ಪೊಲೀಸ್ ಹುತಾತ್ಮರ ದಿನ
ಅಪರಾಧ ಜಗತ್ತು ತನ್ನ ವ್ಯಾಪ್ತಿಯನ್ನು ಮೀರಿ ಬೆಳೆಯುತ್ತಿರುವ ಈ ಹೊತ್ತಿನಲ್ಲಿ, ಪೊಲೀಸರಿಲ್ಲದ ಸಮಾಜ ನೆನಪಿಸಿಕೊಳ್ಳುವುದೇ ಬಲುಕಷ್ಟ. ಯಾವ ಕ್ಷಣದಲ್ಲಿ, ಎಲ್ಲಿ, ಯಾರ ಮನೆಯಲ್ಲಿ, ಯಾವ ಬೀದಿಯಲ್ಲಿ, ಯಾವ ಮೂಲೆಯಲ್ಲಿ ಏನಾಗುತ್ತದೋ ಗೊತ್ತಿಲ್ಲ. ರಾತ್ರಿ ಹೊತ್ತಿನಲ್ಲಿಯೇ ತೆರೆದುಕೊಳ್ಳುವ ಅಪರಾಧ ಚಟುವಟಿಕೆಗಳನ್ನು ಬಗ್ಗುಬಡಿಯಲು ನಿದ್ದೆಯನ್ನೂ ಬಿಟ್ಟು 24 ಗಂಟೆಯೂ ಸದಾ ಸೇವೆಗೆ ಸಿದ್ಧರಾಗಿರುವವರು ಪೊಲೀಸರು. ಅಪರಾಧ ಚಟುವಟಿಕೆಗಳನ್ನು ತಡೆಗಟ್ಟಲು, ಅಪರಾಧಿಗಳ ಮೇಲೆ ಹದ್ದಿನಕಣ್ಣು ಇಡಲು ಹಾಗೂ ಜನರನ್ನು ಕಾಪಾಡುವ ಭರದಲ್ಲಿ ಅದೆಷ್ಟೋ ಪೊಲೀಸರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಅಂಥ ಪೊಲೀಸರ ಶೌರ್ಯ, ಸೇವೆಯನ್ನು ನೆನೆಯಲು ಪ್ರತಿ ವರ್ಷ ಅಕ್ಟೋಬರ್ 21ನೇ ತಾರೀಖನ್ನು ‘ಪೊಲೀಸ್ ಹುತಾತ್ಮರ ದಿನ’ ಎಂದು ಆಚರಿಸಲಾಗುತ್ತದೆ.
| ಗೋವಿಂದರಾಜು ಚಿನ್ನಕುರ್ಚಿ/ ಅವಿನಾಶ್ ಮೂಡಂಬಿಕಾನ
‘1992ರ ಅವಧಿಯದು. ನರಹಂತಕ ವೀರಪ್ಪನ್ನ ಅಟ್ಟಹಾಸ ಮಿತಿಮೀರಿತ್ತು. ಆತನನ್ನು ಮಟ್ಟ ಹಾಕಲು ಕರ್ನಾಟಕ ಮತ್ತು ತಮಿಳುನಾಡಿನ ಪೊಲೀಸ್ ಇಲಾಖೆ ಕಸರತ್ತು ನಡೆಸಿತ್ತು. ಅವರು ಎಷ್ಟೇ ಹರಸಾಹಸಪಟ್ಟರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಪೊಲೀಸರು ಚಾಪೆಯ ಕೆಳಗೆ ತೂರಿದ್ದರೆ, ವೀರಪ್ಪನ್ ಯಾರ ಕೈಗೂ ಸಿಗದೆ ರಂಗೋಲಿ ಕೆಳಗೆ ತೂರಿಕೊಳ್ಳುತ್ತಿದ್ದ. ಆತನಿಗೆ ಮಾನವೀಯತೆ ಎಂಬುದೇ ತಿಳಿದಿರಲಿಲ್ಲ. ತನ್ನ ವಿರುದ್ಧವಾಗಿ ನಡೆಯುವವರನ್ನು ಮುಲಾಜಿಲ್ಲದೆ ಹತ್ಯೆ ಮಾಡುತ್ತಿದ್ದ. ಅಂಥ ಕಠಿಣ ಪರಿಸ್ಥಿತಿಯಲ್ಲಿ, ಬೆಂಗಳೂರಿನಲ್ಲಿ ಸಬ್ಇನ್ಸ್ಪೆಕ್ಟರ್ ಆಗಿದ್ದ ಶಕೀಲ್ ಅಹಮದ್ ಮತ್ತು ಮೈಸೂರು ಎಸ್ಪಿ ಆಗಿದ್ದ ಹರಿಕೃಷ್ಣ ಅವರು, ವೀರಪ್ಪನ್ನನ್ನು ಹಿಡಿದೇ ಹಿಡಿಯುತ್ತೇವೆ ಎಂಬ ವಿಶ್ವಾಸದಲ್ಲಿ ಬಂಧನ ಕಾರ್ಯಾಚರಣೆ ಆರಂಭಿಸಿಯೇ ಬಿಟ್ಟಿದ್ದರು. ಆದರೆ, ವೀರಪ್ಪನ್ನ ಬಗ್ಗೆ ಯಾವುದೇ ಸೂಕ್ತ ಮಾಹಿತಿ ಅವರ ಬಳಿ ಇರಲಿಲ್ಲ. ಆತನ ಕೆಲ ಚಟುವಟಿಕೆಗಳನ್ನು ಮಾತ್ರ ತಿಳಿದುಕೊಂಡಿದ್ದ ಶಕೀಲ್ ಹಾಗೂ ಹರಿಕೃಷ್ಣ ಅವರುಗಳಿಗೆ ವೀರಪ್ಪನ್ ಜತೆ ಎಷ್ಟು ಮಂದಿ ಕೆಲಸ ಮಾಡುತ್ತಿದ್ದಾರೆ, ಆತ ಎಂತಹ ಶಸ್ತ್ರಾಸ್ತ್ರಗಳನ್ನು ಹೊಂದಿದ್ದಾನೆ, ಆತ ವಾಸಿಸುತ್ತಿದ್ದ ಸ್ಥಳದಲ್ಲಿ ಭದ್ರತೆ ಹೇಗಿತ್ತು, ಅವನ ನೆಟ್ವರ್ಕ್ ಎಷ್ಟಿದೆ ಎಂಬ ವಿಚಾರಗಳೇ ಗೊತ್ತಿರಲಿಲ್ಲ. ಯಾವುದೇ ರೀತಿಯ ಪೂರ್ವ ತಯಾರಿಯನ್ನೇನೂ ಮಾಡಿಕೊಳ್ಳದೇ ನೇರವಾಗಿ ಕಾರ್ಯಾಚರಣೆಯಲ್ಲಿ ತೊಡಗಿಯೇ ಬಿಟ್ಟರು. ಅದೇ ಆಗಸ್ಟ್ 14ರಂದು ವೀರಪ್ಪನ್ನನ್ನು ಬೇಟೆಯಾಡುವ ಉದ್ದೇಶದಿಂದ ತಮಿಳುನಾಡಿನ ಮೀನ್ಯಂ ಅರಣ್ಯದೊಳಗೆ ಒಂದಷ್ಟು ಪೊಲೀಸ್ ಸಿಬ್ಬಂದಿಯ ಜತೆಗೆ ಹರಿಕೃಷ್ಣ ಹಾಗೂ ಶಕೀಲ್ ಅಹಮದ್ ನೇತೃತ್ವದ ತಂಡ ಹೊರಟಿತ್ತು.
ಆದರೆ, ಈ ವಿಚಾರ ಸಹಚರರ ಮೂಲಕ ವೀರಪ್ಪನ್ ಗಮನಕ್ಕೆ ಬಂದಿತ್ತು. ಆನೆ, ಹುಲಿ ಮತ್ತು ಕಾಡು ಮೃಗಗಳು ಎಲ್ಲಿವೆ, ಎಷ್ಟು ದೂರದಿಂದ ಬರುತ್ತಿವೆ ಎಂಬುದನ್ನು ಅವುಗಳ ವಾಸನೆಯಲ್ಲೇ ವೀರಪ್ಪನ್ ಕಂಡು ಹಿಡಿಯುತ್ತಿದ್ದ. ಹೀಗಿರುವಾಗ ತನ್ನನ್ನು ಸೆರೆ ಹಿಡಿಯಲು ಬಂದ ಪೊಲೀಸರ ಬಗ್ಗೆ ವೀರಪ್ಪನ್ಗೆ ಗೊತ್ತಾಗುವುದಿಲ್ಲವೇ?
ಶಕೀಲ್ ಮತ್ತು ಹರಿಕೃಷ್ಣ ಅವರಿಗೆ ಆತ ವಾಸಿಸುತ್ತಿದ್ದ ಕಾಡಿನ ಬಗ್ಗೆ ಅಷ್ಟೊಂದು ಮಾಹಿತಿ ಇರಲಿಲ್ಲ. ಆದರೂ, ವೀರಪ್ಪನ್ನನ್ನು ಹಿಡಿಯಬೇಕು ಎಂದುಕೊಂಡಿದ್ದರು. ಆದರೆ, ವೀರಪ್ಪನ್ ತನ್ನನ್ನು ಸೆರೆಹಿಡಿಯಲು ಬಂದಿದ್ದ ಇಬ್ಬರು ಅಧಿಕಾರಿಗಳನ್ನು ತಾನಿರುವಲ್ಲಿಗೆ ಬರುವಂತೆ ಮಾಡಿದ್ದ. ಇದಾದ ನಂತರ ಪೊಲೀಸ್ ಸಿಬ್ಬಂದಿಯನ್ನು ಚದುರಿಸಲು ಏಕಾಏಕಿ ಅವರ ಮೇಲೆ ಬಾಂಬ್ಗಳನ್ನು ಎಸೆದಿದ್ದ. ಆಗ ಹಿಡಿಯಲು ಬಂದಿದ್ದ ಪೊಲೀಸ್ ಸಿಬ್ಬಂದಿಗಳು ದಿಕ್ಕಾಪಾಲಾಗಿ ಓಡಿದ್ದರು. ವೀರಪ್ಪನ್ ತನ್ನ ಗನ್ನಿಂದ ಶಕೀಲ್ ಮತ್ತು ಹರಿಕೃಷ್ಣ ಅವರ ಮೇಲೆ ಗುಂಡು ಹಾರಿಸಿ ಕೊಲೆ ಮಾಡಿ ಪರಾರಿಯಾಗಿದ್ದ. ಈ ಪ್ರಕರಣದಲ್ಲಿ ಒಟ್ಟು 9 ಮಂದಿ ಪೊಲೀಸರು ಜೀವ ಕಳೆದುಕೊಂಡಿದ್ದರು. ಹರಿಕೃಷ್ಣ ಮತ್ತು ಶಕೀಲ್ನನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದ ಅವರ ಕುಟುಂಬಸ್ಥರಿಗೆ ಈ ಸುದ್ದಿ ಕೇಳಿ ದಿಕ್ಕೇ ತೋಚದಂತಾಗಿತ್ತು. ಶಕೀಲ್ ತಂದೆ ಸಹ ಪೊಲೀಸ್ ಸಿಬ್ಬಂದಿಯಾಗಿದ್ದ ಹಿನ್ನೆಲೆಯಲ್ಲಿ ಶಕೀಲ್ ಅವರು ಬಾಲ್ಯದಲ್ಲೇ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಿ ದುಷ್ಟರನ್ನು ಶಿಕ್ಷಿಸಿ, ಅನ್ಯಾಯವಾದವರಿಗೆ ನ್ಯಾಯ ಕೊಡಿಸಬೇಕು ಎಂದುಕೊಂಡಿದ್ದರು. ಆದರೆ ಸಣ್ಣ ವಯಸ್ಸಲ್ಲೇ ಹುತಾತ್ಮರಾಗಿದ್ದು ಬೇಸರದ ಸಂಗತಿ…’
-ಅಪರಾಧ ಚಟುವಟಿಕೆ ಮಟ್ಟಹಾಕಲು ಪೊಲೀಸರಿಗೆ ಪೂರ್ವ ತಯಾರಿ ಎಷ್ಟು ಮಹತ್ವದ್ದು, ಇಲ್ಲದೇ ಹೋದರೆ ಏನಾಗುತ್ತದೆ ಎಂಬುದನ್ನು ಉದಾಹರಿಸಲು ಹುತಾತ್ಮರಾದ ಈ ಇಬ್ಬರು ಪೊಲೀಸ್ ಅಧಿಕಾರಿಗಳ ಘಟನೆಯನ್ನು ಬಿಚ್ಚಿಟ್ಟವರು ನಿವೃತ್ತ ಎಸಿಪಿ, ಎನ್ಕೌಂಟರ್ ಸ್ಪೆಷಲಿಸ್ಟ್ (ಟೈಗರ್) ಬಿ.ಬಿ.ಅಶೋಕ್ಕುಮಾರ್.
‘ಹರಿಕೃಷ್ಣ ಹಾಗೂ ಶಕೀಲ್ ಅಹಮದ್ ಸೂಕ್ತ ರೀತಿಯಲ್ಲಿ ತಯಾರಿ ಮಾಡಿಕೊಂಡು ಹೋಗಿದ್ದರೆ ವೀರಪ್ಪನ್ನನ್ನು ಅವರೇ ಸೆರೆಹಿಡಿಯಬಹುದಿತ್ತು. ಆದರೆ, ವೀರಪ್ಪನ್ ಚಟುವಟಿಕೆ ಬಗ್ಗೆ ಸಂಪೂರ್ಣವಾಗಿ ಅಧ್ಯಯನ ಮಾಡದೇ ಹೋಗಿದ್ದು ಸರಿಯಲ್ಲ. ಪೂರ್ವಸಿದ್ಧತೆ ಇಲ್ಲದೆ ಕಾರ್ಯಾಚರಣೆಗೆ ಇಳಿದಿದ್ದೇ ಅವರ ಜೀವಕ್ಕೆ ಮುಳುವಾಯಿತು’ ಎನ್ನುತ್ತಾರೆ ಅವರು.
ಆದರೆ ಎಲ್ಲ ಸಂದರ್ಭಗಳಲ್ಲೂ ಪೂರ್ವ ತಯಾರಿ ಮಾಡಿಕೊಳ್ಳುವಷ್ಟು ಸಮಯ ಪೊಲೀಸರಿಗೆ ಸಿಗುವುದೇ ಇಲ್ಲ. ಏಕೆಂದರೆ ಅಪರಾಧ ಯಾವ ಸಮಯದಲ್ಲಿ, ಯಾವ ರೀತಿಯಲ್ಲಾದರೂ ಆಗಬಹುದು. ಆ ವೇಳೆ ದಿಟ್ಟ ಪೊಲೀಸರ ಬಳಿ ಸ್ವಲ್ಪವೂ ಆಲೋಚನೆ ಮಾಡುವ ಸಮಯ ಇರುವುದಿಲ್ಲ. ಕರ್ತವ್ಯಕ್ಕೆ ಇಳಿಯಲೇಬೇಕಿರುವ ಅನಿವಾರ್ಯತೆ. ಅದಕ್ಕೆ ಬಹುದೊಡ್ಡ ಉದಾಹರಣೆ ಎಂದರೆ 2015ರಲ್ಲಿ ವಾಹನ ಕಳ್ಳರನ್ನು ಹಿಡಿಯಲು ಹೋಗಿ ಹುತಾತ್ಮರಾದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರ ಠಾಣೆಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಜಗದೀಶ್, ಕಳೆದ ಮಾರ್ಚ್ ನಲ್ಲಿ ಇಂಥದ್ದೇ ಘಟನೆಯಲ್ಲಿ ತಮ್ಮ ಪ್ರಾಣ ಕಳೆದುಕೊಂಡ ಬೆಂಗಳೂರಿನ ಬ್ಯಾಟರಾಯನಪುರ ಸಂಚಾರ ಪೊಲೀಸ್ ಠಾಣೆಯ ಕಾನ್ಸ್ಟೆಬಲ್ ರವಿಶಂಕರ್.
ವಾಹನ ಕಳ್ಳರನ್ನು ಹಿಡಿಯಲು ಮುಂದಾಗಿದ್ದಾಗ, 38 ವರ್ಷದ ಜಗದೀಶ್ ಅವರ ಎದೆಗೆ ಇರಿದು ಕಳ್ಳರು ಹತ್ಯೆ ಮಾಡಿದ್ದರು. ಕಳ್ಳಸಾಗಣೆಯಲ್ಲಿ ತೊಡಗಿದ್ದ ಲಾರಿಯನ್ನು ತಡೆಯಲು ಮುಂದಾಗಿದ್ದ 31 ವರ್ಷದ ರವಿಶಂಕರ್ ಅವರ ಮೇಲೆ ಲಾರಿಯನ್ನೇ ಹರಿಸಿ ಹತ್ಯೆ ಮಾಡಲಾಯಿತು. ಇಂಥ ಉದಾಹರಣೆಗಳು ಅದೆಷ್ಟೋ ಕಾಣಸಿಗುತ್ತವೆ.
ಹುತಾತ್ಮರ ದಿನದ ಆರಂಭ
1959ರಲ್ಲಿ ಗಡಿ ಪ್ರದೇಶ ಲಡಾಖದಲ್ಲಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಚೀನಾ ಪಡೆ ಭಾರತೀಯ ಪೊಲೀಸರ ಮೇಲೆ ದಾಳಿ ನಡೆಸಿದಾಗ ವೀರಾವೇಶದಿಂದ ಹೋರಾಟ ನಡೆಸಿ ಪ್ರಾಣವನ್ನೇ ಅರ್ಪಿಸಿದ್ದರು. ಆ ದಿನವನ್ನು ಪೊಲೀಸ್ ಹುತಾತ್ಮರ ದಿನವೆಂದು ಆಚರಿಸಲಾಗುತ್ತಿದೆ.
ಮುಂಬೈ ದಾಳಿಯ ವೀರರು
2008ರ ನವೆಂಬರ್ 26ರಂದು ನಡೆದ ಮುಂಬೈ ಬಾಂಬ್ ಸ್ಪೋಟದ ಸಮಯದಲ್ಲಿ ಉಗ್ರರೊಂದಿಗೆ ಸೆಣಸಾಟ ನಡೆಸಿ ಅವರ ಗುಂಡಿಗೆ ಬಲಿಯಾದ ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ, ಎಎಸ್ಐ ತುಕಾರಾಂ ಗೋಪಾಲ್ ಓಂಬ್ಲೆ, ಮುಂಬೈನ ಎಸಿಪಿ ಅಶೋಕ್ ಕಾಮ್ಟೆ, ಎನ್ಕೌಂಟರ್ ಸ್ಪೆಷಲಿಸ್ಟ್ ವಿಜಯ್ ಸಾಲಸ್ಕರ್ರಂಥ ಪೊಲೀಸ್ ಅಧಿಕಾರಿಗಳನ್ನು ನೆನೆದರೆ ಪೊಲೀಸರಿಗಿರುವ ದೇಶಪ್ರೇಮ ಗೋಚರಿಸುತ್ತದೆ. ಉಗ್ರಗಾಮಿ ಅಜ್ಮಲ್ ಕಸಬ್ ಜೀವಂತ ದೊರೆಯಲು ಇವರೇ ಪ್ರಮುಖ ಕಾರಣರು. ಉಗ್ರರು ಹಾರಿಸಿದ್ದ ಹತ್ತಾರು ಗುಂಡುಗಳು ದೇಹವನ್ನು ಛಿದ್ರಗೊಳಿಸಿದ್ದರೂ ಕೊನೆಯ ಉಸಿರು ಇರುವವರೆಗೂ ಹೋರಾಡಿದ್ದ ಧೀರರಿವರು.
ಜನಮಾನಸದಲ್ಲಿ ಮೀಸೆ ತಿಮ್ಮಯ್ಯ
ಭಯಂಕರವಾದ ಮೀಸೆ, ಎತ್ತರವಾದ ಕಟ್ಟುಮಸ್ತು ದೇಹ ಹೊಂದಿದ್ದ ಮುಖ್ಯಪೇದೆ ಮೀಸೆ ತಿಮ್ಮಯ್ಯನವರ ಹೆಸರು ಕೇಳದವರು ಬಲು ಅಪರೂಪ. ಒಬ್ಬ ಮಹಿಳೆ ಮತ್ತು ಆಕೆಯ ಮಗಳ ಜೀವವನ್ನು ಉಳಿಸಲು ತಮ್ಮ ಪ್ರಾಣವನ್ನೇ ಕೊಟ್ಟವರು ಇವರು. 1994-95ರ ಸಮಯದಲ್ಲಿ ಮೀಸೆ ತಿಮ್ಮಯ್ಯ ಎಂದರೆ ಮಕ್ಕಳು, ವೃದ್ಧ್ದು, ವಾಹನ ಸವಾರರಿಗೆ ಅಚ್ಚುಮೆಚ್ಚು. ತಿಮ್ಮಯ್ಯ ಉದ್ದವಾದ, ದಪ್ಪನೆಯ, ದೊಡ್ಡ ಹುರಿ ಮೀಸೆ ಹೊಂದಿದ್ದ ಹಿನ್ನೆಲೆಯಲ್ಲಿ ಮೀಸೆ ತಿಮ್ಮಯ್ಯ ಎಂದೇ ಜನಪ್ರಿಯತೆ ಹೊಂದಿದ್ದರು. ಬೆಂಗಳೂರಿನ ಜನರಲ್ ಪೋಸ್ಟ್ ಆಫೀಸ್ ಕಚೇರಿ ಸಿಗ್ನಲ್ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದ ಇವರನ್ನು ಕಂಡರೆ ಸಾಕು, ಪ್ರತಿಯೊಬ್ಬರೂ ಇವರ ಬಳಿ ಹೋಗಿ ಮೀಸೆಯನ್ನು ಮುಟ್ಟಿ ಮಾತನಾಡಿಸಿ ಹೋಗುತ್ತಿದ್ದದ್ದು ವಿಶೇಷವಾಗಿತ್ತು. ಜನಸ್ನೇಹಿಯಾಗಿದ್ದ ಮೀಸೆ ತಿಮ್ಮಯ್ಯ ಜನ ಸಾಮಾನ್ಯರೊಂದಿಗೆ ಒಳ್ಳೆಯ ಒಡನಾಟ ಬೆಳೆಸಿಕೊಂಡಿದ್ದರು. ಅವರ ಮೀಸೆ ಆಗಾಗ ಸುದ್ದಿಯಾಗುತ್ತಿತ್ತು. ಕೆಲಸದಲ್ಲಿ ಬಹಳ ನಿಷ್ಠೆ ಹೊಂದಿದ್ದ ತಿಮ್ಮಯ್ಯ ಅವರು ತಮ್ಮ ವ್ಯಾಪ್ತಿಯಲ್ಲಿ ಸುಗಮ ವಾಹನ ಸಂಚಾರಕ್ಕೆ ಅನುಕೂಲವಾಗುವಂತೆ ನೋಡಿಕೊಳ್ಳುತ್ತಿದ್ದರು. ಜನ ಅವರ ಕೆಲಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು. ಆ ಕಾಲದಲ್ಲಿ ಬೆಂಗಳೂರು ನಗರದಲ್ಲಿ ಮೀಸೆ ತಿಮ್ಮಯ್ಯ ಅವರ ಹೆಸರನ್ನು ಕೇಳದವರೇ ಇರಲಿಲ್ಲ. 1995ರ ಆಗಸ್ಟ್ ತಿಂಗಳಲ್ಲಿ ಜಿಪಿಒ ವೃತ್ತದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ವೇಗವಾಗಿ ಬಂದ ಟ್ರಕ್ಕೊಂದು ಮಹಿಳೆ ಹಾಗೂ ಆಕೆಯ ಮಗಳಿಗೆ ಡಿಕ್ಕಿ ಹೊಡೆಯುವುದರಲ್ಲಿತ್ತು. ಅವರಿಬ್ಬರನ್ನು ರಕ್ಷಿಸಲು ಹೋದಾಗ ಟ್ರಕ್ ಡಿಕ್ಕಿ ಹೊಡೆದು ಮೀಸೆ ತಿಮ್ಮಯ್ಯ ಮೃತಪಟ್ಟಿದ್ದರು. ಅವರ ನೆನಪಿನಲ್ಲಿ ಜಿಪಿಒ ಬಳಿ ಇರುವ ವೃತ್ತಕ್ಕೆ ಪೊಲೀಸ್ ಮೀಸೆ ತಿಮ್ಮಯ್ಯ ವೃತ್ತ ಎಂದೇ ಹೆಸರಿಡಲಾಗಿದೆ. ಮೀಸೆ ತಿಮ್ಮಯ್ಯ ಅವರ ಮೀಸೆ ಇರುವ ಚಿತ್ರಗಳನ್ನು ಬೆಂಗಳೂರು ನಗರ ಸಂಚಾರ ಪೊಲೀಸ್ ಇಲಾಖೆಯ ಕಾರ್ಯಕ್ರಮಗಳಲ್ಲಿ ಈಗಲೂ ಬಳಸಲಾಗುತ್ತಿದೆ. ಸಂಚಾರ ಪೊಲೀಸರು ಆಯೋಜಿಸಿದ ಹಲವಾರು ಜಾಗೃತಿ ಕಾರ್ಯಕ್ರಮಗಳು, ಹೊಸ ಯೋಜನೆಗಳನ್ನು ಜಾರಿಗೆ ತರುವ ವೇಳೆ ಪೋಸ್ಟರ್ಗಳು, ಭಿತ್ತಿಪತ್ರಗಳು, ಬ್ಯಾನರ್ಗಳಲ್ಲಿ ಅವರ ಫೋಟೋ ಹಾಕಿ ಇಂದಿಗೂ ಸ್ಮರಿಸಲಾಗುತ್ತಿದೆ.
ಜೀವನ್ಮರಣದ ನಡುವೆ ಹೋರಾಡಿದ್ದ ಬಂಡೆ
2014ರ ಜನವರಿ 8ರಂದು ಶಾರ್ಪ್ ಶೂಟರ್, ಭೂಗತ ಪಾತಕಿ ಮುನ್ನಾ ಜೊತೆ ನಡೆದಿದ್ದ ಗುಂಡಿನ ಕಾಳಗದಲ್ಲಿ ಎದೆಗೆ ಗುಂಡೇಟು ಬಿದ್ದು ಹಲವು ವಾರಗಳ ಕಾಲ ಆಸ್ಪತ್ರೆಯಲ್ಲಿ ಜೀವನ್ಮರಣದ ಮಧ್ಯೆ ಹೋರಾಟ ನಡೆಸಿ ನಂತರ ಹುತಾತ್ಮರಾಗಿದ್ದರು ಪಿಎಸ್ಐ ಮಲ್ಲಿಕಾರ್ಜುನ ಬಂಡೆ.
ಸರ್ಕಾರ ನೆರವಾಗಲಿ
ಪೊಲೀಸ್ ಇಲಾಖೆಯಲ್ಲಿ ಪ್ರತಿವರ್ಷ 800ಕ್ಕೂ ಅಧಿಕ ಪೊಲೀಸರು ಹುತಾತ್ಮರಾಗುತ್ತಾರೆ. ಇಂಥ ಸಂದರ್ಭಗಳಲ್ಲಿ ಅವರ ಕುಟುಂಬಕ್ಕೆ ಸರ್ಕಾರ ನೆರವಾಗಬೇಕು. ಇವರನ್ನು ಸ್ಮರಿಸಿ ಅವರ ಆತ್ಮಕ್ಕೆ ಮತ್ತು ಕುಟುಂಬ ಸದಸ್ಯರಿಗೆ ಗೌರವ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯ. ಆದರೆ, ಬೆಂಗಳೂರಿನಲ್ಲಿ ಹುತಾತ್ಮರ ದಿನಾಚರಣೆ ನಡೆಸಲು ಶಾಶ್ವತ ಸ್ಮಾರಕವೇ ಇಲ್ಲದಿರುವುದು ಬೇಸರದ ಸಂಗತಿ’ ಎನ್ನುತ್ತಾರೆ ನಿವೃತ್ತ ಡಿಜಿಪಿ ಅಜಯ್ ಕುಮಾರ್ ಸಿಂಗ್.
‘ನೃಪತುಂಗ ರಸ್ತೆಯ ಡಿಜಿ-ಐಜಿಪಿ ಸರ್ಕಾರಿ ನಿವಾಸದ ಕಾಂಪೌಂಡ್ಗೆ ಹೊಂದಿಕೊಂಡಂತೆ ಹುತಾತ್ಮ ಪೊಲೀಸರ ಸ್ಮಾರಕದಲ್ಲಿ ಪ್ರತಿವರ್ಷ ಕಾರ್ಯಕ್ರಮ ನಡೆಸಲಾಗುತ್ತಿತ್ತು. ಆದರೆ, ಐಪಿಎಸ್ ಅಧಿಕಾರಿಗಳ ಸಂಖ್ಯೆ ಹಾಗೂ ಹುತಾತ್ಮ ಕುಟುಂಬ ಸದಸ್ಯರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಸ್ಥಳಾವಕಾಶದ ಕೊರತೆ ಉಂಟಾಯಿತು. ಜತೆಗೆ ಟ್ರಾಫಿಕ್, ವಾಹನ ರ್ಪಾಂಗ್ ಸಮಸ್ಯೆಯಿಂದಾಗಿ ಮೈಸೂರು ರಸ್ತೆ ಸಿಎಆರ್ ಮೈದಾನ ಅಥವಾ ಕೋರಮಂಗಲದ ಮೈದಾನದಲ್ಲಿ ತಾತ್ಕಾಲಿಕ ಸ್ಮಾರಕ ನಿರ್ಮಾಣ ಮಾಡಿ ಆಚರಿಸಲಾಗುತ್ತಿದೆ. ಕಳೆದ ವರ್ಷ ಕೋರಮಂಗಲದಲ್ಲಿ ಆಚರಿಸಲಾಗಿತ್ತು. ಶಾಶ್ವತ ಸ್ಮಾರಕ ನಿರ್ಮಾಣ ಮಾಡುವಲ್ಲಿ ಯಾರೂ ಆಸಕ್ತಿ ತೋರಿಲ್ಲ. ಇದನ್ನು ರಾಜ್ಯ ಪೊಲೀಸ್ ಮಹಾನಿರ್ದೇಶಕರು, ಸ್ಮಾರಕ ನಿರ್ವಣದ ಕುರಿತು ಎಡಿಜಿಪಿ ಅಥವಾ ಐಜಿಪಿ ದರ್ಜೆ ಅಧಿಕಾರಿಗಳಿಗೆ ಜವಾಬ್ದಾರಿ ವಹಿಸಿ ರಾಜ್ಯ ಸರ್ಕಾರದಿಂದ ಹಣ ಮಂಜೂರು ಮಾಡುವವರೆಗೂ ಆ ಕೆಲಸದಿಂದ ಹೊರಬರದಂತೆ ಸೂಚಿಸಬೇಕು. ಆಗ ಮಾತ್ರ ಕೆಲಸವಾಗುತ್ತದೆ. ಕೇವಲ ಸಚಿವರಿಂದ ಭರವಸೆ ಪಡೆದರೆ ಸ್ಮಾರಕ ನಿರ್ಮಾಣ ಸಾಧ್ಯವಿಲ್ಲ ಎನ್ನುತ್ತಾರೆ ಅಜಯ್ ಕುಮಾರ್.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ