ಡಾ. ಬಿ.ಎಂ.ಹೆಗ್ಡೆ
ಕಾಯಿಲೆ ಬಂದಾಗ ಮೊದಲು ನಿಮ್ಮ ಮನೆವೈದ್ಯರ (ಫ್ಯಾಮಿಲಿ ಡಾಕ್ಟರ್) ಬಳಿಗೆ ಹೋಗಬೇಕೇ ಹೊರತು ಆಸ್ಪತ್ರೆಗೆ ಹೋಗುವುದಲ್ಲ. ನಮ್ಮ ಹೆಚ್ಚಿನ ಕಾಯಿಲೆಗಳು ತಮ್ಮಷ್ಟಕ್ಕೆ ತಾವೇ ಗುಣವಾಗುತ್ತವೆ. ಅದಕ್ಕೆ ಯಾವ ಪದ್ಧತಿಯ ವೈದ್ಯರ ಮದ್ದು ತೆಗೆದುಕೊಂಡರೂ ಗುಣವಾಗುತ್ತದೆ. ‘ಅವರ ಮದ್ದು ತೆಗೆದುಕೊಂಡರೆ ನನಗೆ ಗುಣವಾಗುತ್ತದೆ’ ಎಂಬ ಧೈರ್ಯ ನಮ್ಮ ಮನಸ್ಸಿನಲ್ಲಿದ್ದರೆ ಕಾಯಿಲೆಯನ್ನು ಮನಸ್ಸೇ ಗುಣ ಮಾಡುತ್ತದೆ. ಹಾಗಾಗಿ ನಾಟಿ ವೈದ್ಯರ ಮದ್ದು ಸೇವಿಸಿದರೂ ಕೆಲವು ಸಲ ನಮ್ಮ ಕಾಯಿಲೆ ಗುಣವಾಗುವುದುಂಟು. ಆದರೆ ಆ ಮದ್ದಿನಿಂದ ಅನೇಕ ಸಲ ಅನ್ಯಾಯವಾಗುವುದೂ ಇದೆ.
ಕೆಲವು ನಾಟಿ ವೈದ್ಯರಿರುತ್ತಾರೆ. ಅಂಥವರ ಬಗ್ಗೆ ಒಬ್ಬರು ನನಗೆ ಹೇಳಿದರು; ‘ಅಲ್ಲಿ ಒಬ್ಬ ವೈದ್ಯರಿದ್ದಾರೆ. ಅವರು ಎಲ್ಲ ಕಾಯಿಲೆಗಳಿಗೂ ಔಷಧ ಕೊಡುತ್ತಾರೆ. ಕಿಡ್ನಿ ಸಮಸ್ಯೆಗಳಿಗೆಲ್ಲ ಒಳ್ಳೆಯ ಮದ್ದು ಕೊಡುತ್ತಾರೆ. ಕಿಡ್ನಿ ಫೇಲ್ ಆದರೂ ಗುಣ ಮಾಡುತ್ತಾರೆ’ ಎಂದು. ಅಂಥ ಸಂಗತಿ ಇದ್ದರೆ ಬಹಳ ಒಳ್ಳೆಯದಲ್ಲವಾ? ಹಾಗಾಗಿ ನಾನು ಎರಡೂವರೆ ಸಾವಿರ ರೂಪಾಯಿ ಖರ್ಚು ಮಾಡಿ ಒಂದು ಟ್ಯಾಕ್ಸಿ ಹಿಡಿದುಕೊಂಡು ಅಲ್ಲಿಗೆ ಹೋದೆ. ಅಲ್ಲಿ ಒಂದು ಹಳೆ ಮನೆಯಲ್ಲಿ ಒಬ್ಬ ವೃದ್ಧರಿದ್ದರು. ‘ಏನು ಸ್ವಾಮಿ, ನೀವು ಕಿಡ್ನಿ ಸಮಸ್ಯೆಗೆ ಮದ್ದು ಕೊಡುತ್ತೀರಂತೆ. ಕಿಡ್ನಿ ಎಂದರೆ ಏನೆಂದು ನಿಮಗೆ ಗೊತ್ತಿದೆಯೇ?’ ಎಂದು ಕೇಳಿದೆ. ಅದಕ್ಕೆ ಅವರು,
‘ನನಗೆ ಗೊತ್ತಿಲ್ಲ’ ಎಂದರು. ‘ಮತ್ತೆ ಹೇಗೆ ಮದ್ದು ಕೊಡುತ್ತೀರಿ?’ ಎಂದೆ. ‘ನಾನು ಎಲ್ಲದಕ್ಕೂ ಮದ್ದು ಕೊಡುತ್ತೇನೆ’ ಎಂದು ಅವರು ಹೇಳಿದಾಗ ‘ಯಾರು ಹೇಳಿದ್ದು?’ ಎಂದೆ. ‘ನನ್ನ ತಂದೆ ಯಾವ ಗಿಡಮೂಲಿಕೆ ಎಂದು ಹೇಳಿದ್ದರು’ ಎನ್ನುತ್ತ ಮನೆಯ ಮಾಡಿನಿಂದ ಒಂದು ಗಿಡಮೂಲಿಕೆ ತಂದರು. ‘ಹಾರ್ಟ್ಗೆ ಇದೇ, ಕಿಡ್ನಿಗೆ ಇದೇ’ ಎಂದರು. ಕಿಡ್ನಿ, ಹಾರ್ಟ್ ಬೇರೆ ಬೇರೆ ಎಂದು ಅವರಿಗೆ ಗೊತ್ತಿಲ್ಲ.
ಆದರೆ ಇಂಥವರ ಬಗ್ಗೆ ಹೇಳುವ ಜನ ಹೇಗೆ ವರ್ಣಿಸುತ್ತಾರೆ ಹೇಳಿ? ಈ ವೃದ್ಧರನ್ನು ಹುಡುಕಿಕೊಂಡು ನಾನು ಎರಡೂವರೆ ಸಾವಿರ ರೂ. ಖರ್ಚು ಮಾಡಿ, ಇಡೀ ದಿನ ಕಾರಿನಲ್ಲಿ ಹೋಗಿ ನೋಡಿದರೆ ಅವರು ಅಸಲಿ ಅಲ್ಲ ಎಂದು ತಿಳಿಯಿತು. ಆದರೆ ಜನರಿಗೆ ಅವರ ಬಗ್ಗೆ ಬಹಳ ನಂಬಿಕೆ ಇದೆ. ಅಲ್ಲಿ ಬೆಳಗ್ಗೆಯಿಂದ ಜನರ ಒಂದು ದೊಡ್ಡ ಸರದಿ ಸಾಲೇ ಇದೆ. ನಂಬಿಕೆಯಿಂದಲೇ ಗುಣಮುಖರಾದ ಎಷ್ಟೋ ಜನರಿದ್ದಾರೆ. ನಂಬಿಕೆಯ ಬಲದಿಂದ ಗುಣಮುಖರಾಗಿ ಅವರು ಮನೆಗೆ ಮರಳುತ್ತಾರೆ. ಹಾಗಾಗಿ ಬಹುಪಾಲು ನಾಟಿವೈದ್ಯ ಅಪಾಯಕಾರಕ. ಹಾವು ಕಚ್ಚಿದಾಗ ಯಾವ ಹಾವು ಎಂದು ಗೊತ್ತಾದರೆ ಆಸ್ಪತ್ರೆಗೆ ಹೋಗಿಬಿಡಬೇಕು. ಈಗೆಲ್ಲ ವಿಷವನ್ನು ತಡೆಯಬಲ್ಲ ಔಷಧಗಳಿವೆ (ಅಠಿಜಿಛ್ಞಿಟಞ). ಎಂಥ ಹಾವಿನ ವಿಷವನ್ನೂ ನಿವಾರಿಸಬಹುದು. ಮುಂಚಿನ ಕಾಲದಲ್ಲಿ ಟೆಲಿಗ್ರಾಂ ಕಳಿಸಿದರೆ ಗುಣವಾಗುತ್ತದೆ ಎಂಬೆಲ್ಲ ನಂಬಿಕೆಗಳಿದ್ದವು. ಹಾವು ಕಚ್ಚಿದ ನೂರು ಮನುಷ್ಯರಲ್ಲಿ
99 ಜನರಿಗೆ ಕಚ್ಚುವಾಗ ಆ ಹಾವುಗಳಲ್ಲಿ ವಿಷ ಇರುವುದಿಲ್ಲ. ಅವರು ಸಾಯುವುದಿಲ್ಲ. ಧೈರ್ಯವಿದ್ದರೆ ಅವರಿಗೆ ಏನೂ ಆಗದು. ಹೆದರಿದರೆ ಸಾಯುವುದುಂಟು. ಅಂಥವರಿಗೆ ಆ ಮದ್ದು ಪರಿಣಾಮಕಾರಿ. ಆದರೆ ಒಂದೊಮ್ಮೆ ವಿಷ ಇದ್ದಾಗ ಕಚ್ಚಿದರೆ ವ್ಯಕ್ತಿ ಸತ್ತೇಹೋಗುತ್ತಾನೆ.
ಹಾವಿಗೆ ಕಣ್ಣು ಅಕ್ಕಪಕ್ಕದಲ್ಲಿ ಇರುವುದರಿಂದ ಮುಂದೆ ಸಾಗುವಾಗ ಎದುರಿಗೆ ಕಾಣುವುದಿಲ್ಲ. ಹೀಗಾಗಿ ಅದು ನಾಲಗೆಯನ್ನು ಮುಂದಕ್ಕೆ ಚಾಚಿ ಸಾಗುತ್ತದೆ. ನಾಲಗೆಗೆ ಅಡ್ಡ ಬಂದದ್ದನ್ನೆಲ್ಲ ಕಚ್ಚುತ್ತದೆ. ಒಮ್ಮೆ ಕಚ್ಚಿದಾಗ ವಿಷ ಹೊರಹೋಗುತ್ತದೆ. ಅದು ಪುನಃ ಉತ್ಪತ್ತಿಯಾಗಲು ಹದಿನೈದು ದಿನ ಬೇಕು. ಈ ನಡುವಿನ ಅವಧಿಯಲ್ಲಿ ಯಾರಿಗೆ ಕಚ್ಚಿದರೂ ಏನೂ ಆಗುವುದಿಲ್ಲ. ಹಾಗಾಗಿ ಹಾವು ಕಡಿದಾಗ ನಾಟಿ ವೈದ್ಯರ ಬಳಿ ಹೋಗುವ ಬದಲು ಆಸ್ಪತ್ರೆಗೆ ಹೋಗಿ ವೈದ್ಯರ ಔಷಧ ಪಡೆಯುವುದೇ ಒಳ್ಳೆಯದು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ