ಸೌರಶಕ್ತಿ ಬಳಸಿ ವಿದ್ಯುತ್ ಉತ್ಪಾದಿಸುವ ಅಂತಾರಾಷ್ಟ್ರೀಯ ಸೌರ ಒಕ್ಕೂಟ(ಐಎಸ್ಎ) ಕೂಡ ಭವಿಷ್ಯದಲ್ಲಿ ಒಪೆಕ್ನಷ್ಟೇ ಬಲಿಷ್ಠವಾದ ಸಂಘಟನೆಯಾಗಿ ಬೆಳೆಯುವ ಸಾಧ್ಯತೆ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಅಂತಾರಾಷ್ಟ್ರೀಯ ಸೌರ ಒಕ್ಕೂಟದ ಮೊದಲ ಮಹಾಧಿವೇಶನಕ್ಕೆ ಮಂಗಳ ವಾರ ಚಾಲನೆ ನೀಡಿದ ಪ್ರಧಾನಿ, ಸೌದಿ ಅರೇಬಿಯಾ ನೇತೃತ್ವದ ಪೆಟ್ರೋಲಿಯಂ ರಫ್ತು ರಾಷ್ಟ್ರಗಳ ಮಹಾಒಕ್ಕೂಟ (ಒಪೆಕ್) ವಿಶ್ವದ ಅರ್ಧಭಾಗದ ತೈಲೋತ್ಪನ್ನಗಳ ಅಗತ್ಯಗಳನ್ನು ಪೂರೈಸುತ್ತಿದೆ. ಆ ಮೂಲಕ ಹಲವು ದಶಕಗಳಿಂದಲೂ ಹಿಡಿತ ಕಾಯ್ದುಕೊಂಡಿದೆ. ಈ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆಯ ಎಲ್ಲ ಸದಸ್ಯರು ಐಎಸ್ಎ ವ್ಯಾಪ್ತಿಗೆ ಬರುವಂತಾಗಬೇಕು ಎಂದು ಮೋದಿ ಹೇಳಿದರು. ವಿಶ್ವದೆಲ್ಲೆಡೆ ಸೌರವಿದ್ಯುತ್ ಉತ್ಪಾದನೆ ಕುರಿತು ಸಾಕಷ್ಟು ಜಾಗೃತಿ ಮೂಡುತ್ತಿದೆ. ಇದರ ಹಿನ್ನೆಲೆಯಲ್ಲಿ ಈ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಇದು ಸಕಾಲವಾಗಿದೆ. ಒಟ್ಟು 70-80 ಸಾವಿರ ಕೋಟಿ ರೂ. ಬಂಡವಾಳ ತೊಡಗಿಸಬಹುದಾಗಿದೆ ಎಂದರು.
ಶೇ.40 ವಿದ್ಯುತ್ ಉತ್ಪಾದನೆ ಗುರಿ: ನವೀಕರಿಸಬಹುದಾದ ಇಂಧನ ಮೂಲಗಳಿಂದ 2030ರ ವೇಳೆಗೆ ಭಾರತಕ್ಕೆ ಅಗತ್ಯವಾದ ಶೇ.40 ವಿದ್ಯುತ್ ಉತ್ಪಾದಿಸಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಸೌರ, ಪವನ ವಿದ್ಯುತ್ ಶಕ್ತಿಯಿಂದ ಶಾಖೋತ್ಪನ್ನ ವಿದ್ಯುತ್ ಉತ್ಪಾದನಾ ಘಟಕಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲಾಗುವುದು ಎಂದು ಪ್ರಧಾನಿ ಹೇಳಿದರು.
ಪ್ರಧಾನಿಗೆ ವಿಶ್ವಸಂಸ್ಥೆ ಪುರಸ್ಕಾರ
ಪ್ರಧಾನಿ ನರೇಂದ್ರ ಮೋದಿ ಮತ್ತು ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರಾನ್ಗೆ ವಿಶ್ವಸಂಸ್ಥೆಯ ‘ಚಾಂಪಿಯನ್ಸ್ ಆಫ್ ದಿ ಅರ್ಥ್’ ಪ್ರಶಸ್ತಿ ಬುಧವಾರ ಪ್ರದಾನವಾಗಲಿದೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ