ಟಿಯಾಂಗಾಂಗ್ -1 ಹೆಸರಿನ ಚೀನಾದ ಬಾಹ್ಯಾಕಾಶ ಪ್ರಯೋಗಾಲಯ ಸೋಮವಾರ
ಬೆಳಗ್ಗೆ ಪೆಸಿಫಿಕ್ ಸಾಗರದಲ್ಲಿ ಪತನಗೊಂಡಿದೆ ಎಂದು ಚೀನಾದ ಬಾಹ್ಯಾಕಾಶ ಅಧ್ಯಯನ ಸಂಸ್ಥೆ
ದೃಢಪಡಿಸಿದೆ.
ಬಾಹ್ಯಾಕಾಶ
ಕ್ಷೇತ್ರದಲ್ಲಿ ಮಹಾತ್ವಾಕಾಂಕ್ಷೆ ಹೊಂದಿರುವ ಚೀನಾ, ಬಾಹ್ಯಾಕಾಶದ ಪ್ರಯೋಗಗಳಿಗೆ ಬಳಸಿಕೊಳ್ಳಲು 2011ರಲ್ಲಿ ಟಿಯಾಂಗಾಂಗ್-1 ಅನ್ನು ಕಕ್ಷೆಗೆ ಸೇರಿಸಿತ್ತು. ಹತ್ತು ಮೀಟರ್ (34.1 ಅಡಿಗಳು) ಉದ್ದದ ಇದನ್ನು ಹೆವೆನ್ಲಿ ಪ್ಯಾಲೆಸ್-1 ಎಂದೂ ಕರೆಯಲಾಗುತ್ತಿತ್ತು.
ಆದರೆ, ಸೋಮವಾರ ಬೆಳಗ್ಗಿನ ಜಾವ ದಕ್ಷಿಣ ಪೆಸಿಫಿಕ್ ಸಾಗರ
ಅಂದರೆ, ನ್ಯೂಜಿಲೆಂಡ್- ಅಮೆರಿಕದ
ಪಶ್ಚಿಮ ಪ್ರದೇಶದಲ್ಲಿ ಭೂಮಿಯ ವಾತಾವರಣ ಪ್ರವೇಶಿಸಿರುವ ಟಿಯಾಂಗಾಂಗ್-1 ದಹನಗೊಳ್ಳುತ್ತಾ ಸಮುದ್ರದಲ್ಲಿ ಪತನಗೊಂಡಿದೆ. ಈ
ಬಗ್ಗೆ ಚೀನಾದ ‘ಕ್ಸಿನುಹ್’
ಸುದ್ದಿ ಮಾಧ್ಯಮವೂ ವರದಿ
ಮಾಡಿದೆ. ಅಮೆರಿಕಾ ರಕ್ಷಣಾ ಇಲಾಖೆಯೂ ಈ ಮಾಹಿತಿಯನ್ನು ಖಚಿತಪಡಿಸಿದ್ದು, ‘ಜಾಯಿಂಟ್ ಫೋರ್ಸ್ ಸ್ಪೇಸ್ ಕಾಂಪೊನೆಂಟ್ ಕಮಾಂಡ್’
(JFSCC) ಮೂಲಕ ಪ್ರಕಟಣೆ ಬಿಡುಗಡೆ
ಮಾಡಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ