ವಿಷಯಕ್ಕೆ ಹೋಗಿ



ಕೇಳಿಯೇ ದಿನ ಬೆಳಗಾಗುತ್ತಿದೆಯೆಂದು ಹಳ್ಳಿಗಳಲ್ಲಿ ಈಗಲೂ ಗುರುತಿಸುತ್ತಾರೆ. ಅಂದಹಾಗೆ ಕೋಳಿಗಳೇಕೆ ನಸುಕಿನಲ್ಲಿ ಕೂಗುತ್ತವೆ? ಜಂಬದ ಅಜ್ಜಿ ಅಂದುಕೊಂಡ ಹಾಗೆ ಕೋಳಿ ಕೂಗುವುದರಿಂದ ಬೆಳಗಾಗುವುದಿಲ್ಲ ಎಂದು ಎಲ್ಲರಿಗೂ ಗೊತ್ತಿದ್ದರೂ, ಕೋಳಿ ಕೂಗುವುದಕ್ಕೂ ಬೆಳಗಾಗುವುದಕ್ಕೂ ಇರುವ ನಂಟಿನ ಕುರಿತು ಹೆಚ್ಚು ತಿಳಿದಿರುವುದಿಲ್ಲ. ಕೋಳಿ ಕೂಗುವುಕ್ಕೂ ಬೆಳಗಾಗುವುದಕ್ಕೂ ಏನಾದರೂ ನಂಟಿದೆಯಾ?
ಜಗತ್ತಿನ ಹಲವೆಡೆ ಕಂಡುಬರುವ ಕೋಳಿಗಳ ಈ ನಡವಳಿಕೆ ಇತ್ತೀಚಿನ ತನಕ ಒಂದು ಗುಟ್ಟಾಗಿಯೇ ಉಳಿದಿತ್ತು. 2013 in ಜಪಾನಿನ ನಗೋಯಾ ಕಲಿಕೆವೀಡಿನಲ್ಲಿ ನಡೆದ ಅರಕೆಗಳಿಂದ ಕೋಳಿಗಳೇಕೆ ನಸುಕಿನಲ್ಲಿ ಕೂಗುತ್ತವೆ ಎನ್ನುವುದಕ್ಕೆ ಉತ್ತರ ಸಿಕ್ಕಿದೆ.
ಕೋಳಿ ಕೂಗುವುದು ಬೆಳಿಗ್ಗೆ ಮಾತ್ರ ಅಲ್ಲ
ಹೇಗೆ ನೋಡಿದರೆ ತೊಮ್ಮ ಸಮಸ್ತು ನೆಟ್ವರ್ಡ್ ಹೇಗೆ ಹೇಗೆ ಹೇಗೆ ಹೇಗೆ ಹೋಗಿಸು ಯಾವುದೋ ಸದ್ದು ಕೇಳಿಸಿದಾಗ, ಕೋಳಿಗೂಡಿಗೆ ಏನಾದರೂ ನುಗ್ಗಿದಾಗ, ತಮ್ಮ ಹಿಂಡಿನ ಜೊತೆಗಾರರಿಗೆ ಅಪಾಯದ ಮುನ್ಸೂಚನೆ ನೀಡಲು, ತನ್ನ ಜೊತೆಗಾರರನ್ನು ಸೇರಿದಾಗ - ಹೀಗೆ ದಿನದ ಎಲ್ಲಾ ಹೊತ್ತಿನಲ್ಲಿಯೂ ಕೋಳಿಗಳು ಕೂಗುತ್ತವೆ. ಹೀಗೆ ಎಲ್ಲಾ ಹೊತ್ತಿನಲ್ಲಿ ಕೂಗಿದರೂ ಕೋಳಿಗಳ ಬೆಳಗಿನ ಕೂಗು ತುಸು ವಿಶೇಶವೇ.
ಕೋಳಿಯ ಕೂಗಿನ ಬಗ್ಗೆ ಈ ಮೊದಲಿದ್ದ ತಿಳುವಳಿಕೆ ಏನು?
ಎಲ್ಲ ಹೊತ್ತುನಲ್ಲೂ ಕೋಳಿಗಳು ಕೂಗಲು ಬೆಳಕಿನಲ್ಲಾಗುವ ಬದಲಾವಣೆಯೇ ಕಾರಣವೆಂದು ಹಕ್ಕಿಯರಿಗರು (ornithologists) ಮೊದಲು ತಿಳಿದಿದ್ದರು. ಕೋಳಿಗೂಡಿಗೆ ಬೆಳಕು ಬಿದ್ದಾಗ ಇಲ್ಲವೇ ಕತ್ತಲಾದಾಗ, ಗಾಡಿಗಳ ಬೆಳಕನ್ನು ಕಂಡು ಕೋಳಿಗಳು ಕೂಗುತ್ತವೆ ಎಂದು ಅಂದುಕೊಳ್ಳಲಾಗಿತ್ತು. ಕೋಳಿ ಕೂಗುವ ಹೊತ್ತಿನ ಕುರಿತ ಇದ್ದ ಇಂತಹ ತಿಳುವಳಿಕೆಯ ನಡುವೆ ನಗೋಯಾ ಕಲಿಕೆವೀಡಿನಲ್ಲಿ ನಡೆದ ಅರಕೆ ಮುಂಜಾವಿನ ಕೋಳಿ ಕೂಗಿನ ಬಗ್ಗೆ ಅಚ್ಚರಿಯ ವಿಶಯ ಹೊರಹಾಕಿದೆ.
ಅರಕೆಯಿಂದ ಕಂಡುಬಂದ ಅಚ್ಚರಿಯ ವಿಶಯ
ನಗೋಯಾ ಕಲಿಕೆವೀಡಿನ ಉಸಿರಿಯರಿಮೆಯ (physiology) ಅರಕೆಮನೆಯಲ್ಲಿ ಕೆಲಸ ಮಾಡುತ್ತಿರುವ ತಕಾಶಿ ಯೋಶಿಮುರಾ ಅವರ ಮುಂದಾಳ್ತನದಲ್ಲಿ ಅರಕೆಯೊಂದನ್ನು ನಡೆಸಲಾಯಿತು. ನೋಕಿನಲ್ಲಿ ಕೋಳಿ ಕೂಗುವ ಹಿನ್ನೆಲೆಯನ್ನು ತಿಳಿಯಲು, ಕೋಳಿಗಳನ್ನು ಹಲವು ಪ್ರಯೋಗಗಳಿಗೆ ಒಳಪಡಿಸಲಾಯಿತು. ಈ ಮೊದಲಿದ್ದ ತಿಳುವಳಿಕೆಯ ಹಾಗೆ ಅರಕೆಮನೆಯಲ್ಲಿದ್ದ ಕೋಳಿಗಳು ಅಲ್ಲಿ ನಡೆಯುವ ಹಲವು ಆಗುಹಗಳಿಗೆ ತಕ್ಕಂತೆ ಕೂಗುತ್ತಿದ್ದವು. ಹಾಗೆಯೇ ನಸುಕಿನ ಹೊತ್ತ ನಲ್ಲೂ ಕೂಗುತ್ತಿದ್ದವು. ಮೋಲದಲ್ಲಿ ಎರಡು ವಾರಗಳವರೆಗೆ ಹೊ್ನು ಗುಂಡುಗಳು ಹೊ್ನುತ್ತಿ ಮತ್ತು ಹೆ್್ನುತ್ತದೆ ಗೊತ್ತು ಕತ್ತಲಿರುವ ಪರಿಸರದಲ್ಲಿ ಬಿಡಲಾಯಿತು. ಬೆಳಗಾಗುವುದನ್ನು ಮೊದಲೇ ತಿಳಿದಿರುವಂತೆ ಎರಡು ಗಂಟೆ ಮುಂಚೆಯೇ ಕೋಳಿಗಳು ಕೂಗಲು ಶುರುಮಾಡಿದ್ದವು. ಗುಂಪಿನಲ್ಲಿ ಗಟ್ಟಿಮುಟ್ಟಾದ ಹುಂಜ ಮೊದಲು ಕೂಗುತ್ತಿತ್ತು ಮತ್ತು ಇನ್ನುಳಿದುವುಗಳು ಅದನ್ನು ಹಿಂಬಾಲಿಸುತ್ತಿದ್ದವು. ಗುಂಪಿನ ನಾಯಕನಂತಿರುವ ಬಲಿಶ್ಟವಾದ ಕೋಳಿ ಮೊದಲು ಕೂಗುವುದು ಇಲ್ಲಿ ಕಂಡುಕೊಂಡ ಒಂದು ಅಚ್ಚರಿಯ ಸಂಗತಿ.
ಕೋಳಿಗಳಿಗೆ ಬೆಳಗಾಗುವುದು ಮೊದಲೇ ಗೊತ್ತಾಗುತ್ತದೆ
24 ಗಂಟೆಗಳ ಹೊತ್ತು ಕತ್ತಲಿನ ಕೋಣೆಗಳಲ್ಲಿ ಕೂಡಿಹಾಕಲಾಯಿತು ಪೂರ್ತಿ ದಿನ ಕತ್ತಲಿನ ಕೋಣೆಯಲ್ಲಿದ್ದ ಕೋಳಿಗಳು ಸರಿಯಾಗಿ ಬೆಳಗಾಗುವ ಮೊದಲು ಕೂಗುತ್ತಿದ್ದವು. ಬೆಳಕಿನ ಅರಿವಿಲ್ಲದಿದ್ದರೂ ಕೋಳಿಗಳು ಪ್ರತಿದಿನ ನಸುಕಿನ ಹೊತ್ತಿಗೆ ಕೂಗತೊಡಗಿದ್ದವು. ಕೋಳಿ ಕೂಗುವುದರ ಹಿಂದೆ ಬೆಳಕಿನ ಬದಲಾವಣೆಯ ಪರಿಣಾಮ ಇಲ್ಲ ಎನ್ನುವುದು ಇದರಿಂದ ಸಾಬೀತಾಗಿತ್ತು.
ಬೇರೆ ಬೇರೆ ಹೊತ್ತಿನಲ್ಲಿ ಕೋಳಿಗೂಡಿಗೆ ಬೆಳಕು ಹಾಯಿಸುವ ಮತ್ತು ಸದ್ದುಮಾಡುವ ಮೂಲಕ ಅರಕೆಗೆ ಒಳಪಟ್ಟ ಕೋಳಿಗಳ ದಿಕ್ಕುತಪ್ಪಿಸಿ, ಅವುಗಳ ನಡವಳಿಕೆಯನ್ನು ತಿಳಿಯಲು ಪ್ರಯತ್ನಿಸಲಾಯಿತು. ಇದಾಗಿಯೂ ಕೋಳಿಗಳ ನಡವಳಿಕೆಯಲ್ಲಿ ಅಂತಹ ಬದಲಾವಣೆ ಕಾಣಲಿಲ್ಲ. ಎಂದಿನಂತೆ ಸಹಜವಾಗಿಯೇ ನಸುಕಿನ ಹೊತ್ತಿನಲ್ಲಿ ಕೂಗುತ್ತಿದ್ದವು. ಕೋಳಿಗಳು ಹೊರಗಿನ ಪರಿಣಾಮಕ್ಕಿಂತ ಹೆಚ್ಚಾಗಿ ತಮ್ಮೊಳಗಿನ ಹೊತ್ತಿನ ಏರ್ಪಾಟಿಗೆ (internal clock) ತಕ್ಕಂತೆ ನಡೆದುಕೊಳ್ಳುವುದು ಕಂಡುಬಂತು.
ನೋಕಿನಲ್ಲಿ ಕೋಳಿ ಕೂಗುವುದಕ್ಕೆ ಕಾರಣ ಅವುಗಳೊಳಗಿನ ಹೊತಗಿತ ಏರ್ಪಾಟು ಎಂದು ತಿಳಿದಿದೆ. ಆದರೆ ಈ ಹೊತ್ತಿನ ಏರ್ಪಾಟಿಗೆ ಬೆಳಗಾಗುವುದು ಮುಂಚೆಯೇ ಹೇಗೆ ಗೊತ್ತಾಗುತ್ತದೆ ಎನ್ನುವುದು ಅಚ್ಚರಿಯೇ ಸರಿ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

**ಜ್ಞಾನ ಕಾರಂಜಿ**::: ಜುಲೈ 1ರಿಂದ ಬೆಂಗಳೂರು ವಿಜ್ಞಾನೋತ್ಸವ

41 ವರ್ಷಗಳಿಂದ ಒಮ್ಮೆಯೂ ತಪ್ಪದಂತೆ, ವ್ರತದಂತೆ ನಡೆದುಕೊಂಡು ಬಂದಿರುವ ಬೆಂಗಳೂರು ವಿಜ್ಞಾನೋತ್ಸವ ಜುಲೈ ಒಂದರಿಂದ ಆಗಸ್ಟ್ 2ರವರೆಗೂ ನಡೆಯಲಿದೆ. ಭಾರತೀಯ ಕ್ಷಿಪಣಿ ಕ್ಷೇತ್ರದಲ್ಲಿ ಮಿಸೈಲ್ ವುಮನ್ (ಅಗ್ನಿ ಕನ್ಯೆ!) ಎಂದೇ ಖ್ಯಾತರಾಗಿರುವ ಡಾ.ಟೆಸ್ಸಿ ಥಾಮಸ್ ‘ಬಾಹ್ಯಾಕಾಶ ತಂತ್ರಜ್ಞಾನದ ಪ್ರಗತಿ’ ಕುರಿತು ಉಪನ್ಯಾಸ ನೀಡಲಿರುವುದು ಉತ್ಸವದ ವಿಶೇಷಗಳಲ್ಲಿ ಒಂದು. ಕೇರಳದ ತುಂಬಾ ಉಡಾವಣಾ ಕೇಂದ್ರದ ಸಮೀಪದಲ್ಲೇ ಹುಟ್ಟಿ ರಾಕೆಟ್ ಉಡಾವಣೆಯನ್ನು ನೋಡನೋಡುತ್ತ, ಒಂದಲ್ಲ ಒಂದು ದಿವಸ ಅಲ್ಲೇ ಉದ್ಯೋಗಿಯಾಗುವ ಕನಸು ಕಾಣುತ್ತ ಭವಿಷ್ಯದಲ್ಲಿ ನನಸಾಗಿಸಿಕೊಂಡ ಹಿರಿಮೆ ಹೆಮ್ಮೆ ಟೆಸ್ಸಿಯವರದು. ‘ಅಗ್ನಿ-4’ ಕ್ಷಿಪಣಿ ಯೋಜನಾ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿ ಸಾಮರ್ಥ್ಯ ಮೆರೆದ ಟೆಸ್ಸಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಅಗ್ನಿ ಕನ್ಯೆ ಎಂದೇ ಹೆಸರಾದವರು. ಇವರ ಸಾಮರ್ಥ್ಯ ಬೆಳಕಿಗೆ ಕಾರಣರಾದವರು ಎ.ಪಿ.ಜೆ. ಅಬ್ದುಲ್ ಕಲಾಂ! ಜುಲೈ 21ರಂದು ಟೆಸ್ಸಿ ಉಪನ್ಯಾಸ ನೀಡಲಿದ್ದಾರೆ. ವಿಜ್ಞಾನೋತ್ಸವಕ್ಕೆ ವೇದಿಕೆ ಕಲ್ಪಿಸಿರುವ ನ್ಯಾಷನಲ್ ಎಜುಕೇಷನ್ ಸೊಸೈಟಿಗೀಗ 100ರ ಸಂಭ್ರಮ, ಅದೇ ರೀತಿ ಡಾ.ಎಚ್. ನರಸಿಂಹಯ್ಯನವರ ಜನ್ಮ ಶತಾಬ್ದಿಯನ್ನೂ ಈ ಶಿಕ್ಷಣ ಸಂಸ್ಥೆ ಈಗಾಗಲೇ ಆರಂಭಿಸಿದೆ. ಹಾಗಾಗಿ ಈ ಸಲದ ವಿಜ್ಞಾನೋತ್ಸವ ಹೆಚ್ಚು ಮಹತ್ವ ಪಡೆದುಕೊಂಡಿದೆ ಎನ್ನುವುದು ನ್ಯಾಷನಲ್ ಎಜುಕೇಷನ್ ಸೊಸೈಟಿಯ ಹಾಲಿ ಅಧ್ಯಕ್ಷ ಡಾ. ಎ.ಎಚ್.ರಾಮರಾವ್ ಅನಿಸಿಕೆ. ಉದ್ಘಾಟನಾ ಉಪನ್ಯಾಸದ ವಸ್ತು ...

**ಜ್ಞಾನ ಕಾರಂಜಿ**::: ಬೇನಾಮಿ ಆಸ್ತಿ ಪ್ರಕರಣ ವಿಲೇವಾರಿಗೆ ನ್ಯಾಯಾಧಿಕರಣ,

ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್​ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್​ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್​ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...

**ಜ್ಞಾನ ಕಾರಂಜಿ**::: ಕೇಂದ್ರದಿಂದ ಶೀಘ್ರ 3 ಹೊಸ ಕೃಷಿ ಯೋಜನೆ

ನವದೆಹಲಿ: ಖಾರಿಫ್ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಿದ ಬೆನ್ನಿಗೆ ಕೇಂದ್ರ ಸರ್ಕಾರ ರೈತರಿಗೆ ನೆರವಾಗುವ ಮತ್ತಷ್ಟು ನೂತನ ನೀತಿಗಳನ್ನು ಘೋಷಿಸಲಿದೆ ಎಂದು ಮೂಲಗಳು ತಿಳಿಸಿವೆ. ಮಧ್ಯವರ್ತಿಗಳ ಹಾವಳಿಯನ್ನು ಸಂಪೂರ್ಣ ತೆಗೆದುಹಾಕುವ ಮೂರು ಹೊಸ ಸಂಗ್ರಹಣೆ ಯೋಜನೆಗಳನ್ನು ಸರ್ಕಾರ ಶೀಘ್ರವೇ ಜಾರಿಗೆ ತರಲಿದೆ ಎನ್ನಲಾಗಿದೆ. ದರ ಕೊರತೆ ಯೋಜನೆ : ಸರ್ಕಾರಿ ಮಂಡಿಗಳಲ್ಲಿ ಬೆಳೆಗಳ ಮಾರುಕಟ್ಟೆ ದರ, ಕನಿಷ್ಠ ಬೆಂಬಲ ಬೆಲೆಗಿಂತ ಹೆಚ್ಚಿದ್ದರೆ ಸರ್ಕಾರದ ಕಡೆಯಿಂದ ರೈತರಿಗೆ ಪರಿಹಾರ ವಿತರಣೆ. ಮಾರುಕಟ್ಟೆ ಖಾತ್ರಿ ಯೋಜನೆ: ಕೇಂದ್ರದ ಅನುಮತಿ ರಹಿತವಾಗಿ ನಿರ್ದಿಷ್ಟ ಬೆಳೆಗಳನ್ನು ನೇರವಾಗಿ ಖರೀದಿಸಲು ರಾಜ್ಯ ಸರ್ಕಾರಗಳಿಗೆ ಅಧಿಕಾರ. ಆಯಾ ರಾಜ್ಯಗಳಲ್ಲಿನ ಬೆಳೆಗಳ ಬೇಡಿಕೆಗೆ ತಕ್ಕಂತೆ ಖರೀದಿ ಪ್ರಮಾಣ ನಿಗದಿಪಡಿಸಲು ಸ್ವಾತಂತ್ರ್ಯ. ಖಾಸಗಿ ಸಂಗ್ರಹಣೆ ಯೋಜನೆ: ಖಾಸಗಿ ಖರೀದಿದಾರರಿಗೆ ಕನಿಷ್ಠ ಬೆಂಬಲ ಬೆಲೆಗೆ ಬೆಳೆಗಳನ್ನು ನೇರವಾಗಿ ರೈತರಿಂದ ಖರೀದಿಸಲು ಸರ್ಕಾರದಿಂದ ಪ್ರೋತ್ಸಾಹ.