ದೇಶಾದ್ಯಂತ ಏಕರೂಪ ಚಾಲನಾ ಪರವಾನಗಿ (ಡಿಎಲ್), ವಾಹನ ನೋಂದಣಿ ಪ್ರಮಾಣ ಪತ್ರ (ಆರ್ಸಿ) ವಿತರಿಸಲು ಕೇಂದ್ರ ಮಹತ್ವದ ಹೆಜ್ಜೆ ಇರಿಸಿದೆ. 2019ರ ಜುಲೈನಿಂದ ಎಲ್ಲ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಂದೇ ವಿನ್ಯಾಸ, ಬಣ್ಣದ ಡಿಎಲ್ ಕಾರ್ಡ್ ವಿತರಿಸ ಲಾಗುತ್ತದೆ.
20 ರೂ. ಖರ್ಚು
ಹೊಸ ಡಿಎಲ್ ಅಥವಾ ಆರ್ಸಿ ಹೊಂದಲು ಕೇವಲ 15ರಿಂದ 20 ರೂ. ಖರ್ಚು ಬರುತ್ತದೆ. ಆದ್ದರಿಂದ, ನಿರ್ದಿಷ್ಟ ಅವಧಿಯಲ್ಲಿ ಈ ಕಾರ್ಡ್ ವಿತರಣೆ ಕಾರ್ಯ ಪೂರ್ಣಗೊಳಿಸ ಬಹುದು ಎನ್ನಲಾಗಿದೆ.
ಸ್ಮಾರ್ಟ್ ಕಾರ್ಡ್
ಹೊಸದಾಗಿ ವಿತರಿಸಲಾಗುವ ಡಿಎಲ್, ಆರ್ಸಿ ಸ್ಮಾರ್ಟ್ ಕಾರ್ಡ್ ರೂಪದಲ್ಲಿರುತ್ತವೆ. ಮೈಕ್ರೋಚಿಪ್ ಜತೆಗೆ ಕ್ಯೂಆರ್ ಕೋಡ್ ಕೂಡ ಅಳವಡಿಕೆ ಆಗಿರುತ್ತದೆ. ಮೆಟ್ರೋ ರೈಲು, ಎಟಿಎಂ ಕಾರ್ಡ್ಗಳಲ್ಲಿರುವಂತೆ ನಿಯರ್ ಫೀಲ್ಡ್ ಕಮ್ಯುನಿಕೇಷನ್ (ಎನ್ಎಫ್ಸಿ; ಕಾರ್ಡ್ ಅನ್ನು ಗುರುತಿಸುವ ಯಂತ್ರಕ್ಕೆ 4 ಸೆಂ.ಮೀ. ಹತ್ತಿರ ತಂದಾಗ ಅದರಲ್ಲಿನ ವಿವರಗಳು ಯಂತ್ರದಲ್ಲಿ ಕಾಣಿಸುವುದು) ವ್ಯವಸ್ಥೆಯನ್ನು ಹೊಂದಿರುತ್ತದೆ. ಇದರಿಂದಾಗಿ ಸಂಚಾರ ಪೊಲೀಸರಿಗೆ ಸುಲಭವಾಗಿ ದಾಖಲೆ ಪರಿಶೀಲಿಸಲು ಮತ್ತು ಜುಲ್ಮಾನೆ ವಿಧಿಸಲು ಅನುಕೂಲವಾಗುತ್ತದೆ.
ಏನೆಲ್ಲ ವಿವರ ಅಡಕ: ಹೊಸ ಡಿಎಲ್ನಲ್ಲಿ ಕೇಂದ್ರ, ರಾಜ್ಯಸರ್ಕಾರಗಳ ಲಾಂಛನ, ಅದನ್ನು ನೀಡಿದ ಪ್ರಾದೇಶಿಕ ಸಾರಿಗೆ ಕಚೇರಿ ವಿವರ, ವಿತರಿಸಿದ ದಿನಾಂಕ ಮತ್ತು ಮಾನ್ಯತೆ ಹೊಂದಿರುವ ಅವಧಿ, ವಾಹನ ಚಾಲಕರ ರಕ್ತದ ಗುಂಪು, ಅಂಗಾಂಗ ದಾನಕ್ಕೆ ಸಮ್ಮತಿ ಇರುವ ಕುರಿತು ಮಾಹಿತಿ, ಅಪಘಾತದ ಸಂದರ್ಭದಲ್ಲಿ ತುರ್ತಾಗಿ ಕರೆ ಮಾಡಬಹುದಾದ ದೂರವಾಣಿ ಸಂಖ್ಯೆ ದಾಖಲಾಗಿರುತ್ತದೆ. ಆರ್ಸಿಯಲ್ಲೂ ಈ ಮಾಹಿತಿಗಳ ಜತೆಗೆ ವಾಹನ ವಾಣಿಜ್ಯ ಬಳಕೆಯದ್ದೋ ಅಥವಾ ವೈಯಕ್ತಿಕ ಬಳಕೆಯದ್ದೋ, ವಾಹನದ ಚಾಸಿ ಹಾಗೂ ಇಂಜಿನ್ ಸಂಖ್ಯೆ, ಮಾಲಿನ್ಯ ನಿಯಮ ಪಾಲನೆಯ ವಿವರ ಇರುತ್ತದೆ.
ಭದ್ರತಾ ರೇಖೆ, ವಿವರಗಳ ಮೈಕ್ರೋ ಮುದ್ರಣ, ಮೈಕ್ರೋ ಗೆರೆ, ಹಾಲೋಗ್ರಾಮ್ ಮತ್ತು ವಾಟರ್ವಾರ್ಕ್ ಎರಡೂ ಕಾರ್ಡ್ಗಳಲ್ಲಿ ಸಾಮಾನ್ಯವಾಗಿರಲಿದೆ.
ಬದಲಾವಣೆಗೆ ಅವಕಾಶ: ಹೊಸದಾಗಿ ಡಿಎಲ್ ಮಾಡಿಸುವವರ ಜತೆಗೆ ಡಿಎಲ್ ಮತ್ತು ವಾಹನ ನೋಂದಣಿ ನವೀಕರಣದ ಸಂದರ್ಭದಲ್ಲೂ ಹೊಸ ಕಾರ್ಡ್ ಬದಲಿಸಿ ಕೊಡಲಾಗುತ್ತದೆ. ಸದ್ಯ ದೇಶಾದ್ಯಂತ ಪ್ರತಿದಿನ 32 ಸಾವಿರ ಡಿಎಲ್ಗಳನ್ನು ಹೊಸದಾಗಿ ವಿತರಿಸಲಾಗುತ್ತಿದೆ ಇಲ್ಲವೇ ನವೀಕರಿ ಸಲಾಗುತ್ತದೆ. ಅಂತೆಯೇ ಪ್ರತಿದಿನ 43 ಸಾವಿರ ವಾಹನಗಳನ್ನು ಹೊಸದಾಗಿ ನೋಂದಣಿ ಮಾಡಿಸಲಾಗುತ್ತಿದೆ ಇಲ್ಲವೇ ನವೀಕರಿಸಲಾಗುತ್ತಿದೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ