗಿ ಇಂದಿಗೂ ಚಾಲ್ತಿಯಲ್ಲಿರುವುದು ದಿಗಮೆ ಹುಟ್ಟಿಸುತ್ತದೆ.

ಸ್ವಲ್ಪ ತುಪ್ಪ ಬಳಸಿ ಗೋಧಿಹಿಟ್ಟನ್ನು ಚೆನ್ನಾಗಿ ಕಲಸಿಕೊಳ್ಳಬೇಕು. ರೊಟ್ಟಿ ತಟ್ಟಿ ತುಪ್ಪದಲ್ಲಿ ಹುರಿಯಬೇಕು. ಬಳಿಕ ಸಿತಾಪಾಕವೆಂಬ ಸಕ್ಕರೆ ಕುದಿಸಿ ಮಾಡಿದ ಪಾಕಕ್ಕೆ ಏಲಕ್ಕಿ, ಲವಂಗ, ಪಚ್ಚಕರ್ಪರ, ಕರಿಮೆಣಸುಗಳನ್ನು ಹಾಕಿಡಬೇಕು. ಈ ಪಾಕದಲ್ಲಿ ಹುರಿದ ರೊಟ್ಟಿಯನ್ನು ಕೆಲವು ನಿಮಿಷ ಇಟ್ಟು ಹೊರತೆಗೆದರೆ ಅದು ಮಂಥಕ. ಇಂದಿನ ಸಿಹಿಪೂರಿ! ಬಲಕಾರಕ, ಪುಷ್ಟಿದಾಯಕ, ಲೈಂಗಿಕ ಶಕ್ತಿಪ್ರದಾಯಕ ಆಗಿದ್ದರೂ ಸುಲಭವಾಗಿ ಜೀರ್ಣವಾಗದು. ಹೀಗಾಗಿ ಅತಿಯಾದ ಜೀರ್ಣಶಕ್ತಿ ಇರುವವರಿಗೆ ಹಿತಕರ.
ಗೋಧಿಹಿಟ್ಟಿಗೆ ಹೆಚ್ಚು ತುಪ್ಪ ಸೇರಿಸಿ ಮರದ ಮಣೆಯ ಮೇಲೆ ಉರುಟು ಹಾಗೂ ಉದ್ದವಾದ ಆಕೃತಿಯಲ್ಲಿ ಮಾಡಿಕೊಂಡು ಚಾಕುವಿನಿಂದ ತುಂಡರಿಸಬೇಕು. ಬಳಿಕ ಅದಕ್ಕೆ ಅಕ್ಕಿಹಿಟ್ಟು ಹಾಗೂ ನೀರನ್ನು ಹಾಕಿ ಚಿಕ್ಕ ಉರುಟಾದ ಬಿಲ್ಲೆಯಂತೆ ಲಟ್ಟಿಸಿಕೊಂಡು ತುಪ್ಪದಲ್ಲಿ ಮುಳುಗಿಸಿ ಚೆನ್ನಾಗಿ ಹುರಿಯಬೇಕು. ಅದು ಉಬ್ಬಿಕೊಂಡಾಗ ಹೊರತೆಗೆದು ಸಕ್ಕರೆಯ ಹುಡಿಯನ್ನು ಚಿಮುಕಿಸಬೇಕು. ಇದು ಅಂದಿನ ಫೇಣಿಕಾ, ಇಂದಿನ ಫೇಣಿ! ದೇಹಪುಷ್ಟಿಗೆ, ಶಕ್ತಿವರ್ಧನೆಗೆ, ಪಿತ್ತ, ವಾತ ನಿಯಂತ್ರಣಕ್ಕೆ, ಬಾಯಿರುಚಿ ಹೆಚ್ಚಿಸಲು ಅನುಕೂಲಕಾರಿಯಾಗಿದ್ದು ಸುಲಭವಾಗಿ ಜೀರ್ಣಗೊಳ್ಳುತ್ತದೆ.
ಗೋಧಿಹಿಟ್ಟಿಗೆ ತುಪ್ಪ ಹಾಕಿ ಹಪ್ಪಳ ಮಾಡಿ ಸಕ್ಕರೆ, ಏಲಕ್ಕಿ, ಲವಂಗ, ಕಾಳುಮೆಣಸು, ತೆಂಗಿನಕಾಯಿ ತುರಿ, ಪಚ್ಚಕರ್ಪರ, ಚಾರೊಲಿಗಳನ್ನು ಹುಡಿ ಮಾಡಿ ಹೆಚ್ಚಿನ ಪ್ರಮಾಣದಲ್ಲಿ ಬೆರೆಸಿ ಚಿಕ್ಕ ಉಂಡೆ ಮಾಡಿಟ್ಟುಕೊಳ್ಳಬೇಕು. ದಪ್ಪನೆಯ ಗೋಧಿಹಿಟ್ಟಿನ ರೊಟ್ಟಿ ಮಾಡಿ ಈ ಒಂದೊಂದೇ ಉಂಡೆಯನ್ನು ಅದರಿಂದ ಮುಚ್ಚಬೇಕು. ಇದನ್ನು ತುಪ್ಪದಲ್ಲಿ ಮುಳುಗಿಸಿ ಹುರಿಯಬೇಕು. ಇದು ಅಂದಿನ ಸಂಪಾವ, ಇಂದಿನ ಮೋದಕ! ಮಂಥಕದ ಗುಣಗಳಿಂದಲೇ ಕೂಡಿರುತ್ತದೆ. ಗೋಧಿಯ ಹಿಟ್ಟಿಗೆ ಜಾಸ್ತಿ ತುಪ್ಪ, ಸ್ವಲ್ಪ ಲವಂಗ, ಶುಂಠಿ, ಪಚ್ಚಕರ್ಪರ, ಸಕ್ಕರೆಯನ್ನು ನುಣ್ಣಗೆ ಹುಡಿ ಮಾಡಿ ಮಿಶ್ರಗೊಳಿಸಬೇಕು. ಕರ್ಪರ ನಾಲಿಕಾ ಎಂದರೆ ಇದೇ. ಇದೂ ಮಂಥಕದ ಗುಣವನ್ನೇ ಹೊಂದಿರುತ್ತದೆ. ಗೋಧಿಹಿಟ್ಟಿಗೆ ತುಪ್ಪ ಸೇರಿಸಿ ತೆಳ್ಳಗೆ ದುಂಡಗೆ ಆಕಾರದಲ್ಲಿ ತುಂಡರಿಸಿ ತುಪ್ಪದಲ್ಲಿ ಮುಳುಗಿಸಿ ಕರಿದರೆ ಸಿದ್ಧವಾಗುವುದೇ ಶಷ್ಕುಲಿ. ಮಂಥಕದಂತೆಯೇ ಗುಣಗಳಿದ್ದು ಇಂದಿನ ಚಕ್ಕುಲಿಯನ್ನೇ ಹೋಲುತ್ತದೆ. ಕಡಲೆಹಿಟ್ಟಿನಿಂದ ಇದೇ ತೆರನಾಗಿ ಮಾಡುವ ಚಕ್ಕುಲಿಯು ಕಫ, ಪಿತ್ತ, ರಕ್ತದೋಷಗಳನ್ನು ಕಡಿಮೆ ಮಾಡುತ್ತದೆ. ಜೀರ್ಣಕ್ಕೆ ಕಠಿಣವಾಗಿದ್ದು ದೇಹದಲ್ಲಿ ನೀರಿನ ಅಂಶವನ್ನು ತಗ್ಗಿಸುತ್ತದೆ. ಉದ್ದಿನಹಿಟ್ಟು ಅಥವಾ ಅಕ್ಕಿಹಿಟ್ಟಿನ ಚಕ್ಕುಲಿಯ ಬಳಕೆ ಇಂದು ಹೆಚ್ಚು ಪ್ರಚಲಿತದಲ್ಲಿದೆ.
ಮಂಥಕ, ಫೇಣಿಕಾ, ಸಂಪಾವ, ಕರ್ಪರ ನಾಲಿಕಾ, ಶಷ್ಕುಲಿಗಳೆಲ್ಲವನ್ನೂ ಒಟ್ಟಾಗಿ ಆಯುರ್ವೆದವು ಪಕ್ವಾನ್ನ ಎಂದಿದೆ. ನಾವಿದನ್ನು ಕುರಕಲುತಿಂಡಿ ಅಥವಾ ಸ್ನ್ಯಾಕ್ಸ್ ಎನ್ನುತ್ತಿದ್ದೇವೆ!
ಪಂಚಸೂತ್ರಗಳು
# ಕಕ್ಕೆಮರ: ಹಣ್ಣು ನೋವು ನಿವಾರಕ.
# ಮಾದಲಹಣ್ಣು: ವಾಂತಿ ಶಮನ ಮಾಡುವುದು.
# ಮುಳ್ಳುಸೌತೆ: ಮೂತ್ರನಾಳದ ನೋವು ಶಾಮಕ.
# ಲಿಂಬೆಹಣ್ಣು: ತುರಿಕಜ್ಜಿ ಗುಣಕಾರಿ.
# ಕಿತ್ತಳೆಹೂ: ನಿದ್ರೆ ಬರಲು ಸಹಕಾರಿ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

**ಜ್ಞಾನ ಕಾರಂಜಿ**::: ಬೇನಾಮಿ ಆಸ್ತಿ ಪ್ರಕರಣ ವಿಲೇವಾರಿಗೆ ನ್ಯಾಯಾಧಿಕರಣ,

ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್​ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್​ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್​ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...

.. ಭಾರತೀಯ ಕಾವ್ಯ ಮೀಮಾಂಸೆ

ಭಾರತೀಯ ಕಾವ್ಯ ಮೀಮಾಂಸೆ ಭಾರತೀಯ ಕಾವ್ಯಮೀಮಾಂಸೆಗೆ ಸುಮಾರು ಎರಡು ಸಾವಿರ ವರ್ಷಗಳ ದೀರ್ಘ ಇತಿಹಾಸವಿದೆ. ಕವಿ ಮತ್ತು ಕಾವ್ಯದ ಲಕ್ಷಣಗಳು, ಕಾವ್ಯ ಪ್ರಭೇದಗಳು. ಕಾವ್ಯಾಲಂಕಾರಗಳು, ಕಾವ್ಯದ ವಸ್ತು ಇತ್ಯಾದಿ ಕಾವ್ಯನಿರ್ಮಿತಿಗೆ ಸಂಬಂಧಿಸಿದ ಮಹತ್ತ್ವದ ಅಂಶಗಳ ಶಾಸ್ತ್ರೀಯ ನಿರೂಪಣೆಯೇ ಕಾವ್ಯನಿಮೀಮಾಂಸೆ. ಇದನ್ನು ಅಲಂಕಾರ ಶಾಸ್ತ್ರವೆಂದೂ ಕರೆಯಲಾಗುತ್ತದೆ. ಪ್ರಾಚೀನ ಯುಗದಲ್ಲಿ ಅಲಂಕಾರಶಾಸ್ತ್ರವೆಂದರೆ ಪ್ರಧಾನವಾಗಿ ನಾಟ್ಯ ನೃತ್ಯ ಇತ್ಯಾದಿ ರಂಗ ಸಂಸ್ಕರಣ ಅಥವಾ ನಾಟ್ಯಕಲೆಯನ್ನು ಸರ್ವಾಂಗ ಸುಂದರವಾಗಿ ಮಾಡುವ ಒಂದು ಪರಿಷ್ಕಾರ ಶಾಸ್ತ್ರವಾಗಿದ್ದಿತು. ಕಾಲಕ್ರಮೇಣ ಇದು ಕಾವ್ಯಕಲೆಯನ್ನು ಪರಿಷ್ಕರಿಸುವ ಶಾಸ್ತ್ರವಾಗಿ ಪರಿಣಮಿಸಿತು. ಇದರ ಆರಂಭ ಯಾವಾಗಿ ಯಾರಿಂದ ಆಯಿತೆಂದು ಇತ್ಯರ್ಥಪಡಿಸುವುದು ಕಷ್ಟದ ಕೆಲಸ. ಸಾಹಿತ್ಯದಲ್ಲಿ ಸೌಂದರ್ಯೋಪಾಸನೆ ಪ್ರಾರಂಭವಾದಂದಿನಿಂದಲೂ ಪಂಡಿತರು ಮತ್ತು ವಿಮರ್ಶಕರು ಸಾಹಿತ್ಯದಲ್ಲಿ ಸೌಂದರ್ಯ ಅರಸಿ ಈ ಚಿತ್ತ ಸಂಸ್ಕರಣ ಶಾಸ್ತ್ರವನ್ನು ಬೆಳೆಸಿಕೊಂಡು ಬಂದಿದ್ದಾರೆ. ಕ್ರಿ. ಪೂ. 6ನೆಯ ಶತಮಾನದಲ್ಲಿದ ಯಾಸ್ಕಾಚಾರ್ಯ ಉಪಮೆ ರೂಪಕಗಳ ಬಗ್ಗೆ ಉಲ್ಲೇಖಸಿದ್ದಾನೆ. ಕ್ರಿ. ಪೂ. 5ನೆಯ ಶತಕದ ವೇಳೆಗೆ ಪಾಣಿನಿ ನಟರ ವಿಷಯ ಪ್ರಸ್ತಾಪಿಸಿದ್ದಾನೆ. ವೇದಗಳ ಕಾಲದಲ್ಲೂ ಉಪಮಾ ರೂಪಕಾದಿಗಳ ಪ್ರಯೋಗವಿದೆ. ಋಗ್ವೇದದಲ್ಲಿ ಕಂಡುಬರುವ ಯಮಯಮಿಯರ ಸಂವಾದ, ಊರ್ವಶೀ ಪುರೂರವರ ಸಂವಾದ_ಇವುಗಳಿಂದ ವೇದಕಾಲದಲ್ಲಿ ನಾಟಕದ ಅಂಕುರಾರ್ಪಣವಿದ್ದಂತಿದೆ....

**ಜ್ಞಾನ ಕಾರಂಜಿ**::: ನೀತಿ ಆಯೋಗ ಸ್ಥಾಪನೆ

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ಅಧಿಕಾರಕ್ಕೆ ಬಂದು ಮೇ 26ಕ್ಕೆ ನಾಲ್ಕು ವರ್ಷ. ಸರ್ಕಾರದ ಈ ಅವಧಿಯ ಪಯಣದಲ್ಲಿನ ಪ್ರಮುಖ ರಂಗಗಳ ಚಿತ್ರಣವನ್ನು ವಿಜಯವಾಣಿ ಸರಣಿಯಾಗಿ ಕಟ್ಟಿಕೊಡಲಿದ್ದು, ಅದರ ಎರಡನೇ ಭಾಗ ಇಲ್ಲಿದೆ. ನೆಹರು ಅವಧಿಯಲ್ಲಿ ರಚನೆಯಾಗಿದ್ದ ಯೋಜನಾ ಆಯೋಗವನ್ನು ರದ್ದುಗೊಳಿಸಿ 2015ರ ಜ.1ರಂದು ನೀತಿ ಆಯೋಗ ರಚಿಸಲಾಯಿತು. ಅಮೃತ್, ಡಿಜಿಟಲ್ ಇಂಡಿಯಾ, ಅಟಲ್ ಇನೋವೇಷನ್, ಸಂಚಾರ ದಟ್ಟಣೆ ನಿಯಂತ್ರಣ ಸೇರಿ ಕೆಲ ಯೋಜನೆಗಳ ನೇರ ಉಸ್ತುವಾರಿಯನ್ನು ನೀತಿ ಆಯೋಗ ವಹಿಸಿಕೊಂಡಿದೆ. ಪ್ರಧಾನಿ ಅಧ್ಯಕ್ಷತೆಯ ಈ ಆಯೋಗದಲ್ಲಿ ರಾಜ್ಯಗಳ ಹಣಕಾಸು ಸಚಿವರು ಸದಸ್ಯರಾಗಿರುತ್ತಾರೆ. 15 ವರ್ಷ ಹಾಗೂ 7 ವರ್ಷಗಳ ಪ್ರತ್ಯೇಕ ಗುರಿಯ ಯೋಜನೆಯ ಜತೆಗೆ, ವಾರ್ಷಿಕ ಕಾರ್ಯಕ್ರಮಗಳ ಬಗ್ಗೆ ಈ ಸಂಸ್ಥೆ ನಿಗಾ ಇಡಲಿದೆ. ಆಡಳಿತಕ್ಕೆ ಹೊಸ ಸ್ಪರ್ಶ ‘ಮಿನಿಮಮ್ ಗವರ್ನಮೆಂಟ್, ಮ್ಯಾಕ್ಸಿಮಮ್ ಗವರ್ನನ್ಸ್’ (ಕನಿಷ್ಠ ಸರ್ಕಾರ ಗರಿಷ್ಠ ಆಡಳಿತ) ಧ್ಯೇಯ ವಾಕ್ಯದೊಂದಿಗೆ ಪ್ರಧಾನಿ ಕಚೇರಿಗೆ ನರೇಂದ್ರ ಮೋದಿ ಕಾಲಿಟ್ಟಿದ್ದರು. ತೆರಿಗೆ ವ್ಯವಸ್ಥೆಯಿಂದ ಹಿಡಿದು ಆಡಳಿತದ ಪ್ರತಿ ಹಂತದಲ್ಲಿಯೂ ಸುಧಾರಣೆ ತರುವ ಭರವಸೆ ನೀಡಿದ್ದರು. ಈ ನಿಟ್ಟಿನಲ್ಲಿ ಸರ್ಕಾರ ಕೆಲ ಹೆಜ್ಜೆಗಳನ್ನು ಇರಿಸಿದೆ. ಓಬೀರಾಯನ ಕಾಲದ ಕಾನೂನು ರದ್ದು ದೇಶದಲ್ಲಿ ಹಳೆಯ ಅನವಶ್ಯಕ ಕಾಯ್ದೆಗಳಿಂದ ಕೋರ್ಟ್ ಖಟ್ಲೆಗಳಲ್ಲಿ ವಿಳಂಬವಾಗುತ್ತದೆ. ಈ ಕಾರಣದಿಂದ ಸುಮಾರು 3 ಸಾವಿರ ...